ಢಾಕಾದ ಬುರಿಗಂಗಾ ನದಿಯಲ್ಲಿ ದೋಣಿಗೆ ಹಡಗು ಡಿಕ್ಕಿ ; ಮೂವರು ಮಕ್ಕಳು ಸೇರಿದಂತೆ 28 ಜನರ ಸಾವು

ಈವರೆಗೆ 18 ಪುರುಷರು, 7 ಮಹಿಳೆಯರು ಹಾಗೂ ಮೂವರು ಮಕ್ಕಳ ಶವಗಳನ್ನು ಸಿಕ್ಕಿವೆ ಎಂದು ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ಕರ್ತವ್ಯ ಅಧಿಕಾರಿ ತಿಳಿಸಿದ್ದಾರೆ

news18-kannada
Updated:June 29, 2020, 3:53 PM IST
ಢಾಕಾದ ಬುರಿಗಂಗಾ ನದಿಯಲ್ಲಿ ದೋಣಿಗೆ ಹಡಗು ಡಿಕ್ಕಿ ; ಮೂವರು ಮಕ್ಕಳು ಸೇರಿದಂತೆ 28 ಜನರ ಸಾವು
ಸಾಂದರ್ಭಿಕ ಚಿತ್ರ
  • Share this:
ಢಾಕಾ(ಜೂನ್.29): ಬುರಿಗಂಗಾ ನದಿಯಲ್ಲಿ 100 ಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೋಣಿಗೆ ಹಡಗು ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ 28 ಜನರು ಸಾವನ್ನಪ್ಪಿರುವ ಘಟನೆ  ನಡೆದಿದೆ. ಹಲವರು ಕಾಣೆಯಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿವೆ.

ಬೆಳಿಗ್ಗೆ 9: 30 ರ ಸುಮಾರಿಗೆ ಢಾಕಾದ ಶ್ಯಾಂಬಜಾರ್ ಪ್ರದೇಶದ ಬಳಿ ಈ ಘಟನೆ ನಡೆದಿದೆ ಎಂದು ಅಗ್ನಿಶಾಮಕ ಸೇವಾ ನಿಯಂತ್ರಣ ಕೊಠಡಿ ಅಧಿಕಾರಿ ರೋಜಿನಾ ಇಸ್ಲಾಂ ಅವರನ್ನು ಉಲ್ಲೇಖಿಸಿ ಬಿಡಿನ್ಯೂಸ್ 24 ಡಾಟ್​​ ಕಾಮ್​​​ ವರದಿ ಮಾಡಿದೆ.

ಈವರೆಗೆ 18 ಪುರುಷರು, 7 ಮಹಿಳೆಯರು ಹಾಗೂ ಮೂವರು ಮಕ್ಕಳ ಶವಗಳನ್ನು ಸಿಕ್ಕಿವೆ  ಎಂದು ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ಕರ್ತವ್ಯ ಅಧಿಕಾರಿ ಶಹಾದತ್ ಹುಸೇನ್ ತಿಳಿಸಿದ್ದಾರೆ ಆದರೆ ಸಿಕ್ಕಿರುವ ಶವಗಳ ಗುರುತು ಮಾತ್ರ ಪತ್ತೆಯಾಗಿಲ್ಲ.

ಮುನ್ಶಿಗಂಜ್‌ನಿಂದ ಡಾಕಾಗೆ ಬರುತ್ತಿದ್ದ ದೋಣಿ ಮಾರ್ನಿಂಗ್ ಬರ್ಡ್ ಸದರ್ಘಾಟ್ ಉಡಾವಣಾ ಟರ್ಮಿನಲ್ ಬಳಿ ಮತ್ತೊಂದು ಮೊಯೂರ್ -2 ನಿಂದ ಡಿಕ್ಕಿ ಹೊಡೆದು ದೊಣಿ ನದಿಯಲ್ಲಿ ಮುಳುಗಿತು ಎಂದು ಹುಸೇನ್ ಹೇಳಿದ್ದಾರೆ.

ಇದನ್ನೂ ಓದಿ : Karachi Terror Attack: ಕರಾಚಿ ಸ್ಟಾಕ್​​ ಎಕ್ಸ್​ಚೇಂಜ್​ ಕೇಂದ್ರದ ಮೇಲೆ ಉಗ್ರರ ದಾಳಿ​: ಒಂಬತ್ತು ಸಾವು

ಪೊಲೀಸರ ಪ್ರಕಾರ, ಮಾರ್ನಿಂಗ್ ಬರ್ಡ್  100 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎನ್ನಲಾಗಿದೆ. ಕೆಲವರು ನದಿಯಲ್ಲಿ ಈಜಿ ದಡ ಸೇರಿದರು. ಹಲವರು ಮುಳುಗಿದ್ದಾರೆ ಅಥವಾ ಇನ್ನೂ ಕಾಣೆಯಾಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
ಬಾಂಗ್ಲಾದೇಶ ಒಳನಾಡಿನ ಜಲ ಸಾರಿಗೆ ಪ್ರಾಧಿಕಾರ (ಬಿಐಡಬ್ಲ್ಯೂಟಿಎ), ಅಗ್ನಿಶಾಮಕ ಸೇವೆ, ನದಿ ಪೊಲೀಸ್, ಕೋಸ್ಟ್ ಗಾರ್ಡ್ ಮತ್ತು ಬಾಂಗ್ಲಾದೇಶದ ನೌಕಾಪಡೆಯ ಡೈವಿಂಗ್ ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ಢಾಕಾದ ಟ್ರಿಬ್ಯೂನ್ ವರದಿ ಮಾಡಿದೆ.
First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading