West Bengal| ಬಂಗಾಳದಲ್ಲಿ ಬಿಜೆಪಿ ಯುವ ಸಂಕಲ್ಪ ಯಾತ್ರೆ; ಶಾಸಕ ಸೇರಿ 30 ಕಾರ್ಯಕರ್ತರ ಬಂಧನ!

ಶಾಸಕ ಶಂಕರ್​ ಘೋಷ್​ ಆಯೋಜಿಸಿದ್ದ ಯುವ ಸಂಕಲ್ಪ ಯಾತ್ರೆಗೆ ಪೊಲೀಸರಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ. ಇದೇ ಕಾರಣಕ್ಕೆ ಈ ಯಾತ್ರೆಯನ್ನು ನಿಲ್ಲಿಸಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು.

ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು.

 • Share this:
  ಕೋಲ್ಕತ್ತಾ (ಆಗಸ್ಟ್​ 17); ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ಟಿಎಂಸಿ ಮತ್ತು ವಿರೋಧ ಪಕ್ಷವಾದ ಬಿಜೆಪಿ ನಡುವಿನ ಜಿದ್ದಾಜಿದ್ದಿ ಚುನಾವಣಾ ನಂತರವೂ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಬಂಗಾಳದಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವ ಸಲುವಾಗಿ ಬಿಜೆಪಿ ನಾಯಕರು ಹಲವಾರು ಕಾರ್ಯತಂತ್ರಗಳು ಮತ್ತು ರ್ಯಾಲಿ-ಯಾತ್ರೆಗಳನ್ನು ಆಯೋಜಿಸುತ್ತಿದ್ದಾರೆ. ಇಂದೂ ಸಹ ಪಶ್ಚಿಮ ಬಂಗಾಳದ ಸಿಲಿಗುರಿ ಶಾಸಕ ಶಂಕರ್ ಘೋಷ್ ಸಂಕಲ್ಪ ಯಾತ್ರೆಯನ್ನು ಆಯೋಜಿಸಿದ್ದರು. ಆದರೆ, ಯಾತ್ರೆಗೆ ಎಲ್ಲಾ ಸಿದ್ದತೆಗಳೂ ನಡೆದಿದ್ದ ಸಮಯದಲ್ಲಿ ಶಾಸಕ ಶಂಕರ್​ ಘೋಷ್ ಸೇರಿದಂತೆ ಕನಿಷ್ಠ 30 ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಪಕ್ಷದ ಕಚೇರಿಯ ಮುಂದೆಯೇ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ಈ ನಡೆ ಸಾಮಾನ್ಯವಾಗಿ ಬಿಜೆಪಿ ನಾಯಕರನ್ನು ಕೆರಳಿಸಿದೆ.

  ಆದರೆ, "ಶಾಸಕ ಶಂಕರ್​ ಘೋಷ್​ ಆಯೋಜಿಸಿದ್ದ ಯುವ ಸಂಕಲ್ಪ ಯಾತ್ರೆಗೆ ಪೊಲೀಸರಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ. ಇದೇ ಕಾರಣಕ್ಕೆ ಈ ಯಾತ್ರೆಯನ್ನು ನಿಲ್ಲಿಸಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕೊರೋನಾ ಕಾಲದಲ್ಲಿ ಯಾವುದೇ ಜನ ಸೇರುವ ಸಮಾರಂಭಗಳಿಗೆ ಮುಂಚೆಯೇ ಅನುಮತಿ ಪಡೆಯಬೇಕು. ಹೀಗಾಗಿ ಯುವ ಸಂಕಲ್ಪ ರ್‍ಯಾಲಿ ನಡೆಸಲು ಅನುಮತಿ ಪಡೆಯದ ಕಾರಣ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ" ಎಂದು ಸಿಲಿಗುರಿ ಮಹಾನಗರ ಪೊಲೀಸ್ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಜಾಯ್ ತುಡು ಹೇಳಿದ್ದಾರೆ.

  ಶಾಸಕ ಶಂಕರ್​ ಘೋಷ್ ಮತ್ತು ಕಾರ್ಯಕರ್ತರ ಬಂಧನದ ನಂತರ, ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ ಎಂದು ತಿಳಿದುಬಂದಿದೆ. ಇನ್ನೊಂದು ಘಟನೆಯಲ್ಲಿ, 35 ಮಂದಿ ನಾರಾಯಣಿ ಸೇನಾ ಕಾರ್ಯಕರ್ತರನ್ನು ಬಾಗ್‌ದೋಗ್ರಾ ವಿಮಾನ ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಈ ಎರಡೂ ಘಟನೆ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

  ಈ ಬಂಧಿತ ಕಾರ್ಯಕರ್ತರು ಅಲಿಪುರ್ದಾರ್‌ನ ಬಿಜೆಪಿ ಸಂಸದ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾದ ಜಾನ್ ಬಾರ್ಲಾ ಅವರನ್ನು ಆಹ್ವಾನಿಸಲು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು ಎಂದು ತಿಳಿದುಬಂದಿದೆ. ಇವರನ್ನೂ ಸಹ ಕೊರೋನಾ ನೀತಿಯ ಅನ್ವಯ ವಶಕ್ಕೆ ಪಡೆಯಲಾಗಿದೆ.

  ಇದನ್ನೂ ಓದಿ: Population Control Bill: ಉತ್ತರ ಪ್ರದೇಶ ಜನಸಂಖ್ಯೆ ನಿಯಂತ್ರಣ ಮಸೂದೆಯಲ್ಲಿ ಏನೇನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

  ಡಾರ್ಜಿಲಿಂಗ್‌ನ ಬಿಜೆಪಿ ಸಂಸದ ಮತ್ತು ರಾಷ್ಟ್ರೀಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜು ಬಿಸ್ತಾ , "ದೇಶದ 75 ವರ್ಷಗಳ ಸ್ವಾತಂತ್ರ್ಯ ದಿನದ ಅಂಗವಾಗಿ ಬಿಜೆಪಿಯ ಮೋರ್ಚಾ ಕಾರ್ಯಕರ್ತರು ಯಾತ್ರೆಯನ್ನು ಆರಂಭಿಸುತ್ತಿದ್ದಾರೆ. ಒಟ್ಟು 75 ಯುವ ಮೋರ್ಚಾ ನಾಯಕರು, 75 ಸ್ಥಳಗಳಲ್ಲಿ, 75 ಕಿಮೀ ರ್‍ಯಾಲಿ ನಡೆಸಲಿದ್ದಾರೆ" ಎಂದಿದ್ದಾರೆ.

  ಇದನ್ನೂ ಓದಿ: ತಾಲಿಬಾನಿಗಳು ನನ್ನನ್ನು ಕೊಂದರೂ ಸರಿ ದೇವಸ್ಥಾನ ಬಿಟ್ಟು ಹೋಗೋದಿಲ್ಲ: ಆಫ್ಘನ್ ಹಿಂದೂ ಅರ್ಚಕ ಉದ್ಘಾರ

  ಆದರೆ, "ಪೊಲೀಸರು ಯಾತ್ರೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಇದು ಪಶ್ಚಿಮ ಬಂಗಾಳ ಸರ್ಕಾರ ಮತ್ತು ರಾಜ್ಯ ಪೊಲೀಸರು ರಾಷ್ಟ್ರ ವಿರೋಧಿ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ರಾಜ್ಯ ಮತ್ತು ದೇಶಕ್ಕೆ ಆತಂಕಕಾರಿ ಪರಿಸ್ಥಿತಿ" ಎಂದು ರಾಜು ಬಿಸ್ತಾ ಹೇಳಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣ ವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊ ಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾ ಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧ ದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿ ನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿ ಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತ ರರಿಗೆ ಸೋಂಕು ಹಬ್ಬ ದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: