ದೆಹಲಿಯ ರಬ್ಬರ್​ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ; ಮೂವರ ಸಾವು

ಸುಮಾರು 31 ಮಂದಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಡಿಸಿಪಿ ಮೇಘನಾ ಯಾದವ್​​ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Latha CG | news18
Updated:July 13, 2019, 1:43 PM IST
ದೆಹಲಿಯ ರಬ್ಬರ್​ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ; ಮೂವರ ಸಾವು
ರಬ್ಬರ್​ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತ
  • News18
  • Last Updated: July 13, 2019, 1:43 PM IST
  • Share this:
ನವದೆಹಲಿ,(ಜು.13): ರಾಷ್ಟ್ರ ರಾಜಧಾನಿ ದೆಹಲಿಯ ರಬ್ಬರ್​ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡವೊಂದು ಸಂಭವಿಸಿದ್ದು, ಇಬ್ಬರು  ಮಹಿಳೆಯರು ಸೇರಿ ಮೂವರು ಮಂದಿ ಸಾವನ್ನಪ್ಪಿದ್ದಾರೆ.

ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಶಾಹ್ದರಾದ ಝಿಲ್​ಮಿಲ್​ ಕೈಗಾರಿಕಾ ಪ್ರದೇಶದಲ್ಲಿರುವ ಹಾರ್ಡ್​​ವೇರ್​ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ಧಾರೆ.

3 ದಿನಗಳ ಭಾರೀ ಮಳೆಗೆ ಉತ್ತರಪ್ರದೇಶದಲ್ಲಿ 15 ಮಂದಿ ಬಲಿ, 133 ಕಟ್ಟಡಗಳು ಕುಸಿತ

ಸುಮಾರು 31 ಮಂದಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಡಿಸಿಪಿ ಮೇಘನಾ ಯಾದವ್​​ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ದುರಂತದಲ್ಲಿ ಇಬ್ಬರು ಮಹಿಳೆಯರು ಹಾಗೂ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ