ನವದೆಹಲಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸರ್ವೋಚ್ಚ ನಾಯಕ ಶರದ್ ಪವಾರ್ ಅವರು ಮಂಗಳವಾರ ದೆಹಲಿಯಲ್ಲಿ ಕಾಂಗ್ರೆಸ್ಯೇತರ ವಿರೋಧ ಪಕ್ಷಗಳ ಸಭೆ ನಡೆಸಲಿದ್ದಾರೆ. ಎರಡು ವಾರಗಳಲ್ಲಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಎರಡನೇ ಭೇಟಿಯ ಒಂದು ದಿನದ ನಂತರ ‘ಮಿಷನ್ 2024 ಅಡಿಯಲ್ಲಿ ಬಿಜೆಪಿ ವಿರುದ್ಧ ಜಂಟಿ ವಿರೋಧದ ದಾಳಿಯ ವದಂತಿಗಳಿಗೆ ಈ ಸಭೆ ಉತ್ತೇಜನ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೀತಿಗಳ ವಿರುದ್ಧ 2018 ರಲ್ಲಿ ಯಶ್ವಂತ್ ಸಿನ್ಹಾ ರಚಿಸಿದ ರಾಷ್ಟ್ರ ಮಂಚ್ ಸಭೆ ದೆಹಲಿಯಲ್ಲಿ ಸಂಜೆ 4 ಗಂಟೆಗೆ ಪವಾರ್ ಅವರ ನಿವಾಸದಲ್ಲಿ ನಡೆಯಲಿದೆ.
ಪ್ರಶಾಂತ್ ಕಿಶೋರ್ ಹಾಗೂ ಶರದ್ ಪವಅರ್ ಅವರು ಸೋಮವಾರ ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಕಳೆದ ಜೂನ್ 11ರಂದು ಎನ್‌ಸಿಪಿ ನಾಯಕರು ಮುಂಬೈ ನಿವಾಸದಲ್ಲಿ ಪ್ರಶಾಂತ್ ಕಿಶೋರ್ ಜೊತೆ ಸಭೆ ನಡೆಸಿದ್ದರು.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆಲುವಿಗೆ ರಣತಂತ್ರ ಹೆಣೆದ ಕಿಶೋರ್‌ಗೆ ಯಶ್ವಂತ್ ಸಿನ್ಹಾ ಅವರನ್ನು ಹತ್ತಿರವೆಂದು ಪರಿಗಣಿಸಲಾಗಿದೆ. ಇದಲ್ಲದೆ, ಟಿಎಂಸಿ ಮುಖ್ಯಸ್ಥ ಮಮತಾ ಬ್ಯಾನರ್ಜಿ ಮಂಚ್ಗೆ ಅನುಮೋದನೆ ನೀಡಿದ್ದರು. ಈ ಹಿಂದೆ ಟಿಎಂಸಿ ನಾಯಕ ದಿನೇಶ್ ತ್ರಿವೇದಿ ಅವರು ಮಂಚ್‌ನ ಹಿಂದಿನ ಸಭೆಗಳಲ್ಲಿ ಭಾಗವಹಿಸಿದ್ದರು.
ಬಂಗಾಳದಲ್ಲಿ ಚುನಾವಣಾ ಗೆಲುವು ಪ್ರತಿಪಕ್ಷಗಳಿಗೆ ಬಿಜೆಪಿ ಸರಣಿ ಜಯದ ವಿರುದ್ಧ ಹೋರಾಡುವ ವಿಶ್ವಾಸವನ್ನು ತಂದಿದೆ. ಹಲವಾರು ಪಕ್ಷಗಳು ಬಿಜೆಪಿ ಅಥವಾ ಕಾಂಗ್ರೆಸ್ ಹೊರತುಪಡಿಸಿ ಮೈತ್ರಿಗೆ ಒಲವು ಸೂಚಿಸಿವೆ ಎಂದು ಮೂಲಗಳು ತಿಳಿಸಿವೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಜಯ ಗಳಿಸಿದ ಬೆನ್ನಲ್ಲೇ, ತಮ್ಮನ್ನು ವಿರೋಧ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ನೋಡಿದ್ದೀರಾ ಎಂದು ಬ್ಯಾನರ್ಜಿ ಕೇಳಿದಾಗ ಇತರ ವಿರೋಧ ಪಕ್ಷಗಳ ನಾಯಕರು ಎಲ್ಲರೂ ಒಟ್ಟಾಗಿ ಈ ಬಗ್ಗೆ ಯೋಚಿಸುತ್ತೇವೆ. ನಾವು 2024 ರ ಚುನಾವಣೆ ಎದುರಿಸಬೇಕು. ಆದರೆ ಅದಕ್ಕೂ ಮೊದಲು ಕೋವಿಡ್ ವಿರುದ್ಧ ಹೋರಾಡೋಣ ಎಂದು ಹೇಳಿದ್ದಾರೆ.
ಕಿಶೋರ್ ಮತ್ತು ಪವಾರ್ ಸಭೆ ಕಾಕತಾಳೀಯವಾಗಿ ನಡೆಯುತ್ತಿರುವ ಸಮಯದಲ್ಲಿ ಶಿವಸೇನೆ ಉನ್ನತ ನಾಯಕರು ಪಿಎಂ ನರೇಂದ್ರ ಮೋದಿ ಅವರೊಂದಿಗಿನ ಸಂಬಂಧವು ರಾಜಕೀಯವಾಗಿ ಒಟ್ಟಿಗೆ ಇಲ್ಲದಿದ್ದರೂ ಸಹ ಮುರಿದುಹೋಗಿಲ್ಲ ಎಂದು ದಾಖಲಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ ದೂರವಾಗಿದ್ದ ಶಿವಸೇನೆ ಇದೀಗ ಮತ್ತೆ ತನ್ನ ಹಳೆಯ ಗೆಳೆತನಕ್ಕೆ ಮನ್ನಣೆ ನೀಡುವ ಲಕ್ಷಣ ಗೋಚರವಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಳಿಕ ಈ ಸಾಧ್ಯತೆ ಮತ್ತಷ್ಟು ದಟ್ಟವಾದಂತೆ ಭಾಸವಾಗುತ್ತಿದೆ.
ಇದನ್ನು ಓದಿ: ಬಿಜೆಪಿ ಜೊತೆ ಮೈತ್ರಿ ಸಾಧಿಸಿ ನಮ್ಮನ್ನು ಉಳಿಸಿ; ಸಿಎಂ ಉದ್ಧವ್ ಠಾಕ್ರೆಗೆ ಶೀವಸೇನೆ ಶಾಸಕನ ಪತ್ರ!
ಮಹಾರಾಷ್ಟ್ರದ ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡುವ ಲಕ್ಷಣಗಳು ಗೋಚರವಾಗುತ್ತಿವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂಬ ಎಂಪಿಸಿಸಿ ಅಧ್ಯಕ್ಷ ನಾನಾ ಪಟೋಲೆ ಹೇಳಿಕೆಗೆ, ಉದ್ಧವ್ ಠಾಕ್ರೆ ಗರಂ ಆಗಿರುವುದು ಈ ವಾದಕ್ಕೆ ಪುಷ್ಠಿ ನೀಡುತ್ತಿದೆ. ಇದರ ನಡುವೆ ಶರದ್ ಪವಾರ್ ಅವರು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಹಾಗೂ ವಿರೋಧ ಪಕ್ಷಗಳ ಸಭೆ ನಡೆಸುತ್ತಿರುವುದು ರಾಜಕೀಯ ಕುತೂಹಲ ಕೆರಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ