ಜಮ್ಮು ಕಾಶ್ಮೀರದಲ್ಲಿ ಸೈನಿಕ ಕಾರ್ಯಾಚರಣೆ ; ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಸೈನಿಕ ಕಾರ್ಯಾಚರಣೆಯಲ್ಲಿ ಮೃತಪಟ್ಟಿರುವ ಮೂವರೂ ಸ್ಥಳೀಯ ನಿವಾಸಿಗಳೇ ಎಂಬುದು ಕಾರ್ಯಾಚರಣೆಯ ಬಳಿಕ ತಿಳಿದುಬಂದಿದ್ದು, ಮರಣೋತ್ತರ ಪರೀಕ್ಷೆಯ ನಂತರ ಗುರುತು ಪತ್ತೆ ಹಚ್ಚಿ ಮೃತದೇಹವನ್ನು ಸಂಬಂಧಪಟ್ಟವರಿಗೆ ನೀಡಲಾಗುವುದು ಎಂದು ಸೇನೆ ತಿಳಿಸಿದೆ.

MAshok Kumar | news18-kannada
Updated:October 16, 2019, 1:22 PM IST
ಜಮ್ಮು ಕಾಶ್ಮೀರದಲ್ಲಿ ಸೈನಿಕ ಕಾರ್ಯಾಚರಣೆ ; ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ
ಸಾಂದರ್ಭಿಕ ಚಿತ್ರ.
  • Share this:
ಶ್ರೀನಗರ (ಅಕ್ಟೋಬರ್​ 16); ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆಯ ಸೈನಿಕರು ಎನ್​ಕೌಂಟರ್​ ನಡೆಸಿದ್ದು ಕನಿಷ್ಟ ಮೂವರು ಉಗ್ರಗಾಮಿಗಳನ್ನು ಹೊಡೆದುರುಳಿಸಿದ್ದಾರೆ ಎಂದು ವರದಿಯಾಗಿದೆ.

ಅನಂತನಾಗ್ ಜಿಲ್ಲೆಯ ಪಜಲ್​ಪೋರ ಎಂಬಲ್ಲಿ ಶಂಕಿತ ಉಗ್ರರು ಆಶ್ರಯ ಪಡೆದಿರುವ ಕುರಿತ ಖಚಿತ ಮಾಹಿತಿಯ ಮೇರೆಗೆ ಇಂದು ಬೆಳಗ್ಗೆಯೇ ಸೇನೆ ದಾಳಿ ಸಂಯೋಜಿಸಿದೆ. ಈ ವೇಳೆ ಉಗ್ರಗಾಮಿಗಳು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಸ್ಥಳದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಕೊನೆಗೂ ಸತತ ಮೂರು ಗಂಟೆಯ ಕಾರ್ಯಾಚರಣೆಯ ನಂತರ ಉಗ್ರಗಾಮಿಗಳನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ.

ಸೈನಿಕ ಕಾರ್ಯಾಚರಣೆಯಲ್ಲಿ ಮೃತಪಟ್ಟಿರುವ ಮೂವರೂ ಸ್ಥಳೀಯ ನಿವಾಸಿಗಳೇ ಎಂಬುದು ಕಾರ್ಯಾಚರಣೆಯ ಬಳಿಕ ತಿಳಿದುಬಂದಿದ್ದು, ಮರಣೋತ್ತರ ಪರೀಕ್ಷೆಯ ನಂತರ ಗುರುತು ಪತ್ತೆ ಹಚ್ಚಿ ಮೃತದೇಹವನ್ನು ಸಂಬಂಧಪಟ್ಟವರಿಗೆ ನೀಡಲಾಗುವುದು ಎಂದು ಸೇನೆ ತಿಳಿಸಿದೆ.

ಆಗಸ್ಟ್​ 5 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡುತ್ತಿದ್ದ ವಿಶೇಷ ಮಾನ್ಯತೆ ಕಲಂ 370 ವಿಧಿಯನ್ನು ರದ್ದುಗೊಳಿಸಿದ ನಂತರ ಇಡೀ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಪರಿಣಾಮ ಕಳೆದ ಎರಡು ತಿಂಗಳಿನಿಂದ ಗಡಿ ಭಾಗದಲ್ಲಿ ಸಾಕಷ್ಟು ಭಯೋತ್ಪಾಕ ದಾಳಿಗಳು ಸಂಭವಿಸುತ್ತಲೇ ಇದೆ.

ಇದನ್ನೂ ಓದಿ : ಶಿವಮೊಗ್ಗದಲ್ಲೂ ಶಂಕಿತ ಉಗ್ರರು ಜಾಡು, ಸ್ಯಾಟಲೈಟ್​ ಪೋನ್?; ಮಲೆನಾಡಿನಲ್ಲಿ ಮನೆಮಾಡಿದ ಆತಂಕ

First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading