ದೇವಸ್ಥಾನವಾಗಿ ಬದಲಾಯಿತು 30 ವರ್ಷದ ಹಳೆಯ ಚರ್ಚ್​​

ಅಮೆರಿಕದ ವರ್ಜಿನಿಯಾದ ಪೋರ್ಟ್ಸ್​ಮೌತ್​​ ಪ್ರದೇಶ 30 ವರ್ಷದ ಹಳೆಯ ಚರ್ಚ್​ವೊಂದು ಈಗ ಸ್ವಾಮಿ ನಾರಾಯಣ ದೇವಾಲಯವಾಗಿ ಬದಲಾಗಿದೆ

Seema.R | news18
Updated:December 24, 2018, 6:03 PM IST
ದೇವಸ್ಥಾನವಾಗಿ ಬದಲಾಯಿತು 30 ವರ್ಷದ ಹಳೆಯ ಚರ್ಚ್​​
ದೇವಾಲಯವಾಗಿ ಬದಲಾದ ಚರ್ಚ್​ ಚಿತ್ರ
Seema.R | news18
Updated: December 24, 2018, 6:03 PM IST
ಒಂದು ಧರ್ಮದ ಬಗ್ಗೆ ಆಸಕ್ತಿ ಮೂಡಿ ಆ ಧರ್ಮಕ್ಕೆ ಮಂತಾತರವಾಗುವ ಮೂಲಕ ಅಲ್ಲಿನ ಆಚಾರ ವಿಚಾರಗಳನ್ನು ರೂಢಿಕೊಳ್ಳುವುದು ಹೊಸತೆನಲ್ಲ. ಅದರಲ್ಲಿಯೂ ಭಾರತದ ಹಿಂದು ಆಚಾರ ವಿಚಾರಗಳು ಅನೇಕರನ್ನು ಆಕರ್ಷಿಸಿರುವುದು ಸುಳ್ಳಲ್ಲ. ಇಲ್ಲೊಂದು ಘಟನೆ ಇದಕ್ಕೆ ಮತ್ತೊಂದು ಸಾಕ್ಷಿ ಒದಗಿಸಿದೆ.

ಅಮೆರಿಕದ ವರ್ಜಿನಿಯಾದ ಪೋರ್ಟ್ಸ್​ಮೌತ್​​ ಪ್ರದೇಶ 30 ವರ್ಷದ ಹಳೆಯ ಚರ್ಚ್​ವೊಂದು ಈಗ ಸ್ವಾಮಿ ನಾರಾಯಣ ದೇವಾಲಯವಾಗಿ ಬದಲಾಗಿದೆ. ಈ ಪ್ರದೇಶದಲ್ಲಿ ಸುಮಾರು 10, 000ಕ್ಕೂ ಹೆಚ್ಚು ಹಿಂದುಗಳು ನೆಲೆಸಿದ್ದರು. ಗುಜರಾತ್​ ಮೂಲದ ಈ ಹಿಂದುಗಳ ಆಚಾರ ವಿಚಾರಕ್ಕೆ ಸೋತ ಇಲ್ಲಿನ ಸ್ಥಳೀಯರು ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅಲ್ಲದೇ ಈ ಚರ್ಚ್​ನಲ್ಲಿ ಹಿಂದು ದೇವರ ಪೂಜೆ ಮಾಡಲು ಕೂಡ ಒಪ್ಪಿಗೆ ಸೂಚಿಸಿದ್ದಾರೆ.

ಈ ಚರ್ಚ್​ನಲ್ಲಿ ಸಣ್ಣ ಮಾರ್ಪಡುಗಳನ್ನು ಮಾಡುವ ಮೂಲಕ 1800 ಚದರ ಅಡಿಗಳ ಈ ಚರ್ಚ್​ ಈಗ ದೇವಾಲಯವಾಗಿ ರೂಪುಗೊಂಡಿದೆ ಎಂದು ಭಗವತ್​ಪ್ರಿಯಾದಾಸ್​ ಸ್ವಾಮಿ ತಿಳಿಸಿದ್ದಾರೆ. ಅಮೆರಿಕದಲ್ಲಿ ಚರ್ಚ್​ಗಳು ದೇವಾಲಯವಾಗಿ ರೂಪುಗೊಳ್ಳುತ್ತಿರುವ ಆರನೇ ಪ್ರಕರಣ ಇದಾಗಿದೆ.

ಇದನ್ನು ಓದಿ: ಬಂಡಾಯ ಶಾಸಕರ ಬೆದರಿಕೆ ನಡುವೆಯೂ 'ಕೆಜಿಎಫ್'​ ಚಿತ್ರ ಮೆಚ್ಚಿ ಟ್ವೀಟ್​ ಮಾಡಿದ ಡಿಸಿಎಂ ಪರಮೇಶ್ವರ್​

ಚರ್ಚ್​ಗಳು ದೇವಾಲಯವಾಗುವುದರ ಜೊತೆ ಅನೇಕ ದೇವಾಲಯಗಳು ಚರ್ಚ್​ಗಳಾಗಿ ಬದಲಾದ ಉದಾಹರಣೆ ಕೂಡ ಇಲ್ಲಿದೆ. ಲಂಡನ್​ ಬಲೋಟೊನ್​, ಕ್ಯಾಲಿಫೋರ್ನಿಯಾ, ಪೆನ್ನಿಸುವೆಲ್ಲಾ, ಲಾಸ್​ ಎಂಜಲೀಸ್​ನಲ್ಲಿ ಅನೇಕ ದೇಗುಲಗಳು ಚರ್ಚ್​ಗಳಾಗಿ ಬದಲಾಗಿದೆ.

First published:December 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ