HOME » NEWS » National-international » 31 YEAR OLD WOMAN ALLEGEDLY MOLESTED AND THROWN OFF SPEEDING CAR IN KOLKATA SCT

ಲಾಂಗ್​ ಡ್ರೈವ್ ಹೋದಾಗ ಗೆಳತಿಯನ್ನು ಚಲಿಸುವ ಕಾರಿನಿಂದ ತಳ್ಳಿ ಪರಾರಿ

Crime News: 31 ವರ್ಷದ ಮಹಿಳೆ ಲಾಂಗ್​ ಡ್ರೈವ್​ಗೆ ಹೋಗಿದ್ದಾಗ ಆಕೆಯ ಗೆಳೆಯನೇ ಆಕೆಯನ್ನು ಕಾರಿನಿಂದ ತಳ್ಳಿದ್ದಾನೆ. ಆತನೇ ಕಾರನ್ನು ಡ್ರೈವ್ ಮಾಡುತ್ತಿದ್ದುದರಿಂದ ಆಯತಪ್ಪಿ ಇನ್ನೋರ್ವ ಮಹಿಳೆಗೆ ಡಿಕ್ಕಿ ಹೊಡೆದಿದ್ದಾನೆ.

Sushma Chakre | news18-kannada
Updated:September 7, 2020, 3:12 PM IST
ಲಾಂಗ್​ ಡ್ರೈವ್ ಹೋದಾಗ ಗೆಳತಿಯನ್ನು ಚಲಿಸುವ ಕಾರಿನಿಂದ ತಳ್ಳಿ ಪರಾರಿ
ಸಾಂಧರ್ಭಿಕ ಚಿತ್ರ
  • Share this:
ಕೊಲ್ಕತ್ತಾ (ಸೆ. 7): ಪಶ್ಚಿಮ ಬಂಗಾಳದ ಕೊಲ್ಕತ್ತಾವನ್ನು ಅತ್ಯಂತ ಸುರಕ್ಷಿತ ನಗರ ಎಂದು ಕರೆಯಲಾಗುತ್ತದೆ. ಆದರೆ, ಅದೇ ನಗರದಲ್ಲಿ 31 ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ವೇಗವಾಗಿ ಚಲಿಸುವ ಕಾರಿನಿಂದ ತಳ್ಳಿರುವ ಅಮಾನವೀಯ ಘಟನೆ ನಡೆದಿದೆ. ಭಾನುವಾರ ಮುಂಜಾನೆ ಈ ಘಟನೆ ನಡೆದಿದ್ದು, ಆ ಮಹಿಳೆಯನ್ನು ತಳ್ಳಿದ ಬಳಿಕ ಬ್ಯಾಲೆನ್ಸ್​ ತಪ್ಪಿ, ಇನ್ನೋರ್ವ ಮಹಿಳೆಯ ಮೈಮೇಲೆ ಹತ್ತಿದೆ. ಇದರಿಂದ ಆ ಮಹಿಳೆಯ ಕಾಲು ಮುರಿದುಹೋಗಿದೆ. ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. 31 ವರ್ಷದ ಮಹಿಳೆ ಲಾಂಗ್​ ಡ್ರೈವ್​ಗೆ ಹೋಗಿದ್ದಾಗ ಆಕೆಯ ಗೆಳೆಯನೇ ಆಕೆಯನ್ನು ಕಾರಿನಿಂದ ತಳ್ಳಿದ್ದಾನೆ. ಆತನೇ ಕಾರನ್ನು ಡ್ರೈವ್ ಮಾಡುತ್ತಿದ್ದುದರಿಂದ ಆಯತಪ್ಪಿ ಇನ್ನೋರ್ವ ಮಹಿಳೆಗೆ ಡಿಕ್ಕಿ ಹೊಡೆದಿದ್ದಾನೆ. ತಕ್ಷಣ ಸ್ಥಳದಲ್ಲಿ ಸೇರಿದ ಸ್ಥಳೀಯರು ಆ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದರೂ ಆತ ಪರಾರಿಯಾಗಿದ್ದಾನೆ. ಕೋಲ್ಕತ್ತಾದ ಪೂರ್ವ ಭಾಗದ ಆನಂದಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಗೆಳೆಯನೊಂದಿಗೆ ಕಾರಿನಲ್ಲಿ ಸುತ್ತಾಡಲು ಹೋಗಿದ್ದ ಮಹಿಳೆ ಆತನ ವರ್ತನೆಯಿಂದ ಇರುಸುಮುರುಸುಗೊಂಡಿದ್ದಳು. ಮನೆಗೆ ಹೋಗಬೇಕೆಂದು ಒತ್ತಾಯಪಡಿಸಿದ ನಂತರ ಸ್ನೇಹಿತ ಆಕೆಯ ಮೇಲೆ ಕಾರಿನಲ್ಲೇ ಲೈಂಗಿಕ ದೌರ್ಜನ್ಯ ನಡೆಸಿದ್ದ. ವೇಗವಾಗಿ ಕಾರು ಚಲಾಯಿಸುತ್ತಿದ್ದ ಆತ ಆಕೆಯನ್ನು ಕಾರಿನಿಂದ ಕೆಳಗೆ ತಳ್ಳಿದ್ದ. ಇದನ್ನು ನೋಡಿ ಕಾರನ್ನು ನಿಲ್ಲಿಸಲು ಬಂದ ದಂಪತಿಯ ಮೇಲೆ ಆತ ಕಾರನ್ನು ಹರಿಸಿದ್ದ. ಇದರಿಂದ ಮಹಿಳೆಯ ಕಾಲು ಸಂಪೂರ್ಣ ಜಖಂ ಆಗಿದೆ.

ಇದನ್ನೂ ಓದಿ: Drugs Mafia: ಪ್ರತಿಷ್ಠಿತ ಶಾಲಾ ಮಕ್ಕಳಿಗೆ ಐಸ್​ಕ್ರೀಂನಲ್ಲಿ ಡ್ರಗ್ಸ್; ಸಚಿವ ಸುರೇಶ್ ಕುಮಾರ್ ಅನುಮಾನ

ಕಾರು ನಮ್ಮನ್ನು ಗುದ್ದಿದ ಬಳಿಕ ನಾನು ಎಮರ್ಜೆನ್ಸಿ ನಂಬರ್​ಗೆ ಕರೆ ಮಾಡಿದಾಗ ಯಾರೂ ಫೋನ್ ರಿಸೀವ್ ಮಾಡಲಿಲ್ಲ. ಕೊರೋನಾದಿಂದಾಗಿ ಆ್ಯಂಬುಲೆನ್ಸ್‌ಗಳು ಸಹ ಬರಲು ಸಿದ್ಧರಿರಲಿಲ್ಲ. ಕೊನೆಗೆ ಆನಂದಪುರ ಪೊಲೀಸ್ ಠಾಣೆ ಸಿಬ್ಬಂದಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದರು. ತಕ್ಷಣ ನನ್ನ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಗಾಯಾಳುವಿನ ಗಂಡ ಹೇಳಿಕೆ ನೀಡಿದ್ದಾರೆ.

ಅಪಘಾತದಿಂದ ಕಾಲು ಮುರಿದಿರುವ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿರುಕುಳಕ್ಕೊಳಗಾದ ಮಹಿಳೆಯನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಆರೋಪಿ ನಾಪತ್ತೆಯಾಗಿದ್ದಾನೆ.
Published by: Sushma Chakre
First published: September 7, 2020, 2:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories