Haj 2023: ಹಜ್ ಯಾತ್ರೆಗೆ ಕಾಲ್ನಡಿಗೆಯಲ್ಲೇ ಹೊರಟ ಕೇರಳಿಗ! ಬರೋಬ್ಬರಿ 280 ದಿನ ನಡೆಯಬೇಕಂತೆ!

ಮುಸ್ಲಿಂ ಬಾಂಧವರು ಮಕ್ಕಾದಲ್ಲಿರುವ ಹಜ್ ಯಾತ್ರೆಗೆ ಹೋಗಲು ಇಡೀ ವಿಶ್ವದಾದ್ಯಂತದಿಂದ ಬರುವುದನ್ನು ನಾವು ನೋಡುತ್ತೇವೆ. ಕೆಲವರು ವಿಮಾನದಲ್ಲಿ ಬಂದರೆ, ಕೆಲವರು ಬೇರೆ ಬೇರೆ ಸಾರಿಗೆ ವ್ಯವಸ್ಥೆಗಳ ಮೂಲಕ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆದರೆ ಕೇರಳದ 29 ವರ್ಷದ ವ್ಯಕ್ತಿಯು ಈ ಬಾರಿಯ ಹಜ್ 2023 ಯಾತ್ರೆಗೆ ನಡೆದುಕೊಂಡು ಹೋಗಲು ನಿರ್ಧರಿಸಿ 8,640 ಕಿಲೋ ಮೀಟರ್ ಕಾಲ್ನಡಿಗೆಯ ಮಕ್ಕಾ ಪ್ರಯಾಣವನ್ನು ಶುರು ಮಾಡಿದ್ದಾರೆ.

ಶಿಹಾಬ್ ಚೋಟ್ಟೂರ್

ಶಿಹಾಬ್ ಚೋಟ್ಟೂರ್

  • Share this:
ನಮ್ಮಲ್ಲಿ ಜನರು ಅನೇಕ ಧರ್ಮಗಳನ್ನು (Religion) ಆಚರಣೆ ಮಾಡುತ್ತಿದ್ದರೂ ಸಹ ಆ ಧರ್ಮದಲ್ಲಿರುವ ನಂಬಿಕೆ ಮಾತ್ರ ಒಂದೇ ಅಂತ ಹೇಳಬಹುದು. ದೇವರಿಗೆ ಕಾಲ್ನಡಿಗೆಯಲ್ಲಿಹೋಗಿ ದೇವರಿಗೆ ಪೂಜೆ ಸಲ್ಲಿಸುವುದು ಬಹುತೇಕವಾಗಿ ಎಲ್ಲಾ ಧರ್ಮದವರು ಮಾಡುವಂತಹ ಒಂದು ಭಕ್ತಿಯ (Devotion) ಕೆಲಸ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಜನರು ದಸರಾ ಹಬ್ಬಕ್ಕೆ ದೂರ ದೂರದ ದೇವಸ್ಥಾನಗಳಿಗೆ ತಾವು ಎಷ್ಟೋ ದಿನಗಳ ಕಾಲದವರೆಗೆ ಬಿಸಿಲು, ಮಳೆ ಮತ್ತು ಚಳಿ ಎನ್ನದೆ ಕಾಲ್ನಡಿಗೆಯಲ್ಲಿ ಹೋಗಿ ಪೂಜೆ ಸಲ್ಲಿಸಿ ಬರುವುದನ್ನು ನಾವು ನೋಡುತ್ತೇವೆ. ಮುಸ್ಲಿಂ (Muslim) ಬಾಂಧವರು ಮೆಕ್ಕಾದಲ್ಲಿರುವ ಹಜ್ ಯಾತ್ರೆಗೆ ಹೋಗಲು (Haj 2022) ಇಡೀ ವಿಶ್ವದಾದ್ಯಂತದಿಂದ ಬರುವುದನ್ನು ನಾವು ನೋಡುತ್ತೇವೆ.

ಹಜ್ 2023 ಯಾತ್ರೆಗೆ ನಡೆದುಕೊಂಡು ಹೋಗಲು ನಿರ್ಧರಿಸಿದ ವ್ಯಕ್ತಿ
ಕೆಲವರು ವಿಮಾನದಲ್ಲಿ ಬಂದರೆ, ಕೆಲವರು ಬೇರೆ ಬೇರೆ ಸಾರಿಗೆ ವ್ಯವಸ್ಥೆಗಳ ಮೂಲಕ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆದರೆ ಕೇರಳದ 29 ವರ್ಷದ ವ್ಯಕ್ತಿಯು ಈ ಬಾರಿಯ ಹಜ್ 2023 ಯಾತ್ರೆಗೆ ನಡೆದುಕೊಂಡು ಹೋಗಲು ನಿರ್ಧರಿಸಿ 8,640 ಕಿಲೋ ಮೀಟರ್ ಕಾಲ್ನಡಿಗೆಯ ಮೆಕ್ಕಾ ಪ್ರಯಾಣವನ್ನು ಶುರು ಮಾಡಿದ್ದಾರೆ.

ಇದನ್ನೂ ಓದಿ: Airports: ಚೆಕ್-ಇನ್ ಕೌಂಟರ್​ಗಳಲ್ಲಿ ಪ್ರಯಾಣಿಕರಿಗೆ ಶುಲ್ಕ ನೀಡಬೇಕಾ? ವಿಮಾನಯಾನ ಸಂಸ್ಥೆಗಳಿಗೆ ಸರ್ಕಾರ ಹೇಳಿದ್ದೇನು?

ಸೂಪರ್ ಮಾರ್ಕೆಟ್ ಸ್ಟೋರ್ ನಡೆಸುತ್ತಿರುವ ಶಿಹಾಬ್ ಚೋಟ್ಟೂರ್ ಜೂನ್ 2 ರಂದು ಕೇರಳದ ಮಲಪ್ಪುರಂ ಜಿಲ್ಲೆಯ ಕೊಟ್ಟಕ್ಕಲ್ ಬಳಿಯ ಅತ್ತಾವನಾಡ್ ನಿಂದ ತಮ್ಮ ಈ ಅದ್ಭುತ ಪ್ರಯಾಣವನ್ನು ಪ್ರಾರಂಭಿಸಿದರು. ಪ್ರತಿದಿನ, ಅವರು ಕನಿಷ್ಠ ಎಂದರೂ 25 ಕಿಲೋ ಮೀಟರ್ ನಡೆಯುತ್ತಾರೆ ಅಂತ ಹೇಳಬಹುದು. ಭಾರತ, ಪಾಕಿಸ್ತಾನ, ಇರಾನ್, ಇರಾಕ್ ಮತ್ತು ಕುವೈತ್ ನಲ್ಲಿ ಸಂಚರಿಸಿದ ನಂತರ ಅವರು 2023 ರಲ್ಲಿ ಹಜ್ ಯಾತ್ರೆಗಾಗಿ ಮೆಕ್ಕಾವನ್ನು ತಲುಪಲಿದ್ದಾರೆ. ಅಂತಿಮವಾಗಿ ಫೆಬ್ರವರಿ 2023 ರ ಆರಂಭದಲ್ಲಿ ಸೌದಿ ಅರೇಬಿಯಾವನ್ನು ತಲುಪಲಿದ್ದಾರೆ. ಸೌದಿ ಅರೇಬಿಯಾಕ್ಕೆ ಆಗಮಿಸಿದ ನಂತರ ಅವರು ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಲಿದ್ದಾರೆ. 280 ದಿನಗಳಲ್ಲಿ ಇಡೀ ದೂರವನ್ನು ಕ್ರಮಿಸಲು ಯೋಜಿಸಿದ್ದಾರೆ.

ನಡೆದುಕೊಂಡು ಹೋಗುವುದಕ್ಕೆ ಪ್ರೇರಣೆ ಯಾರು?
ಶಿಹಾಬ್, ಪ್ರಾಚೀನ ಕಾಲದಿಂದಲೂ ಕೇರಳದಿಂದ ಮೆಕ್ಕಾದ ಪವಿತ್ರ ಭೂಮಿಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುವ ಜನರ ಕಥೆಗಳನ್ನು ಕೇಳಿ ಬೆಳೆದವರು, ಇದು ಮೆಕ್ಕಾಗೆ ಅವರು ಸಹ ನಡೆದುಕೊಂಡು ಹೋಗುವುದಕ್ಕೆ ಪ್ರೇರಣೆ ಆಯಿತು ಮತ್ತು ಇದು ಅವರ ಜೀವನದ ಒಂದು ದೊಡ್ಡ ಕನಸಾಗಿ ಬೆಳೆಯಿತು. ಅದನ್ನು ಈಗ ನನಸು ಮಾಡಿಕೊಳ್ಳಲು ಪ್ರಯಾಣ ಶುರು ಮಾಡಿದ್ದಾರೆ ಅಂತ ಹೇಳಬಹುದು.

ಶಿಹಾಬ್ ಪ್ರಸ್ತುತ ಕೇರಳದಿಂದ ಮೆಕ್ಕಾಗೆ ಈ ಪ್ರಯಾಣದಲ್ಲಿ ತನ್ನ ಮೂವರು ಸ್ನೇಹಿತರೊಂದಿಗೆ ಹೋಗಿದ್ದಾರೆ. ಕರ್ನಾಟಕದ ಆರು ಸದಸ್ಯರ ತಂಡವು ಅವರ ಪ್ರಯಾಣವನ್ನು ಸುಗಮಗೊಳಿಸಲು ಅವರನ್ನು ಹಿಂಬಾಲಿಸುತ್ತಿದೆ. ಈ ಪ್ರಯಾಣಕ್ಕಾಗಿ ಸಂಶೋಧನೆ ಮತ್ತು ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೆ ಸುಮಾರು ಒಂಬತ್ತು ತಿಂಗಳುಗಳು ತೆಗೆದುಕೊಂಡವು ಮತ್ತು ಅವರ ಪ್ರಯಾಣಕ್ಕಾಗಿ ವೀಸಾ  ಸಿದ್ಧಪಡಿಸುವುದು ಅತ್ಯಂತ ಕಷ್ಟದ ಭಾಗವಾಗಿತ್ತು ಎಂದು ವರದಿಯಾಗಿದೆ.

ಹಜ್ ಯಾತ್ರೆಯ ಕುರಿತು ಶಿಹಾಬ್ ಏನು ಹೇಳಿದ್ದಾರೆ 
"ಹಜ್ ಯಾತ್ರೆಯ ಭಾಗವಾಗಿ ಸರಣಿ ವಿಧಿಗಳನ್ನು ನೆರವೇರಿಸಲು ನಾನು ತುಂಬಾನೇ ಉತ್ಸುಕನಾಗಿದ್ದೇನೆ. ಪ್ರಾಮಾಣಿಕವಾಗಿ ಹಜ್ ಯಾತ್ರೆಯನ್ನು ನೆರವೇರಿಸುವುದು, ಕೇವಲ ಅಲ್ಲಾಹನಿಗಾಗಿ ಮಾತ್ರ. ನಾನು ಮೆಕ್ಕಾದಿಂದ ಶುದ್ಧ ಆತ್ಮವಾಗಿ ಹಿಂತಿರುಗುತ್ತೇನೆ ಎಂದು ಆಶಿಸುತ್ತೇನೆ" ಎಂದು ಶಿಹಾಬ್ ಹೇಳಿದ್ದಾರೆ.

ಇದನ್ನೂ ಓದಿ:  Golden VISA: ಹೆಚ್ಚಿನ ಭಾರತೀಯರು ಈಗ UAEನಲ್ಲಿ ಮನೆ ಖರೀದಿಸಲು ಮುಂದಾಗುತ್ತಿದ್ದಾರಂತೆ, ಕಾರಣ ಇಷ್ಟೇ

ಶಿಹಾಬ್ ಅವರನ್ನು ಸ್ವಾಗತಿಸಲು ಮತ್ತು ಅವರನ್ನು ನೋಡಲು ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಗುಂಪು ಗೂಡುವುದರೊಂದಿಗೆ ಆಯಾ ರಾಜ್ಯಗಳನ್ನು ಹಾದು ಹೋಗುವಾಗ ಅವರು ಉತ್ಸಾಹಭರಿತ ಸ್ವಾಗತವನ್ನು ಪಡೆಯುತ್ತಿದ್ದಾರೆ. ಎರಡು ವರ್ಷಗಳ ಅಂತರದ ನಂತರ, ಸೌದಿ ಅರೇಬಿಯಾ ಈ ವರ್ಷ 1 ಮಿಲಿಯನ್ ಮುಸ್ಲಿಮರಿಗೆ ಹಜ್ ಯಾತ್ರೆಗೆ ಅನುಮತಿ ನೀಡಿದೆ. 2020 ಮತ್ತು 2021 ರಲ್ಲಿ, ಹಜ್ ಯಾತ್ರೆ ಕೇವಲ ಸೌದಿ ಅರೇಬಿಯಾ ನಿವಾಸಿಗಳಿಗೆ ಮಾತ್ರ ಸೀಮಿತವಾಗಿತ್ತು ಎಂದು ಹೇಳಬಹುದು.
Published by:Ashwini Prabhu
First published: