4 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ವಿಕೃತ ಕಾಮಿಗೆ ಥಳಿಸಿ, ಊರ ಬೀದಿಯಲ್ಲಿ ಬೆತ್ತಲೆ ಮೆರವಣಿಗೆ

ಮಹಾರಾಷ್ಟ್ರದಲ್ಲಿ 4 ವರ್ಷದ ಬಾಲಕಿಯ ಮನೆಗೆ ನುಗ್ಗಿ ಆಕೆಯನ್ನು ತನ್ನ ಕಾಮತೃಷೆಗೆ ಬಳಿಸಕೊಳ್ಳಲು ಪ್ರಯತ್ನಿಸಿದ್ದ ನೀಚನಿಗೆ ಅಕ್ಕಪಕ್ಕದ ಮನೆಯವರು ಹೊಡೆದಿದ್ದಷ್ಟೇ ಅಲ್ಲದೆ, ಆತನ ಬಟ್ಟೆ ಬಿಚ್ಚಿ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ.

Sushma Chakre | news18-kannada
Updated:December 2, 2019, 11:37 AM IST
4 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ವಿಕೃತ ಕಾಮಿಗೆ ಥಳಿಸಿ, ಊರ ಬೀದಿಯಲ್ಲಿ ಬೆತ್ತಲೆ ಮೆರವಣಿಗೆ
ಪ್ರಾತಿನಿಧಿಕ ಚಿತ್ರ
  • Share this:
ನಾಗ್ಪುರ (ಡಿ. 2): ದೇಶಾದ್ಯಂತ ಅತ್ಯಾಚಾರ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದೆಲ್ಲದಕ್ಕೂ ನ್ಯಾಯಾಲಯ, ಪೊಲೀಸರೇ ಶಿಕ್ಷೆ ನೀಡಬೇಕೆಂದು ಕುಳಿತರೆ ಅಪರಾಧಿಗಳು ಪಾಠ ಕಲಿಯುವುದಿಲ್ಲ ಎಂದು ನಿರ್ಧರಿಸಿದ ಮಹಾರಾಷ್ಟ್ರದ ಜನರು ವಿಕೃತ ಕಾಮಿಯೊಬ್ಬನ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ.

4 ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದ 35 ವರ್ಷದ ಜವಾಹರ್ ವೈದ್ಯ ಎಂಬಾತನನ್ನು ಹಿಡಿದ ಜನರು ಆತನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. 4 ವರ್ಷದ ಬಾಲಕಿಯ ಮನೆಗೆ ನುಗ್ಗಿ ಆಕೆಯನ್ನು ತನ್ನ ಕಾಮತೃಷೆಗೆ ಬಳಿಸಕೊಳ್ಳಲು ಪ್ರಯತ್ನಿಸಿದ್ದ ನೀಚನನ್ನು ಹೊಡೆದಿದ್ದಷ್ಟೇ ಅಲ್ಲದೆ, ಆತನ ಬಟ್ಟೆ ಬಿಚ್ಚಿ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ.

ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಬಾಲಕಿಯ ಅಕ್ಕಪಕ್ಕದ ಮನೆಯವರು ಆತನ ಕೈಗಳನ್ನು ಕಟ್ಟಿಹಾಕಿ ತಮ್ಮ ಊರಿನ ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಾಗ್ಪುರದ ಕೋ ಆಪರೇಟಿವ್ ಸೊಸೈಟಿ ಬ್ಯಾಂಕ್​ನಲ್ಲಿ ಕ್ಯಾಶ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿರುವ ಜವಾಹರ್ ವೈದ್ಯ ಈಗ ಪೊಲೀಸರ ವಶದಲ್ಲಿದ್ದಾನೆ.

ನನ್ನ ಮಗನ ಗಲ್ಲಿಗೇರಿಸಿ, ಬೆಂಕಿ ಹಚ್ಚಿ ಸಾಯಿಸಿ; ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಂದವನ ತಾಯಿಯ ಆಕ್ರೋಶದ ನುಡಿ

ಕ್ಯಾಶ್ ಕಲೆಕ್ಟ್​ ಮಾಡಲು ಜವಾಹರ್ ವೈದ್ಯ ಪ್ರತಿದಿನವೂ ಆ ಬಾಲಕಿಯ ಮನೆಗೆ ಬರುತ್ತಿದ್ದ. ಭಾನುವಾರ ಸಂಜೆ ಮನೆಯಲ್ಲಿ ಬಾಲಕಿ ಒಬ್ಬಳೇ ಇರುವುದನ್ನು ನೋಡಿದ ಆತ ಆಕೆಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದ. ಅಷ್ಟರಲ್ಲಿ ಪಕ್ಕದ ಮನೆಯಿಂದ ವಾಪಾಸ್ ಬಂದ ಬಾಲಕಿಯ ತಾಯಿ ತನ್ನ ಮಗಳ ಮೇಲೆ ಆತ ಬಿದ್ದಿರುವುದನ್ನು ನೋಡಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಆಕೆಯ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಬಂದು ಆತನನ್ನು ಥಳಿಸಿ, ಕೈಗಳನ್ನು ಕಟ್ಟಿ, ಬಟ್ಟೆ ಬಿಚ್ಚಿಸಿ ಮೆರವಣಿಗೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading