ಒಂದು ಮಗುವಿಗೆ 3 ಅಪ್ಪಂದಿರು!; ಕೊಲ್ಕತ್ತಾ ಆಸ್ಪತ್ರೆಯಲ್ಲಿ ನಡೆದ ಹೈಡ್ರಾಮಾಕ್ಕೆ ಪೊಲೀಸರೇ ಕಂಗಾಲು

ದಕ್ಷಿಣ ಕೊಲ್ಕತ್ತಾದ ಐರಿಸ್ ಆಸ್ಪತ್ರೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 5 ದಿನಗಳ ಹಿಂದೆ 21 ವರ್ಷದ ಮಹಿಳೆ ಪ್ರಸವ ವೇದನೆಯಿಂದ ಈ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಗೆ ಬಂದ ಮೂವರು ಪುರುಷರು ತಾವೇ ಹುಟ್ಟಲಿರುವ ಮಗುವಿನ ತಂದೆ ಎಂದು ಜಗಳ ಮಾಡಿಕೊಂಡಿದ್ದಾರೆ.

Sushma Chakre | news18
Updated:July 25, 2019, 9:25 AM IST
ಒಂದು ಮಗುವಿಗೆ 3 ಅಪ್ಪಂದಿರು!; ಕೊಲ್ಕತ್ತಾ ಆಸ್ಪತ್ರೆಯಲ್ಲಿ ನಡೆದ ಹೈಡ್ರಾಮಾಕ್ಕೆ ಪೊಲೀಸರೇ ಕಂಗಾಲು
ಸಾಂದರ್ಭಿಕ ಚಿತ್ರ
  • News18
  • Last Updated: July 25, 2019, 9:25 AM IST
  • Share this:
ಕೊಲ್ಕತ್ತಾ (ಜು. 25): ಕೆಲವೊಂದು ಮಹಿಳೆಯರ ಹಣೆಬರಹ ಹೇಗಿರುತ್ತದೆ ಎಂದರೆ ತನ್ನ ಮಗುವಿನ ಜನನಕ್ಕೆ ಕಾರಣವಾದವನೇ ಅದು ತನ್ನ ಮಗುವಲ್ಲ ಎಂದು ವಾದಿಸಿ ಮಗುವನ್ನು ತಿರಸ್ಕರಿಸುತ್ತಾನೆ. ಇದಕ್ಕಿಂತ ಮುಜುಗರದ ಸಂಗತಿ ಮತ್ತೊಂದಿದೆಯಾ? ಎಂದು ನೀವು ಕೇಳಬಹುದು. ಖಂಡಿತಾ ಇದೆ. ಕೆಲವರು ತಮಗೆ ಹುಟ್ಟಿದ ಮಗುವನ್ನು ತಮ್ಮದು ಎಂದು ಒಪ್ಪಿಕೊಳ್ಳಲು ಹಿಂದೇಟು ಹಾಕಿದರೆ ಕೊಲ್ಕತ್ತಾದ ಆಸ್ಪತ್ರೆಯೊಂದರಲ್ಲಿ ಹುಟ್ಟಿದ ಮಗುವಿಗೆ ನಾನೇ ಅಪ್ಪ ಎಂದು ಮೂವರು ರಾದ್ಧಾಂತ ಎಬ್ಬಿಸಿದ ಘಟನೆ ನಡೆದಿದೆ. ಇದು ಮಗುವಿನ ತಾಯಿಯ ಕುಟುಂಬಸ್ಥರಿಗೆ ತೀವ್ರ ಮುಜುಗರ ಉಂಟುಮಾಡಿದೆ. 

ದಕ್ಷಿಣ ಕೊಲ್ಕತ್ತಾದ ಐರಿಸ್ ಆಸ್ಪತ್ರೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 5 ದಿನಗಳ ಹಿಂದೆ 21 ವರ್ಷದ ಮಹಿಳೆ ಪ್ರಸವ ವೇದನೆಯಿಂದ ಈ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ತಾಯಿ ಮತ್ತು ಗಂಡನೊಂದಿಗೆ ಬಂದಿದ್ದ ಆಕೆಯ ಎಲ್ಲ ವೈದ್ಯಕೀಯ ವೆಚ್ಚವನ್ನೂ ಆಕೆಯ ಗಂಡನೇ ಭರಿಸಿದ್ದ. ಅಲ್ಲದೆ, ಫಾರಂನಲ್ಲಿ ಕೂಡ ತಾನು ಆಕೆಯ ಗಂಡ ಎಂದು ಬರೆದುಕೊಟ್ಟಿದ್ದ. ಇದೇ ಸೋಮವಾರ ಆ ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಕೆಯನ್ನು ಆಪರೇಷನ್​ ಥಿಯೇಟರ್​ಗೆ ಕರೆದುಕೊಂಡು ಹೋಗುತ್ತಿದ್ದಂತೆ ಅಲ್ಲಿಗೆ ಬಂದ ವ್ಯಕ್ತಿಯೋರ್ವ ಆಕೆ ನನ್ನ ಹೆಂಡತಿ, ಅವಳನ್ನು ನಾನು ನೋಡಬೇಕೆಂದು ಹಠ ಹಿಡಿದ.

ಅಕ್ರಮ ಸಂಬಂಧ ಹೊಂದಿದ್ದ ನಾಯಿಯನ್ನು ಮನೆಯಿಂದ ಹೊರಗಟ್ಟಿದ ಮಾಲೀಕ!

ಇದರಿಂದಾಗಿ ಆಸ್ಪತ್ರೆಯಲ್ಲಿದ್ದ ಆಕೆಯ ಗಂಡನಿಗೆ ಕೋಪ ಬಂದು ಇಬ್ಬರ ನಡುವೆ ಜಗಳ ಶುರುವಾಯಿತು. ವಾರ್ಡ್​ನಲ್ಲಿ ಆ ಯುವತಿ ಅರೆಪ್ರಜ್ಞಾವಸ್ಥೆಯಲ್ಲಿರುವಾಗ ಹೊರಗೆ ದೊಡ್ಡ ಜಗಳವೇ ನಡೆಯುತ್ತಿತ್ತು. ಇದರಿಂದ ಗಾಬರಿಗೊಂಡ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅವರ ಜಗಳ ಬಿಡಿಸಿ ಮಗುವಿನ ನಿಜವಾದ ತಂದೆ ಯಾರೆಂದು ಪತ್ತೆ ಮಾಡುವುದಾಗಿ ತಿಳಿಸಿದ್ದಾರೆ. ಇಬ್ಬರನ್ನೂ ಪ್ರತ್ಯೇಕವಾಗಿ ಕರೆಸಿ ವಿಚಾರಣೆ ಮಾಡಿದ ಪೊಲೀಸರಿಗೆ ಇಬ್ಬರೂ ತಾವೇ ಮಗುವಿನ ತಂದೆ ಎಂದು ವಾದಿಸಿದ್ದಾರೆ. ಇದು ಪೊಲೀಸರಿಗೂ ದೊಡ್ಡ ತಲೆನೋವಾಗಿದೆ.

ಇದುವೇ ದೇಶದ ಮೊದಲ ಗಾರ್ಬೇಜ್​ ಕೆಫೆ: ಪ್ಲಾಸ್ಟಿಕ್​ ತ್ಯಾಜ್ಯ ಕೊಟ್ಟರೆ ಊಟ ಉಚಿತ

ಆಕೆ ನಿಮ್ಮ ಹೆಂಡತಿ ಎಂದು ಹೇಳಲು ದಾಖಲೆಯೇನಿದೆ? ಎಂದು ಕೇಳಿದ ಪೊಲೀಸರಿಗೆ ಇಬ್ಬರೂ ಮದುವೆ ಸರ್ಟಿಫಿಕೇಟ್ ನೀಡುವುದಾಗಿ ಹೇಳಿದ್ದಾರೆ. ಆದರೆ, ಎರಡನೇ ವ್ಯಕ್ತಿ ಮದುವೆ ಪ್ರಮಾಣಪತ್ರವನ್ನು ಹಾಜರುಪಡಿಸಿದ್ದು, ಮೊದಲು ಆ ಯುವತಿಯನ್ನು ಆಸ್ಪತ್ರೆಗೆ ಸೇರಿಸಿದ್ದ ವ್ಯಕ್ತಿ ತಾನು ಆಕೆಯ ಸ್ನೇಹಿತ ಎಂದು ಒಪ್ಪಿಕೊಂಡಿದ್ದಾರೆ.ಇನ್ನೇನು ಸಮಸ್ಯೆ ಬಗೆಹರಿಯಿತಲ್ಲ ಎಂದು ಪೊಲೀಸರು ನಿರಾಳವಾಗುವಷ್ಟರಲ್ಲಿ ಆ ಯುವತಿಯ ತಾಯಿ ಆ ಮದುವೆ ಸರ್ಟಿಫಿಕೇಟ್ ತಂದವನು ನನ್ನ ಅಳಿಯನಲ್ಲ. ನನ್ನ ಜೊತೆಗೆ ಬಂದಿದ್ದವನೇ ನಿಜವಾದ ಅಳಿಯ ಎಂದು ಆರೋಪಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ತನ್ನ ಅತ್ತೆಗಾಗಿ ತಲೆ ಬೋಳಿಸಿಕೊಂಡ ಬೆಂಗಳೂರು ಯುವತಿ!ಇದೆಲ್ಲ ಗೊಂದಲಗಳಿಗೂ ಆಸ್ಪತ್ರೆಯಲ್ಲಿರುವ ಮಹಿಳೆಯೇ ಉತ್ತರ ನೀಡಬೇಕೆಂದು ಪೊಲೀಸರೂ ಸುಮ್ಮನಾಗಿದ್ದಾರೆ.  ಹೆಣ್ಣುಮಗುವಿಗೆ ಜನ್ಮ ನೀಡಿದ ಮಹಿಳೆಯ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಅಷ್ಟರೊಳಗೆ ಸಂಜೆ ಬಂದ ಮೂರನೇ ವ್ಯಕ್ತಿಯೊಬ್ಬ ನಾನು ಈ ಮಹಿಳೆಯನ್ನು ಮದುವೆಯಾಗಿಲ್ಲ. ಆದರೆ, ಈ ಮಗುವಿಗೆ ನಾನೇ ಅಪ್ಪ ಎಂದು ಗಲಾಟೆಯೆಬ್ಬಿಸುವ ಮೂಲಕ ಹೊಸ ಗೊಂದಲ ಸೃಷ್ಟಿಸಿದ್ದಾರೆ. ಒಂದೇ ಮಗುವಿಗೆ ಮೂರು ಜನ ಅಪ್ಪಂದಿರಾ? ಇದೊಳ್ಳೆ ಸಿನಿಮಾ ಕತೆಯ ಹಾಗಿದೆಯಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ಮತ್ತು ಪೊಲೀಸರು ದಂಗಾಗಿಹೋಗಿದ್ದಾರೆ. 

ಸೀರೆಯುಟ್ಟು ಕ್ರಿಕೆಟ್​ ಮೈದಾನದಲ್ಲಿ ಓಡಿದ ಮಹಿಳೆ ಕಿಸ್ ಮಾಡಿದ್ದು ಯಾರಿಗೆ?!

ಮಧ್ಯರಾತ್ರಿ ವೇಳೆಗೆ ಚೇತರಿಸಿಕೊಂಡು ವಾರ್ಡ್​ಗೆ ಶಿಫ್ಟ್​ ಆದ ಮಹಿಳೆಯಿಂದಲೇ ಪೊಲೀಸರು ನಿಜವಾದ ವಿಷಯ ತಿಳಿದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನು ಆಕೆಗೆ ವಿವರಿಸುತ್ತಿದ್ದಂತೆ ಎರಡನೇ ವ್ಯಕ್ತಿಯೊಂದಿಗೆ ತಾನು ಮದುವೆಯಾಗಿರುವುದು ಸತ್ಯ. ಆತನೇ ತನ್ನ ಮಗುವಿನ ತಂದೆ ಎಂದು ಸ್ಪಷ್ಟಪಡಿಸಿದ್ದಾಳೆ. ಆ ವ್ಯಕ್ತಿ ತನ್ನನ್ನು ಹೆಂಡತಿ ಎಂದು ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಆತನ ಮೇಲೆ ಅತ್ಯಾಚಾರದ ಕೇಸ್ ಹಾಕಿದ ನಂತರ ಈಗ ಎಲ್ಲ ಕಡೆ ತಾನು ಅತ್ಯಾಚಾರ ಎಸಗಿಲ್ಲ, ಆಕೆ ತನ್ನ ಹೆಂಡತಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾನೆ ಎಂದು ತಿಳಿಸಿದ್ದಾರೆ.

First published: July 25, 2019, 8:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading