ಗುಜರಾತ್​ ಎನ್​ಕೌಂಟರ್​: 17ರಲ್ಲಿ 3 ನಕಲಿ ಎಂದ ತನಿಖಾ ಸಮಿತಿ

ಸಮೀರ್​ ಖಾನ್​, ಕಸಮ್​ ಜಾಫರ್​ ಮತ್ತು ಹಜಿಹಜಿ ಇಸ್ಲಾಮೈಲ್​ ಎನ್​ಕೌಂಟರ್​ ನಕಲಿಯಾಗಿದೆ ಎಂದು ಸುಪ್ರೀಂ ಕೋರ್ಟ್​ಗೆ ವರದಿ ನೀಡಿದೆ.

Seema.R | news18
Updated:January 12, 2019, 4:01 PM IST
ಗುಜರಾತ್​ ಎನ್​ಕೌಂಟರ್​: 17ರಲ್ಲಿ 3 ನಕಲಿ ಎಂದ ತನಿಖಾ ಸಮಿತಿ
ಪ್ರಾತಿನಿಧಿಕ ಚಿತ್ರ
Seema.R | news18
Updated: January 12, 2019, 4:01 PM IST
ನವದೆಹಲಿ (ಜ.12): 2002ರಿಂದ 2006ರವರೆಗೆ ಗುಜರಾತ್​ನಲ್ಲಿ ನಡೆದ ನಕಲಿ ಎನ್​ಕೌಂಟರ್​ ಕುರಿತು ತನಿಖೆ ನಡೆಸುತ್ತಿದ್ದ ನ್ಯಾ. ಎಚ್​ಎಸ್​ ಬೇಡಿ ಸಮಿತಿ 17 ಎನ್​ಕೌಂಟರ್​ನಲ್ಲಿ ಮೂರು ಎನ್​ಕೌಂಟರ್​ ನಕಲಿ ಎಂಬುದಾಗಿ ವರದಿ ನೀಡಿದೆ.

ಸಮೀರ್​ ಖಾನ್​, ಕಸಮ್​ ಜಾಫರ್​ ಮತ್ತು ಹಜಿಹಜಿ ಇಸ್ಲಾಮೈಲ್​ ಎನ್​ಕೌಂಟರ್​ ನಕಲಿಯಾಗಿದೆ ಎಂದು ಸುಪ್ರೀಂ ಕೋರ್ಟ್​ಗೆ ವರದಿ ನೀಡಿದೆ.

ಮೂವರು ಇನ್ಸ್​ಪೆಕ್ಟರ್​ ಸ್ಥಾನಮಾನದ ಅಧಿಕಾರಿಗಳು ಸೇರಿದಂತೆ 9 ಪೊಲೀಸರು ಈ ಸಮಿತಿಯಲ್ಲಿದ್ದರು. ಇದರಲ್ಲಿ ಯಾವುದೇ ಐಪಿಎಸ್​ ಅಧಿಕಾರಿಗಳಿರಲಿಲ್ಲ.

ಸಮೀರ್​ ಖಾನ್​ ಎನ್​​ಕೌಂಟರ್​

ಸಮೀರ್​ ಖಾನ್​ ಮತ್ತು ಆತನ ಸಹೋದರ 1996ರಲ್ಲಿ ಪೊಲೀಸ್​ ಕಾನ್ಸ್​ಟೇಬಲ್​ ಹತ್ಯೆ ಮಾಡಿದ್ದರು. ಈ ಸಂಬಂಧ ಸಮೀರ್​ ಖಾನ್​ ಸಹೋದರನನ್ನು ಬಂಧಿಸಲಾಗಿತ್ತು. ಆದರೆ ಖಾನ್​ ಈ ವೇಳೆ ತಪ್ಪಿಸಿಕೊಂಡಿದ್ದ. ಇದಾದ ಬಳಿಕ ಖಾನ್​ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಜೈಸೆ-ಇ- ಮೊಹಮ್ಮದ್​ ಸಂಘಟನೆಯಲ್ಲಿ ತರಬೇತಿ ಪಡೆದು ನೇಪಾಳದ ಮೂಲಕ ಭಾರತಕ್ಕೆ ವಾಪಸ್ಸಾಗಿದ್ದ.

ಅಕ್ಷರಧಾಮ ಮಂದಿರದ ಮೇಲೆ ದಾಳಿ ಬಳಿಕ ಪಾಕಿಸ್ತಾನ ಜೆಇಎಂ ಸಂಘಟನೆ ಅಹಮದಬಾದ್​ಗೆ ತೆರಳಿ ಮೋದಿಯವರನ್ನು ಕೊಲ್ಲುವಂತೆ ಸಮೀರ್​ಗೆ ಸೂಚನೆ ನೀಡಿತ್ತಿ.
Loading...

ಬಳಿಕ ಸಮೀರ್​ ಅವರನ್ನು ಬಂಧಿಸಲಾಯಿತು. ಈ ವೇಳೆ 1196ರಲ್ಲಿ ಆತ ಪೊಲೀಸ್​ ಕಾನ್​ಸ್ಟೇಬಲ್​ ಹತ್ಯೆ ಮಾಡಿ ಇನ್ಸ್​ಪೆಕ್ಟರ್​ ಕೆಎಂ ವಘೇಲಾ ಅವರ ಲೋಡೆಡ್​ ಬಂದೂಕನ್ನು ಕಿತ್ತುಕೊಂಡು ಓಡಿಹೋಗಿದ್ದ. ಈ ವೇಳೆ ಇನ್ನಿಬ್ಬರು ಇನ್ಸ್​ಪೆಕ್ಟರ್​ ಆದ ತರುಣ್​ ಬರೊಟ್​ ಹಾಗೂ ಎಎ ಚೌಹಣ್​ ಅವರ ಮೇಲೆ ಎನ್​ಕೌಂಟರ್​ ನಡೆಸಿದರು. ಬಳಿಕ ಆತನನ್ನು ಆಸ್ಪತ್ರೆಗೆ ಸೇರಿಸಿದರು ಈ ವೇಳೆ ಈತ ಸಾವನ್ನಪ್ಪಿರುವುದಾಗಿ ಪ್ರಕಟಿಸಲಾಯಿತು.

ಈ ಕುರಿತು ತನಿಖೆ ನಡೆಸಿದ ಅಧಿಕಾರಿಗಳು,. ಖಾನ್​ ನೆಲದ ಮೇಲೆ ಕುಳಿತಾಗ ಈ ನಕಲಿ ಎನ್​ಕೌಂಟರ್​ ನಡೆಸಲಾಗಿದೆ ಎಂದರು.

ಕಸಮ್​ ಜಾಫರ್​ ಎನ್​ಕೌಂಟರ್​

2006 ಎಪ್ರಿಲ್​ 13ರಂದು ಕಸಮ್​ ಜಾಫರ್​ ಹಾಗೂ 17 ಜನರನ್ನು ಪೊಲೀಸರು ಅಹಮದಬಾದ್​ ಹೊಟೇಲ್​ಗೆ ಕರೆದುಕೊಂಡು ಹೋಗುವಾಗ ಜಾಫರ್​ ತಪ್ಪಿಸಿಕೊಳ್ಳುವ ಯತ್ನ ಮಾಡಿದ. ಇದಾದ ಒಂದು ದಿನಗ ಬಳಿಕ ಆತನ ದೇಹವನ್ನು ಸೇತುವೆ ಕೆಳಗೆ ದೊರಕಿತು.

ಇದನ್ನು ಓದಿ: 30 ವರ್ಷಗಳಿಂದ ಚಹಾ ಕುಡಿದೇ ಬದುಕಿದ್ದಾರೆ ಈ ಮಹಿಳೆ..!

ಜಾಫರ್​ ಯಾವ ಪ್ರಕರಣದಲ್ಲಿ ತಪಿತಸ್ಥ ಎಂಬ ಸಾಕ್ಷ್ಯ ಒದಗಿಸುವಲ್ಲಿ ವಿಫಲರಾಗಿದ್ದರು. ಕೊಲೆ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದ ಜೆಎಂ ಭಾರವದ್​ ಹಾಗೂ ಕಾನ್​​ಸ್ಟೇವಲ್​ ಗಣೇಶ್​ಬಾಯ್​ ಉದ್ದೇಶಪೂರ್ವಕವಾಗಿ ಈತನ ಕೊಲೆ ಮಾಡಿದ್ದರು ಎಂಬುದು ಸಮಿತಿಯಲ್ಲಿ ಸಾಬೀತಾಗಿತ್ತು. ಬಳಿಕ ಅಮಿತಿ ಅವರ ಕುಟುಂಬಕ್ಕೆ 14 ಲಕ್ಷ ಪರಿಹಾರ ನೀಡುವಂತೆ ಸೂಚಿಸಿತು.

ಹಾಜಿ ಹಾಜಿ ಇಸ್ಮಾಯಿಲ್​​ ಎನ್​ಕೌಂಟರ್​

2005ರಲ್ಲಿ ಕುಖ್ಯಾತ ಸ್ಮಾಗಲರ್​ ಆದ ಹಾಜಿ ಹಾಜಿ ಇಸ್ಮಾಯಿಲ್​ ಮಾಹಿತಿ ಪಡೆದ ಪೊಲೀಸರು ಆತನ ತೆರಳುತ್ತಿದ್ದ ಸ್ಥಳಕ್ಕೆ ತೆರಳಿದರು. ಈ ವೇಳೆ ಇಸ್ಮಾಯಿಲ್​ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದಾಗ ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿದಾಳಿ ನಡೆಸಿದರು. ಈ ವೇಳೆ ಗಂಭೀರವಾಗಿ ಗಾಯಗೊಂಡ ಈತ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ.

ಇಸ್ಮಾಯಿಲ್​ ಮರಣೋತ್ತರ ಪರೀಕ್ಷೆ ನಡೆಸಿದಾಗ ಅದರಲ್ಲಿ ಐದು ಗುಂಡುಗಳು ಅವರಿಗೆ ಹತ್ತಿರದಲ್ಲಿಯೇ ಶೂಟ್​ ಮಾಡಿದ್ದಾಗಿ ವರದಿ ತಿಳಿಸಿತು.  ಇದರಿಂದ ಈ ಎನ್​ಕೌಂಟರ್​ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.

First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...