370ನೇ ವಿಧಿ ರದ್ದು ಮಾಡಿದ 5 ತಿಂಗಳ ಬಳಿಕ ಜಮ್ಮು-ಕಾಶ್ಮೀರಕ್ಕೆ ಮೊದಲ ಬಾರಿಗೆ 36 ಕೇಂದ್ರ ಸಚಿವರ ನಿಯೋಗ ಭೇಟಿಗೆ ಸಿದ್ಧತೆ

ಜಮ್ಮು-ಕಾಶ್ಮೀರ ಭೇಟಿಗೆ ವಿದೇಶಿ ನಿಯೋಗಕ್ಕೆ ಸರ್ಕಾರ ಪ್ರವಾಸ ಮಾರ್ಗದರ್ಶನ ಮಾಡಲು ಅವಕಾಶ ನೀಡುತ್ತಿದೆ. ಆದರೆ, ದೇಶದ ರಾಜಕಾರಣಿಗಳು ಅಲ್ಲಿಗೆ ಹೋಗಲು ಪ್ರವೇಶ ನೀಡುತ್ತಿಲ್ಲ ಎಂದು ವಿರೋಧ ಪಕ್ಷಗಳ ಜೊತೆಗೆ ಕಾಂಗ್ರೆಸ್ ತೀಕ್ಷ್ಣವಾಗಿ ಆರೋಪ ಮಾಡಿದ ಬಳಿಕ ಸರ್ಕಾರ ಕೇಂದ್ರ ಸಚಿವರ ಭೇಟಿಗೆ ನಿಯೋಗ ಸಿದ್ಧ ಮಾಡಿದೆ.

HR Ramesh | news18-kannada
Updated:January 16, 2020, 9:26 AM IST
370ನೇ ವಿಧಿ ರದ್ದು ಮಾಡಿದ 5 ತಿಂಗಳ ಬಳಿಕ ಜಮ್ಮು-ಕಾಶ್ಮೀರಕ್ಕೆ ಮೊದಲ ಬಾರಿಗೆ 36 ಕೇಂದ್ರ ಸಚಿವರ ನಿಯೋಗ ಭೇಟಿಗೆ ಸಿದ್ಧತೆ
ಶ್ರೀನಗರದಲ್ಲಿ ಒಮರ್ ಅಬ್ದುಲ್ಲಾ ಮನೆ ಮುಂದಿನ ರಸ್ತೆ ಬ್ಲಾಕ್ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ.
  • Share this:
ನವದೆಹಲಿ(ಜ.16): ಕೇಂದ್ರ ಸಚಿವರ ತಂಡ ಜನವರಿ 18 ಮತ್ತು 24 ನಡುವೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರದ್ದುಗೊಳಿಸಿದ ಐದು ತಿಂಗಳುಗಳ ಬಳಿಕ ಕೇಂದ್ರ ಸಚಿವರ ತಂಡ ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡುತ್ತಿದೆ.

ಜಮ್ಮು-ಕಾಶ್ಮೀರ ಭೇಟಿಗೆ 36 ಸಚಿವರ ಹೆಸರನ್ನು ಪಟ್ಟಿ ಮಾಡಲಾಗಿದೆ. ಸಚಿವ ತಂಡ ಭೇಟಿ ನೀಡುವ 59 ಸ್ಥಳಗಳಲ್ಲಿ 51 ಸ್ಥಳಗಳು ಜಮ್ಮು ಜಿಲ್ಲೆಗೆ ಸೇರಿದ್ದವಾಗಿವೆ. ಉಳಿದಂತೆ ಶ್ರೀನಗರದ ಎಂಟು ಸ್ಥಳಗಳಿಗೆ ಸಚಿವ ನಿಯೋಗ ಭೇಟಿ ನೀಡಲಿದೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಿದ್ದ 370ನೇ ವಿಧಿ ರದ್ದುಗೊಳಿಸಿದ್ದರ ಬಗ್ಗೆ ಜನರಲ್ಲಿ ಸಕಾರಾತ್ಮಕ ಜಾಗೃತಿ ಮೂಡಿಸಲು ಮತ್ತು ಕೇಂದ್ರ ಸರ್ಕಾರ ಹಲವು ಅಭಿವೃದ್ಧಿ ಕ್ರಮಗಳನ್ನು ತೆಗೆದುಕೊಳ್ಳುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸಚಿವರ ತಂಡ ಅಲ್ಲಿಗೆ ಭೇಟಿ ನೀಡುತ್ತಿದೆ ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬ ಮುಫ್ತಿ, ಒಮರ್ ಅಬ್ದುಲ್ಲಾ ಮತ್ತು ಫಾರೂಖ್ ಅಬ್ದುಲ್ಲಾ ಸೇರಿದಂತೆ ಕಾಶ್ಮೀರದ ರಾಜಕಾರಣಿಗಳನ್ನು ಬಂಧಿಸಲಾಗಿದೆ ಹಾಗೂ ಅಂತರ್ಜಾಲ ಸೇವೆಯನ್ನು ರದ್ದು ಮಾಡಲಾಗಿದೆ. ಇದೇ ವಿಚಾರವಾಗಿ ಭಾರತದಲ್ಲಿ ಮತ್ತು ವಿದೇಶದಲ್ಲಿ ಸಾಕಷ್ಟು ಪ್ರಶ್ನೆಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಇದನ್ನು ಓದಿ: ಜಮ್ಮು ಕಾಶ್ಮೀರದಲ್ಲಿ ಇಂಟರ್ನೆಟ್​ ಸೌಲಭ್ಯ ಪುನರಾರಂಭ; ಸಾಮಾಜಿಕ ಜಾಲತಾಣದ ಬಳಕೆಗಿಲ್ಲ ಅವಕಾಶ

ಜಮ್ಮು-ಕಾಶ್ಮೀರ ಭೇಟಿಗೆ ವಿದೇಶಿ ನಿಯೋಗಕ್ಕೆ ಸರ್ಕಾರ ಪ್ರವಾಸ ಮಾರ್ಗದರ್ಶನ ಮಾಡಲು ಅವಕಾಶ ನೀಡುತ್ತಿದೆ. ಆದರೆ, ದೇಶದ ರಾಜಕಾರಣಿಗಳು ಅಲ್ಲಿಗೆ ಹೋಗಲು ಪ್ರವೇಶ ನೀಡುತ್ತಿಲ್ಲ ಎಂದು ವಿರೋಧ ಪಕ್ಷಗಳ ಜೊತೆಗೆ ಕಾಂಗ್ರೆಸ್ ತೀಕ್ಷ್ಣವಾಗಿ ಆರೋಪ ಮಾಡಿದ ಬಳಿಕ ಸರ್ಕಾರ ಕೇಂದ್ರ ಸಚಿವರ ಭೇಟಿಗೆ ನಿಯೋಗ ಸಿದ್ಧ ಮಾಡಿದೆ.
Published by: HR Ramesh
First published: January 16, 2020, 7:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading