Truck Rams: ನಿದ್ದೆ ಮಾಡುತ್ತಿದ್ದಾಗಲೇ ಯಮನಂತೆ ಬಂದ ಲಾರಿ; ಒಂದೇ ಕುಟುಂಬದ ಮೂವರ ದುರಂತ ಸಾವು

ಲಾರಿಯನ್ನ ವೇಗವಾಗಿ ಚಲಾಯಿಸಿ, ನಿಯಂತ್ರಣ ತಪ್ಪಿದ ಬಳಿಕ ರಸ್ತೆ ಪಕ್ಕದ ಮನೆಗೆ ಲಾರಿ ಚಾಲಕ ಗುದ್ದಿಸಿದ್ದಾನೆ. ಬಳಿಕ ಅಲ್ಲೇ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಆತನಿಗಾಗಿ ಈಗಾಗಲೇ ಪೊಲೀಸರು ಬಲೆ ಬೀಸಿದ್ದಾರೆ .

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸಾವು(Death) ಯಾವಾಗ , ಎಲ್ಲಿ, ಹೇಗೆ ಬರುತ್ತೆ ಎಂದು ಊಹಿಸಿಕೊಳ್ಳಲು ಯಾರಿಂದಲೂ ಆಗುವುದಿಲ್ಲ. ನಿಂತಲ್ಲೇ, ಮಲಗಿದ್ದಲ್ಲೇ ಪ್ರಾಣ ಹೋಗಿರುವುದನ್ನ ನಾವು ನೋಡಿದ್ದೇವೆ, ಕೇಳಿದ್ದೇವೆ.. ಇನ್ನೂ ಕೆಲವರು ನರಳಿ ನರಳಿ ಪ್ರಾಣ ಬಿಟ್ಟಿದ್ದನ್ನೂ ಸಹಜವಾಗಿ ನೋಡಿರುತ್ತೆವೆ. ಯಾವುದಕ್ಕೂ ಹೆದರದ ಮನುಷ್ಯ(Human) ಸಾವಿಗೆ ಬಹಳ ಹೆದರುತ್ತಾನೆ. ಎಲ್ಲರೂ ಒಂದು ದಿನ ಸಾಯುವುದು ಖಚಿತ. ಯಾರು ಇಲ್ಲಿ ಸಾವಿರಾರು ವರ್ಷ ಬದುಕಿರಲು ಅಸಾಧ್ಯ. ಸಾವು ಕೂಡು ಬಹಳಷ್ಟು ಕ್ರೂರಿ, ಚಿತ್ರ, ವಿಚಿತ್ರ ರೂಪದಲ್ಲಿ ಬರುತ್ತೆ. ಊಟ ಮಾಡುತ್ತಿದ್ದಾಗ ಬಿಕ್ಕಳಿಕೆ ಬಂದು ಜನ ಮೃತಪಟ್ಟಿದ್ದಾರೆ, ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯ ಮೇಲೆ ಮರಬಿದ್ದು ಜನ ಸಾವಿಗೀಡಾಗಿದ್ದಾರೆ. ಹೀಗೆ ಸಾಕಷ್ಟು ರೂಪದಲ್ಲಿ ಜನ ಮೃತಪಟ್ಟಿರುವುದನ್ನ ನೋಡಿದ್ದೇವೆ. ಅಷ್ಟೇ ಯಾಕೆ ಕಿಲ್ಲರ್ ಕೊರೋನಾ(Coronavirus) ಬಂದಮೇಲೆ ಆರೋಗ್ಯವಾಗಿದ್ದವರೇ ಕೊನಯುಸಿರೆಳೆದಿದ್ದಾರೆ. ಹೀಗಾಗಿ ಮನುಷ್ಯ ಸಾವು ಅಂದರೇ ಅಷ್ಟು ಭಯ ಬೀಳುತ್ತಾನೆ. ಆದರೆ ಕೆಲವೊಂದು ಬಾರಿ ವಿಧಿ ಎಷ್ಟು ಕ್ರೂರವಾಗಿರುತ್ತೆ ಅಂದ್ರೆ, ಬೇರೆಯವನ ತಪ್ಪಿಗೆ, ಮತ್ಯಾರೋ ಮೃತಪಟ್ಟಿರುತ್ತಾರೆ. ಇಂತಹದ್ದೇ ಘಟನೆ ಮಧ್ಯಪ್ರದೇಶ(Madhya Pradesh)ದಲ್ಲಿ ನಡೆದಿದೆ. ಹೈವೆ(Highway) ಪಕ್ಕದ ಮನೆಯಲ್ಲಿ ಮಲಗಿದ್ದವರ ಮೇಲೆ ಲಾರಿಯೊಂದು ಯಮರೂಪದಲ್ಲಿ ಬಂದು ನಾಲ್ವರನ್ನ ಬಲಿ ತೆಗೆದುಕೊಂಡಿದೆ.

  ಮಧ್ಯ ಪ್ರದೇಶದ ದಾಮೋಹ್​ದ ಅಜನಿ ತಪಾರಿಯ ಗ್ರಾಮದ ಬಟಿಯಗರ್​ - ಹಟ್ಟಾ ರಸ್ತೆಯಲ್ಲಿ ಶುಕ್ರವಾರ್ ರಾತ್ರಿ 11 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ರಸ್ತೆ ಬದಿ ಮಣ್ಣಿನಿಂದ ನಿರ್ಮಿಸಿದ್ದ ಮನೆಯಲ್ಲಿ ಕುಟುಂಬವೊಂದು ಆಗ ತಾನೆ ಊಟ ಮಾಡಿ ಹಾಯಾಗಿ ಮಲಗಿ ನಿದ್ದೆ ಮಾಡುತ್ತಿದ್ದರು. ಏಕಾಏಕಿ ಯಮನಂತೆ ಲಾರಿ ಆ ಮನೆಗೆ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮನೆಯಲ್ಲಿ ಮಲಗಿದ್ದ ಇಬ್ಬರು ಸಹೋದರರು, ಹಾಗೂ ಅವರ ಸಹೋದರಿ, ಮತ್ತೊಬ್ಬ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.

  ಇದನ್ನೂ ಓದಿ:Tragic News: ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಟೇಲರ್..!

  18 ವರ್ಷದ ಆಕಾಶ್​ ಅಹಿರ್ವಾರ್ ಈತನ ತಮ್ಮ 14 ವರ್ಷದ ಓಂಕಾರ್​ ಹಾಗೂ 16 ವರ್ಷದ ಸಹೋದರಿ ಮನಿಶಾ ಮೃತಪಟ್ಟಿದ್ದಾರೆ. ಘಟನೆ ನಡೆದ ಬಳಿಕ ಇವರನ್ನ ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಆಸ್ಪತ್ರೆ ತಲುಪವಷ್ಟರಲ್ಲೇ ಮೂವರ ಪ್ರಾಣ ಪಕ್ಷಿ ಹಾರಿಹೋಗಿದೆ. ಇನ್ನೂ ಘಟನೆ ನಡೆದ ಸಮಯದಲ್ಲಿ ಇವರ ಪೋಷಕರು ಆರೋಗ್ಯ ಸಮಸ್ಯೆ ಇದ್ದ ಕಾರಣ ಜಿಲ್ಲಾಸ್ಪತ್ರೆಗೆ ಹೋಗಿದ್ದರು ಅಂತ ತಿಳಿದು ಬಂದಿದೆ. ಇನ್ನೂ ಮತೊಬ್ಬ ಮೃತರನ್ನ ಪುರುಷೋತ್ತಮ ಸಾಹು ಎಂದು ಗುರುತಿಸಲಾಗಿದೆ. ಈತ ಲಾರಿಯಲ್ಲಿ ಲಿಫ್ಟ್​ ಕೇಳಿಕೊಂಡು ಬಂದಿದ್ದ ಅಂತ ಪೊಲೀಸರು ತಿಳಿಸಿದ್ದಾರೆ.

  ಲಾರಿಯನ್ನ ವೇಗವಾಗಿ ಚಲಾಯಿಸಿ, ನಿಯಂತ್ರಣ ತಪ್ಪಿದ ಬಳಿಕ ರಸ್ತೆ ಪಕ್ಕದ ಮನೆಗೆ ಲಾರಿ ಚಾಲಕ ಗುದ್ದಿಸಿದ್ದಾನೆ. ಬಳಿಕ ಅಲ್ಲೇ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಆತನಿಗಾಗಿ ಈಗಾಗಲೇ ಪೊಲೀಸರು ಬಲೆ ಬೀಸಿದ್ದಾರೆ . ಕೂಲಿ, ನಾಲಿ ಮಾಡಿ ಜೀವನ ಕಟ್ಟಿಕೊಂಡು ಆ ಕುಟುಂಬ ರಸ್ತೆ ಪಕ್ಕದಲ್ಲಿ ಮಣ್ಣಿನಿಂದ ಮನೆ ಕಟ್ಟಿ ಬದುಕು ಸಾಗಿಸುತ್ತಿದ್ದರು. ತಮಗೆ ಕಷ್ಟವಿದ್ದರೂ, ಮಕ್ಕಳಿಗೆ ಎಲ್ಲವನ್ನೂ ನೀಡಿ ಪೋಷಕರು ಬೆಳೆಸಿದ್ದರು. ಇದ್ದ ಮೂರು ಮಕ್ಕಳು ಈ ರೀತಿ ಮೃತಪಟ್ಟಿದ್ದಾರೆ. ಆಗ ತಾನೆ ಊಟ ಮಾಡಿ ಮಕ್ಕಳು ಮಲಗಿದ್ದರು, ಮಲಗಿದ್ದಲ್ಲೇ ಶವವಾಗ್ತಾರೆ ಅಂತ ನಾವು ಅಂದುಕೊಂಡಿರಲಿಲ್ಲ ಅಂತ ಆ ಮೃತ ಮಕ್ಕಳ ಪೋಷಕರು ಎದೆ ಬಡಿದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಇದಕ್ಕೆ ಹೇಳುವುದು ವಿಧಿಯಾಟ ಬಲ್ಲವರು ಯಾರು ಮಾನವ ಅಂತ..

  ವರದಿ- ವಾಸುದೇವ್. ಎಂ
  Published by:Latha CG
  First published: