Women Arrested:14ರ ಹುಡುಗನೊಂದಿಗೆ ಪರಾರಿಯಾಗಿದ್ದ 34ರ ಆಂಟಿ ಸಿಕ್ಕಿಬಿದ್ದಳು! ಅಸಲಿ ಕಥೆ ಗೊತ್ತಾದ್ರೆ ಶಾಕ್ ಆಗ್ತೀರಾ!

34 ವರ್ಷದ ಸ್ವಪ್ನಾ ಮದುವೆಯಾಗಿ ನಾಲ್ವರು ಮಕ್ಕಳಿದ್ದರೂ, 8ನೇ ತರಗತಿ ಓದುತ್ತಿದ್ದು ಎದುರು ಮನೆಯ ಬಾಲಕನೊಂದಿಗೆ ಓಡಿ ಹೋಗಿರುತ್ತಾಳೆ. ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು ಎಂದು ಊರಿನವರು ಮಾತನಾಡಿಕೊಂಡಿದ್ರು. ಈಗ ಪ್ರಕರಣವನ್ನು ಭೇದಿಸಿದ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ವಾರ, ಆಂಧ್ರಪ್ರದೇಶ (Andhra Pradesh)ದ ಗುಡುವಾಡ ಪಟ್ಟಣದ ಗುಡ್‍ಮೆನ್ ಪೇಟಾ ಎನ್ನುವ ಕಾಲೋನಿಯಲ್ಲಿ, 34 ವರ್ಷದ ಮಹಿಳೆಯೊಬ್ಬಳು (Women) ತನ್ನ ಎದುರು ಮನೆಯ 14 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ಎಸ್ಕೇಪ್ ಆಗಿದ್ದಳು. ಬಾಲಕ (Boy), ಆಂಟಿ  ಮೊಬೈಲ್ (Mobile) ಎರಡು ಸ್ವಿಚ್ಛ್ ಆಫ್ ಆಗಿತ್ತು. ಮಹಿಳೆಯನ್ನು 34 ವರ್ಷದ ಸ್ವಪ್ನಾ ಎಂದು ಗುರುತಿಸಲಾಗಿತ್ತು. ಮದುವೆಯಾಗಿ ನಾಲ್ವರು ಮಕ್ಕಳಿದ್ದರೂ, 8ನೇ ತರಗತಿ ಓದುತ್ತಿದ್ದು ಎದುರು ಮನೆಯ ಬಾಲಕನೊಂದಿಗೆ ಓಡಿ ಹೋಗಿರುತ್ತಾಳೆ. ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು ಎಂದು ಊರಿನವರು ಮಾತನಾಡಿಕೊಂಡಿದ್ರು. ಈಗ ಪ್ರಕರಣವನ್ನು ಭೇದಿಸಿದ ಪೊಲೀಸರು (Police) ಮಹಿಳೆಯನ್ನು ಬಂಧಿಸಿದ್ದಾರೆ (Arrested). ಬಾಲಕನ ಪೋಷಕರು ನೀಡಿದ್ದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಶಾಕಿಂಗ್ ನ್ಯೂಸ್ ಗೊತ್ತಾಗಿದೆ.

ಬಾಲಕನ ಜೊತೆ ಸಂಬಂಧ
ಗುಡುವಾಡ ಪಟ್ಟಣದ 34 ವರ್ಷದ ಸ್ವಪ್ನಾ, ಎದುರು ಮನೆಯ 14 ವರ್ಷದ ಬಾಲಕನೊಂದಿಗೆ ಸಂಬಂಧ ಹೊಂದಿದ್ದಳು. ಬಾಲಕನನ್ನು ಮನೆಗೆ ಕರೆಸಿಕೊಂಡು, ಅನೇಕ ಬಾರಿ ಆತನನ್ನು ತನ್ನ ಆಸೆಗೆ ಬಳಸಿಕೊಂಡಿದ್ದಳಂತೆ. ಆತನ ಜೊತೆ ನಿರಂತರವಾದ ಸಂಪರ್ಕ ಹೊಂದಲು, ಬಾಲಕನನ್ನು ಕರೆದುಕೊಂಡು ಓಡಿ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಹೈದ್ರಾಬಾದ್ ನ ಬಾಡಿಗೆ ಮನೆಯಲ್ಲಿ ವಾಸ
ಹೀಗೆ ಮನೆ, ಗಂಡ, ಮಕ್ಕಳನ್ನು ಬಿಟ್ಟು, ಬಾಲಕನ ಜೊತೆ ಓಡಿ ಹೋಗಿದ್ದ 32ರ ಆಂಟಿ ಹೈದ್ರಾಬಾದ್‍ನ ಬಾಲನಗರದಲ್ಲಿ ಬಾಡಿಗೆ ಮನೆ ಪಡೆದು ವಾಸಿಸುತ್ತಿದ್ದರು. ಅವರಿಬ್ಬರು ಅಲ್ಲಿ ವಾಸಿಸುತ್ತಿರುವುದರ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು. ಮಾಹಿತಿ ತಿಳಿದ ಪೊಲೀಸರು ಮಹಿಳೆಯನ್ನು ಬಂಧಿಸಿ, ಬಾಲಕನನ್ನು ರಕ್ಷಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ಪತಿ
ಈ ರೀತಿ ಬಾಲಕನ ಜೊತೆ ಎಸ್ಕೇಪ್ ಆಗಿದ್ದ ಆಂಟಿಯ ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾರಂತೆ. ಅದಕ್ಕೆ ಆಕೆ ಪತಿ ಜೊತೆ ವಾಸವಾಗಿಲ್ವಂತೆ. ಅದಕ್ಕೆ ಬೇರೆ ಮಕ್ಕಳೊಂದಿಗೆ ಸಲುಗೆ ಬೆಳಸಿಕೊಳ್ಳುತ್ತಿದ್ದಳಂತೆ. ಅದೇ ರೀತಿ ಎದುರು ಮನೆಯ ಬಾಲಕನನ್ನು ಆಕರ್ಷಿಸಿ ತನ್ನ ಬುಟ್ಟಿಗೆ ಹಾಕಿಕೊಂಡಿದ್ದಳಂತೆ.

ಇದನ್ನೂ ಓದಿ: Suicide: 6 ವರ್ಷ ಹಿಂದೆ ತಂದೆ ಸೂಸೈಡ್, ಈಗ ತಾಯಿ ಮಗಳು ಆತ್ಮಹತ್ಯೆ! ಪರೀಕ್ಷೆ ಫೇಲ್ ಆಗಿದ್ದಕ್ಕೆ ದುಡುಕಿನ ನಿರ್ಧಾರ

ಮೊದಲು ಹುಡುಗ ನಾಪತ್ತೆ, ಬಳಿಕ ಮಹಿಳೆ ಎಸ್ಕೇಪ್
ಕೆಲ ದಿನಗಳ ಹಿಂದೆ ಬಾಲಕ ಮನೆಯಿಂದ ಹೊರಹೋಗಿದ್ದವ ಮನೆಗೆ ಬಂದಿರಲಿಲ್ಲ ಎನ್ನಲಾಗಿದೆ. ಮೊದಲು ಹುಡುಗ ಸ್ನೇಹಿತರ ಮನೆಗೆ ಹೋಗಿರಬಹುದು ಅಂತ ಮನೆಯವರು ಅಂದುಕೊಂಡಿದ್ದರು. ಆದರೆ ಆತನ ಮೊಬೈಲ್ ಸ್ವಿಚ್ಛ್ ಆಫ್ ಬರುತ್ತಿತ್ತು. ಅಲ್ಲದೇ ರಾತ್ರಿಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ ಹೀಗಾಗಿ ಮನೆಯವರು ಗಾಬರಿಯಾಗಿ, ದೂರು ನೀಡಿದ್ದರು.

ಹೆಂಡತಿ ಕಾಣುತ್ತಿಲ್ಲ ಅಂತ ಗಂಡ ದೂರು
ಇದಾದ ಸ್ವಲ್ಪ ಸಮಯಕ್ಕೆ ಎದುರು ಮನೆಯ ಆಂಟಿಯೂ ಮನೆಯಿಂದ ನಾಪತ್ತೆಯಾಗಿದ್ದಾಳೆ. ಈಕೆಯ ಪತಿ ಪತ್ನಿ ನಾಪತ್ತೆ ಬಗ್ಗೆ ದೂರು ನೀಡಿದ್ರು. ಇತ್ತ ಹುಡುಗನೂ ನಾಪತ್ತೆಯಾಗಿರೋದ್ರಿಂದ ಎರಡೂ ಮನೆಯವರಿಗೆ ಅನುಮಾನ ಬಂದಿತ್ತು.

ಅಪಹರಣ ಪ್ರಕರಣ ದಾಖಲು
ಇನ್ನು ಮಹಿಳೆ ವಿರುದ್ಧ ಹುಡುಗನ ಕುಟುಂಬಸ್ಥರು ದೂರು ನೀಡಿದ್ದರು. ಬಾಲಕ ಅಪ್ರಾಪ್ತನಾಗಿರುವುದರಿಂದ ಮಹಿಳೆ ಮೇಲೆ ಪೊಲೀಸರು ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡಿದ್ದರು. ನಾವು ಬಾಲಕ ಹಾಗೂ ಮಹಿಳೆ ಇರುವ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಮತ್ತು ಹುಡುಗ ಮತ್ತು ಮಹಿಳೆಯನ್ನು ಹುಡುಕಲು ವಿಶೇಷ ತಂಡಗಳನ್ನು ರಚಿಸಿದ್ದೇವೆ ಎಂದು ಲೀಸರು ಹೇಳಿದ್ದರು.

ಇದನ್ನೂ ಓದಿ: Power Bill: ಒಂದೇ ತಿಂಗಳಲ್ಲಿ 3419 ಕೋಟಿ ಬಿಲ್! ಶಾಕ್‌ಗೆ ಒಳಗಾಗಿ ಆಸ್ಪತ್ರೆ ಸೇರಿದ ಮನೆ ಯಜಮಾನ!

ಹುಡುಗನ ಹುಡುಕಿಕೊಟ್ಟರೆ ಬಹುಮಾನ
ಹುಡುಗ ಮತ್ತು ಮಹಿಳೆ ನಡುವೆ ಬೇರೆ ರೀತಿಯ ಸಂಬಂಧ ಇತ್ತು. ಬಾಲಕನನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಪೊಲೀಸರು ಘೋಷಿಸಿದ್ದರು. ಅದೇ ರೀತಿ ಮಾಹಿತಿ ಕೊಟ್ಟವರಿಗೆ ಪೊಲೀಸರು ಸೂಕ್ತ ಬಹುಮಾನ ನೀಡಿದ್ದಾರೆ. ಅಮ್ಮನ ಕೆಲಸದಿಂದ 4 ಮಕ್ಕಳು ಅನಾಥರಾಗಿದ್ದಾರೆ.
Published by:Savitha Savitha
First published: