ಅಫಘಾನಿಸ್ತಾನದ ಮೂವರು ಉಗ್ರರನ್ನು ಹೊಡೆದುರುಳಿಸಿದ ಪಾಕಿಸ್ತಾನ ಭದ್ರತಾ ಪಡೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಲಾಹೋರ್ ನಿಂದ ಸುಮಾರು 70 ಕಿಮೀ ದೂರದಲ್ಲಿರುವ ಬಾಡಿಗೆ ಮನೆಯಲ್ಲಿದ್ದಾರೆ ಮತ್ತು ಸೇನಾ ಪಡೆಗಳ ಮೇಲೆ ದಾಳಿ ಮಾಡಲು ಯೋಜಿಸಿದ್ದಾರೆ ಎಂದು ನಂಬಲರ್ಹ ಮೂಲಗಳಿಂದ ಮಾಹಿತಿಯನ್ನು ಪಡೆದರು.

  • Share this:

ಪಾಕಿಸ್ತಾನದ ಭದ್ರತಾ ಪಡೆಗಳು ಭಾನುವಾರ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಸಂಘರ್ಷದ ವೇಳೆ ಅಫ್ಘಾನಿಸ್ತಾನ ಮೂಲದ ಮೂವರು ಭಯೋತ್ಪಾದಕರನ್ನು ಕೊಂದಿವೆ ಎಂದು ಸೈನ್ಯದ ಅಧಿಕಾರಿಗಳು ತಿಳಿಸಿದ್ದಾರೆ. ಅಫ್ಘಾನ್ ಭಯೋತ್ಪಾದಕರು ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಮತ್ತು ಜಮಾತ್-ಉಲ್-ಅಹ್ರಾರ್ (ಜುಎ) ಗೆ ಸೇರಿದವರು ಎಂದು ಹೇಳಲಾಗಿದೆ.


"ಇಂದು ಪಂಜಾಬ್ ಪೋಲಿಸ್​ ಭಯೋತ್ಪಾದನಾ ನಿಗ್ರಹ ವಿಭಾಗ (ಸಿಟಿಡಿ)ಕ್ಕೆ, ನಿಷೇಧಿತ ಸಂಸ್ಥೆಯಾದ ಟಿಟಿಪಿ/ಜುಎಯ ಸದಸ್ಯರಾದ ಗುಲ್ಶನ್ ಬಾಬರ್ ಅಬಾಡಿ, ಫಿರೋಜ್ವಾಲಾ, ಲಾಹೋರ್ ನಿಂದ ಸುಮಾರು 70 ಕಿಮೀ ದೂರದಲ್ಲಿರುವ ಬಾಡಿಗೆ ಮನೆಯಲ್ಲಿದ್ದಾರೆ ಮತ್ತು ಸೇನಾ ಪಡೆಗಳ ಮೇಲೆ ದಾಳಿ ಮಾಡಲು ಯೋಜಿಸಿದ್ದಾರೆ ಎಂದು ನಂಬಲರ್ಹ ಮೂಲಗಳಿಂದ ಮಾಹಿತಿಯನ್ನು ಪಡೆದರು. ಶಿಯಾ ಸಮುದಾಯದವರು ವಾಸಿಸುವ, ಸೂಕ್ಷ್ಮ ಪ್ರದೇಶ ಮತ್ತು ಶಿಯಾ ಸಮುದಾಯಕ್ಕೆ ಸೇರಿದ ವ್ಯಕ್ತಿತ್ವಗಳಾದ್ದರಿಂದ ಬಹು ಎಚ್ಚರಿಕೆಯಿಂದ ಕಾರ್ಯಚರಣೆ ನಡೆಸಲಾಯಿತು ಎಂದು CTD ಹೇಳಿಕೆಯಲ್ಲಿ ತಿಳಿಸಿದೆ. ಈ ಮಾಹಿತಿಯ ಮೇರೆಗೆ, ಸಿಟಿಡಿ ತಂಡವು ಭಾನುವಾರ ಸ್ಥಳಕ್ಕೆ ದಾಳಿ ಮಾಡಿ ಉಗ್ರರನ್ನು ಹೊಡೆದುರುಳಿಸಿದೆ.

"ಸಿಟಿಡಿ ಮತ್ತು ಪೊಲೀಸ್ ಸಿಬ್ಬಂದಿ ಭಯೋತ್ಪಾದಕರನ್ನು ಸುತ್ತುವರೆದು ಶರಣಾಗುವಂತೆ ಕೇಳಿದಾಗ ಅವರು ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡು ಹಾರಿಸಿದರು. ಸಿಟಿಡಿ ತಂಡ ಮತ್ತು ಪೊಲೀಸರು  ಪ್ರತಿ ಗುಂಡು ಹಾರಿಸಲೇ ಬೇಕಾಯಿತು, ಎಹ್ಸಾನುಲ್ಲಾ, ನೈಮತುಲ್ಲಾ ಮತ್ತು ಅಬ್ದುಲ್ ಸಲಾಂ ಎಂದು ಗುರುತಿಸಲ್ಪಟ್ಟ ಮೂವರು ಭಯೋತ್ಪಾದಕರನ್ನು ಕೊಲ್ಲಲಾಯಿತು. ಮೂವರೂ ಅಫ್ಘಾನ್ ಪ್ರಜೆಗಳು ಮತ್ತು ಟಿಟಿಪಿ ಮತ್ತು ಜುಎಗೆ ಸೇರಿದವರು "ಎಂದು ಸೈನ್ಯದ ಮೂಲಗಳು ಹೇಳಿವೆ.


ಇದನ್ನು ಓದಿ: ತ್ರಿಪುರ: 14 ಟಿಎಂಸಿ ನಾಯಕರ ಬಂಧನ, ಬಿಡುಗಡೆ; ಬಿಜೆಪಿಯಿಂದ ಮಾರಣಾಂತಿಕ ದಾಳಿ ಆರೋಪ

ಅವರಿಂದ ಒಂದು ಆತ್ಮಹತ್ಯೆ ಬಾಂಬರ್​ ಬಳಸುವ ಬಟ್ಟೆ, ಮೂರು ಹ್ಯಾಂಡ್ ಗ್ರೆನೇಡ್, ಎರಡು ಕಲಾಶ್ನಿಕೋವ್ ರೈಫಲ್​, ಎರಡು ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಟಿಡಿ ಹೇಳಿದೆ. ಲಾಹೋರ್‌ನ ಸಿಟಿಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ತನಿಖೆ ಆರಂಭಿಸಲಾಗಿದೆ ಎಂದು ಅದು ಹೇಳಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.


First published: