Cruelty on Women: ಅಪರಿಚಿತನ ಜೊತೆ ಮಾತನಾಡಿದ್ದೆ ತಪ್ಪಾಯ್ತಾ? ಮಹಿಳೆಯನ್ನ ಮರಕ್ಕೆ ಕಟ್ಟಿ ಥಳಿಸಿ ಕೌರ್ಯ

Women beaten by in laws: "ನಾನು ಯಾವುದೇ ತಪ್ಪು ಮಾಡಿಲ್ಲ, ಆತ ಯಾರೆಂದೇ ನನಗೆ ಗೊತ್ತಿಲ್ಲ. ನೀವು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಿರಾ, ದಯವಿಟ್ಟು ನನ್ನನ್ನು ಬಿಟ್ಟುಬಿಡಿ" ಎಂದು ಮಹಿಳೆ ಕೈಮುಗಿದು ಬೇಡಿಕೊಂಡರು, ಆಕೆಯ ಮಾತಿಗೆ ಬೆಲೆ ಕೊಡದೆ ಮತ್ತೆ ಹಲ್ಲೆ ಮಾಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ದೇಶದಲ್ಲಿ ಆಗುತ್ತಿರುವ ಮಹಿಳೆಯರ ಮೇಲಿನ ಶೋಷಣೆ (Women Harrassed) ಇಂದಿಗೂ ಕಡಿಮೆಯಾಗಿಲ್ಲ. ಅಂದಿನ ಕಾಲದಿಂದ ಇಂದಿನವರೆಗೂ ಇದು ಮುಂದುವರೆಯುತ್ತಲೇ ಇದೆ. ಮಹಿಳೆಯರಿಗಾಗಿ ವಿಶೇಷ ಕಾನೂನುಗಳು (Law Protection) ಇದ್ದರೂ, ಅದು ಬರೀ ಹೆಸರಿಗಷ್ಟೇ ಅನ್ನುವಂತಾಗಿದೆ. ಪ್ರತಿದಿನ, ಪ್ರತಿ ನಿಮಿಷ, ಪ್ರತಿ ಕ್ಷಣವೂ ದೇಶದ ಯಾವುದೋ ಮೂಲೆಯಲ್ಲಿ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಲೇ ಇರುತ್ತವೆ. ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ, ಹೀಗೆ ಹತ್ತು ಹಲವು ಕಾರಣಗಳಿಗೆ ಮಹಿಳೆಯರನ್ನ ಹಿಂಸಿಸಿ ಖುಷಿ ಪಡುವಂತಹ ಗಂಡಸರು ಇದ್ದಾರೆ. ಇದಕ್ಕೆ ತಕ್ಕ ಉದಾಹರಣೆ ಎಂಬಂತೆ ಉತ್ತರಪ್ರದೇಶದಲ್ಲಿ (Uttar Pradesh) ಅಪರಿಚಿತನ ಜೊತೆ ಮಹಿಳೆ ಮಾತನಾಡಿದ್ದಕ್ಕೆ ಆಕೆಯನ್ನ ಮರಕ್ಕೆ ಕಟ್ಟಿ, ಥಳಿಸಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಆ ಮಹಿಳೆ ಪರಿಪರಿಯಾಗಿ ಬಿಡುವಂತೆ ಬೇಡಿಕೊಂಡರು, ಅತ್ತೆ- ಮಾವ (In laws) ಸೇರಿಕೊಂಡು ಆಕೆಯನ್ನು ಬಿಡದೆ ಹಲ್ಲೆ ಮಾಡಿ ಕೌರ್ಯ ಮೆರೆದಿದ್ದಾರೆ.

    ಅಲ್ಲಿ ಆಗಿದ್ದೇನು?

    ಉತ್ತರಪ್ರದೇಶದ ರಾಂಪುರ್ (Rampur) ಜಿಲ್ಲೆಯ ಬಿಲಾಸ್ಪುರ್(Bilaspur) ಹಳ್ಳಿಯಲ್ಲಿ ಘಟನೆ ನಡೆದಿದೆ. ಸೆಪ್ಟೆಂಬರ್ 17ರಂದು ಈ ದುರ್ಘಟನೆ ನಡೆದಿದ್ದು ವಿಡಿಯೋ ವೈರಲ್ ಆದ ಬಳಿಕ, ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದಾರೆ. 35 ವರ್ಷದ ಮಹಿಳೆ ಮನೆ ಬಳಿ ಕುಳಿತಿದ್ದಾಗ, ವ್ಯಕ್ತಿಯೋರ್ವ ಬಂದು ಮಾತನಾಡಿಸಿದ್ದಾನೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡ ಮಹಿಳೆಯ ಅತ್ತೆ ಮಾವ, ಗ್ರಾಮಸ್ಥರನೆಲ್ಲ ಕರೆಸಿದ್ದಾರೆ. ಮಹಿಳೆಯ ವಿರುದ್ಧ ಇಲ್ಲಸಲ್ಲದ ಆರೋಪಗಳನೆಲ್ಲ ಮಾಡಿದ್ದಾರೆ. ಬಳಿಕ ಆಕೆಯನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಮಹಿಳೆ ಪರಿಪರಿಯಾಗಿ ಬೇಡಿಕೊಂಡರೂ ಬಿಡದೆ ಹಲ್ಲೆ ಮಾಡಿದ್ದಾರೆ. "ನಾನು ಯಾವುದೇ ತಪ್ಪು ಮಾಡಿಲ್ಲ, ಆತ ಯಾರೆಂದೇ ನನಗೆ ಗೊತ್ತಿಲ್ಲ. ನೀವು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಿರಾ, ದಯವಿಟ್ಟು ನನ್ನನ್ನು ಬಿಟ್ಟುಬಿಡಿ" ಎಂದು ಮಹಿಳೆ ಕೈಮುಗಿದು ಬೇಡಿಕೊಂಡರು, ಆಕೆಯ ಮಾತಿಗೆ ಬೆಲೆ ಕೊಡದೆ ಮತ್ತೆ ಹಲ್ಲೆ ಮಾಡಿದ್ದಾರೆ.

    ಇದನ್ನೂ ಓದಿ: Dowry Harassment: ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆ ನೇಣಿಗೆ ಶರಣು

    ಕೊನೆಗೂ ಎಚ್ಚೆತ್ತ ಪೋಲಿಸ್

    ರಾಂಪುರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಮಹಿಳೆಯ ಜೊತೆ ಮಾತನಾಡುತ್ತಿದ್ದ ವ್ಯಕ್ತಿಯೇ ಆಕೆಯ ಅತ್ತೆ, ಮಾವ ಸೇರಿ ಗ್ರಾಮಸ್ಥರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಕೂಡಲೇ ಹಲ್ಲೆ ನಡೆಸಿದವರನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡುವಂತೆ ಆತ ಒತ್ತಾಯಿಸಿದ್ದಾನೆ. ಮಹಿಳೆಯ ಕುಟುಂಬಸ್ಥರಾದ ನಾಲ್ಕು ಜನ , ಹಾಗೂ 19 ಅನಾಮಧೇಯ ವ್ಯಕ್ತಿಗಳ ಹೆಸರಿನಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಐಪಿಸಿ ಸೆಕ್ಷನ್ (Ipc Section) 323(Punishment for Voluntarily Causing), 355 (Use of Criminal Force), 498 A ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಈವರೆಗೂ ಯಾರನ್ನು ಬಂಧಿಸದೆ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ನೆಟ್ಟಿಗರ ವಿರೋಧಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಆರು ತಿಂಗಳಿಗೆ ಮುರುಟಿದ ಫೇಸ್​ಬುಕ್​ ಪ್ರೇಮ; ವರದಕ್ಷಿಣೆ ಕಿರುಕುಳ ಕಾರಣವಾಯ್ತಾ ಯುವತಿ ಸಾವಿಗೆ

    ಮಹಿಳೆಯರ ರಕ್ಷಣೆಗೆ ಆದ್ಯತೆ ಬೇಕಿದೆ

    ಇತ್ತೀಚೆಗಂತೂ ದೇಶದಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗುತ್ತಲೇ ಇವೆ. ಪ್ರತಿನಿತ್ಯ ಮಹಿಳೆ ಮೇಲೆ ಹಲ್ಲೆ, ಅತ್ಯಾಚಾರಗಳ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮಹಾತ್ಮ ಗಾಂಧೀಜಿ ರಾತ್ರಿ 12 ಗಂಟೆಗೆ ಒಂಟಿ ಮಹಿಳೆ ಓಡಾಡಿದರೆ ಅಂದು ನಮಗೆ ಸ್ವಾತಂತ್ರ್ಯ ಎಂದು ಹೇಳಿದ್ದರು. ಆದರೆ ಇಲ್ಲಿ ಅಪರಿಚಿತನ ಜೊತೆ ಮಾತನಾಡಿದ್ದಕ್ಕೆ ಈ ರೀತಿ ಹಲ್ಲೆ ಮಾಡಿದರೆ. ಇನ್ನೂ ರಾತ್ರಿ 12 ಗಂಟೆಗೆ ಆಚೆ ಬರುವ ಧೈರ್ಯ ಯಾವ ಹೆಣ್ಣು ಮಕ್ಕಳು ಮಾಡುತ್ತಾರೆ.

    (ವರದಿ - ವಾಸುದೇವ್. ಎಂ)
    Published by:Soumya KN
    First published: