• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Pakistan: ಪಾಕಿಸ್ತಾನದ ಮಸೀದಿಯೊಳಗೆ ಉಗ್ರರ ದಾಳಿ; ಬಾಂಬ್ ಸ್ಫೋಟದಲ್ಲಿ 28 ಮಂದಿ ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ

Pakistan: ಪಾಕಿಸ್ತಾನದ ಮಸೀದಿಯೊಳಗೆ ಉಗ್ರರ ದಾಳಿ; ಬಾಂಬ್ ಸ್ಫೋಟದಲ್ಲಿ 28 ಮಂದಿ ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ

ಪಾಕಿಸ್ತಾನ ಮಸೀದಿಯಲ್ಲಿ ಬಾಂಬ್​ ಸ್ಫೋಟ

ಪಾಕಿಸ್ತಾನ ಮಸೀದಿಯಲ್ಲಿ ಬಾಂಬ್​ ಸ್ಫೋಟ

ಪಾಕಿಸ್ತಾನದ ಪೇಶಾವರದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ 28 ಮಂದಿ ಸಾವನ್ನಪ್ಪಿದರೆ, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಗಾಯಗೊಂಡ ವ್ಯಕ್ತಿಗಳನ್ನು ತಕ್ಷಣಕ್ಕೆ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • New Delhi, India
  • Share this:

Pakistan: ಪೇಶಾವರ, ಪಾಕಿಸ್ತಾನ​: ಆರ್ಥಿಕ ಬಿಕ್ಕಟ್ಟಿನಿಂದ (economic crisis ) ಕಂಗಾಲಾಗಿರುವ ಪಾಕಿಸ್ತಾನದಲ್ಲಿ ( Pakistan) ಒಂದಿಲ್ಲೊಂದು ಅಹಿತಕರ ಘಟನೆ ನಡೆಯುತ್ತಿದೆ. ನಿನ್ನೆಯಷ್ಟೆ ಬಸ್​ ನದಿಗೆ ಉರುಳಿ 41 ಮಂದಿ ಸಾವನ್ನಪ್ಪಿದ್ದರು. ಇದೀಗ ಪೇಶಾವರದ (Peshawar) ಮಸೀದಿಯೊಂದರಲ್ಲಿ(Mosque) ಬಾಂಬ್​ ಸ್ಫೋಟ (Bomb Blast) ಸಂಭವಿಸಿದ್ದು, 28 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ. ವರದಿಯ ಪ್ರಕಾರ ಆತ್ಮಾಹುತಿ ದಾಳಿಯಿಂದ (Suicide Bomber) ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪ್ರಾರ್ಥನೆ ವೇಳೆ ಮಸೀದಿಗೊಳಗೆ ಬಾಂಬ್​ ಸ್ಫೋಟಿಸಿದೆ. ಸಾವನ್ನಪ್ಪಿರುವವರಲ್ಲಿ ಹೆಚ್ಚಿನವರು ಪೊಲೀಸರಾಗಿದ್ದು, ಅವರೆಲ್ಲರೂ ಮಧ್ಯಾಹ್ನದ ಪ್ರಾರ್ಥನೆ ಸಲ್ಲಿಸಲು ಸೇರಿದ್ದ ವೇಳೆ ಬಾಂಬ್ ಸ್ಫೋಟ ನಡೆದಿದೆ.


ಪ್ರಾಂತೀಯ ಪೊಲೀಸ್ ಪಡೆ ಮತ್ತು ಭಯೋತ್ಪಾದನಾ ನಿಗ್ರಹ ಇಲಾಖೆಯ ಪ್ರಧಾನ ಕಛೇರಿಯನ್ನು ಒಳಗೊಂಡಿರುವ ಒಂದು ಕಾಂಪೌಂಡ್ ಒಳಗೆ ಇದ್ದ ಮಸೀದಿಯಲ್ಲಿ ಬಾಂಬ್ ಬ್ಲಾಸ್ಟ್​ ಆಗಿದೆ ಎಂದು ಪೇಶಾವರದ ಪೊಲೀಸ್ ಮುಖ್ಯಸ್ಥ ಇಜಾಜ್ ಖಾನ್ ಹೇಳಿದ್ದಾರೆ. ಪೇಶಾವರದ ಪೊಲೀಸ್​ ಲೈನ್ಸ್​ ಪ್ರದೇಶದಲ್ಲಿರುವ ಮಸೀದಿಯಲ್ಲಿ ಸೋಮವಾರ ಮಧ್ಯಾಹ್ನದ ಪ್ರಾರ್ಥನೆ ಬಳಿಕ ಈ ಕೃತ್ಯ ನಡೆದಿದೆ. ಸೂಸೈಡ್​ ಬಾಂಬರ್​ ಮಧ್ಯಾಹ್ನದ ಪ್ರಾರ್ಥನೆ ಸಮಯದಲ್ಲಿ ಮಸೀದಿಯ ಮುಖ್ಯದ್ವಾರದಲ್ಲಿ ನಿಂತು ತನ್ನನ್ನು ತಾನು ಸ್ಫೋಟಿಸಿಕೊಳ್ಳುವ ಮೂಲಕ ಈ ಮಾರಣಹೋಮ ಕಾರಣನಾಗಿದ್ದಾನೆ.


28 ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ


ಸ್ಫೋಟದಲ್ಲಿ 28 ಮಂದಿ ಸಾವನ್ನಪ್ಪಿದರೆ 150ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ, ಅದರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಗಾಯಗೊಂಡ ವ್ಯಕ್ತಿಗಳನ್ನು ತಕ್ಷಣಕ್ಕೆ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ ಸ್ಫೋಟ ನಡೆದ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್​ ಮಾಡಲಾಗಿದ್ದು, ಕೇವಲ ಅಂಬ್ಯುಲೆನ್ಸ್​ ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.


ಇದನ್ನೂ ಓದಿ: Pakistan: ಪಾಕಿಸ್ತಾನದಲ್ಲಿ ಸೇತುವೆಗೆ ಡಿಕ್ಕಿ ಹೊಡೆದು ಬಸ್‌ ಧಗಧಗ, ದುರ್ಘಟನೆಯಲ್ಲಿ 41 ಮಂದಿ ಸಜೀವ ದಹನ!

 ಕಟ್ಟಡದ ಅಡಿಯಲ್ಲಿ ಹಲವು ಮಂದಿ ಸಿಲುಕಿರುವ ಶಂಕೆ


ಸ್ಫೋಟದಿಂದ ಮಸೀದಿಯ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದ್ದು, ಪ್ರಾರ್ಥನೆ ಮಾಡುತ್ತಿದವರ ಮೇಲೆ ಬಿದ್ದಿದ್ದು, ಹಲವು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಗಾಯಾಳುಗಳನ್ನು ಹತ್ತಿರದ ಲೇಡಿ ರೀಡಿಂಗ್ ಆಸ್ಪತ್ರೆಗೆ ದಾಖಲಾಗಿಸುತ್ತಿದೆ.




ಟಿಟಿಪಿ ಸಂಘಟನೆ ಮೇಲೆ ಅನುಮಾನ


ಸ್ಫೋಟ ನಡೆದ ಸ್ಥಳದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದ್ದು, ಆ ಪ್ರದೇಶದಲ್ಲಿ ಕಟ್ಟೆಚ್ಚರ ಹಿಸಲಾಗಿದೆ. ಇಂತಹ ಬಾಂಬ್​ ದಾಳಿಗಳು ಹೆಚ್ಚಾಗಿ ಪಾಕಿಸ್ತಾನಿ ತಾಲಿಬಾನ್ ಎಂದು ಕೆರೆಯಲ್ಪಡುವ ತರ್ಹೀಕ್​- ಇ -ತಾಲಿಬಾನ್ ಸಂಘಟನೆ ನಡೆಸುವುದರಿಂದ ಈ ದಾಳಿಯನ್ನು ಅವರೇ ನಡೆಸಿರಬಹುದು ಎನ್ನಲಾಗುತ್ತಿದೆ. ಹಿಂದೆ ಇದೇ ರೀತಿಯ ಬಾಂಬ್ ಸ್ಫೋಟಗಳನ್ನುTTP ​ಸಂಘಟನೆ ನಡೆಸಿದೆ. ಆದೆ ಇಲ್ಲಿಯವರೆಗೂ ಯಾವ ಸಂಘಟನೆಯೂ ಸ್ಫೋಟದ ಹೊಣೆಗಾರಿಕೆ ಹೊತ್ತಿಕೊಂಡಿಲ್ಲ.


ಇಸ್ಲಾಮಿಕ್ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು, ಸರ್ಕಾರದ ವಶದಲ್ಲಿರುವ ಅವರ ಸದಸ್ಯರ ಬಿಡುಗಡೆ ಮತ್ತು ದೇಶದ ಹಿಂದಿನ ಬುಡಕಟ್ಟು ಪ್ರದೇಶಗಳಲ್ಲಿ ಪಾಕಿಸ್ತಾನಿ ಮಿಲಿಟರಿ ಉಪಸ್ಥಿತಿಯನ್ನು ಕಡಿಮೆ ಮಾಡಲು TTP ಕಳೆದ 15 ವರ್ಷಗಳಿಂದ ಪಾಕಿಸ್ತಾನದಲ್ಲಿ ಹೋರಾಡುತ್ತಿದೆ. ಈ ಸಂಘಟನೆ ಅಫ್ಘಾನ್ ತಾಲಿಬಾನ್‌ನ ನಿಕಟ ಮಿತ್ರರಾಗಿದ್ದಾರೆ ಎಂದು ತಿಳಿದುಬಂದಿದೆ.


 28 killed and more than 150 people injured in bomb blast inside mosque in Pakistan
ಪಾಕಿಸ್ತಾನ ಮಸೀದಿಯಲ್ಲಿ ಬಾಂಬ್​ ಸ್ಫೋಟ


ಇಮ್ರಾನ್ ಖಾನ್ ಖಂಡನೆ


ಪೇಶಾವರದಲ್ಲಿ ನಡೆದ ಸ್ಫೋಟವನ್ನು ಮಾಜಿ ಪ್ರಧಾನಿ ಹಾಗೂ ಕ್ರಿಕೆಟರ್ ಇಮ್ರಾನ್ ಖಾನ್ ಖಂಡಿಸಿದ್ದಾರೆ. ಪೇಶಾವರದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ನಡೆಸಿರುವ ಸ್ಫೋಟವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ತಿಳಿಸಲು ಬಯಸುತ್ತೇನೆ. ಹೆಚ್ಚುತ್ತಿರುವ ಭಯೋತ್ಪಾದನೆಯನ್ನು ಎದುರಿಸಲು ನಮ್ಮ ಗುಪ್ತಚರ ಇಲಾಖೆ ಸುಧಾರಿಸುವುದು ಮತ್ತು ನಮ್ಮ ಪೊಲೀಸ್ ಪಡೆಗಳನ್ನು ಸರಿಯಾಗಿ ಸಜ್ಜುಗೊಳಿಸುವುದು ಅಗತ್ಯವಾಗಿದೆ ಎಂದು ಟ್ವೀಟ್​ ಮೂಲಕ ಖಾನ್ ತಿಳಿಸಿದ್ದಾರೆ.


2022ರಲ್ಲೂ ಕೂಡ ಪೇಶಾವರದಲ್ಲಿ ಇದೇ ರೀತಿ ಕೊಚ ರಿಸಲ್ದಾರ್​ ಪ್ರದೇಶದ ಮಸೀದಿಯಲ್ಲಿ ಸೂಸೈಡ್​ ಬಾಂಬರ್​ ಸ್ಫೋಟ ನಡೆಸಿದ್ದ. ಈ ಘಟನೆಯಲ್ಲಿ 63 ಮಂದಿ ಸಾವನ್ನಪ್ಪಿದ್ದರು.

Published by:Rajesha B
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು