• Home
 • »
 • News
 • »
 • national-international
 • »
 • Rajya Sabha: 8 ವರ್ಷಗಳಲ್ಲಿ 3 ಸಾವಿರ ದಾಳಿ, 23 ಮಾತ್ರ ಸಕ್ಸಸ್! ಸಂಸತ್‌ನಲ್ಲಿ ಇಡಿ ವಿರುದ್ಧ ಎಎಪಿ ಕಿಡಿ

Rajya Sabha: 8 ವರ್ಷಗಳಲ್ಲಿ 3 ಸಾವಿರ ದಾಳಿ, 23 ಮಾತ್ರ ಸಕ್ಸಸ್! ಸಂಸತ್‌ನಲ್ಲಿ ಇಡಿ ವಿರುದ್ಧ ಎಎಪಿ ಕಿಡಿ

ಎಎಪಿ ಸಂಸದ ಸಂಜಯ್ ಸಿಂಗ್

ಎಎಪಿ ಸಂಸದ ಸಂಜಯ್ ಸಿಂಗ್

"ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡು ಕಳೆದ ಎಂಟು ವರ್ಷಗಳಲ್ಲಿ ಪ್ರತಿಪಕ್ಷ ನಾಯಕರ ಮೇಲೆ ಸುಮಾರು 3,000 ದಾಳಿಗಳನ್ನು ನಡೆಸಿದ್ದಾರೆ. ಆದರೆ 23 ಜನರನ್ನು ಮಾತ್ರ ಅಪರಾಧಿ ಎಂದು ಘೋಷಿಸುವಲ್ಲಿ ಯಶಸ್ವಿಯಾಗಿದೆ. ಅಂದರೆ 0.5% ರಷ್ಟು ದಾಳಿಗಳು ಹಾಗೂ ಪರಿಶೀಲನೆಗಳು ನಡೆದಿದೆ" ಎಂದು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಆರೋಪಿಸಿದರು.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • New Delhi, India
 • Share this:

  ನವದೆಹಲಿ: ಪ್ರತಿಪಕ್ಷ ನಾಯಕರು ತನಿಖಾ ಸಂಸ್ಥೆಗಳ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ  ಎಂದು ರಾಜ್ಯಸಭೆಯ (Rajya Sabha)   ಶೂನ್ಯವೇಳೆ ( Zero Hour session) ಅಧಿವೇಶನದಲ್ಲಿ  ಆಮ್ ಆದ್ಮಿ ಪಕ್ಷದ (Aam Aadmi Party) ಸಂಸದ ಸಂಜಯ್ ಸಿಂಗ್ (MP Sanjay Singh) ಅವರು ಆರೋಪಿಸಿದ್ದಾರೆ. ಈ ಹಿಂದೆ, ಚರ್ಚಿಸಲಾದ ನೋಟೀಸ್‌ನಲ್ಲಿ, ಹಿಂದಿನ ಎಂಸಿಡಿ ಚುನಾವಣೆಯಲ್ಲಿ ಹೊಸದಾಗಿ ಚುನಾಯಿತರಾದ ಕೌನ್ಸಿಲರ್‌ಗಳು ಕೆಲವು ಪ್ರಚೋದನೆ ಮತ್ತು ಆಮಿಷಗಳಿಗೆ ಒಳಗಾಗಿದ್ದರು. ಆದರೆ ಎಎಪಿ ಕೌನ್ಸಿಲರ್‌ಗಳನ್ನು ಸಿಕ್ಕಿ ಹಾಕಿಸಲು ಎಷ್ಟೇ ಯತ್ನಿಸಿದರೂ ಎಲ್ಲಾ ಪ್ರಯತ್ನಗಳು ವಿಫಲವಾಯಿತು  ಎಂದು ಹೇಳಿದ್ದಾರೆ. ಕೆಲ ಕಾಲ ಈ ವಿಚಾರ ಸಂಸತ್ತಿನಲ್ಲಿ ಗದ್ದಲಕ್ಕೆ ಕಾರಣವಾಯಿತು. ಇದು ಮೇಲ್ಮನೆಯಲ್ಲಿ ಕೋಲಾಹಲವನ್ನು ಹಬ್ಬಿಸಿತು.  ಸರ್ಕಾರದ ಕಾರ್ಯಗಳ  ಬಗ್ಗೆ ವಿವರಿಸುತ್ತಾ, ವಿರೋಧ ಪಕ್ಷದವರು ಹೊರಗೆ ಮಾತನಾಡುವುದಲ್ಲ. ಸಂಸತ್ತಿನ ಒಳಗೆ ಈ ವಿಚಾರದ ಬಗ್ಗೆ ಮಾತನಾಡಲಿ ಎಂದರು.


  8 ವರ್ಷಗಳಲ್ಲಿ ಪ್ರತಿಪಕ್ಷ ನಾಯಕರ ಮೇಲೆ ಸುಮಾರು 3,000 ದಾಳಿ


  ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡು ಕಳೆದ ಎಂಟು ವರ್ಷಗಳಲ್ಲಿ ಪ್ರತಿಪಕ್ಷ ನಾಯಕರ ಮೇಲೆ ಸುಮಾರು 3,000 ದಾಳಿಗಳನ್ನು ನಡೆಸಿದ್ದಾರೆ. ಆದರೆ 23 ಜನರನ್ನು ಮಾತ್ರ ಅಪರಾಧಿ ಎಂದು ಘೋಷಿಸುವಲ್ಲಿ ಯಶಸ್ವಿಯಾಗಿದೆ. ಅಂದರೆ 0.5% ರಷ್ಟು ದಾಳಿಗಳು ಹಾಗೂ ಪರಿಶೀಲನೆಗಳು ನಡೆದಿದೆ ಎಂದು ಆರೋಪಿಸಿದರು.


  Directorate of Enforcement Recruitment 2022 apply for legal consultant post.
  ಜಾರಿ ನಿರ್ದೇಶನಾಲಯ


  ಇಷ್ಟೇ ಅಲ್ಲದೇ  ದೇಶದಿಂದ ಪಲಾಯಾನ ಮಾಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿ, ಮದ್ಯದ ಉದ್ಯಮಿ ನೀರವ್ ಮೋದಿ, ಮಾಜಿ ಕ್ರಿಕೆಟ್ ಆಡಳಿತಗಾರ ಮತ್ತು ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ವಿಚಾರವಾಗಿ ಕೇಂದ್ರ ಸರ್ಕಾರ ಮೌನ ವಹಿಸಿದೇ ಎಂದು ಆರೋಪಿಸಿದರು.


  ವಿಜಯ್ ಮಲ್ಯ


  ನೀರವ್ ಮೋದಿ, ವಿಜಯ್ ಮಲ್ಯ, ಲಲಿತ್ ಮೋದಿ ಬಗ್ಗೆ ಮೌನ ವಹಿಸಿರುವುದೇಕೆ?


  20,000 ಕೋಟಿ ರೂ.ಗಳ ಹಗರಣದ ಆರೋಪಿ ನೀರವ್ ಮೋದಿ ವಿರುದ್ಧ ಇಡಿ ಏಕೆ ಮೌನವಾಗಿದೆ? ದರೋಡೆಕೋರರಾದ ನೀರವ್ ಮೋದಿ, ವಿಜಯ್ ಮಲ್ಯ, ಲಲಿತ್ ಮೋದಿ, ರೆಡ್ಡಿ ಬ್ರದರ್ಸ್, ಯಡಿಯೂರಪ್ಪ ಮತ್ತು ವ್ಯಾಪಂ ಹಗರಣದ ಮೇಲೆ ಇಡಿ ಮತ್ತು ಸಿಬಿಐ ಏಕೆ ಕ್ರಮಕೈಗೊಳ್ಳುತ್ತಿಲ್ಲ ಎಂಬುದು ನನ್ನ ಪ್ರಶ್ನೆ? ನಿಮ್ಮೊಂದಿಗೆ ಸಂಬಂಧ ಹೊಂದಿರುವ ಎಲ್ಲ ಭ್ರಷ್ಟರ ವಿರುದ್ಧ  ಏಕೆ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು.


  former cm bs yediyurappa petition challenging the Karnataka high court order pvn
  ಬಿ. ಎಸ್.ಯಡಿಯೂರಪ್ಪ


  ಆದರೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆ ಮೇಲೆ 14 ಗಂಟೆಗಳ ಕಾಲ ದಾಳಿ ನಡೆಸಲಾಗಿದೆ, ಅರವಿಂದ್ ಕೇಜ್ರಿವಾಲ್ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ ಮತ್ತು ಸತ್ಯೇಂದ್ರ ಜೈನ್ ಅವರನ್ನು ಜೈಲಿನಲ್ಲಿ ಇರಿಸಲಾಗಿದೆ. ಎಲ್ಲಾ ಸಚಿವರ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ನೀವು ದೇಶವನ್ನು ಬೆದರಿಸಲು ಮತ್ತು ಸರ್ವಾಧಿಕಾರ ನಡೆಸಲು ಬಯಸಿದರೆ, ಎಲ್ಲರನ್ನೂ ಜೈಲಿಗೆ ಹಾಕಿ ಎಂದು ಕಿಡಿಕಾರಿದರು.


  ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ


  ಇದೇ ವೇಳೆ ಸಂಜಯ್ ಸಿಂಗ್ ಅವರು  ಶಿವಸೇನಾ ಸಂಸದ ಸಂಜಯ್ ರಾವತ್ ಮೇಲೆ ಕೂಡ ಇಡಿ ಕೈಗೊಂಡ ಕ್ರಮದ ಬಗ್ಗೆ ಪ್ರಸ್ತಾಪಿಸಿದರು. ವಿರೋಧ ಪಕ್ಷಗಳ ವಿರುದ್ಧ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳು ಮತ್ತು ಸರ್ಕಾರಗಳನ್ನು ಅಸ್ಥಿರಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.


  ಇದನ್ನೂ ಓದಿ: Uttar Pradesh: ದೆಹಲಿ ಗೆದ್ದಾಯ್ತು, ಮುಂದಿನ ಗುರಿ ಉತ್ತರ ಪ್ರದೇಶ! ಆಪ್ ನಾಯಕರ ತಯಾರಿ ಹೀಗಿದೆ ನೋಡಿ


  ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿಯ ಪ್ರಕಾರ 2014 ರಿಂದ 2022 ರವರೆಗೆ 211 ಶಾಸಕರು ಮತ್ತು ಸಂಸದರು ಬೇರೆ ಪಕ್ಷದಿಂದ ಬಿಜೆಪಿ ಸೇರಿದ್ದಾರೆ. ಅನೈಚ್ಛಿಕ ಪಕ್ಷಾಂತರಗಳು ಸರ್ಕಾರದ ಮಟ್ಟದಲ್ಲಿ ಮಾತ್ರವಲ್ಲದೇ, ಚುನಾಯಿತ ಪ್ರತಿನಿಧಿಗಳ ಮಟ್ಟದಲ್ಲಿಯೂ ಜನಾದೇಶವನ್ನು ನಾಶಮಾಡಲು ಸಮರ್ಥವಾಗಿವೆ ಎಂಬುದನ್ನು ಸಾಬೀತುಪಡಿಸುತ್ತಿದೆ. ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಉದ್ದೇಶದ ಕಾರ್ಯಾಚರಣೆ ಈಗ ಪುರಸಭೆಯನ್ನು ತಲುಪಿದೆ ಎಂದು ಹರಿಹಾಯ್ದಿದರು.

  Published by:Monika N
  First published: