Death During Intercourse: ಗೆಳತಿ ಜೊತೆ ಲೈಂಗಿಕ ಕ್ರಿಯೆ ವೇಳೆ 28ರ ಯುವಕ ಸಾವು

ನಾಗ್​ಪುರದಲ್ಲಿ ತನ್ನ ಗೆಳತಿಯೊಂದಿಗೆ ದೈಹಿಕ ಸಂಬಂಧ (Intercourse) ಹೊಂದಿದ್ದ 28 ವರ್ಷದ ಅಜಯ್ ಪರ್ಟೆಕಿ ಭಾನುವಾರ ಸಾವೊನೆರ್‌ನ ಲಾಡ್ಜ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾಗ್‌ಪುರ(ಜು.05): ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಆರೋಗ್ಯ ಸಮಸ್ಯೆಗಳಿಂದಲೋ, ಇನ್ನೇನೋ ಕಾರಣಗಳಿಂದ ಚಿಕ್ಕ ವಯಸ್ಸಿನಲ್ಲೇ ಯುವಜನರ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ನಾಗ್​ಪುರದಲ್ಲಿ ತನ್ನ ಗೆಳತಿಯೊಂದಿಗೆ ದೈಹಿಕ ಸಂಬಂಧ (Intercourse) ಹೊಂದಿದ್ದ 28 ವರ್ಷದ ಅಜಯ್ ಪರ್ಟೆಕಿ ಭಾನುವಾರ ಸಾವೊನೆರ್‌ನ ಲಾಡ್ಜ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪ್ರಾಥಮಿಕ ದೃಷ್ಟಿಯಲ್ಲಿ ಪಾರ್ಟೆಕಿ ಅವರಿಗೆ ಹೃದಯ ಸ್ತಂಭನವಾಗಿದೆ (Heart Attack) ಎಂದು ಹೇಳಲಾಗಿದೆ. ಸಂತ್ರಸ್ತ ಯುವ ಯಾವುದೇ ಡ್ರಗ್ಸ್ ಸೇವಿಸಿದ ಬಗ್ಗೆ ಪೊಲೀಸರಿಗೆ (Police) ಯಾವುದೇ ಪುರಾವೆಗಳು ಸಿಗಲಿಲ್ಲ. ಮೃತ ಯುವಕನಿಗೆ ಕಳೆದೆರಡು ದಿನಗಳಿಂದ ಜ್ವರವಿತ್ತು (Fever) ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕರಾಗಿದ್ದ ಅವರು ವೆಲ್ಡಿಂಗ್ ತಂತ್ರಜ್ಞರಾಗಿಯೂ ಕೆಲಸ ಮಾಡುತ್ತಿದ್ದರು.

ಪಾರ್ಟೆಕಿ ಮತ್ತು ಮಧ್ಯಪ್ರದೇಶದ ಛಿಂದವಾಡದ ನರ್ಸ್ ಆಗಿರುವ 23 ವರ್ಷದ ಮಹಿಳೆಯೊಂದಿಗೆ ಕಳೆದ ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದರು. ಮನೆಯವರಿಗೂ ವಿಷಯ ತಿಳಿದಿತ್ತು. ಇವರಿಬ್ಬರು ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದರು. ಪರ್ತೇಕಿ ಮದುವೆಗೆ ಗೆಳತಿಯ ತಾಯಿಯನ್ನೂ ಸಂಪರ್ಕಿಸಿದ್ದ. ಭವಿಷ್ಯದಲ್ಲಿ ಈ ಜೋಡಿ ಮದುವೆಯಾಗಲಿದ್ದರು.

ಲೈಂಗಿಕ ಕ್ರಿಯೆಯ ವೇಳೆಯ ಹಾಸಿಗೆಯಲ್ಲಿ ಕುಸಿದ ವ್ಯಕ್ತಿ

ಸಂಜೆ 4ರ ವೇಳೆಗೆ ದಂಪತಿ ಲಾಡ್ಜ್‌ಗೆ ಭೇಟಿ ನೀಡಿದ್ದರು. ಸುಮಾರು ಅರ್ಧ ಗಂಟೆಯ ನಂತರ ಅವರು ಲೈಂಗಿಕ ಕ್ರಿಯೆಯ ಸಂದರ್ಭ ಯುವಕ ಹಾಸಿಗೆಯ ಮೇಲೆ ಕುಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಲಾಡ್ಜ್ ಸಿಬ್ಬಂದಿಯನ್ನು ಎಚ್ಚರಿಸಿದ್ದಾರೆ. ಅವರು ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಯುವಕ ಸತ್ತಿದ್ದಾನೆ ಎಂದು ಘೋಷಿಸಲಾಯಿತು.

ಡ್ರಗ್ಸ್​ ತೆಗೆದುಕೊಂಡಿಲ್ಲ

ಸಾವೊನೆರ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ (ಎಪಿಐ) ಸತೀಶ್ ಪಾಟೀಲ್ ಅವರು, ಅವರು ಸಂಭೋಗಿಸುತ್ತಿರುವಾಗ ಪಾರ್ಟೆಕಿ ಕುಸಿದುಬಿದ್ದರು ಎಂದು ಮಹಿಳೆ ಹೇಳಿದ್ದಾರೆ. “ಸಂತ್ರಸ್ತರು ಯಾವುದೇ ಔಷಧ ಸೇವಿಸಿದ್ದಕ್ಕೆ ನಮಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಈತನ ಮೇಲೆ ಯಾವುದೇ ಮಾದಕ ವಸ್ತು ಪ್ಯಾಕೆಟ್‌ಗಳು ಪತ್ತೆಯಾಗಿಲ್ಲ. ಮಹಿಳೆ ಕೂಡ ತನ್ನ ಸಮ್ಮುಖದಲ್ಲಿ ಏನನ್ನೂ ಸೇವಿಸಿಲ್ಲ ಎಂದು ಹೇಳಿದ್ದಾರೆ,'' ಎಂದು ಪಾಟೀಲ್ ಹೇಳಿದರು.

ಒಳಾಂಗಗಳು ಮತ್ತು ರಕ್ತವನ್ನು ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದರು. ಮರಣೋತ್ತರ ಪರೀಕ್ಷೆಯಲ್ಲಿ, ವೈದ್ಯರು ಸಾವಿಗೆ ಪ್ರಾಥಮಿಕ ಕಾರಣ ಹೃದಯಾಘಾತ ಎಂದು ಸೂಚಿಸಿದ್ದಾರೆ. ಸಾವೋನರ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ED Raid: ದೇಶಾದ್ಯಂತ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ED ದಾಳಿ; Vivo ಸೇರಿದಂತೆ ಚೀನೀ ಸಂಸ್ಥೆಗಳಲ್ಲಿ ಪರಿಶೀಲನೆ

ಖ್ಯಾತ ಹೃದ್ರೋಗ ತಜ್ಞ ಡಾ.ಆನಂದ್ ಸಂಚೇತಿ ಅವರು ಲೈಂಗಿಕ ಸಮಯದಲ್ಲಿ ಹೃದಯ ಸ್ತಂಭನದಿಂದ ಸಾಯುವುದು ಅಪರೂಪ, ಆದರೆ ಸಾಧ್ಯ. 20 ರ ದಶಕದ ಮಧ್ಯ ವಯಸ್ಸಿನ ಯುವಜನರಲ್ಲಿ ರೋಗನಿರ್ಣಯ ಮಾಡದ ಪರಿಧಮನಿಯ ಕಾಯಿಲೆಯು ಮಾರಕವಾಗಿ ಬದಲಾಗುತ್ತಿದೆ.

ಯುವಜನರಲ್ಲೇ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೆಚ್ಚು ಅಡೆತಡೆಗಳನ್ನು ಕಾಣುತ್ತಿದ್ದೇವೆ. ಯಾರಿಗಾದರೂ ಚಿಕಿತ್ಸೆ ನೀಡದ ಪರಿಧಮನಿಯ ಕಾಯಿಲೆ ಇದ್ದರೆ, ಲೈಂಗಿಕತೆಯಂತಹ ಶ್ರಮದಾಯಕ ಚಟುವಟಿಕೆಗಳಲ್ಲಿ ತೊಡಗಿದ ಸಂದರ್ಭ ಅದು ಸಾವಿಗೂ ಕಾರಣವಾಗಬಲ್ಲದು ಎಂದು ಎಂದು ಸಂಚೇತಿ ಅವರು ಪಾರ್ಟೆಕಿ ಪ್ರಕರಣವನ್ನು ಉಲ್ಲೇಖಿಸಿ ತಿಳಿಸಿದ್ದಾರೆ.

ಇದನ್ನೂ ಓದಿ: Nupur Sharma: ನೂಪುರ್ ಶರ್ಮಾ ತಲೆ ತಂದ್ರೆ ಬಂಗಲೆ, ಆಸ್ತಿ ಎಲ್ಲ ಕೊಡ್ತೀನಿ ಎಂದ ವ್ಯಕ್ತಿ!

ಶ್ರಮದಾಯಕ ಚಟುವಟಿಕೆಗಳ ಸಮಯದಲ್ಲಿ ಹೃದಯ ಸ್ನಾಯುಗಳಿಗೆ ರಕ್ತ ಮತ್ತು ಆಮ್ಲಜನಕದ ಹೆಚ್ಚಿನ ಅವಶ್ಯಕತೆಯಿದೆ ಎಂದು ಸಂಚೇತಿ ವಿವರಿಸಿದರು. ಅದು ಪೂರೈಕೆಯಾಗದಿದ್ದಾಗ ಸಾವು ಸಂಭವಿಸುತ್ತದೆ. ಹೈಪರ್ಟ್ರೋಫಿಕ್ ಕಾರ್ಡಿಯಾಕ್ಮಿಯೋಪತಿ (ಹೃದಯ ಸ್ನಾಯುಗಳ ದಪ್ಪವಾಗುವುದು) ದಿಂದ ಬಳಲುತ್ತಿರುವ ಜನರು ಲೈಂಗಿಕತೆಯಂತಹ ಚಟುವಟಿಕೆಯ ಸಮಯದಲ್ಲಿ ಸಾಯಬಹುದು ಎಂಬ ಅಂಶವನ್ನು ಅವರು ಸ್ಪಷ್ಟಪಡಿಸಿದ್ದಾರೆ.
Published by:Divya D
First published: