Omicron ಸೋಂಕಿಗೆ ತುತ್ತಾದ 3 ವರ್ಷದ ಕಂದಮ್ಮ; ದೇಶದಲ್ಲಿ 32ಕ್ಕೇರಿದ ಪ್ರಕರಣ ಸಂಖ್ಯೆ

7 ರೋಗಿಗಳಲ್ಲಿ 4 ಮಂದಿಗೆ ಸಂಪೂರ್ಣ ಎರಡು ಡೋಸ್​​ ಲಸಿಕೆ ಪಡೆದಿದ್ದಾರೆ. ಇತರ ಮೂವರಲ್ಲಿ, ಒಬ್ಬರು ಒಂದೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ, ಇನ್ನೊಬ್ಬರು ಲಸಿಕೆ ಪಡೆದಿಲ್ಲ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಮುಂಬೈ (ಡಿ. 10):  ಮೂರು ವರ್ಷದ ಮಗು ಸೇರಿದಂತೆ ಏಳು ಜನರು ಮಹಾರಾಷ್ಟ್ರದಲ್ಲಿಂದು ಒಮೈಕ್ರಾನ್ (Omicron)​​  ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿ ತಿಳಿಸಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಒಟ್ಟು 17 ಕೋವಿಡ್​ ರೂಪಾಂತರ ತಳಿ ಸೋಂಕಿಗೆ ಪತ್ತೆಯಾಗಿದ್ದಾರೆ. 7 ಹೊಸ ಪ್ರಕರಣಗಳಲ್ಲಿ ಮೂರು ಮುಂಬೈ (Mumbai) ಮೂಲಗಳದ್ದಾಗಿದ್ದು, ಉಳಿದವು ಬೇರೆ ಮೂಲಗಳದ್ದಾಗಿದೆ. ಮುಂಬೈನಲ್ಲಿರುವ ಎಲ್ಲಾ ಮೂವರು ಓಮಿಕ್ರಾನ್ ರೋಗಿಗಳು ಕ್ರಮವಾಗಿ ತಾಂಜಾನಿಯಾ, ಯುಕೆ ಮತ್ತು ದಕ್ಷಿಣ ಆಫ್ರಿಕಾ-ನೈರೋಬಿಯಿಂದ ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ. ಮುಂಬೈ ಈಗ ಓಮಿಕ್ರಾನ್ ರೂಪಾಂತರದ ಐದು ಪ್ರಕರಣಗಳನ್ನು ಹೊಂದಿದೆ. 7 ರಲ್ಲಿ ನಾಲ್ಕು ರೋಗಿಗಳು ಲಕ್ಷಣರಹಿತರಾಗಿದ್ದರೆ, 3 ಮಂದಿ ಸೌಮ್ಯ ರೋಗಲಕ್ಷಣಗಳನ್ನು(Mild Symptoms)  ಹೊಂದಿದ್ದಾರೆ. 

  ಮಹಾರಾಷ್ಟ್ರದಲ್ಲಿ 7 ಸಕ್ರಿಯ ಪ್ರಕರಣ

  ಪುಣೆಯಲ್ಲಿರುವ 4 ರೋಗಿಗಳು ಕೆಲವು ನೈಜೀರಿಯಾದ ಮಹಿಳೆಯರ ಸಂಪರ್ಕಗಳಾಗಿದ್ದು, ಅವರು ಈಗಾಗಲೇ ಓಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ.
  7 ರೋಗಿಗಳಲ್ಲಿ 4 ಮಂದಿಗೆ ಸಂಪೂರ್ಣ ಎರಡು ಡೋಸ್​​ ಲಸಿಕೆ ಪಡೆದಿದ್ದಾರೆ. ಇತರ ಮೂವರಲ್ಲಿ, ಒಬ್ಬರು ಒಂದೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ, ಇನ್ನೊಬ್ಬರು ಲಸಿಕೆ ಪಡೆದಿಲ್ಲ. ಇನ್ನು ಮೂರು  ವರ್ಷದ ಮಗು ಲಸಿಕೆಗೆ ಅರ್ಹವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

  ಹೊಸ 695 ಕೋವಿಡ್​ ಪ್ರಕರಣ ದಾಖಲು
  ಮಹಾರಾಷ್ಟ್ರದಲ್ಲಿ ಶುಕ್ರವಾರ 695 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 631 ರೋಗಿಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ. ರಾಜ್ಯದಲ್ಲಿ ಚೇತರಿಕೆ ಪ್ರಮಾಣವು ಪ್ರಸ್ತುತ 97.72% ರಷ್ಟಿದೆ. ಹನ್ನೆರಡು ಕೋವಿಡ್-19 ಸಾವುಗಳು ವರದಿಯಾಗಿವೆ. ಪ್ರಕರಣದ ಸಾವಿನ ಪ್ರಮಾಣವು 2.12% ರಷ್ಟಿದೆ.

  ಮಹಾರಾಷ್ಟ್ರದಲ್ಲಿ 7 ಹೊಸ ಪ್ರಕರಣಗಳೊಂದಿಗೆ, ಭಾರತದ ಸದ್ಯ 32 ಒಮೈಕ್ರಾನ್​ ಸಕ್ರಿಯ ಪ್ರಕರಣ ದಾಖಲಾಗಿದೆ. ಮದ್ಯಾಹ್ನ ಈ ಕುರಿತು ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ 25 ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲಾ ಸೌಮ್ಯ ರೋಗಲಕ್ಷಣ ಹೊಂದಿದ್ದಾರೆ ಎಂದು ತಿಳಿಸಿತತು. 32 ಓಮಿಕ್ರಾನ್ ಪ್ರಕರಣಗಳಲ್ಲಿ ಒಂಬತ್ತು ರಾಜಸ್ಥಾನದಲ್ಲಿ, ಮೂರು ಗುಜರಾತ್‌ನಲ್ಲಿ, 17 ಮಹಾರಾಷ್ಟ್ರದಲ್ಲಿ, ಎರಡು ಕರ್ನಾಟಕದಲ್ಲಿ ಮತ್ತು ಒಂದು ದೆಹಲಿಯಲ್ಲಿ ವರದಿಯಾಗಿದೆ.

  ಸುರಕ್ಷತಾ ಕ್ರಮ ಅನುಸರಿಸಲು ಸೂಚನೆ

  ICMR ಮುಖ್ಯಸ್ಥ ಬಲರಾಮ್ ಭಾರ್ಗವ ಅವರು ಹೊಸ ರೂಪಾಂತರದ ವಿರುದ್ಧ ಜನರು ಸುರಕ್ಷತಾ ಕ್ರಮವಹಿಸಿ, ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.
  Omicron ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಹೆಚ್ಚಿನ ಅಪಾಯವನ್ನು ಉಂಟುಮಾಡದಿದ್ದರೂ, ಜಾಗರೂಕ ರಾಗಿರಬೇಕು. ಪ್ರಯೋಗಾಲಯದಲ್ಲಿ ಒಮೈಕ್ರಾನ್​ ಕುರಿತು ಅಧ್ಯಯನ ನಡೆಯುತ್ತಿದ್ದು, ಅದು ಮುಗಿದ ನಂತರ, ನಾವು ಲಸಿಕೆಗಳ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

  ಇದನ್ನು ಓದಿ: ಗುಜರಾತ್​ನಲ್ಲಿ ಎರಡು ಒಮೈಕ್ರಾನ್​ ಸೋಂಕಿತರು ಪತ್ತೆ; ದೇಶದಲ್ಲಿ ಒಟ್ಟು 26ಪ್ರಕರಣ ದಾಖಲು

  ಮುನ್ನೆಚ್ಚರಿಕೆ ಪಾಲನೆ ಅಗತ್ಯ

  ಇನ್ನು ಇದಕ್ಕೂ ಮುನ್ನ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ (Lav Agarwal) , ಸೋಂಕಿತರು ತೀವ್ರತರದ ಲಕ್ಷಣ ಹೊಂದಿಲ್ಲ. ಈ ಹಿನ್ನಲೆ ಆತಂಕ ಪಡುವ ಅಗತ್ಯವಿಲ್ಲ . ಸೋಂಕಿನಿಂದ ರಕ್ಷಣೆ ಪಡೆಯಲು ಜನರು ಜಾಗರುಕತೆಯಲ್ಲಿ ಇರಬೇಕಿದೆ ಎಂದು ಅವರು ಇದೇ ವೇಳೆ ಸಲಹೆ ನೀಡಿದರು. ಜನರು ತಪ್ಪದೇ ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವ ರೂಢಿಯನ್ನು ಪಾಲಿಸಬೇಕು. ಆಗಿದ್ದಾಗ ಮಾತ್ರ ಅಪಾಯದಿಂದ ಪಾರಾಗಲು ಸಾಧ್ಯ ಎಂದರು

  ಇದನ್ನು ಓದಿ: ಸೌದಿಯಲ್ಲಿ ತಬ್ಲಿಘಿ ಜಮಾತ್ ನಿಷೇಧ; ಕಾರಣ ಇದು

  ಪತ್ತೆಯಾದ ಒಟ್ಟು ರೂಪಾಂತರಗಳಲ್ಲಿ ಶೇಕಡಾ 0.04 ಕ್ಕಿಂತ ಕಡಿಮೆ ಎಂದಿದ್ದಾರೆ.
  ಡಿಸೆಂಬರ್ 1 ರಿಂದ, 93 ಅಂತರಾಷ್ಟ್ರೀಯ ಪ್ರಯಾಣಿಕರು COVID-19 ಪರೀಕ್ಷೆ ನಡೆಸಲಾಗಿದೆ. . ಇವುಗಳಲ್ಲಿ ಒಮೈಕ್ರಾನ್​ ಹೊಂದಿರುವ ಅಪಾಯದ ದೇಶಗಳಿಂದ ಬಂದ 83 ಉಳಿದ 13 ಮಂದಿ ಇತರೆ ದೇಶಗಳಿಂದ ಬಂದವರು. ಜಗತ್ತಿನಲ್ಲಿ ಒಟ್ಟು 59 ದೇಶಗಳಲ್ಲಿ ಈ ಓಮೈಕ್ರಾನ್​ ಪತ್ತೆಯಾಗಿದೆ.
  Published by:Seema R
  First published: