ಅಸ್ಸಾಂ: ಇದು ನಿಜಕ್ಕೂ ಅಚ್ಚರಿ ಹಾಗೂ ಆಘಾತವಾಗುವ ಸುದ್ದಿ (surprising and shocking news). ಜಗತ್ತಿನಲ್ಲಿ ಹೀಗೂ ನಡೆಯುತ್ತದೆಯಾ ಎಂದು ನೀವು ಪ್ರಶ್ನಿಸಬಹುದು. ಆದರೆ ವೈದ್ಯಕೀಯ ಲೋಕದಲ್ಲಿ (medical world) ಇದಕ್ಕೆ ಉತ್ತರ ಇದೆ. ಇದು ಹುಟ್ಟಿ ಕೇವಲ 10 ತಿಂಗಳು ತುಂಬಿರುವ ಗಂಡು ಮಗು. ಆದರೆ ಅದರ ಹೊಟ್ಟೆಯಲ್ಲಿ (Stomach) ಈಗ ಭ್ರೂಣಗಳು ಪತ್ತೆಯಾಗಿವೆ. ಅದೂ ಒಂದಲ್ಲ, ಬರೋಬ್ಬರಿ 3 ಭ್ರೂಣಗಳು (Fetuses) ಪತ್ತೆಯಾಗಿವೆ! ಜಗತ್ತಿನ ಅತೀ ವಿರಳ ಪ್ರಕರಣ ಇದು ಅಂತ ವೈದ್ಯರು (Doctors) ವಿಶ್ಲೇಷಿಸಿದ್ದು, ಇದೀಗ ಆ ಮೂರೂ ಭ್ರೂಣಗಳನ್ನು ಪುಟ್ಟ ಕಂದಮ್ಮನ ಹೊಟ್ಟೆಯಿಂದ ಹೊರಕ್ಕೆ ತೆಗೆದಿದ್ದಾರೆ. ಇದೀಗ ಪುಟ್ಟ ಮಗು ಎಂದಿನಂತೆ ಆರೋಗ್ಯವಾಗಿದೆ.
10 ತಿಂಗಳ ಗಂಡು ಶಿಶುವಿನ ಹೊಟ್ಟೆಯಲ್ಲಿ 3 ಭ್ರೂಣಗಳು
ಅಸ್ಸಾಂ ರಾಜ್ಯದಲ್ಲಿ ಇಂಥದ್ದೊಂದು ಆಶ್ಚರ್ಯಕರ ಘಟನೆ ನಡೆದಿದೆ. ದಿಬ್ರುಗಢ್ನ ಅಪೇಕ್ಷಾ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಕ್ರಿಯೆ ನಡೆದಿದ್ದು, ಪ್ರಪಂಚದಲ್ಲಿ ಈ ರೀತಿಯ ಒಂದು ಶಸ್ತ್ರಚಿಕಿತ್ಸೆ ಇನ್ನೂ ವರದಿಯಾಗಿದೆ. ಈ ಆಸ್ಪತ್ರೆಗೆ ದಾಖಲಾಗಿದ್ದ 10 ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿ 3 ಭ್ರೂಣಗಳು ಇದ್ದವು ಎನ್ನಲಾಗುದೆ. ಇದೀಗ ಆ ಮೂರು ಭ್ರೂಣಗಳನ್ನು ಮಗುವಿನ ಹೊಟ್ಟೆಯಿಂದ ಹೊರಕ್ಕೆ ತೆಗೆಯಲಾಗಿದೆ.
ತಜ್ಞ ವೈದ್ಯರ ತಂಡದಿಂದ ಯಶಸ್ವಿ ಶಸ್ತ್ರಚಿಕಿತ್ಸೆ
10 ತಿಂಗಳ ಈ ಗಂಡುಮಗು ಅಪೇಕ್ಷಾ ಆಸ್ಪತ್ರೆಗೆ ದಾಖಲಾಗಿತ್ತು. ಮಗುವಿನ ಹೊಟ್ಟೆ ದೊಡ್ಡದಾಗಿತ್ತು, ಅನಾರೋಗ್ಯದಿಂದ ಬಳಲುತ್ತಿರೋದ್ರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಕ ಡಾ. ಹೇಮಂತ, ಕೆಆರ್ ದತ್ತಾ, ಶಿಶುವೈದ್ಯೆ ಡಾ ಅರ್ಪಿತಾ ಗೊಗೊಯ್ ಬುರಾಗೊಹೈನ್, ರೇಡಿಯಾಲಜಿಸ್ಟ್ ಡಾ ಲಖಿ ಪಿಡಿ ಮಿಲಿ ಮತ್ತು ಅರಿವಳಿಕೆ ತಜ್ಞ ಡಾ ಅಭಿನವ್ ಪೊದ್ದಾರ್ ಮತ್ತು ಡಾ ಮೆಘಾ ಅವರ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ.
ಇದನ್ನೂ ಓದಿ: Viral News: 21 ದಿನದ ಹೆಣ್ಣು ಶಿಶುವಿನ ಹೊಟ್ಟೆಯಲ್ಲಿದ್ದವು 8 ಭ್ರೂಣಗಳು! ಇದು ನಿಮ್ಮನ್ನು ಬೆಚ್ಚಿ ಬೀಳಿಸುವ ಸುದ್ದಿ
ವೈದ್ಯರಿಗೆ ಸವಾಲಾಗಿದ್ದ ಪ್ರಕರಣ
ಮಗುವಿನ ಶಸ್ತ್ರಚಿಕಿತ್ಸೆಯ ರೋಗನಿರ್ಣಯ ಮತ್ತು ನಿರ್ಣಾಯಕ ಸ್ವರೂಪದ ವಿಷಯದಲ್ಲಿ ಇದು ಒಂದು ಸವಾಲಾಗಿತ್ತು. 3 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಮಗು ಚೇತರಿಸಿಕೊಂಡಿದೆ. ಇದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೇದಿಕೆಯಲ್ಲಿ ದಿಬ್ರುಗಢ್ ಪಟ್ಟಣ ಮತ್ತು ಅಸ್ಸಾಂನ ಹೆಸರನ್ನು ಸೇರಿಸುವ ಮೂಲಕ ತಂಡ ಅಪೇಕ್ಷಾ ಆಸ್ಪತ್ರೆಗೆ ಹೆಮ್ಮೆಯ ಹೆಸರನ್ನು ತರುವಂತೆ ಮಾಡಿದೆ.
ಮಗುವಿನ ಹೊಟ್ಟೆಯಲ್ಲಿನ ಭ್ರೂಣಗಳು ಬರುವುದು ಹೇಗೆ?
ವೈದ್ಯಕೀಯ ಪರಿಭಾಷೆಯಲ್ಲಿ, ಇದನ್ನು ಫೆಟಸ್-ಇನ್-ಫೀಟು (ಎಫ್ಐಎಫ್) ಎಂದು ಕರೆಯಲಾಗುತ್ತದೆ, ಇದು ಅಪರೂಪದ ಘಟಕವಾಗಿದ್ದು, ಅದರಲ್ಲಿ ಒಂದು ದೋಷಪೂರಿತ ಕಶೇರುಕ ಭ್ರೂಣವು ಅದರ ಅವಳಿ ದೇಹದೊಳಗೆ ಸುತ್ತುವರಿಯಲ್ಪಟ್ಟಿದೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ನ ಜರ್ನಲ್ ಹೇಳಿದೆ.
ಈ ಹಿಂದೆ ರಾಂಚಿಯಲ್ಲಿ ನಡೆದಿತ್ತು ಇಂಥದ್ದೇ ಘಟನೆ
ಕಳೆದ ವರ್ಷ 2022ರ ನವೆಂಬರ್ನಲ್ಲಿ ಅಪರೂಪದ ಪ್ರಕರಣವೊಂದರಲ್ಲಿ ಜಾರ್ಖಂಡ್ ರಾಜ್ಯದ ರಾಂಚಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಶಸ್ತ್ರಚಿಕಿತ್ಸೆಯ ವೇಳೆ 21 ದಿನದ ಮಗುವಿನ ಹೊಟ್ಟೆಯಲ್ಲಿ ಎಂಟು ಭ್ರೂಣಗಳು ಪತ್ತೆಯಾಗಿತ್ತು. ಭ್ರೂಣಗಳ ಗಾತ್ರವು ಮೂರು ಸೆಂಟಿಮೀಟರ್ಗಳಿಂದ ಐದು ಸೆಂಟಿಮೀಟರ್ಗಳವರೆಗೆ ಇತ್ತು. ಅವುಗಳು ಶಿಶುವಿನ ಹೊಟ್ಟೆಯಲ್ಲಿನ ಚೀಲದೊಳಗೆ ನೆಲೆಗೊಂಡಿತ್ತು.
ಇದನ್ನೂ ಓದಿ: Kajal Aggarwal: ಮುದ್ದಾದ ಮಗನ ಫೋಟೋ ಹಂಚಿಕೊಂಡ ನಟಿ ಕಾಜಲ್ ಅಗರ್ವಾಲ್
ಅಪರೂಪದಲ್ಲೇ ಅಪರೂಪದ ಪ್ರಕರಣ
"ಇದುವರೆಗೆ ಲಭ್ಯವಿರುವ ಪೇಪರ್ಗಳು ಮತ್ತು ಜರ್ನಲ್ಗಳ ಪ್ರಕಾರ, ಹೆಚ್ಚಿನ ಎಫ್ಐಎಫ್ ಪ್ರಕರಣಗಳಲ್ಲಿ ಒಂದು ಭ್ರೂಣವು ವರದಿಯಾಗಿದೆ. ಎಂಟು ಭ್ರೂಣಗಳ ಪ್ರಕರಣವು ಎಲ್ಲಿಯೂ ವರದಿಯಾಗಿಲ್ಲ" ಎಂದು ಡಾ ಇಮ್ರಾನ್ ಹೇಳಿದ್ದಾರೆ. ಎಫ್ಐಎಫ್ ಬಹಳ ಅಪರೂಪ ಮತ್ತು ಇದು ಐದು ಲಕ್ಷ ಜೀವಂತ ಜನನಗಳಲ್ಲಿ ಒಂದರಲ್ಲಿ ಸಂಭವಿಸುತ್ತದೆ ಎಂದು ಅವರು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ