ಬಸ್​ ನಿಲ್ದಾಣದಲ್ಲಿದ್ದ ಸೂಟ್​ ಕೇಸ್​ನಲ್ಲಿತ್ತು ಮಹಿಳೆಯ ಮೃತದೇಹ..!

zahir | news18-kannada
Updated:October 20, 2019, 4:38 PM IST
ಬಸ್​ ನಿಲ್ದಾಣದಲ್ಲಿದ್ದ ಸೂಟ್​ ಕೇಸ್​ನಲ್ಲಿತ್ತು ಮಹಿಳೆಯ ಮೃತದೇಹ..!
ಸಾಂದರ್ಭಿಕ ಚಿತ್ರ
zahir | news18-kannada
Updated: October 20, 2019, 4:38 PM IST
ನವದೆಹಲಿ: ಉತ್ತರ ದೆಹಲಿಯ ಬವಾನಾದಲ್ಲಿ ಮಹಿಳೆಯ ಮೃತದೇಹ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ. ಪೂತ್ ಗ್ರಾಮದ ಬಸ್ ನಿಲ್ದಾಣದ ಬಳಿ ಈ ಸೂಟ್ ಕೇಸ್ ಬಿದ್ದಿತ್ತು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಸೂಟ್‌ಕೇಸ್ ತೆರೆದು ನೋಡಿದಾಗ ಮಹಿಳೆಯ ಶವವಿರುವುದು ಕಂಡು ಬಂದಿದೆ. ಮೃತ ಮಹಿಳೆಯ ವಯಸ್ಸು 30 ಆಸುಪಾಸಿನಲ್ಲಿದ್ದು, ಅವರ ಮೈಮೇಲಿದ್ದ ಬಟ್ಟೆ ಹರಿದಿರಲಿಲ್ಲ. ಹಾಗೆಯೇ ಆಕೆಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿರಲಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದರಿಂದ ಸಾವಿಗೆ ನಿಖರವಾದ ಕಾರಣ ತಿಳಿದು ಬರಲಿದೆ. ಹಾಗೆಯೇ ಅಪರಾಧದ ಸ್ಥಳವನ್ನು ವಿಧಿವಿಜ್ಞಾನ ತಂಡ ಪರಿಶೀಲಿಸಿದ್ದು, ಮಹಿಳೆಯ ಗುರುತನ್ನ ಪತ್ತೆ ಹಚ್ಚಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 7: ಕೊನೆಗೂ ಬಹಿರಂಗವಾಯ್ತು ಬಿಗ್ ಬಾಸ್​ಗಾಗಿ ಕುರಿ ಪ್ರತಾಪ್ ಪಡೆಯುತ್ತಿರುವ ಸಂಭಾವನೆ..!

ದೆಹಲಿ ನಗರವನ್ನು ಬೆಚ್ಚಿ ಬೀಳಿಸಿರುವ ಈ ಪ್ರಕರಣ, ವ್ಯವಸ್ಥಿತ ಕೊಲೆ ಎಂಬುದು ಮೇಲ್ನೊಟಕ್ಕೆ ತಿಳಿದು ಬಂದಿದ್ದು, ಈ ಬಗ್ಗೆ ಬವಾನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಲಾಗಿದೆ.

Loading...

 
First published:October 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...