ನವದೆಹಲಿ (ಜ. 7): ಜಮ್ಮು ಮತ್ತು ಕಾಶ್ಮೀರದ ಬಡ್ಗಾಮ್ (Budgam) ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಭಯೋತ್ಪಾದಕರ ಗುಂಪು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್ಕೌಂಟರ್ನಲ್ಲಿ ಮೂವರು ಭಯೋತ್ಪಾದಕರನ್ನು (Militants ) ಹೊಡೆದುರುಳಿಸಲಾಗಿದೆ. ಎನ್ಕೌಂಟರ್ನಲ್ಲಿ (Encounter) ಹತರಾದ ಎಲ್ಲಾ ಮೂವರು ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ ( Jaish -e- Mohammed JEM) ಉಗ್ರಗಾಮಿ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು. ಮೂವರಲ್ಲಿ ಒಬ್ಬನನ್ನು ಶ್ರೀನಗರದ ವಸೀಂ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಬಂದ ಮಾಹಿತಿ ಅನ್ವಯ ಸೇನಾ ಪಡೆ ಮತ್ತು ವಿಷೇಶ ಪೋಲಿಸರು ನಡೆಸಿದ ಕಾರ್ಯಾಚಣೆಯಲ್ಲಿ ಉಗ್ರರು ಅಡಗಿರುವ ಸ್ಥಳ ತಲುಪುತ್ತಿದ್ದಂತೆ ಅವರ ಮೇಲೆ ಗುಂಡು ಹಾರಿಸಲಾಯತು. ಝೋಲ್ವಾ ಕ್ರಾಲ್ಪೋರ್ ಚದೂರ ಪ್ರದೇಶದಲ್ಲಿ ಉಗ್ರರು ಅಡಗಿದ್ದ ಮಾಹಿತಿ ಲಭ್ಯವಾಗಿದೆ. ಈ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆಸಲಾಗಿದ್ದು, ಗುಂಡಿನ ಚಕಮಕಿ ನಡೆದಿದೆ.
ಕಳೆದ 7 ದಿನಗಳಲ್ಲಿ 22 ಉಗ್ರರ ಹತ್ಯೆ
ಉಗ್ರರಿಂದ ಮೂರು ಎಕೆ-57 ರೈಫಲ್ಗಳು, 8 ಮ್ಯಾಗಜೀನ್ಗಳು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. 2022ರಿಂದ ಅಂದರೆ ಕಳೆದ 7 ದಿನಗಳಿಂದ ಇಲ್ಲಿಯವರೆಗೆ ಒಟ್ಟು 11 ಉಗ್ರರನ್ನು ಸದೆಬಡಿಯಲಾಗಿದೆ.
ಈ ವರ್ಷದ ಮೊದಲ ಐದು ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಎಂಟು ಉಗ್ರರನ್ನು ಹೊಡೆದುರುಳಿಸಲಾಗಿದೆ. ಅವರಲ್ಲಿ ಏಳು ಮಂದಿ ಮೂರು ಎನ್ಕೌಂಟರ್ಗಳಲ್ಲಿ ಕೊಲ್ಲಲ್ಪಟ್ಟರೆ, ಆರನೇಯವ ಗಡಿಯಾಚೆಯಿಂದ ಒಳನುಸುಳುವಿಕೆ ಪ್ರಯತ್ನವನ್ನು ಭದ್ರತಾ ಪಡೆಗಳು ನಿಲ್ಲಿಸಿ ಗುಂಡಿಕ್ಕಿ ಕೊಂದಿದ್ದಾರೆ. ಇವರಲ್ಲಿ ಹಜಿನ್ನ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಕಮಾಂಡರ್ ಸಲೀಮ್ ಪರ್ರೆ ಸೇರಿದ್ದಾರೆ.
ಮಂಗಳವಾರ ಕೂಡ ನಡೆದಿತ್ತು ಎನ್ಕೌಂಟರ್
ಮಂಗಳವಾರ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದರು. ಪೋಲೀಸರ ಅಧಿಕೃತ ಹೇಳಿಕೆಯ ಪ್ರಕಾರ, ಕುಲ್ಗಾಮ್ನ ಓಕಿ ಗ್ರಾಮದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಕುರಿತು ಪೊಲೀಸರು ರಚಿಸಿದ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ್ದರು. ಪೊಲೀಸರು, 9ಆರ್ಆರ್ ಮತ್ತು 18 ಬಿಎನ್ ಸಿಆರ್ಪಿಎಫ್ ಜಂಟಿಯಾಗಿ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.
ಇದನ್ನು ಓದಿ: Suicide Bombers ಅನ್ನು ಸೇನೆಗೆ ನೇಮಿಸಿಕೊಳ್ಳುತ್ತಿರುವ ತಾಲಿಬಾನ್ ಸರ್ಕಾರ
ಶಂಕಿತರ ಚಲನವಲನ ಪತ್ತೆ
ನಿನ್ನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್), ಮುಜಾಹಿದ್ದೀನ್ ಗಜ್ವತುಲ್ ಹಿಂದ್ (ಎಂಜಿಹೆಚ್), ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಇಬ್ಬರು ಭಯೋತ್ಪಾದಕರನ್ನು ಶ್ರೀನಗರದ ಬರ್ಜುಲ್ಲಾ ಸೇತುವೆ ಬಳಿ ಬಂಧಿಸಲಾಗಿದೆ
ಡಿಸೆಂಬರ್ 22 ರಂದು, ಭಯೋತ್ಪಾದಕರು ಸಫಕದಲ್ ಪ್ರದೇಶದಲ್ಲಿ ರೌಫ್ ಅಹ್ಮದ್ ಎಂಬ ಆಸ್ತಿ ವ್ಯಾಪಾರಿಯನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿದ್ದರು. ಘಟನೆಯ ನಂತರ, ಶ್ರೀನಗರ ಪೊಲೀಸರು ಈ ಹತ್ಯೆಯ ತನಿಖೆಯನ್ನು ಪ್ರಾರಂಭಿಸಿದರು. ತನಿಖೆಯ ಸಂದರ್ಭದಲ್ಲಿ, ಶ್ರೀನಗರ ನಗರದಲ್ಲಿ ಕೆಲವು ಶಂಕಿತರ ಚಲನವಲನ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಫಿರೋಜ್ಪುರ್ ಫ್ಲೈಓವರ್ ಮೇಲೆ ನಡೆದಿದ್ದೇನು? ಇಲ್ಲಿದೆ ಇನ್ಸೈಡ್ ಸ್ಟೋರಿ
ಇಬ್ಬರು ಭಯೋತ್ಪಾದಕರ ಬಂಧನ
ಇನ್ನು ಕೆಲ ಗುಪ್ತಚರ ಮಾಹಿತಿ ಆಧಾರದ ಮೇಲೆ ಶ್ರೀನಗರ ಪೊಲೀಸರು ಭಗತ್ ಬರ್ಜುಲ್ಲಾ ಪ್ರದೇಶದಲ್ಲಿ ಭಯೋತ್ಪಾದಕರ ಅನುಮಾನಾಸ್ಪದ ಚಲನವಲನವನ್ನು ಪತ್ತೆಹಚ್ಚಿದ್ದಾರೆ. ಶ್ರೀನಗರ ಪೊಲೀಸರು ಸಿಆರ್ಪಿಎಫ್ನೊಂದಿಗೆ ವಿಶೇಷ ನಾಕಾಸ್ ಹಾಕಿದ್ದಾರೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಟಿಆರ್ಎಫ್ಎಂ-ಜಿಹೆಚ್ನ ಇಬ್ಬರು ಭಯೋತ್ಪಾದಕರನ್ನು ಬರ್ಜುಲ್ಲಾ ಸೇತುವೆಯ ಬಳಿ ಎಲ್ಇಟಿ-ಜೆಇಎಂನ ಬಂಧಿಸಿದ್ದಾರೆ.
ಸುಹೇಲ್ ಖಾದಿರ್ ಖಂಡೆ ಮತ್ತು ಸುಹೇಲ್ ಮುಷ್ತಾಕ್ ವಾಜಾ ಎಂಬ ಇಬ್ಬರು ಬಂಧಿತ ಭಯೋತ್ಪಾದಕರ. ಹುಡುಕಾಟದ ಸಮಯದಲ್ಲಿ, ಎರಡು ಪಿಸ್ತೂಲ್ಗಳು ಮತ್ತು ಎರಡು ಪಿಸ್ತೂಲ್ ಮ್ಯಾಗಜೀನ್ಗಳು ಹಾಗೂ 30 ಪಿಸ್ತೂಲ್ ಬುಲೆಟ್ಗಳು ಸ್ಥಳದಲ್ಲೇ ಪತ್ತೆಯಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ