HOME » NEWS » National-international » 3 ARRESTED FOR RAPING 30 YEAR OLD WOMAN IN PARKING LOT OF DELHI HOSPITAL LG

ನವದೆಹಲಿ: ಆಸ್ಪತ್ರೆಯ ಪಾರ್ಕಿಂಗ್ ಏರಿಯಾದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ಆಕೆ ನೀಡಿರುವ ದೂರಿನ ಅನ್ವಯ, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮನೀಶ್(22), ಪ್ರವೀಣ್ ತಿವಾರಿ(24) ಮತ್ತು ಕನ್ವರ್​ ಪಾಲ್(33) ಎಂದು ಗುರುತಿಸಲಾಗಿದೆ.

news18-kannada
Updated:November 3, 2020, 12:58 PM IST
ನವದೆಹಲಿ: ಆಸ್ಪತ್ರೆಯ ಪಾರ್ಕಿಂಗ್ ಏರಿಯಾದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ(ನ.03): ದೆಹಲಿಯ ರೋಹಿಣಿ ಪ್ರದೇಶದಲ್ಲಿ ಆಸ್ಪತ್ರೆಯೊಂದರ ಪಾರ್ಕಿಂಗ್ ಲಾಟ್​​ನಲ್ಲಿ 30 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವರದಿ ಪ್ರಕಾರ, ಮೂವರು ಆರೋಪಿಗಳಲ್ಲಿ ಓರ್ವ ಸೆಕ್ಯೂರಿಟಿ ಗಾರ್ಡ್​ ಆಗಿದ್ದರೆ, ಮತ್ತಿಬ್ಬರು ಮಾಜಿ ಬೌನ್ಸರ್​​ಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣ ಸಂಬಂಧ ಸಂತ್ರಸ್ತೆ ಪೊಲೀಸರ ಬಳಿ ದೂರು ದಾಖಲಿಸಿದ್ದಾಳೆ. ಅಕ್ಟೋಬರ್​ 30ರ ರಾತ್ರಿ ವೇಳೆ ರೋಹಿಣಿಯ ಬಾಬಾ ಸಾಹೇಬ್ ಭೀಮ್​ ರಾವ್ ಅಂಬೇಡ್ಕರ್​ ಆಸ್ಪತ್ರೆಯ ಪಾರ್ಕಿಂಗ್ ಏರಿಯಾದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಾಗಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಪೊಲೀಸರ ಪ್ರಕಾರ, ಅತ್ಯಾಚಾರ ಸಂತ್ರಸ್ತೆ ಆಸ್ಪತ್ರೆಯಲ್ಲಿ ದಾಖಲಾಗಿರುವ ತಮ್ಮ ಸಂಬಂಧಿಕರೊಬ್ಬರನ್ನು ನೋಡಿಕೊಳ್ಳಲು ಬಂದಿದ್ದು, ಅಲ್ಲಿಯೇ ವಾಸ್ತವ್ಯ ಹೂಡಿದ್ದರು ಎಂದು ತಿಳಿದು ಬಂದಿದೆ.

Karnataka Weather: ಕರಾವಳಿಯಲ್ಲಿ ಇಂದು ತುಂತುರು ಮಳೆ; ನ. 5ರಿಂದ ಮಲೆನಾಡು, ಕೊಡಗು, ಹಾಸನದಲ್ಲಿ ಭಾರೀ ಮಳೆ

ಅತ್ಯಾಚಾರ ಎಸಗಿದ ಮಾಜಿ ಬೌನ್ಸರ್​​ಗಳು ಹಾಗೂ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್​ ತನಗೆ ಬೆದರಿಕೆ ಹಾಕಿದ್ದರು ಎಂದು ಮಹಿಳೆ ಆರೋಪಿಸಿದ್ದಾಳೆ.

ಆಕೆ ನೀಡಿರುವ ದೂರಿನ ಅನ್ವಯ, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮನೀಶ್(22), ಪ್ರವೀಣ್ ತಿವಾರಿ(24) ಮತ್ತು ಕನ್ವರ್​ ಪಾಲ್(33) ಎಂದು ಗುರುತಿಸಲಾಗಿದೆ.

ಇನ್ನು, ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ.
Published by: Latha CG
First published: November 3, 2020, 12:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories