ಹೊತ್ತಿ ಉರಿಯುತ್ತಿದೆ ಗ್ರೀಕ್​ ದೇಶ: 3 ಸಾವಿರ ಹೆಕ್ಟೇರ್​ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಆಹುತಿ; ನಿಯಂತ್ರಣಕ್ಕೆ ಬಾರದ ಬೆಂಕಿ

ಅಥೆನ್ಸ್‌ನ ಪಶ್ಚಿಮಕ್ಕೆ 200 ಕಿಲೋಮೀಟರ್ (125 ಮೈಲಿ) ಪತ್ರಾಸ್ ನಗರದ ಬಳಿ ಶನಿವಾರ ಸಂಭವಿಸಿದ ಬೆಂಕಿಯಿಂದ 3,000 ಹೆಕ್ಟೇರ್ (7,400 ಎಕರೆ) ಪೈನ್ ಮತ್ತು ಆಲಿವ್ ಸುಟ್ಟು ಹೋಗಿದೆ. ಸೋಮವಾರ ಇದನ್ನು ನಿಯಂತ್ರಣಕ್ಕೆ ತರಲಾಗಿದೆ.

ಅಥೆನ್ಸ್‌ನ ಪಶ್ಚಿಮಕ್ಕೆ 200 ಕಿಲೋಮೀಟರ್ (125 ಮೈಲಿ) ಪತ್ರಾಸ್ ನಗರದ ಬಳಿ ಶನಿವಾರ ಸಂಭವಿಸಿದ ಬೆಂಕಿಯಿಂದ 3,000 ಹೆಕ್ಟೇರ್ (7,400 ಎಕರೆ) ಪೈನ್ ಮತ್ತು ಆಲಿವ್ ಸುಟ್ಟು ಹೋಗಿದೆ. ಸೋಮವಾರ ಇದನ್ನು ನಿಯಂತ್ರಣಕ್ಕೆ ತರಲಾಗಿದೆ.

ಅಥೆನ್ಸ್‌ನ ಪಶ್ಚಿಮಕ್ಕೆ 200 ಕಿಲೋಮೀಟರ್ (125 ಮೈಲಿ) ಪತ್ರಾಸ್ ನಗರದ ಬಳಿ ಶನಿವಾರ ಸಂಭವಿಸಿದ ಬೆಂಕಿಯಿಂದ 3,000 ಹೆಕ್ಟೇರ್ (7,400 ಎಕರೆ) ಪೈನ್ ಮತ್ತು ಆಲಿವ್ ಸುಟ್ಟು ಹೋಗಿದೆ. ಸೋಮವಾರ ಇದನ್ನು ನಿಯಂತ್ರಣಕ್ಕೆ ತರಲಾಗಿದೆ.

 • Share this:
  ಗ್ರೀಕ್​​ ದೇಶದ ರಾಜಧಾನಿ ಅಥೆನ್ಸ್​ ಹೊತ್ತಿ ಉರಿಯುತ್ತಿದ್ದು, ಕಾಡ್ಗಿಚ್ಚಿಗೆ ಅಕ್ಷರಶಃ ಸುಡುಗಾಡಾಗಿ ಮಾರ್ಪಾಟಾಗಿದೆ.  ರೀಕ್ ಅಗ್ನಿಶಾಮಕ ದಳದ ಸಿಬ್ಬಂದಿ ಬುಧವಾರ ಮಾಹಿತಿ ನೀಡಿದಂತೆ ಅಥೆನ್ಸ್ ಬಳಿ ಕಾಡ್ಗಿಚ್ಚು ಹೆಚ್ಚು ದಟ್ಟವಾಗಿ ಹಬ್ಬಿದ್ದು "ಮುಂಬರುವ ಕೆಲವೇ ಗಂಟೆಗಳಲ್ಲಿ" ನಿಯಂತ್ರಣಕ್ಕೆ ತರುವ ಭರವಸೆ ಇದೆ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.

  "ಪರಿಸ್ಥಿತಿ ಸುಧಾರಿಸಿದೆ ಮತ್ತು ಮುಂದಿನ ಗಂಟೆಗಳಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ನಾವು ಆಶಿಸುತ್ತೇವೆ" ಎಂದು ಅಗ್ನಿಶಾಮಕ ದಳವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

  ಹೆಲಿಕಾಪ್ಟರ್​ ಮೂಲಕ ನೀರು ಸುರಿದು ಬೆಂಕಿ ಆರಿಸುತ್ತಿರುವುದು


  ಮಂಗಳವಾರ ಮಧ್ಯಾಹ್ನದ ನಂತರ 500 ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು, ಒಂದು ಡಜನ್​ಗೂ ಹೆಚ್ಚು ವಾಟರ್​ ಬಾಂಬಿಂಗ್ ವಿಮಾನಗಳು ಮತ್ತು ಐದು ಹೆಲಿಕಾಪ್ಟರ್‌ಗಳು ರಾಜಧಾನಿಯ ಹೊರಗೆ ಬಿದ್ದಿರುವ ಬೆಂಕಿಯ ವಿರುದ್ಧ ಹೋರಾಡುತ್ತಿವೆ.

  ಸುಮಾರು ಹತ್ತಾರು ಮನೆಗಳು ಬೆಂಕಿಗೆ ಆಹುತಿಯಾಗಿವೆ ಮತ್ತು ಅಥೆನ್ಸ್‌ನ ವಾಯುವ್ಯಕ್ಕೆ 30 ಕಿಲೋಮೀಟರ್ (20 ಮೈಲಿ) ವರ್ಂಪೊಂಪಿಯಲ್ಲಿ ಹತ್ತಾರು ವ್ಯಾಪಾರ ಕೇಂದ್ರಗಳು, ಬಾರ್‌ಗಳು ಮತ್ತು ರಜಾದಿನದ ವಸತಿಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಹಳ್ಳಿಗಳನ್ನು ಸ್ಥಳಾಂತರಿಸಲಾಗಿದೆ ಮತ್ತು ದೇಶದ ಉತ್ತರ ಮತ್ತು ದಕ್ಷಿಣದೊಂದಿಗೆ ರಾಜಧಾನಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಮಾರ್ಗದ ಒಂದು ಭಾಗವನ್ನು ಸುರಕ್ಷತೆಯ ದೃಷ್ಟಿಯಿಂದ ಬಂದ್​ ಮಾಡಲಾಗಿದೆ.

  ದೇಶವು ತೀವ್ರ ಶಾಖದ ಗಾಳಿಗೆ ತತ್ತರಿಸಿ ಹೋಗಿದೆ, ಅಲ್ಲದೇ ಪಾರ್ನಿತ್ ಪರ್ವತದ ಬುಡದಲ್ಲಿ ಜ್ವಾಲೆಯು ಹರಡಿ, ರಾಜಧಾನಿಯ ಮೇಲೆ ದಟ್ಟ ಹೊಗೆ ಕೂಡ ಆವರಿಸಿದೆ.

  ಅಥೆನ್ಸ್ ಉಪನಗರವಾದ ವೇರಿಂಪೊಂಪಿಯ ಬಳಿ ಇರುವ ರಜಾ ಶಿಬಿರದಲ್ಲಿ ಇದ್ದ 20 ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

  "ವಿಪರೀತ ಶಾಖದ ಅಲೆಯ ನಡುವೆಯೂ ನಾವು ಕಷ್ಟಕರವಾದ ಬೆಂಕಿಯ ಪ್ರತಾಪವನ್ನು ಎದುರಿಸುತ್ತಿದ್ದೇವೆ" ಎಂದು ಪ್ರಧಾನ ಮಂತ್ರಿ ಕೈರಿಯಾಕೋಸ್ ಮಿತ್ಸೋಟಾಕಿಸ್ ಅವರು ಬೆಳಿಗ್ಗೆ ವೇರಿಂಪೊಂಪಿಗೆ ಹೋಗುವು ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.  ನಾಗರಿಕ ರಕ್ಷಣಾ ಉಪ ಮಂತ್ರಿ ನಿಕೊಸ್ ಹರ್ದಾಲಿಯಾಸ್ ಸುದ್ದಿಗಾರರ ಜೊತೆ ಮಾತನಾಡುತ್ತಾ "ಅಸಾಧಾರಣ ಕಷ್ಟಕರ ರಾತ್ರಿ ಇದಾಗಿದೆ’’ ನಾಲ್ಕು ಕಡೆ ಇದ್ದಂತಹ ದಟ್ಟ ಬೆಂಕಿಯನ್ನು ನಂದಿಸಲಾಗಿದ್ದು, ಒಂದು ಕಡೆ ಮಾತ್ರ ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿದ್ದೇವೆ, ಎಂದಿದ್ದಾರೆ.

  ಹವಾಮಾನ ಬದಲಾವಣೆಯು ಕಾಡ್ಗಿಚ್ಚಿನ ಪ್ರದೇಶ ಮತ್ತು ತೀವ್ರತೆ ಎರಡನ್ನೂ ಹೆಚ್ಚಿಸುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

  ಹಲವಾರು ಕಡೆ ಮತ್ತೆ ಕಾಡ್ಗಿಚ್ಚು  ಗ್ರೀಸ್‌ನಲ್ಲಿ ಬುಧವಾರವೂ ಭುಗಿಲೆದ್ದಿವೆ, ವಿಶೇಷವಾಗಿ ರಾಜಧಾನಿಯಿಂದ 300 ಕಿಲೋಮೀಟರ್ ದೂರದಲ್ಲಿರುವ ದಕ್ಷಿಣ ಪೆಲೋಪೊನೀಸ್ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಬೆಂಕಿ ಆರಂಭವಾದ ನಂತರ ಮೂರು ಗ್ರಾಮಗಳನ್ನು ಸ್ಥಳಾಂತರಿಸಲಾಗಿದೆ.

  ಇನ್ನೊಂದು ರಾಜಧಾನಿಯ ಪೂರ್ವಕ್ಕೆ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಯುಬೋಯ ದ್ವೀಪದಲ್ಲಿ ಬೆಂಕಿಯ ಅಟ್ಟಹಾಸ ಮುಂದುವರೆದಿದ್ದು, ಅಲ್ಲಿ ಎಂಟು ಗ್ರಾಮಗಳನ್ನು ಸ್ಥಳಾಂತರಿಸಲಾಗಿದೆ.

  ಅಥೆನ್ಸ್‌ನ ಪಶ್ಚಿಮಕ್ಕೆ 200 ಕಿಲೋಮೀಟರ್ (125 ಮೈಲಿ) ಪತ್ರಾಸ್ ನಗರದ ಬಳಿ ಶನಿವಾರ ಸಂಭವಿಸಿದ ಬೆಂಕಿಯಿಂದ 3,000 ಹೆಕ್ಟೇರ್ (7,400 ಎಕರೆ) ಪೈನ್ ಮತ್ತು ಆಲಿವ್ ಸುಟ್ಟು ಹೋಗಿದೆ. ಸೋಮವಾರ ಇದನ್ನು ನಿಯಂತ್ರಣಕ್ಕೆ ತರಲಾಗಿದೆ.

  ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಗಂಡನಿಗೆ ಮುಹೂರ್ತ ಇಟ್ಟ ಪತ್ನಿ: ಐದು ವರ್ಷದ ಪ್ರೀತಿ ಕೊಲೆಯಲ್ಲಿ ಅಂತ್ಯ

  ಟರ್ಕಿ ದೇಶವು ಸಹ ಕನಿಷ್ಠ ಒಂದು ದಶಕದಲ್ಲಿ ಕೆಟ್ಟ ಬೆಂಕಿಯ ರೌದ್ರ ನರ್ತನವನ್ನು ಅನುಭವಿಸುತ್ತಿದೆ, ಎಂಟು ಜನರ ಜೀವವನ್ನು ಬಲಿ ತೆಗೆದುಕೊಂಡಿದ್ದು, ಪ್ರವಾಸಿಗರಿಂದ ತುಂಬಿ ಹೋಗಿರುವ, ಜನಪ್ರಿಯ ದಕ್ಷಿಣ ಪ್ರದೇಶಗಳಲ್ಲಿ ನೂರಾರು ಜನರನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: