ನುಗ್ಗೆ ಸೊಪ್ಪು- ಅಗಸೆ ಬೀಜದ ಕುಕ್ಕೀಸ್‌ ತಯಾರಿಸಿ ವರ್ಷಕ್ಕೆ 33 ಲಕ್ಷ ಗಳಿಸಿದ ದಂತ ವೈದ್ಯೆ

ಈ ಉತ್ಪನ್ನಗಳು ದೇಶದ 17 ನಗರಗಳ 72 ಮಳಿಗೆಗಳಲ್ಲಿ ಲಭ್ಯವಿದೆ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲೂ ಸಿಗುತ್ತದೆ. ಇಲ್ಲಿಯವರೆಗೆ, 33 ಲಕ್ಷ ರೂ. ವ್ಯಾಪಾರ ಮಾಡಿದ್ದು, 825 ಕಿಲೋ ಇಂಗಾಲವನ್ನು ವಾತಾವರಣಕ್ಕೆ ಹೊರಸೂಸುವುದನ್ನು ತಡೆದಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಈ ಹಲ್ಲಿನ ಡಾಕ್ಟರ್​.

cookies

cookies

 • Share this:

  ಡೆಂಟಲ್​ ಓದಿದ ಮಹಾರಾಷ್ಟ್ರದ ಜಲ್ನಾ ಮೂಲದ ಡಾ.ಮಿನಾಲ್ ಕಬ್ರಾ, ಅನೇಕ ವರ್ಷಗಳಿಂದ ಮಕ್ಕಳಲ್ಲಿ ಉಂಟಾಗುವ ದಂತ ಕ್ಷಯಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ. ಇವರ ಅನುಭವದ ಪ್ರಕಾರ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಹಲ್ಲಿನ ಕಾಯಿಲೆಯ ಪ್ರಮಾಣ ಹೆಚ್ಚಾಗಿದೆ ಎಂದು ಹೇಳುತ್ತಾರೆ.


  "ಹಲ್ಲುಗಳು ಅಶುದ್ಧವಾಗಿದ್ದರೆ ಜಿಗುಟಾದ ಚಾಕೊಲೇಟ್‌ಗಳು ಹೆಚ್ಚು ಹಾನಿ ಮಾಡುತ್ತವೆ" ಎಂದೂ ಡಾ. ಮಿನಾಲ್‌ ದಿ ಬೆಟರ್‌ ಇಂಡಿಯಾಗೆ ಹೇಳಿದ್ದಾರೆ. ಜೊತೆಗೆ ಇವರಿಗೆ ಹೆಚ್ಚು ಆಲೋಚನೆಗೆ ಹಚ್ಚಿದ ಸಂಗತಿ ಏನೆಂದರೆ "ತಮ್ಮ ಮಕ್ಕಳೊಂದಿಗೆ ಬರುವ ತಾಯಂದಿರು ನಿರುದ್ಯೋಗ ಮತ್ತು ತಮ್ಮ  ಹಣಕಾಸಿನ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಹಿನ್ನೆಲೆ ಮಕ್ಕಳಿಗೆ ಸಕ್ಕರೆ ಆಧಾರಿತ ಆಹಾರಕ್ಕೆ ಪರ್ಯಾಯವನ್ನು ಹುಡುಕುವುದರ ಜೊತೆಗೆ, ಗ್ರಾಮೀಣ ಮಹಿಳೆಯರಿಗೆ ಜೀವನೋಪಾಯ ಸೃಷ್ಟಿಸಲು ನಾನು ಪರಿಹಾರ ಕಂಡುಕೊಳ್ಳಲು ಬಯಸಿದೆ” ಎಂದು ಹೇಳಿದ್ದಾರೆ.


  ಈ ಹಿನ್ನೆಲೆ ಒಂದೇ ಕಲ್ಲಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತೆ ಅವರು ಈ ಎರಡೂ ಸಮಸ್ಯೆಗಳಿಗೆ ಕಳೆದ ಎರಡು ವರ್ಷಗಳಿಂದ ಒಂದೇ ಪರಿಹಾರ ಕಂಡುಕೊಂಡಿದ್ದಾರೆ. ಅದೇ ವೆಗಾನ್‌ ಸಕ್ಕರೆ ರಹಿತ ಕುಕಿ ವ್ಯವಹಾರ.


  2019ರಲ್ಲಿ ಕಿವು ಎಂಬ ಸ್ಟಾರ್ಟಪ್‌ ವ್ಯವಹಾರ ಪ್ರಾರಂಬಿಸಿದ್ದಾರೆ ಈ ದಂತ ವೈದ್ಯೆ. ಕಿವು ಎಂದರೆ ನಿಮ್ಮೊಳಗಿನ ಶಕ್ತಿಯನ್ನು ಹೆಚ್ಚಿನ ಒಳಿತಿಗಾಗಿ ಪ್ರೋತ್ಸಾಹ ನೀಡುವುದು ಎಂಬ ಅರ್ಥದ ಸಮ್ಮಿಳನ ಪದವಾಗಿದ್ದು, ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಲು ಇದು ಅನುವು ಮಾಡಿಕೊಡುತ್ತದೆ.


  ನುಗ್ಗೆ ಸೊಪ್ಪು ಮತ್ತು ಅಗಸೆ ಬೀಜದ ಕುಕ್ಕೀಸ್‌
  ಮಹಾರಾಷ್ಟ್ರದ ಜಲ್ನಾ ಬಿಸಿಲಿನ ಪ್ರದೇಶ ಎಂದು ಡಾ. ಮಿನಾಲ್‌ ಹೇಳುತ್ತಾರೆ. ಆದ್ದರಿಂದ, ಸೌರಶಕ್ತಿಯ ಸಹಾಯದಿಂದಲೇ ಆಕೆಯ ವ್ಯವಹಾರ ನಡೆಯುತ್ತಿದೆ. ಇದು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದ್ದು, ಪ್ರತಿ ಕುಕ್ಕೀ ತಯಾರಿಕೆಯಲ್ಲಿ CO2 ತಗ್ಗಿಸಲು ಸಹಾಯ ಮಾಡುತ್ತದೆ. "ನಾವು ಒಂದು ವರ್ಷದಲ್ಲಿ 300 ದಿನಗಳಿಗಿಂತ ಹೆಚ್ಚು ಕಾಲ ಸೂರ್ಯನ ಬೆಳಕನ್ನು ಉಚಿತವಾಗಿ ಪಡೆಯುತ್ತೇವೆ, ಹಾಗಾಗಿ ನನ್ನ ಕುಟುಂಬ ಹೊಂದಿರುವ ಸೋಲಾರ್ ಕುಕ್ಕರ್‌ನಲ್ಲಿ ಕುಕ್ಕೀಗಳನ್ನು ತಯಾರಿಸಲು ನಾನು ಯೋಚಿಸಿದೆ" ಎಂದು ಹೇಳುತ್ತಾರೆ. ಅಲ್ಲದೆ, ಹವಾಮಾನ ಬಿಕ್ಕಟ್ಟಿನ ಬಗ್ಗೆ ತಿಳಿದಿದ್ದೇನೆ ಮತ್ತು ಯಾವಾಗಲೂ ಸುಸ್ಥಿರ ಜೀವನಶೈಲಿಯಲ್ಲಿ ಬದುಕಲು ಪ್ರಯತ್ನಿಸುತ್ತೇನೆ. ಹಾಗಾಗಿ, ನನ್ನ ವ್ಯವಹಾರಕ್ಕೂ ಸೌರಶಕ್ತಿ ಬಳಸಲು ನಿರ್ಧರಿಸಿದೆ ಎಂದೂ ಹೇಳುತ್ತಾರೆ.

  2016-17ರ ನಡುವೆ, ಮಿನಾಲ್ ಸೋಲಾರ್ ಕುಕ್ಕರ್ ಬಳಸುವ ವಿವಿಧ ಸಾಧ್ಯತೆಗಳನ್ನು ಅನ್ವೇಷಿಸಲು ಕುಕ್ಕೀಸ್‌ ಮತ್ತು ವಿವಿಧ ಆಹಾರ ಪದಾರ್ಥಗಳನ್ನು ಪ್ರಯೋಗಿಸಲು ಆರಂಭಿಸಿದರು. 2018-19 ರ ಹೊತ್ತಿಗೆ, ಗಾಜಿನ ಟ್ಯೂಬ್, ಅಡುಗೆ ಟ್ರೇ ಮತ್ತು ಪ್ಯಾರಾಬೋಲಿಕ್ ರಿಫ್ಲೆಕ್ಟರ್ ಹೊಂದಿರುವ ಸೌರ ಕುಕ್ಕರ್ ಬಳಸಿ ತನ್ನ ಶೈಲಿಯ ಬೇಕಿಂಗ್ ಕುಕೀಗಳನ್ನು ತಯಾರಿಸಿದರು. "ನಾನು ಆರೋಗ್ಯಕರ ಆಹಾರ, ಮಹಿಳಾ ಸಬಲೀಕರಣ ಮತ್ತು ಹವಾಮಾನ ಪ್ರಜ್ಞೆಯ ಎಲ್ಲ ಅಗತ್ಯಗಳನ್ನು ಒಂದೇ ವ್ಯವಹಾರದಲ್ಲಿ ಸಂಯೋಜಿಸಬಹುದು, ಹಾಗಾಗಿ ನಾನು ಡಿಸೆಂಬರ್ 2019ರಲ್ಲಿ ಸ್ಟಾರ್ಟಪ್‌ ಪ್ರಾರಂಭಿಸಿದೆ'' ಎಂದೂ ವಿವರಿಸುತ್ತಾರೆ.


  ಹತ್ತಿರದ ಗ್ರಾಮದ ಇಬ್ಬರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಂಡರು ಮತ್ತು ಪ್ರತಿಯೊಬ್ಬರಿಗೂ ಸೋಲಾರ್ ಕುಕ್ಕರ್ ನೀಡಿದರು. "ನಾನು ಮಹಿಳೆಯರನ್ನು ನೇಮಿಸಿಕೊಳ್ಳಲು ಬಯಸಲಿಲ್ಲ. ಆದರೆ, ಅವರು ಸಹ ನನ್ನ ಉದ್ಯಮದ ಭಾಗಗಳಾಗಬೇಕು ಎಂಬುದನ್ನು ಬಯಸಿದ್ದೆ. ಹಾಗಾಗಿ, ಅವರಿಗೆ ಉತ್ಪಾದನೆಗೆ ನೆರವಾಗಲು ಅಗತ್ಯವಾದ ಸಲಕರಣೆಗಳನ್ನು ನಾನು ಒದಗಿಸಿದೆ. ನಾನು ಉತ್ಪನ್ನಗಳನ್ನು ಖರೀದಿಸುತ್ತೇನೆ ಮತ್ತು ಅವುಗಳನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಮರು ಮಾರಾಟ ಮಾಡುತ್ತೇನೆ" ಎಂದೂ ಹೇಳಿದರು.

  ಒಂದುವರೆ ವರ್ಷ ಹಳೆಯದಾದ ಸಂಸ್ಥೆಯು ಇಂದು ದಿನಕ್ಕೆ 30 ಕಿಲೋ ಕುಕ್ಕೀಗಳನ್ನು ರಾಜಗಿರಾ (ಅಮರನಾಥ್), ಜೋಳ (ಜೋಳ), ತೆಂಗಿನಕಾಯಿ, ಗೋಧಿ, ಓಟ್ಸ್, ಅಗಸೆಬೀಜ, ಮೊರಿಂಗಾ, ಶುಂಠಿ ನಿಂಬೆ ಮತ್ತು ಬಹು-ಮಸಾಲೆ ಕುಕ್ಕೀಗಳಿಂದ ತಯಾರಿಸುತ್ತದೆ. ಆರೋಗ್ಯಕರ ಕುಕೀಸ್‌ನಲ್ಲಿ ಸಿಹಿಗಾಗಿ ಬೆಲ್ಲವನ್ನು ಸೇರಿಸಲಾಗುತ್ತದೆ.

  ಈ ಉತ್ಪನ್ನಗಳು ದೇಶದ 17 ನಗರಗಳ 72 ಮಳಿಗೆಗಳಲ್ಲಿ ಲಭ್ಯವಿದೆ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲೂ ಸಿಗುತ್ತದೆ. ಇಲ್ಲಿಯವರೆಗೆ, 33 ಲಕ್ಷ ರೂ. ವ್ಯಾಪಾರ ಮಾಡಿದ್ದು, 825 ಕಿಲೋ ಇಂಗಾಲವನ್ನು ವಾತಾವರಣಕ್ಕೆ ಹೊರಸೂಸುವುದನ್ನು ತಡೆದಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಈ ಹಲ್ಲಿನ ಡಾಕ್ಟರ್​

  "ನಾನು ಮಿನಾಲ್‌ನಿಂದ ಸೋಲಾರ್ ಕುಕ್ಕರ್ ಬಳಸಿ ಬೇಕಿಂಗ್ ಕೌಶಲ್ಯಗಳನ್ನು ಕಲಿತೆ ಮತ್ತು ಉತ್ಪನ್ನಗಳನ್ನು ತಯಾರಿಸಿ ಅವರಿಗೆ ಮಾರಾಟ ಮಾಡಿದೆ. ಇದರಿಂದ ನನಗೆ ದಿನಕ್ಕೆ 450 ರೂ. ಸಂಪಾದನೆಯಾಗುತ್ತಿದೆ. ನನ್ನ ಪತಿ ಚಾಲಕರಾಗಿದ್ದು, ಮೊದಲು ನಾನು ಹಣಕಾಸಿಗಾಗಿ ಅವರನ್ನೇ ಅವಲಂಬಿಸಬೇಕಾಗಿತ್ತು. ಕೆಲವೊಮ್ಮೆ ಅವರು ದಿನಗಟ್ಟಲೆ ಮನೆಗೆ ಬರುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಹಣದ ಕೊರತೆ ಉಂಟಾಗುತ್ತಿತ್ತು. ಆದರೆ, ಇನ್ಮುಂದೆ ಇಲ್ಲ'' ಎಂದೂ ಹೇಳುತ್ತಾರೆ.

  ಸ್ವಪ್ನಾ ತನ್ನ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿದ್ದು, "ಅನೇಕ ಮಹಿಳೆಯರು ನನ್ನಿಂದ ಸ್ಫೂರ್ತಿ ಪಡೆದಿದ್ದಾರೆ ಮತ್ತು ಇದೇ ರೀತಿಯ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಬಯಸಿದ್ದಾರೆ" ಎಂದೂ ಆಕೆ ಹೇಳುತ್ತಾರೆ.


  ಇದನ್ನೂ ಓದಿ: ಶಿವಕುಮಾರ್​ ಚಾಕು- ಚೂರಿ ಇಟ್ಕೋತಾನೆ ಎಂದು ರಾಜೀವ್​ ಗಾಂಧಿಗೆ ದೂರು ಕೊಟ್ಟಿದ್ದರು...!; ನೆನಪು ಮೆಲುಕು ಹಾಕಿದ ಡಿಕೆಶಿ

  ಈಗಾಗಲೇ ತನ್ನ ವ್ಯಾಪಾರ ಮಾದರಿಯಲ್ಲಿ ಹೆಚ್ಚಿನ ಮಹಿಳೆಯರನ್ನು ತೊಡಗಿಸಿಕೊಳ್ಳುವ ಮಾದರಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಭವಿಷ್ಯದಲ್ಲಿ ದೇಶಾದ್ಯಂತ 100 ಕ್ಲಸ್ಟರ್‌ಗಳನ್ನು ರಚಿಸುವ ಗುರಿ ಹೊಂದಿದ್ದೇನೆ" ಎಂದು ಡಾ. ಮಿನಾಲ್ ಹೇಳುತ್ತಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: