news18-kannada Updated:June 29, 2020, 8:28 AM IST
ಸಾಂದರ್ಭಿಕ ಚಿತ್ರ
ಅನಂತ್ನಾಗ್ (ಜೂ.29): ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಸೇನೆ ಕಳೆದ ಕೆಲ ತಿಂಗಳಿಂದ ಉಗ್ರರ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸುತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 15ಕ್ಕೂ ಹೆಚ್ಚು ಉಗ್ರರರನ್ನು ಹತ್ಯೆ ಮಾಡಲಾಗಿದೆ. ಅಂತೆಯೇ ಇಂದು ಮುಂಜಾನೆ ನಡೆದ ಸೇನಾ ಕಾರ್ಯಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಸೇನೆ ಎನ್ಕೌಂಟರ್ ಮಾಡಿದೆ.
ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ನಾವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಈ ವೇಳೆ ಉಗ್ರರು ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ನಾವು ಪ್ರತಿ ದಾಳಿ ನಡೆಸಿದ್ದು, ಉಗ್ರರನ್ನು ಹತ್ಯೆ ಮಾಡಿದ್ದೇವೆ ಎಂದಿದೆ ಸೇನೆ.
ಇನ್ನು, ಈ ಉಗ್ರರು ಯಾರು, ಎಲ್ಲಿಂದ ಬಂದಿದ್ದರು ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಈ ಭಾಗದಲ್ಲಿ ಹೆಚ್ಚಿನ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಇದ್ದು ಶೋಧ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ: ವಧುವಿನ ಅಕ್ಕನಿಗೆ ಕೋವಿಡ್ ಸೋಂಕು ದೃಢ; ಹಾವೇರಿಯಲ್ಲಿ ರಾತ್ರೋರಾತ್ರಿ ಮದುವೆ ರದ್ದು
ಜಮ್ಮು-ಕಾಶ್ಮೀರದ ಟ್ರಾಲ್ ಭಾಗದಲ್ಲಿ ಜೂ.26ರಂದು ನಡೆದ ಸೇನಾ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಇದಕ್ಕೂ ಮೊದಲು ಜಮ್ಮು-ಕಾಶ್ಮೀರ ಭಾಗದಲ್ಲಿ ಸಾಕಷ್ಟು ಉಗ್ರರನ್ನು ಹತ್ಯೆ ಮಾಡಲಾಗಿತ್ತು.
First published:
June 29, 2020, 7:57 AM IST