Chandrayaan-2: ಚಂದ್ರಯಾನ-2 ಉಡಾವಣೆಯ ಜವಾಬ್ದಾರಿ ಹೊತ್ತ ಮಹಿಳೆಯರು!

ಚಂದ್ರಯಾನ- 2 ನೌಕೆಯಲ್ಲಿ ವಿಕ್ರಮ್‌ ಎಂಬ ಲ್ಯಾಂಡರ್‌ ಇದೆ. 1.4 ಟನ್‌ ತೂಕದ ಲ್ಯಾಂಡರ್‌ 27 ಕೆ.ಜಿ. ತೂಕದ ಪ್ರಜ್ಞಾನ್‌ ಎಂಬ ರೋವರ್‌ ಅನ್ನು ಒಡಲಲ್ಲಿ ಒಯ್ಯಲಿದೆ. ಚಂದ್ರನ ಅಂಗಳದ ಮೇಲೆ ಇಳಿದ ಬಳಿಕ ಈ ಎರಡೂ ಉಪಕರಣಗಳು ಪ್ರತ್ಯೇಕಗೊಳ್ಳಲಿವೆ.

Ganesh Nachikethu | news18
Updated:July 22, 2019, 12:38 PM IST
Chandrayaan-2: ಚಂದ್ರಯಾನ-2 ಉಡಾವಣೆಯ ಜವಾಬ್ದಾರಿ ಹೊತ್ತ ಮಹಿಳೆಯರು!
ಇಸ್ರೋ ಸಂಸ್ಥೆ
  • News18
  • Last Updated: July 22, 2019, 12:38 PM IST
  • Share this:
ಬೆಂಗಳೂರು(ಜುಲೈ.14): ಭಾರತದ ಎರಡನೇ ಚಂದ್ರಯಾನಕ್ಕೆ ಇಸ್ರೋ ಮಹಿಳಾ ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ. ಇಂದು ಮಧ್ಯಾಹ್ನ 2.43ಕ್ಕೆ  ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದ ಮೂಲಕ ಚಂದ್ರಯಾನ-2 ಉಡಾವಣೆ ಆಗಲಿದೆ. ದೇಶಾದ್ಯಂತ ಭಾರೀ ಕುತೂಹಲ ಮೂಡಿಸಿರುವ ಯೋಜನೆ ಇದಾಗಿದ್ದು, ಇಡೀ ಪ್ರಪಂಚವೇ ವೀಕ್ಷಣೆಗಾಗಿ ಕಾದು ಕುಳಿತಿದೆ.

ಚಂದ್ರಯಾನ-2 ನೇತೃತ್ವ ಮಹಿಳೆಯರದ್ದು!

ಭೂಮಿಯ ನೈಸರ್ಗಿಕ ಉಪಗ್ರಹ ಚಂದಿರನ ಅಂಗಳದ ಕೌತುಕ ಭೇದಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಸಜ್ಜಾಗಿದೆ. ಈ ಚಂದ್ರಯಾನ ನೌಕೆ ಹೊತ್ತು ಇಸ್ರೋದ ಜಿಎಸ್‌ಎಲ್‌ವಿ- ಎಂಕೆ3 ರಾಕೆಟ್‌, ಬಾಹ್ಯಾಕಾಶ ಕೇಂದ್ರದಿಂದ ನಭೋಮಂಡಲದತ್ತ ಚಿಮ್ಮಲಿದೆ. ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯ ನೇತೃತ್ವವನ್ನು ಈ ಬಾರಿ ಇಬ್ಬರು ಮಹಿಳೆಯರು ವಹಿಸಿಕೊಂಡಿದ್ದಾರೆ ಎಂಬುದು ಭಾರೀ ವಿಶೇಷ.

ಕರಿಧಾಲ್ ಮತ್ತು ಎಂ.ವನಿತಾ ಎಂಬ ಮಹಿಳಾ ವಿಜ್ಞಾನಿಗಳು ಚಂದ್ರಯಾನ-2 ಯೋಜನೆ ಸಿದ್ಧಪಡಿಸಿದ್ದಾರೆ. ಈ ಹಿಂದಿನ ಮಂಗಳಯಾನದಲ್ಲಿ ಮಹತ್ವದ ಪಾತ್ರವಹಿಸಿದ್ದ ಇವರು, ಈ ಬಾರಿ ಚಂದ್ರಯಾನ-2 ಯೋಜನೆ ರೂವಾರಿಗಳಾಗಿದ್ದಾರೆ. ಅಂತೆಯೇ ಟಿ.ಕೆ. ಅನುರಾಧ, ಎನ್. ವಲಾರ್ಮತಿ, ವಿ.ಆರ್ ಲಲಿತಾಂಬಿಕ, ಸೀತಾ ಸೋಮ ಸುಂದರಂ, ನಂದಿನಿ ಹರಿನಾಥ್, ಮಿನಲ್ ರೋಹಿತ್ ಸೇರಿದಂತೆ ಹಲವರು ಈ ಯೋಜನೆಗಾಗಿ ಶ್ರಮಿಸಿದ್ದಾರೆ.

ಇದನ್ನೂ ಓದಿ: ಇಸ್ರೋ ಸಾಧನೆಗೆ ವಿಶ್ವವೇ ಬೆರಗು; ಭಾರತದ ಚಂದ್ರಯಾನದ ರೋಚಕ ಕಥನ

ಚಂದ್ರಯಾನ-2 ಉದ್ದೇಶ: 

ಸತತ 11 ವರ್ಷಗಳಿಂದ ಚಂದ್ರನ ಕಕ್ಷೆಯಲ್ಲಿ ನೌಕೆಯನ್ನು ಸುತ್ತಿಸಿದ್ದ ಇಸ್ರೋ ಕೊನೆಗೂ ಸಂಶೋಧನೆಗೆ ಮುಂದಾಗಿದೆ. ಹಾಗಾಗಿಯೇ ಇದೇ ಮೊದಲ ಬಾರಿ ಲ್ಯಾಂಡರ್‌ ಹಾಗೂ ರೋವರ್‌ಗಳನ್ನು ಚಂದಿರನ ಅಂಗಳದಲ್ಲಿ ಇಳಿಸಲು ನಿರ್ಧರಿಸಿದೆ. ಈ ಸಾಹಸವನ್ನು ಇಡೀ ಜಾಗತಿಕ ವೈಜ್ಞಾನಿಕ ಸಮುದಾಯವೇ ಕುತೂಹಲದಿಂದ ಎದುರು ನೋಡುತ್ತಿದೆ. ಒಂದು ವೇಳೆ ಈ ಯಾನದಲ್ಲಿ ನಾವು ಯಶಸ್ವಿಯಾದರೆ, ಚಂದ್ರನ ಅಂಗಳದಲ್ಲಿ ನೌಕೆ ಇಳಿಸಿದ ವಿಶ್ವದ 4ನೇ ದೇಶ ಎಂಬ ಹಿರಿಮೆ ಭಾರತದ್ದಾಗಲಿದೆ. ಈ ಯೋಜನೆಗೆ ತಗುಲುತ್ತಿರುವ ವೆಚ್ಚ 978 ಕೋಟಿ ರೂಪಾಯಿ.ಇದನ್ನೂ ಓದಿ: ಚಂದ್ರನ ಮೇಲ್ಮೈ ಕುರಿತ ಹೆಚ್ಚಿನ ಅಧ್ಯಯನಕ್ಕೆ ಚಂದ್ರಯಾನ-2 ಹೇಗೆ ಸಹಕಾರಿ? ಇಲ್ಲಿದೆ ಸಂಪೂರ್ಣ ಮಾಹಿತಿ

ಚಂದ್ರಯಾನ- 2 ನೌಕೆಯಲ್ಲಿ ವಿಕ್ರಮ್‌ ಎಂಬ ಲ್ಯಾಂಡರ್‌ ಇದೆ. 1.4 ಟನ್‌ ತೂಕದ ಲ್ಯಾಂಡರ್‌ 27 ಕೆ.ಜಿ. ತೂಕದ ಪ್ರಜ್ಞಾನ್‌ ಎಂಬ ರೋವರ್‌ ಅನ್ನು ಒಡಲಲ್ಲಿ ಒಯ್ಯಲಿದೆ. ಚಂದ್ರನ ಅಂಗಳದ ಮೇಲೆ ಇಳಿದ ಬಳಿಕ ಈ ಎರಡೂ ಉಪಕರಣಗಳು ಪ್ರತ್ಯೇಕಗೊಳ್ಳಲಿವೆ. ಸೌರಶಕ್ತಿ ಆಧರಿಸಿ ಒಂದು ಚಂದ್ರನ ದಿವಸ (ಭೂಮಿಯ 14 ದಿವಸಗಳಿಗೆ ಸಮ) ರೋವರ್‌ ಕೆಲಸ ಮಾಡಲಿದೆ. ಚಂದ್ರನ ಅಂಗಳದಲ್ಲಿ 500 ಮೀಟರ್‌ ಸುತ್ತಾಡಿ ಅಲ್ಲಿರಬಹುದಾದ ನೀರು, ಪಳೆಯುಳಿಕೆ ದಾಖಲೆಗಳಿಗಾಗಿ ಶೋಧ ನಡೆಸಲಿದೆ.

First published:July 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ