ಆರ್​ಎಸ್​ಎಸ್​ ಕಾರ್ಯಕರ್ತನ ಕೊಲೆ ಪ್ರಕರಣ; ಜಮ್ಮು-ಕಾಶ್ಮೀರದಲ್ಲಿ ಮೂವರು ಉಗ್ರರ ಬಂಧನ

ಒಂದು ದಶಕದ ಹಿಂದೆ ಭಯೋತ್ಪಾದನೆ ಮುಕ್ತವೆಂದು ಘೋಷಿಸಲ್ಪಟ್ಟ ಗುಡ್ಡಗಾಡು ಜಿಲ್ಲೆಯು ಕಳೆದ 10 ತಿಂಗಳಲ್ಲಿ ಹಲವಾರು ಭಯೋತ್ಪಾದಕ ದಾಳಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ  ಘಟನೆಗಳಿಗೆ ಸಾಕ್ಷಿಯಾಗಿದೆ.

Latha CG | news18-kannada
Updated:September 24, 2019, 7:43 AM IST
ಆರ್​ಎಸ್​ಎಸ್​ ಕಾರ್ಯಕರ್ತನ ಕೊಲೆ ಪ್ರಕರಣ; ಜಮ್ಮು-ಕಾಶ್ಮೀರದಲ್ಲಿ ಮೂವರು ಉಗ್ರರ ಬಂಧನ
ಪ್ರಾತಿನಿಧಿಕ ಚಿತ್ರ
Latha CG | news18-kannada
Updated: September 24, 2019, 7:43 AM IST
ಕಿಶ್ತ್ವಾರ್​(ಸೆ.22): ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಹತ್ಯೆ ಸೇರಿದಂತೆ ಭಯೋತ್ಪಾದನೆಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳ ಸಂಬಂಧ ಹಿಜ್ಬುಲ್ ಮುಜಾಹಿದ್ದೀನ್‌ ಉಗ್ರ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್ ಮತ್ತು ಈ ವರ್ಷದ ಸೆಪ್ಟೆಂಬರ್​​​ ನಡುವೆ ನಡೆದ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾದ ಕಾರಣ, ಉಗ್ರ ನಿಸ್ಸಾರ್ ಅಹ್ಮದ್ ಶೇಖ್ ಮತ್ತು ಕಿಶ್ತ್ವಾರ್ ನಿವಾಸಿಗಳಾದ ಆಜಾದ್ ಹುಸೇನ್ ಅವರನ್ನು ಬಂಧಿಸಲಾಗಿದೆ ಎಂದು ಜಮ್ಮು ವಲಯದ ಪೊಲೀಸ್ ಇನ್ಸ್​​ಪೆಕ್ಟರ್​ ಜನರಲ್​ ಮುಖೇಶ್ ಸಿಂಗ್ ಹೇಳಿದರು.

ಶೇಕ್ ಮತ್ತು ಹುಸೇನ್ ಅವರ ಮನೆಯಲ್ಲಿ ಸ್ಥಾಪಿಸಲಾಗಿದ್ದ ಎರಡು ಅಡಗುತಾಣಗಳನ್ನು ಪ್ರತಿಯೊಂದು ಭಯೋತ್ಪಾದಕ ಕೃತ್ಯದ ಮೊದಲು ಮತ್ತು ನಂತರ ಬಳಸಲಾಗುತ್ತಿತ್ತು.  ತನಿಖೆಯ ಸಮಯದಲ್ಲಿ ದಾಳಿ ನಡೆಸಲಾಗಿತ್ತು. ಇದು ಕೆಲವು ಪಿಸ್ತೂಲ್, ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲು ಕಾರಣವಾಯಿತು ಎಂದು ಅವರು ಹೇಳಿದರು.

ಗೋವಾದಲ್ಲಿ ನಗ್ನ ಕೂಟ ಆಯೋಜನೆಯ ಪೋಸ್ಟರ್​ ಹಂಚಿಕೆ; ತನಿಖೆ ಆರಂಭಿಸಿದ ಪೊಲೀಸರು

"ಯಾವುದೇ ರೂಪದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುವುದು, ಸಹಾನುಭೂತಿ ತೋರಿಸುವುದು, ಸಾಗಿಸುವುದು ಅಥವಾ ಉಗ್ರರಿಗೆ ಸಹಾಯ ಮಾಡುವುದು ಕಾನೂನುಬಾಹಿರ. ಉಗ್ರ ನಿಗ್ರಹ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ," ಎಂದು ಮುಖೇಶ್​ ಸಂದೇಶ ರವಾನಿಸಿದ್ದಾರೆ.

ಒಂದು ದಶಕದ ಹಿಂದೆ ಭಯೋತ್ಪಾದನೆ ಮುಕ್ತವೆಂದು ಘೋಷಿಸಲ್ಪಟ್ಟ ಗುಡ್ಡಗಾಡು ಜಿಲ್ಲೆಯು ಕಳೆದ 10 ತಿಂಗಳಲ್ಲಿ ಹಲವಾರು ಭಯೋತ್ಪಾದಕ ದಾಳಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ  ಘಟನೆಗಳಿಗೆ ಸಾಕ್ಷಿಯಾಗಿದೆ.

ನವೆಂಬರ್ 1, 2018 ರಂದು ಕಿಶ್ತ್ವಾರ್ ಪಟ್ಟಣದಲ್ಲಿ ಬಿಜೆಪಿ ನಾಯಕ ಅನಿಲ್ ಪರಿಹಾರ್ ಮತ್ತು ಅವರ ಸಹೋದರ ಅಜಿತ್ ಪರಿಹಾರ್ ಅವರನ್ನು ಉಗ್ರರು  ಗುಂಡಿಕ್ಕಿ ಕೊಂದಿದ್ದರು.
Loading...

ಮುಂದುವರೆದ ಗೂಳಿ ಓಟ; ಎರಡು ತಿಂಗಳ ಬಳಿಕ 39 ಸಾವಿರಕ್ಕೆ ಸೆನ್ಸೆಕ್ಸ್​ ಜಿಗಿತ

ಮತ್ತೊಂದು ಘಟನೆಯಲ್ಲಿ, ಮಾರ್ಚ್ 8 ರಂದು ಭಯೋತ್ಪಾದಕರು ಉಪ ಆಯುಕ್ತರ ಖಾಸಗಿ ಭದ್ರತಾ ಅಧಿಕಾರಿ (ಪಿಎಸ್ಒ) ದಲೀಪ್ ಕುಮಾರ್ ಅವರ ಸೇವಾ ರೈಫಲ್ ಅನ್ನು ಕದ್ದೊಯ್ದಿದ್ದರು. ಬಳಿಕ ಏಪ್ರಿಲ್ 9 ರಂದು ಮತ್ತೆ ಜಿಲ್ಲಾ ಆಸ್ಪತ್ರೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಚಂದ್ರ ಕಾಂತ್ ಶರ್ಮಾ ಮತ್ತು ಅವರ ಪಿಎಸ್‌ಒ ಅವರನ್ನು ಕೊಂದರು.

ಇತ್ತೀಚೆಗೆ, ಸೆಪ್ಟೆಂಬರ್ 13 ರಂದು, ಗೌರಿಯನ್ ಗ್ರಾಮದಲ್ಲಿರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಜಿಲ್ಲಾಧ್ಯಕ್ಷ ಶೇಖ್ ನಾಸಿರ್ ಹುಸೇನ್ ಅವರ ಮನೆಗೆ ನುಗ್ಗಿ, ಸೇವಾ ರೈಫಲ್‌ನಿಂದ ಪರಾರಿಯಾಗಿದ್ದರು.

First published:September 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...