ತಿರುವನಂತಪುರಂ: ಸಾಮಾಜಿಕ ಜಾಲತಾಣದ ಮೂಲಕ ಎರಡು ಮಕ್ಕಳ ತಾಯಿಯನ್ನು ಪರಿಚಯ ಮಾಡಿಕೊಂಡ ಯುವಕ ಆಕೆಯನ್ನು ಮದುವೆಯಾಗಲು ಮುಂದಾಗಿದ್ದ. ಆದರೆ ಆನಂತರ ತನ್ನ ನಿರ್ಧಾರ ಬದಲಿಸಿ, ಬೇರೆ ಹುಡುಗಿಯನ್ನು ಮದುವೆಯಾಗಲು ಮುಂದಾದಾಗ ಆಕೆ ಆ ಯುವಕನ ಮೇಲೆ ಆ್ಯಸಿಡ್ ದಾಳಿ (Acid Attack) ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಎರಡು ಮಕ್ಕಳ ತಾಯಿ, ಕೇರಳದ 35 ವರ್ಷದ ಮಹಿಳೆಯೊಬ್ಬರು (35 Year Old Married Women Throw Acid Her Lover) ತಮ್ಮ ಮದುವೆಯ ಪ್ರಸ್ತಾವವನ್ನು ತಿರಸ್ಕರಿಸಿದ ವ್ಯಕ್ತಿಯ ಮೇಲೆ ಆ್ಯಸಿಡ್ ಎರಚಿದ ಆಘಾತಕಾರಿ ಘಟನೆ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೀಬಾ ಎಂಬ ಮಹಿಳೆ ನವೆಂಬರ್ 16ರಂದು ತಿರುವನಂತಪುರದ ಅರುಣ್ ಕುಮಾರ್ (28) ಅವರ ಮೇಲೆ ಆ್ಯಸಿಡ್ ಎರಚಿದ್ದು ರಾಜ್ಯ ರಾಜಧಾನಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ್ಯಸಿಡ್ ಎರಚಿದ ಪರಿಣಾಮ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ದೃಷ್ಟಿ ಕಳೆದುಕೊಳ್ಳುವ ಅಪಾಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದಿಮಾಲಿ ಸುದ್ದಿಸಂಸ್ಥೆ ಎಎನ್ಐಗೆ ನೀಡಿದ ಮಾಹಿತಿ ಪ್ರಕಾರ, "ಕುಮಾರ್ ಮತ್ತು ಶೀಬಾ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹಿತರಾಗಿದ್ದರು ಮತ್ತು ಅವರು ಸಂಬಂಧ ಹೊಂದಿದ್ದರು. ಅವರು ಮದುವೆಯಾಗಲು ಸಹ ನಿರ್ಧರಿಸಿದರು. ಶೀಬಾ ಈಗಾಗಲೇ ಒಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಮತ್ತು ಇಬ್ಬರು ಮಕ್ಕಳಿದ್ದಾರೆ ಎಂದು ಕುಮಾರ್ಗೆ ತಿಳಿದಿತ್ತು. ಆನಂತರ ಕುಮಾರ್ ಶೀಬಾ ಸಂಬಂಧವನ್ನು ಕೊನೆಗೊಳಿಸಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಲು ನಿರ್ಧರಿಸಿದ್ದರು. "ಇದನ್ನು ತಿಳಿದ ಶೀಬಾ ಕುಮಾರ್ನನ್ನು ಮಾತುಕತೆ ಕರೆದಿದ್ದಾಳೆ. ಈ ವೇಳೆ ತನ್ನನ್ನು ಮದುವೆಯಾಗುವಂತೆ ಮನವೊಲಿಸಲು ಮುಂದಾಗಿದ್ದಾರೆ. ಆದರೆ, ಅದು ಸಾಧ್ಯವಾಗದಿದ್ದಾಗ, ಶೀಬಾ ಇರುಂಬುಪಾಲಂ ಬಳಿ ಕುಮಾರ್ ಮೇಲೆ ಆಸಿಡ್ ದಾಳಿ ಮಾಡಿದ್ದಾಳೆ. ಘಟನೆಯಲ್ಲಿ ಶೀಬಾಗೂ ಸುಟ್ಟ ಗಾಯಗಳಾಗಿವೆ" ಎಂದು ಪೊಲೀಸರು ತಿಳಿಸಿದ್ದಾರೆ.
ಕುಮಾರ್ ತನ್ನ ಸೋದರ ಮಾವ ಮತ್ತು ಸ್ನೇಹಿತನೊಂದಿಗೆ ನವೆಂಬರ್ 16 ರಂದು ಆದಿಮಲಿ ಬಳಿಯ ಚರ್ಚ್ಗೆ ಹೋಗಿ ಆಕೆಯನ್ನು ಭೇಟಿಯಾಗಿ ಕೇಳಿದ ಹಣವನ್ನು ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇಂದು ಹೊರಬಿದ್ದಿರುವ ಚರ್ಚ್ ಆವರಣದ ಸಿಸಿಟಿವಿ ಚಿತ್ರವು ಕುಮಾರ್ ಅವರ ಹಿಂದೆ ನಿಂತಿದ್ದ ಶೀಬಾ ಅವರ ಬಳಿಗೆ ಬಂದು ಅವನ ಮುಖಕ್ಕೆ ಆಸಿಡ್ ಎರಚುತ್ತಿರುವುದು ದಾಖಲಾಗಿದೆ. ಘಟನೆಯ ಪರಿಣಾಮವಾಗಿ ಆಕೆಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ದೃಷ್ಟಿ ಕಳೆದುಕೊಳ್ಳುವ ಆತಂಕದಲ್ಲಿ ಯುವಕ
28 ವರ್ಷದ ಯುವಕ ದೃಷ್ಟಿ ಕಳೆದುಕೊಳ್ಳಬಹುದು ಎಂದು ವೈದ್ಯರು ಹೇಳಿರುವುದಾಗಿ ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ದಿನ ಅವರನ್ನು ಆದಿಮಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಯಿತು. ಈ ಸಂಬಂಧ ಶನಿವಾರ ದೂರು ದಾಖಲಾಗಿದ್ದು, ನವೆಂಬರ್ 21ರ ಭಾನುವಾರ ಶೀಬಾಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: Crime News: ದೇವರ ಪ್ರಸಾದವೆಂದು ಗಂಡನಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ಸೇರಿ ಕೊಲೆಗೆ ಯತ್ನಿಸಿದ ಹೆಂಡತಿ ಅಂದರ್!
23 ವರ್ಷದ ಯುವಕನ ಮೇಲೆ ಆ್ಯಸಿಡ್ ಎರಚಿದ ಗೆಳತಿ
ಶುಭಂ ಎಂಬ 23 ವರ್ಷದ ಯುವಕ ತನ್ನ ಗೆಳತಿ ಮನಿಷಾಳಿಂದ ಆ್ಯಸಿಡ್ ದಾಳಿಗೆ ಒಳಗಾಗಿ ತೀವ್ರ ಸುಟ್ಟಗಾಯಗಳಾಗಿರುವ ಘಟನೆ ಕಳೆದ ತಿಂಗಳು ನಡೆದಿದೆ. ಸೆಪ್ಟೆಂಬರ್ನಲ್ಲಿ ಹರಿಯಾಣದ ಹಿಸಾರ್ನಲ್ಲಿ ಈ ಘಟನೆ ನಡೆದಿದೆ. ತನ್ನ ದೂರದ ಸಂಬಂಧಿಯೊಬ್ಬರ ಮಗಳು ಮನಿಷಾಳನ್ನು ಮದುವೆಯಾಗಲು ನಿರಾಕರಿಸಿದ ನಂತರ ಆಕೆ ತನ್ನ ಮೇಲೆ ಆ್ಯಸಿಡ್ ಎರಚಿದ್ದಾಳೆ ಎಂದು ಶುಭಂ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ, ಮನೀಶಾ ತನ್ನ ಸಹೋದರಿಯ ಕೆಲವು ಅನುಚಿತ ಚಿತ್ರಗಳನ್ನು ಶುಭಂ ಹೊಂದಿದ್ದಾನೆ ಎಂದು ಆರೋಪಿಸಿದ್ದಾಳೆ. ಮತ್ತು ಅವುಗಳನ್ನು ನಾಶಪಡಿಸುವಂತೆ ಒತ್ತಾಯಿಸಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ