• Home
  • »
  • News
  • »
  • national-international
  • »
  • Classmates Marriage: ಹಳೆ ಹೈಸ್ಕೂಲ್​ ವಾಟ್ಸಾಪ್​ ಗ್ರೂಪ್​ನಿಂದ ಮದುವೆಯಾದ 35 ವರ್ಷ ಹಳೆಯ ಕ್ಲಾಸ್​ಮೇಟ್ಸ್!

Classmates Marriage: ಹಳೆ ಹೈಸ್ಕೂಲ್​ ವಾಟ್ಸಾಪ್​ ಗ್ರೂಪ್​ನಿಂದ ಮದುವೆಯಾದ 35 ವರ್ಷ ಹಳೆಯ ಕ್ಲಾಸ್​ಮೇಟ್ಸ್!

ಹರಿದಾಸನ್ ಮತ್ತು ಸುಮತಿ

ಹರಿದಾಸನ್ ಮತ್ತು ಸುಮತಿ

ಈ ವಾಟ್ಸಾಪ್​ ಗ್ರೂಪ್​ ಮೂರು ವರ್ಷಗಳ ಹಿಂದೆ ಪುನರ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿತ್ತು.  ಆ ಸಂದರ್ಭದಲ್ಲಿ ಅವರ ಸಹಪಾಠಿಗಳು ಇಬ್ಬರೂ ಇನ್ನೂ ಅವಿವಾಹಿತರಾಗಿರುವುದನ್ನು ಮತ್ತು ಒಂಟಿ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಗಮನಿಸಿದ್ದರು.

  • Share this:

ತಿರುವನಂತಪುರಂ: ಸಿದ್ಧಾಂತಗಳಲ್ಲಿನ ಭಿನ್ನತೆಯನ್ನು ಬದಿಗಿಟ್ಟು ಬರೋಬ್ಬರಿ 35 ವರ್ಷಗಳ ನಂತರ ಹೈಸ್ಕೂಲ್ ಕ್ಲಾಸ್​ಮೇಟ್​ಗಳು (Clasmates Gets Marriage) ತಮ್ಮ ಹಳೆಯ ಗೆಳೆಯರ ಸಹಾಯದಿಂದ ಮದುವೆಯಾಗಿದ್ದಾರೆ. ಇಂತಹ ಅಪರೂಪದ ಮದುವೆಯೊಂದು ಕೇರಳದ ತ್ರಿಶೂರ್​ನಲ್ಲಿ (Kerala Thrissur Marriage) ನಡೆದಿದೆ. ಹರಿದಾಸನ್ ಮತ್ತು ಸುಮತಿ ಎಂಬುವರೇ ಈ ಅಪರೂಪದ ಮದುವೆಯಾದವರು. ಹರಿದಾಸನ್ ಬಲಪಂಥೀಯ ಸಿದ್ಧಾಂತವನ್ನು ಒಪ್ಪಿಕೊಂಡಿದ್ದರೆ ಸುಮತಿ ಅವರಿಗೆ ಎಡಪಂಥದ ಒಲವಿತ್ತು. ಆದರೆ ಸಿದ್ಧಾಂತವನ್ನು ಬದಿಗಿಟ್ಟು ಇಬ್ಬರು (Haridasan and Sumati Marriage Story) ಹೈಸ್ಕೂಲ್ ಕ್ಲಾಸ್​ಮೇಟ್​ಗಳು ತಮ್ಮ ಸಹಪಾಠಿಗಳ ಒತ್ತಾಸೆಯಿಂದ ಇದೀಗ ಸಪ್ತಪದಿ ತುಳಿದಿದ್ದಾರೆ.


ಇಸವಿ 1986-87 ರಲ್ಲಿ ಸಂದರ್ಭದಲ್ಲಿ ಹರಿದಾಸನ್ ಮತ್ತು ಸುಮತಿ ಇಬ್ಬರೂ 10ನೇ ತರಗತಿಯಲ್ಲಿ ಓದುತ್ತಿದ್ದರು. ಆಗ ಹರಿದಾಸನ್ ಕೆಎಸ್‌ಯು ಸಂಘಟನೆಯ ನಾಯಕತ್ವ ವಹಿಸಿದ್ದರೆ, ಸುಮತಿ ಎಸ್‌ಎಫ್‌ಐ ಕಾರ್ಯಕರ್ತೆಯಾಗಿದ್ದರು. ಮುಂದೆ ಸಿಪಿಎಂನ ಪಣ್ಣಿತಾಡಂ ಶಾಖೆಯ ಸದಸ್ಯೆಯಾಗಿ ಸಕ್ರಿಯರಾಗಿದ್ದರು. ಅಲ್ಲದೇ ಪಂಚಾಯತ್​ಒಂದರ ಮಾಜಿ ಅಧ್ಯಕ್ಷೆಯಾಗಿಯೂ ಅವರು ಕೆಲಸ ಮಾಡಿದ್ದರು.


ವಾಟ್ಸಾಪ್​ ಗ್ರೂಪ್​ನಿಂದ ಮದುವೆ
‘ಥನಲ್’ಎಂಬ ಈ ಇಬ್ಬರೂ ಓದಿದ್ದ ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ವಾಟ್ಸಾಪ್ ಗುಂಪು ಇಬ್ಬರಿಗೂ ಮದುವೆ ಮಾಡಿಸಿದೆ. ಮರತಮ್ಮಕೂಡು ಪ್ರೌಢಶಾಲೆ ದಂಪತಿಯನ್ನು ಒಂದುಗೂಡಿಸಲು ಸಹಾಯ ಮಾಡಿದೆ.


ಒಂಟಿ ಜೀವನ ನಡೆಸುತ್ತಿದ್ದ ಕ್ಲಾಸ್​ಮೇಟ್​ಗಳು
ಈ ವಾಟ್ಸಾಪ್​ ಗ್ರೂಪ್​ ಮೂರು ವರ್ಷಗಳ ಹಿಂದೆ ಪುನರ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿತ್ತು.  ಆ ಸಂದರ್ಭದಲ್ಲಿ ಅವರ ಸಹಪಾಠಿಗಳು ಇಬ್ಬರೂ ಇನ್ನೂ ಅವಿವಾಹಿತರಾಗಿರುವುದನ್ನು ಮತ್ತು ಒಂಟಿ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಗಮನಿಸಿದ್ದರು. ಕಳೆದ ಒಂದು ತಿಂಗಳ ಹಿಂದೆ ಅವರ ಮಾಜಿ ಕ್ಲಾಸ್ ಲೀಡರ್ ಸತೀಶನ್ ಅವರು ಇಬ್ಬರ ಬಳಿಯೂ ಒಟ್ಟಿಗೆ ಹೊಸ ಜೀವನವನ್ನು ಪ್ರಾರಂಭಿಸಬಹುದೇ ಎಂದು ಕೇಳಿದರು. ಈ ಸಲಹೆಯನ್ನು ಅವರ ಸಹಪಾಠಿಗಳು ಸಹ ಬೆಂಬಲಿಸಿದರು. ಆದರೆ ಇಬ್ಬರೂ ಹೀಗೆ ಮದುವೆಯಾಗುವ ಕುರಿತು ಕೊಂಚವೂ ಯೋಚಿಸದ ಕಾರಣ ಈ ಪ್ರಸ್ತಾಪವನ್ನು ನಿರಾಕರಿಸಿದ್ದರು. ಆದರೂ ಅವರ ಸ್ನೇಹಿತರು ಬಿಡಲಿಲ್ಲ, ಇಬ್ಬರಿಗೂ ಕಂಕಣ ಭಾಗ್ಯ ನೆರವೇರಿಸಯೇಬಿಟ್ಟರು.


ಮದುವೆಯಲ್ಲಿ ಭಾಗವಹಿಸಿದ್ದ 250 ಅತಿಥಿಗಳು
ಕೊನೆಗೂ ಕುನ್ನಬತುಕಾವು ದೇವಿ ದೇವಸ್ಥಾನದಲ್ಲಿ ಕುಟುಂಬಸ್ಥರು ಹಾಗೂ 36 ವರ್ಷಗಳ ಹಿಂದಿನ ಕ್ಲಾಸ್​ಮೇಟ್​ಗಳ ಸಮ್ಮುಖದಲ್ಲಿ ಸೋಮವಾರ ಇಬ್ಬರು ವಿವಾಹವಾದರು. ಅವರ ಮದುವೆಯಲ್ಲಿ 250 ಜನರು ಭಾಗವಹಿಸಿದ್ದರು. ಇದು ಅವರ ಸ್ನೇಹಿತರ ಕನಸು ನನಸಾಗುವ ಕ್ಷಣವಾಗಿತ್ತು.


ಇಬ್ಬರೂ ಪರಸ್ಪರ ವಿಭಿನ್ನ ಆಸಕ್ತಿಗಳನ್ನು ಹೊಂದಿದ್ದರೂ ಸಹ ವೈಯಕ್ತಿಯ ಜೀವನದಲ್ಲಿ ಇದು ಸಂಬಧಿಸುವುದಿಲ್ಲ ಎಂದು ಈ ಸತಿ ಪತಿ ತಿಳಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: