ಪ್ರಿಯಾಂಕ ನಿವಾಸದಲ್ಲಿ ಭದ್ರತಾ ಲೋಪ: ಮೂವರು ಸಿಬ್ಬಂದಿಗಳ ಅಮಾನತು ಮಾಡಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಅಮಿತ್ ಶಾ

ರಾಹುಲ್​ ಗಾಂಧಿ ಅವರ ಕಪ್ಪು ಬಣ್ಣದ ಎಸ್​ಯುವಿ ಕಾರು ಪ್ರವೇಶಿಸಲಿದೆ ಎಂಬ ಮಾಹಿತಿ ಇತ್ತು.ಇದೇ ಸಂದರ್ಭದಲ್ಲಿ ಮೀರತ್​ನ ಕೆಲ ಕಾಂಗ್ರೆಸ್​​ ಟಾಟಾ ಸಫಾರಿ ವಾಹನದಲ್ಲಿ ಪ್ರವೇಶಿಸಿದರು. ಈ ವೇಳೆ ರಾಹುಲ್​ ಗಾಂಧಿಯವರ ಕಾರ್​ ಎಂದು ಭದ್ರತಾ ಪಡೆ ಅವರನ್ನು ತಡೆಯುವ ಯತ್ನ ನಡೆಸಲಿಲ್ಲ. ಇದು ಆಕಸ್ಮಿಕವಾಗಿ ನಡೆದ ಘಟನೆ. ಆದರೆ, ಈ ಬಗ್ಗೆ ಯಾವುದೇ ಚಾನ್ಸ್​ ತೆಗೆದುಕೊಳ್ಳು ನಾವು ಸಿದ್ಧವಿಲ್ಲ. ಹೀಗಾಗಿ ತನಿಖೆಗೆ ಆದೇಶಿಸಿದ್ದೇವೆ

Seema.R | news18-kannada
Updated:December 3, 2019, 6:08 PM IST
ಪ್ರಿಯಾಂಕ ನಿವಾಸದಲ್ಲಿ ಭದ್ರತಾ ಲೋಪ: ಮೂವರು ಸಿಬ್ಬಂದಿಗಳ ಅಮಾನತು ಮಾಡಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಅಮಿತ್ ಶಾ
ಪ್ರಿಯಾಂಕ ಗಾಂಧಿ
  • Share this:
ನವದೆಹಲಿ (ಡಿ.3): ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ನಿವಾಸದಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಆದೇಶಿಸಿದ್ದಾರೆ.

ರಾಜ್ಯಸಭೆಯಲ್ಲಿ ವಿಶೇಷ ಭದ್ರತಾ ಪಡೆ(ಎಸ್​ಪಿಜಿ) ತಿದ್ದುಪಡಿ ಕಾಯ್ದೆ ವೇಳೆ ಮಾತನಾಡಿದ ಅವರು, ಈ ವಿಷಯ ತಿಳಿಸಿದರು. ಘಟನೆಗೆ ಸಂಬಂಧಿಸಿದಂತೆ ಮೂವರು ಪೊಲೀಸ್​ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಹೇಗೆ ಪ್ರಿಯಾಂಕ ನಿವಾಸದಲ್ಲಿ ಕಪ್ಪು ಬಣ್ಣದ ಟಾಟಾ ಸಫಾರಿ ವಾಹನ ಭದ್ರತಾ ತಪಾಸಣೆ ಇಲ್ಲದೇ ಪ್ರವೇಶ ಪಡೆಯಿತು ಎಂಬ ಬಗ್ಗೆ ಕೂಡ ವಿವರಿಸಿದರು. ರಾಹುಲ್​ ಗಾಂಧಿ ಅವರ ಕಪ್ಪು ಬಣ್ಣದ ಎಸ್​ಯುವಿ ಕಾರು ಪ್ರವೇಶಿಸಲಿದೆ ಎಂಬ ಮಾಹಿತಿ ಇತ್ತು.

ಇದನ್ನು ಓದಿ: ಎಸ್​ಪಿಜಿ ಹಿಂಪಡೆದ ವಾರದೊಳಗೆ ಪ್ರಿಯಾಂಕಾ ಗಾಂಧಿ ಭದ್ರತೆಗೆ ಧಕ್ಕೆ: ಮನೆಯೊಳಗೆ ನುಗ್ಗಿದ ಐವರು

ಇದೇ ಸಂದರ್ಭದಲ್ಲಿ ಕೆಲವರು ಟಾಟಾ ಸಫಾರಿ ವಾಹನದಲ್ಲಿ ಪ್ರವೇಶಿಸಿದರು. ಈ ವೇಳೆ ಮೀರತ್​ನಿಂದ ಬಂದಿದ್ದ ಕಾಂಗ್ರೆಸ್​ ಕಾರ್ಯಕರ್ತರ ಕಾರನ್ನು ರಾಹುಲ್​ ಗಾಂಧಿಯವರ ಕಾರ್​ ಎಂದು ಭದ್ರತಾ ಪಡೆ ಅವರನ್ನು ತಡೆಯುವ ಯತ್ನ ನಡೆಸಲಿಲ್ಲ. ಇದು ಆಕಸ್ಮಿಕವಾಗಿ ನಡೆದ ಘಟನೆ. ಆದರೆ, ಈ ಬಗ್ಗೆ ಯಾವುದೇ ಚಾನ್ಸ್​ ತೆಗೆದುಕೊಳ್ಳಲು ನಾವು ಸಿದ್ಧವಿಲ್ಲ. ಹೀಗಾಗಿ ತನಿಖೆಗೆ ಆದೇಶಿಸಿದ್ದೇವೆ ಎಂದರು.

ಕೇಂದ್ರ ಸರ್ಕಾರ ರಾಜಕೀಯ ದ್ವೇಷದಿಂದ ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ಎಸ್​ಪಿಜಿ ಭದ್ರತೆಯನ್ನು ಹಿಂಪಡೆದಿದೆ ಎಂಬ ಆರೋಪವನ್ನು ತಳ್ಳಿ ಹಾಕಿ ಮಾತನಾಡಿದ ಅವರು, ಸರ್ಕಾರ ಗಾಂಧಿ ಕುಟುಂಬ ಮಾತ್ರವಲ್ಲದೇ 130 ಕೋಟಿ ಭಾರತೀಯರ ರಕ್ಷಣೆ ಕಾಳಜಿ ಹೊಂದಿದೆ ಎಂದು ಉತ್ತರಿಸಿದರು.
First published: December 3, 2019, 5:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading