ಪ್ರಿಯಾಂಕಾ ಗಾಂಧಿ ಭದ್ರತೆಯಲ್ಲಿ ಲೋಪ, ಮೂವರು ಸಿಬ್ಬಂದಿ ಅಮಾನತು, ಉನ್ನತ ಮಟ್ಟದ ತನಿಖೆಗೆ ಆದೇಶ; ಗೃಹ ಸಚಿವ ಅಮಿತ್ ಶಾ

ಗಾಂಧಿ ಕುಟುಂಬದ ಮೂವರಿಗೆ ಆಂಬ್ಯುಲೆನ್ಸ್ ಜೊತೆಗೆ ಉನ್ನತ ದರ್ಜೆಯ ಝಡ್​ ಪ್ಲಸ್​ ಭದ್ರತೆ ಒದಗಿಸಲಾಗಿದೆ. ಮತ್ತು ಈ ಹಿಂದೆ ಇದ್ದ ಎಸ್​ಪಿಜಿ ಸಿಬ್ಬಂದಿಯಿಂದ ಕಾವಲು ನೀಡಲಾಗುತ್ತಿದೆ ಎಂದು ಅಮಿತ್ ಶಾ ಹೇಳಿದರು.

HR Ramesh | news18-kannada
Updated:December 3, 2019, 5:50 PM IST
ಪ್ರಿಯಾಂಕಾ ಗಾಂಧಿ ಭದ್ರತೆಯಲ್ಲಿ ಲೋಪ, ಮೂವರು ಸಿಬ್ಬಂದಿ ಅಮಾನತು, ಉನ್ನತ ಮಟ್ಟದ ತನಿಖೆಗೆ ಆದೇಶ; ಗೃಹ ಸಚಿವ ಅಮಿತ್ ಶಾ
ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ
  • Share this:
ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ದೆಹಲಿ ನಿವಾಸದಲ್ಲಿ ಸೋಮವಾರ ಭದ್ರತೆಯಲ್ಲಿ ಲೋಪ ಉಂಟಾಗಿತ್ತು. ಘಟನೆ ಬಗ್ಗೆ ಇಂದು ಸಂಸತ್ತಿನಲ್ಲಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಘಟನೆ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಮತ್ತು ಈಗಾಗಲೇ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಇಂದು ನಡೆದ ವಿಶೇಷ ರಕ್ಷಣಾ ಪಡೆ (ಎಸ್​ಪಿಜಿ) ತಿದ್ದುಪಡಿ ಮೇಲಿನ ಚರ್ಚೆ ವೇಳೆ ಈ ಘಟನೆ ಬಗ್ಗೆ ಅಮಿತ್ ಶಾ ಮಾತನಾಡಿದ್ದಾರೆ. ಪ್ರಿಯಾಂಕಾ ಗಾಂಧಿ ಅವರ ನಿವಾಸಕ್ಕೆ ಸಹೋದರ ರಾಹುಲ್ ಗಾಂಧಿ ಅವರು ಕಪ್ಪು ಬಣ್ಣದ ಟಾಟಾ ಸಫಾರಿ ಎಸ್​ಯುವಿ ಕಾರಿನಲ್ಲಿ ಬರಲಿದ್ದಾರೆ ಎಂದು ಭದ್ರತೆ ಸಿಬ್ಬಂದಿಗೆ ಮಾಹಿತಿ ಇತ್ತು. ಆದರೆ, ರಾಹುಲ್ ಗಾಂಧಿ ಬದಲಿಗೆ ಮೀರತ್ ಮತ್ತು ಉತ್ತರಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ಅದೇ ತರಹದ ಕಾರಿನಲ್ಲಿ ಅಲ್ಲಿಗೆ ಬಂದಿದ್ದಾರೆ. ರಾಹುಲ್ ಗಾಂಧಿ ಅವರೇ ಇರಬಹುದು ಎಂದು ಭದ್ರತಾ ಸಿಬ್ಬಂದಿ ಆ ಕಾರನ್ನು ಮನೆಯೊಳಗೆ ಬಿಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಗಾಂಧಿ ಕುಟುಂಬದ ಮೂವರಿಗೆ ಆಂಬ್ಯುಲೆನ್ಸ್ ಜೊತೆಗೆ ಉನ್ನತ ದರ್ಜೆಯ ಝಡ್​ ಪ್ಲಸ್​ ಭದ್ರತೆ ಒದಗಿಸಲಾಗಿದೆ. ಮತ್ತು ಈ ಹಿಂದೆ ಇದ್ದ ಎಸ್​ಪಿಜಿ ಸಿಬ್ಬಂದಿಯಿಂದ ಕಾವಲು ನೀಡಲಾಗುತ್ತಿದೆ ಎಂದು ಅಮಿತ್ ಶಾ ಹೇಳಿದರು.

ಇದನ್ನು ಓದಿ: ಎಸ್​ಪಿಜಿ ಹಿಂಪಡೆದ ವಾರದೊಳಗೆ ಪ್ರಿಯಾಂಕಾ ಗಾಂಧಿ ಭದ್ರತೆಗೆ ಧಕ್ಕೆ: ಮನೆಯೊಳಗೆ ನುಗ್ಗಿದ ಐವರು

ಮಂಗಳವಾರ ರಾಜ್ಯಸಭೆಯಲ್ಲಿ ಎಸ್​ಪಿಜಿ ತಿದ್ದುಪಡಿ ಕಾಯ್ದೆ ಅಂಗೀಕರಿಸಲಾಯಿತು. ಎಸ್​ಪಿಜಿ ಕಾಯ್ದೆ ತಿದ್ದುಪಡಿ ರಾಜಕೀಯ ಪಿತೂರಿ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಅಮಿತ್ ಶಾ, ಸರ್ಕಾರ ದೇಶದ 130 ಕೋಟಿ ಜನರ ಸುರಕ್ಷತೆ ಬಗ್ಗೆ ಕಾಳಜಿ ವಹಿಸುತ್ತದೆ. ಕೇವಲ ಗಾಂಧಿ ಕುಟುಂಬಕ್ಕಷ್ಟೇ ಅಲ್ಲ ಎಂದು ಹರಿಹಾಯ್ದರು.

 
First published:December 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...