ಹೈದರಾಬಾದ್: ತೆಲುಗು ದೇಶಂ ಪಕ್ಷದ (Telugu Desam Party) ನಾಯಕ ಚಂದ್ರಬಾಬು ನಾಯ್ಡು (Chandrababu Naidu) ಅವರು ಇತ್ತೀಚೆಗಷ್ಟೆ ಆಯೋಜಿಸಿದ್ದ ರೋಡ್ ಶೋ (Road Show) ಕಾರ್ಯಕ್ರಮದಲ್ಲಿ ಅನೇಕ ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಮ್ಮೆ ಕಾಲ್ತುಳಿತಕ್ಕೆ (Stampede) ಮಹಿಳೆಯೊಬ್ಬರು ಬಲಿಯಾಗಿರುವ (3 Womens Died) ಘಟನೆ ಕಂದುಕೂರಿನಲ್ಲಿ (Kandukur) ನಡೆದಿದೆ. ಗುಂಟೂರಿನಲ್ಲಿ (Guntur) ಚಂದ್ರಬಾಬು ನಾಯ್ಡು ಅವರು, ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ ಮೂವರು ಮಹಿಳೆ ಸಾವನ್ನಪ್ಪಿದ್ದು, ಹಲವಾರು ಮಂದಿ ಗಂಭೀರವಾಗಿ (Injured) ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ.
ವೈಕುಂಠ ಏಕಾದಶಿ ಪ್ರಯುಕ್ತ ಮಹಿಳೆಯರಿಗೆ ಉಚಿತ ಸೀರೆ ವಿತರಣಾ ಕಾರ್ಯಕ್ರಮ
ನಾಳೆ ವೈಕುಂಠ ಏಕಾದಶಿ ಪ್ರಯುಕ್ತ ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಚಂದ್ರಬಾಬು ನಾಯ್ಡು ಅವರು ಪಾಲ್ಗೊಂಡಿದ್ದರು. ಸೀರೆ ತೆಗೆದುಕೊಳ್ಳಲು ಜನ ಮುಗಿಬಿದ್ದಿದ್ದರು. ಇದರಿಂದ ನೂಕು ನುಗ್ಗಲು ಉಂಟಾಗಿ, ಸರಿಯಾಗಿ ಬ್ಯಾರಿಕೇಡ್ಗಳನ್ನು ಹಾಕದ ಹಿನ್ನೆಲೆ ಕಾಲ್ತುಳಿತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಾರ್ಯಕ್ರಮ ಕುರಿತಂತೆ ದೊಡ್ಡ ಪ್ರಚಾರ ನಡೆಸಿದ್ದ ಟಿಡಿಪಿ ನಾಯಕರು
ಈ ಕಾರ್ಯಕ್ರಮಕ್ಕಾಗಿ ಟಿಡಿಪಿ ಮುಖಂಡರು ಮತ್ತು ಕಾರ್ಯಕರ್ತರು ಸುಮಾರು ಒಂದು ವಾರದಿಂದ ಸಿದ್ಧತೆ ನಡೆಸಿದ್ದರು. ಅಲ್ಲದೇ ದೊಡ್ಡ ಮಟ್ಟದಲ್ಲಿ ಪ್ರಚಾರ ಕೂಡ ಮಾಡಿದ್ದರು. ವಿಕಾಸನಗರದಲ್ಲಿ ಆಯೋಜಿಸಲಾಗಿದ್ದ ಈ ಸಮಾವೇಶಕ್ಕೆ ಸುಮಾರು 30 ಸಾವಿರ ಜನ ಬರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ಕುಳಿತುಕೊಳ್ಳಲು ಎರಡರಿಂದ ಮೂರು ಸಾವಿರ ಜನರಿಗೆ ಮಾತ್ರ ಆಸನದ ವ್ಯವಸ್ಥೆ ಮಾಡಲಾಗಿತ್ತು. ಮತ್ತೊಂದೆಡೆ ಕೇವಲ ಹೆಸರಿಗೆ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು.
3 killed, several injured in stampede at Chandrababu Naidu's public meeting in Andhra's Guntur
Read @ANI Story | https://t.co/yTKkVyX5BT#Stampede #AndhraPradesh #Guntur #ChandrababuNaidu #Gunturstampede pic.twitter.com/7Of3rVybYS
— ANI Digital (@ani_digital) January 1, 2023
ಕಾರ್ಯಕ್ರಮಕ್ಕೆ ಮದ್ಯ ಸೇವಿಸಿ ಬಂದಿದ್ದ ಕೆಲ ಟಿಡಿಪಿ ಕಾರ್ಯಕರ್ತರು
ಆದರೆ ಚಂದ್ರಬಾಬು ನಿರ್ಗಮಿಸುತ್ತಿದ್ದಂತೆಯೇ ವೈಕುಂಠ ಏಕಾದಶಿ ಹಬ್ಬದ ಕಿಟ್ಗಳಿಗಾಗಿ ಒಂದೇ ಬಾರಿಗೆ ಜನ ನುಗ್ಗಿದ್ದಾರೆ. ಈ ವೇಳೆ ಕಿಟ್ಗಳನ್ನು ನಾಳೆ ನೀಡುತ್ತೇವೆ ಎಂದಿದ್ದಾರೆ. ಹೀಗಾಗಿ ಜನ ಪರಸ್ಪರ ತಳ್ಳಿಕೊಂಡು ವಿತರಣಾ ಕೇಂದ್ರಕ್ಕೆ ಧಾವಿಸಿದ್ದಾರೆ. ಮತ್ತೊಂದೆಡೆ.. ವಿಧಾನಸೌಧದ ಆವರಣಕ್ಕೆ ಬಂದ ಕೆಲ ಕಾರ್ಯಕರ್ತರು ಮದ್ಯ ಸೇವಿಸಿರುವುದು ಕಂಡು ಬಂದಿದ್ದು, ನೂಕು ನುಗ್ಗಲು ಉಂಟಾಗಿದೆ. ಇದೇ ವೇಳೆ ಕುಳಿತಿದ್ದ ವೃದ್ಧೆ ಮೇಲೆ ಕೆಲವರು ಬಿದ್ದರೆ, ಮತ್ತೆ ಕೆಲವರು ಕಿಟ್ಗಳಿಗೆ ಒಬ್ಬರ ಮೇಲೆ ಒಬ್ಬರು ಹಾರುತ್ತಾ ಮುಂದೆ ಸಾಗಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ.
ಈ ಮುನ್ನ ಕಂದುಕೂರಿನಲ್ಲಿ ರೋಡ್ ಶೋ ನಡೆಸಿದ್ದ ಚಂದ್ರಬಾಬು ನಾಯ್ಡು
ಈ ಮುನ್ನ ಮೂರು ದಿನಗಳ ಹಿಂದೆ ನೆಲ್ಲೂರು ಜಿಲ್ಲೆಯ ಇದ್ವೆಂ ಕರ್ಮರ ಕಾರ್ಯಕ್ರಮದಲ್ಲಿ ಚಂದ್ರಬಾಬು ನಾಯ್ಡು ಭಾಗವಹಿಸಿದ್ದರು. ನಂತರ ಕಂದುಕೂರಿನಲ್ಲಿ ರೋಡ್ ಶೋ ನಡೆಸಿದರು. ಇನ್ನೂ ಈ ರೋಡ್ ಶೋನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ ಸಿಲುಕಿ 8 ಮಂದಿ ಕಾರ್ಯಕರ್ತರು ಸಾವು
ರೋಡ್ ಶೋ ವೇಳೆ ಚಂದ್ರಬಾಬು ನಾಯ್ಡು ಅವರ ಭಾಷಣ ಆರಂಭವಾಗುತ್ತಿದ್ದಲೇ ಸಾಕಷ್ಟು ಗದ್ದಲ ಉಂಟಾಗಿತ್ತು. ಈ ವೇಳೆ ವೇದಿಕೆ ಮೇಲೆ ನೂಕುನುಗ್ಗಲು ಆರಂಭವಾಗಿ ಕೆಲವು ಕಾರ್ಯಕರ್ತರು ಕಾಲ್ತುಳಿತಕ್ಕೆ ಒಳಗಾಗಿ ಪಕ್ಕದಲ್ಲಿದ್ದ ಕಾಲುವೆಗೆ ಜಾರಿಬಿದ್ದಿದ್ದರು. ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದರು.
Andhra Pradesh | Seven TDP workers lost their lives after a scuffle broke out between party workers during a public meeting being held by TDP leader N Chandrababu Naidu in Kandukuru of Nellore district today.
7 people have lost their lives, injured admitted to hospital: Police pic.twitter.com/uqU1j8K66X
— ANI (@ANI) December 28, 2022
ಇದನ್ನೂ ಓದಿ: Stampede in Andhra: ಟಿಡಿಪಿ ಕಾರ್ಯಕ್ರಮದ ವೇಳೆ ಭಾರೀ ದುರಂತ, ಕಾಲ್ತುಳಿತಕ್ಕೆ ಸಿಲುಕಿ 8 ಕಾರ್ಯಕರ್ತರು ಸಾವು
ನಂತರ ಚಂದ್ರಬಾಬು ನಾಯ್ಡು ಅವರು, ಮೃತರ ಕುಟುಂಬಸ್ಥರಿಗೆ 10 ರೂಪಾಯಿ ಪರಿಹಾರ ಘೋಷಿಸಿದರು. ಜೊತೆಗೆ ಕಾಲ್ತುಳಿತದಿಂದ ಕಾರ್ಯಕರ್ತರು ಸಾವನ್ನಪ್ಪಿರುವುದು ನೋವು ತರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ