• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Bihar: ಮಿಲಿಟರಿ ಟ್ರೈನಿಂಗ್ ವೇಳೆ ಸಿಡಿದ ಪಿರಂಗಿ ಗುಂಡು ಮನೆ ಮೇಲೆ ಬಿದ್ದು ಸ್ಫೋಟ, ಹೋಳಿಯಾಡುತ್ತಿದ್ದ ಮೂವರ ದುರ್ಮರಣ

Bihar: ಮಿಲಿಟರಿ ಟ್ರೈನಿಂಗ್ ವೇಳೆ ಸಿಡಿದ ಪಿರಂಗಿ ಗುಂಡು ಮನೆ ಮೇಲೆ ಬಿದ್ದು ಸ್ಫೋಟ, ಹೋಳಿಯಾಡುತ್ತಿದ್ದ ಮೂವರ ದುರ್ಮರಣ

ಪಿರಂಗಿ ಶೆಲ್​ ಸ್ಫೋಟವಾಗಿ ಮೂವರ ಸಾವು

ಪಿರಂಗಿ ಶೆಲ್​ ಸ್ಫೋಟವಾಗಿ ಮೂವರ ಸಾವು

ಸೇನಾ ಅಭ್ಯಾಸದ ವೇಳೆ ಫಿರಂಗಿ ಗುಂಡು ಸಿಡಿದು( Cannonball Exploded) ಅದರಲ್ಲಿನ ಬಾಂಬ್ ಶೆಲ್​ವೊಂದು ಮನೆ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಇತರ 6 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

 • News18 Kannada
 • 5-MIN READ
 • Last Updated :
 • Bihar, India
 • Share this:

ಗಯಾ, ಬಿಹಾರ: ಮಿಲಿಟರಿ ಸೇನಾ ಅಭ್ಯಾಸದ ವೇಳೆ (Military Training) ಆಘಾತಕಾರಿ ಘಟನೆ ಸಂಭವಿಸಿದ್ದು, ಮೂವರ ಸಾವಿಗೆ ಕಾರಣವಾಗಿರುವ ಘಟನೆ ಬಿಹಾರದಲ್ಲಿ (Bihar) ನಡೆದಿದೆ. ಸೇನಾ ಅಭ್ಯಾಸದ ವೇಳೆ ಫಿರಂಗಿ ಸಿಡಿದು (Cannonball Exploded) ಅದರಲ್ಲಿನ ಬಾಂಬ್ ಶೆಲ್​ವೊಂದು ಮನೆ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಇತರ 6 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳ ಸ್ಥಿತಿ ಕೂಡ ಚಿಂತಾಜನಕವಾಗಿದ್ದು, ಅವರನ್ನು ಮಗಧ್ ವೈದ್ಯಕೀಯ ಆಸ್ಪತ್ರೆಗೆ (Military Training) ದಾಖಲಿಸಲಾಗಿದೆ. ಮನೆಯವರು ನೆರೆಹೊರೆಯವರೊಂದಿಗೆ ಹೋಳಿ ಆಡುತ್ತಿದ್ದಾಗ ಈ ಘಟನೆ ನಡೆದಿದೆ.


ಮೂವರ ಸಾವು, ಮೂವರು ಗಂಭೀರ


ವರದಿಗಳ ಪ್ರಕಾರ, ಬರಚಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬುಮೈರ್ ಪಂಚಾಯತ್‌ನ ಗುಲಾರ್ವೆಡ್ ಗ್ರಾಮದ ಬಳಿ ಸೇನಾ ಸಿಬ್ಬಂದಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಫೈರಿಂಗ್​ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ದುರ್ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಅನುಗ್ರಹ ನಾರಾಯಣ್ ಮಗಧ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ಸೂಚಿಸಿವೆ.


ಈ ವಿಷಯ ತಿಳಿದ ಪೊಲೀಸರು ಮತ್ತು ಆಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಗೋವಿಂದ್ ಮಾಂಝಿ, ಅವರ ಮಗಳು ಕಾಂಚನ ಮತ್ತು ಅಳಿಯ ಸೂರಜ್ ಕುಮಾರ್ ಮೃತಪಟ್ಟಿದ್ದಾರೆಂದು ಗುರುತಿಸಲಾಗಿದೆ. ಗೀತಾ ಕುಮಾರಿ, ಪಿಂಟು ಮಾಂಝಿ, ರಸೋ ದೇವಿ ಎಂಬ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.


ಇದನ್ನೂ ಓದಿ: Crime News: ಪತ್ನಿಯನ್ನು ಕೊಲೆಗೈದು ಪೀಸ್ ಪೀಸ್ ಮಾಡಿ ವಾಟರ್​​ ಟ್ಯಾಂಕ್​​​ಗೆ ಹಾಕಿದ್ದ ಪತಿ; ಶಾಕಿಂಗ್​​ ಕೃತ್ಯ ಬಯಲಾಗಿದ್ದೆ ರೋಚಕ!


ಹೋಳಿ ಸಂಭ್ರಮದಲ್ಲಿದ್ದ ಕುಟುಂಬ


ಇಡೀ ಕುಟುಂಬ ಹೋಳಿ ಹಬ್ಬದ ಸಂಭ್ರಮದಲ್ಲಿತ್ತು. ಆದರೆ ಪಿರಂಗಿ ಶೆಲ್ ಮನೆಯ ಮೇಲೆ ಬಿದ್ದು ಇದೀಗ ಸಾವಿನ ಮನೆಯಾಗಿದೆ. ಹಬ್ಬದ ಸಂಭ್ರಮ ಹೋಗಿ ಸೂತಕ ಛಾಯೆ ಮನೆ ಮಾಡಿದೆ. ಮತ್ತೊಂದೆಡೆ, ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಸೇನಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಯಾನಿಟೈಸರ್​ ಸುರಿದು ಬೆಂಕಿ ಹಚ್ಚಿ ಪತ್ನಿ ಕೊಂದ ಪತಿ


ವ್ಯಕ್ತಿಯೊಬ್ಬ ತನ್ನ ಮಕ್ಕಳ ಎದುರಲ್ಲೇ ಪತ್ನಿಯ ಮೇಲೆ ಸ್ಯಾನಿಟೈಸರ್​ ಸುರಿದು ಬೆಂಕಿ ಹಚ್ಚಿ ಕೊಂದಿರುವ ದಾರುಣ ಘಟನೆ ತೆಲಂಗಾಣದ ಮೇಡ್ವಲ್​ನಲ್ಲಿ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ,  20 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಬುಧವಾರ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.


ಇದನ್ನೂ ಓದಿ: Crime News: ತಂದೆಯನ್ನು ಕೊಂದ, ಮಲತಾಯಿ ಮೇಲೆ ಅತ್ಯಾಚಾರ ಮಾಡಿದ! ರಾಕ್ಷಸನಾದ 20 ವರ್ಷದ ಯುವಕ


ಕೌಟುಂಬಿಕ ಕಾರಣಕ್ಕೆ ಜಗಳ


ತಿರುನಗರಿ ನರೇಂದ್ರ ಕೃತ್ಯ ಎಸಗಿದ ಆರೋಪಿಯಾಗಿದ್ದು, ತನ್ನ ಪತ್ನಿ ನವ್ಯಶ್ರೀಯನ್ನು ಹತ್ಯೆಗೈದಿದ್ದಾನೆ. ಕೌಟುಂಬಿಕ ಕಾರಣಕ್ಕೆ ನರೇಂದ್ರ ಮತ್ತು ನವ್ಯಶ್ರೀ ನಡುವೆ ಜಗಳ ನಡೆಯುತ್ತಿತ್ತು. ಆದರೆ ಫೆಬ್ರವರಿ 18ರಂದು ಮತ್ತೇ ಇಬ್ಬರ ನಡುವೆ ಜಗಳ ನಡೆದಿದ್ದು, ಇದು ವಿಕೋಪಕ್ಕೆ ತಿರುಗಿ ನರೇಂದ್ರ, ತನ್ನ ಪತ್ನಿ ನವ್ಯಶ್ರೀ ಮೇಲೆ ಸ್ಯಾನಿಟೈಸರ್​ ಸುರಿದು  ಬೆಂಕಿ ಹಚ್ಚಿದ್ದಾನೆ.


ಗಾಬರಿಗೊಂಡ ಪುತ್ರಿಯರು ಕಿರುಚಾಡಿ ಅಕ್ಕಪಕ್ಕದ ಮನೆಯವರನ್ನು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ನೆರೆಹೊರೆಯವರು ಬಂದು ಬೆಂಕಿಯನ್ನು ಹಾರಿಸಿ ನವ್ಯಶ್ರೀಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ 20 ದಿನಗಳಿಂದ ನರಳಿದ್ದ ನವ್ಯಶ್ರೀ ಇಂದು ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.

Published by:Rajesha M B
First published: