ದೆಹಲಿಯಲ್ಲಿ ಕವಿದ ದಟ್ಟ ಮಂಜು; 30 ರೈಲು, 50 ಕ್ಕೂ ಹೆಚ್ಚು ವಿಮಾನ ಹಾರಾಟದಲ್ಲಿ ವಿಳಂಬ

ಭಾನುವಾರ ಬೆಳಗ್ಗೆ ದೆಹಲಿಯಲ್ಲಿ ಸರಾಸರಿ ಕನಿಷ್ಠ ತಾಪಮಾನ 3.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಭಾರತೀಯ ಹವಾಮಾನ ಇಲಾಖೆ ದೆಹಲಿ ಮತ್ತು ಇನ್ನಿತರ ಪ್ರದೇಶಗಳಲ್ಲಿ ರೆಡ್​ ವಾರ್ನಿಂಗ್​​ ಘೋಷಣೆ ಮಾಡಿದೆ.

ದೆಹಲಿಯಲ್ಲಿ ಕವಿದಿರುವ ದಟ್ಟ ಮಂಜು

ದೆಹಲಿಯಲ್ಲಿ ಕವಿದಿರುವ ದಟ್ಟ ಮಂಜು

  • Share this:
ನವದೆಹಲಿ(ಡಿ.30): ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಮುಂಜಾನೆ ದಟ್ಟ ಮಂಜು ಕವಿದಿದ್ದ ಹಿನ್ನೆಲೆ, ವಿಮಾನ ಮತ್ತು ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದೆ.

ದೆಹಲಿಯಲ್ಲಿ ವಿಪರೀತ ಮಂಜು ಆವರಿಸಿದ್ದರಿಂದ 30 ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ. 50ಕ್ಕೂ ಹೆಚ್ಚು ವಿಮಾನಗಳ ಹಾರಾಟವೂ ಸಹ ವಿಳಂಬವಾಗಿದೆ. ಆದರೆ ಯಾವುದೇ ವಿಮಾನಗಳ ಹಾರಾಟವನ್ನು ರದ್ದು ಮಾಡಿಲ್ಲ. ಬದಲಾಗಿ ಮೂರು ವಿಮಾನಗಳ ದಿಕ್ಕನ್ನು ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ. ಸಂಚಾರ ವ್ಯತ್ಯಯವಾಗಿರುವುದರಿಂದ ಪ್ರಯಾಣಿಕರು ತಮ್ಮ-ತಮ್ಮ ಏರ್​​ಲೈನ್ಸ್ ಸಿಬ್ಬಂದಿಯನ್ನು​​ ಸಂಪರ್ಕಿಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಸ್ಪರ್ಧಿಸುವವರಿಗೆ 5 ಕೋಟಿ ಕೊಡ್ತೇನೆ; ಶಾಸಕ ರಮೇಶ್​ ಜಾರಕಿಹೊಳಿ ಆಫರ್​​

ವಿಪರೀತ ಮಂಜು ಕವಿದಿದ್ದರಿಂದ ರಸ್ತೆಗಳೇ ಕಾಣಿಸುತ್ತಿರಲಿಲ್ಲ. ವಾಹನ ಸವಾರರು ನಿಧಾನವಾಗಿ ಚಲಾಯಿಸುತ್ತಿದ್ದರು. ನೋಯ್ಡಾ-ದೆಹಲಿ ಸಂಪರ್ಕಿಸುವ ರಸ್ತೆಯಲ್ಲಿ ಅತೀ ಹೆಚ್ಚು ಮಂಜು ಆವರಿಸಿತ್ತು ಎಂದು ತಿಳಿದು ಬಂದಿದೆ.

ಇಂದು ಬೆಳಗ್ಗೆ ಗಾಳಿಯ ಗುಣಮಟ್ಟ ತೀರಾ ಕೆಟ್ಟ ಮಟ್ಟಕ್ಕೆ ಇಳಿದಿತ್ತು. ಡಿಸೆಂಬರ್​ 14ರಿಂದ ದೆಹಲಿಯಲ್ಲಿ ಚಳಿಯ ಪ್ರಮಾಣ ತೀರಾ ಅಧಿಕವಾಗಿದೆ. ಭಾನುವಾರ ಬೆಳಗ್ಗೆ ದೆಹಲಿಯಲ್ಲಿ ಸರಾಸರಿ ಕನಿಷ್ಠ ತಾಪಮಾನ 3.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಭಾರತೀಯ ಹವಾಮಾನ ಇಲಾಖೆ ದೆಹಲಿ ಮತ್ತು ಇನ್ನಿತರ ಪ್ರದೇಶಗಳಲ್ಲಿ ರೆಡ್​ ವಾರ್ನಿಂಗ್​​ ಘೋಷಣೆ ಮಾಡಿದೆ.

ದನದ ಮಾಂಸ ರಫ್ತಿನಲ್ಲಿ ಭಾರತಕ್ಕೆ ಎರಡನೇ ಸ್ಥಾನ!

ಈ ತಿಂಗಳ ಸರಾಸರಿ ಗರಿಷ್ಠ ತಾಪಮಾನ 19.15 ಡಿಗ್ರಿ ಸೆಲ್ಸಿಯಸ್ ಇರಬಹುದು. ಒಂದು ವೇಳೆ, ಅಷ್ಟು ತಾಪಮಾನ ದಾಖಲಾದರೆ 1901ರ ಬಳಿಕ ಅತೀ ಹೆಚ್ಚು ಚಳಿ ಹೊಂದಿದ ಎರಡನೇ ಡಿಸೆಂಬರ್​ ಆಗುತ್ತದೆ. 1997ರ ಡಿಸೆಂಬರ್​​ನಲ್ಲಿ 17.3 ಡಿಗ್ರಿ ಸೆಲ್ಸಿಯಸ್​​ ತಾಪಮಾನ ದಾಖಲಾಗಿತ್ತು.

 
Published by:Latha CG
First published: