27 ವರ್ಷಗಳ ಹಿಂದಿನ ಕೊಲೆ ಪ್ರಕರಣ, ಬಿಎಸ್‌ಪಿ ನಾಯಕನಿಗೆ ರಿಲೀಫ್!

BSP leader Anupam Dubey

BSP leader Anupam Dubey

ಫರೂಕಾಬಾದ್ ಗುತ್ತಿಗೆದಾರ ಶಮೀಮ್ ಹತ್ಯೆ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ಬಿಎಸ್‌ಪಿ ನಾಯಕ ಅನುಪಮ್ ದುಬೆಗೆ ಜಾಮೀನು ನೀಡಿರುವುದನ್ನು ಯುಪಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್ ತನ್ನ ಟೀಕೆಗಳಲ್ಲಿ ಯುಪಿ ಸರ್ಕಾರಕ್ಕೆ ಏನಾಗುತ್ತಿದೆ ಎಂದು ಕೇಳಿದೆ, ಅಲ್ಲದೇ ಚಾರ್ಜ್‌ಶೀಟ್ ಅನ್ನು 1999 ರಲ್ಲಿ ಸಲ್ಲಿಸಲಾಯಿತು, ಇದು 1995 ರ ಪ್ರಕರಣವಾಗಿದೆ ಎಂದೂ ಉಲ್ಲೇಖಿಸಿದೆ.

ಮುಂದೆ ಓದಿ ...
  • Share this:

ನವದೆಹಲಿ(ಆ.01): 27 ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಬಿಎಸ್‌ಪಿ ನಾಯಕ ಅನುಪಮ್ ದುಬೆ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಅಲಹಾಬಾದ್ ಹೈಕೋರ್ಟ್ ಅನುಪಮ್ ದುಬೆಗೆ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಅನುಪಮ್ ದುಬೆ ಜಾಮೀನು ಪ್ರಶ್ನಿಸಿ ಯುಪಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಫತೇಘರ್ ಗುತ್ತಿಗೆದಾರ ಶಮೀಮ್ ಹತ್ಯೆ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ನಿಂದ ಬಿಎಸ್‌ಪಿ ನಾಯಕ ಅನುಪಮ್ ದುಬೆಗೆ ಜಾಮೀನು ನೀಡಿರುವುದನ್ನು ಯುಪಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.


ಸುಪ್ರೀಂ ಕೋರ್ಟ್ ತನ್ನ ವಿಚಾರಣೆಯಲ್ಲಿ ಯುಪಿ ಸರ್ಕಾರಕ್ಕೆ ಏನಾಗುತ್ತಿದೆ ಎಂದು ಕೇಳಿದೆ, ಚಾರ್ಜ್‌ಶೀಟ್ ಅನ್ನು 1999 ರಲ್ಲಿ ಸಲ್ಲಿಸಿದ್ದು, ಇದು 1995 ರ ಪ್ರಕರಣವಾಗಿದೆ. ಯುಪಿ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಸೂರ್ಯಪ್ರಕಾಶ್ ವಿ.ರಾಜು ಅವರು ಅಲಹಾಬಾದ್ ಹೈಕೋರ್ಟ್ ಅನುಪಮ್ ದುಬೆಗೆ ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಇದಕ್ಕೂ ಮೊದಲು, ಅಜಂಗಢ ಮತ್ತು ರಾಂಪುರ ಲೋಕಸಭಾ ಉಪಚುನಾವಣೆಗಳ ಫಲಿತಾಂಶದ ನಂತರ, ಫರೂಕಾಬಾದ್‌ನ ಆಡಳಿತವು ಅನುಪಮ್ ದುಬೆ ಅವರ 4.5 ಕೋಟಿ ಮೌಲ್ಯದ ಐಷಾರಾಮಿ ಹೋಟೆಲ್‌ಗೆ ಬೀಗ ಜಡಿಯುವ ಮೂಲಕ ಸೀಲ್ ಮಾಡಿತ್ತು.


ಇನ್ನು ಇದೊಂದು ಕೊಲೆಗೆ ಸಂಬಂಧಿಸಿದ ಪ್ರಕರಣ ಎಂದು ಎಎಸ್‌ಜಿ ರಾಜು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಅನುಪಮ್ ದುಬೆ ಯುಪಿಯ ದೊಡ್ಡ ದರೋಡೆಕೋರ. ಪ್ರಕರಣದ ವಿಚಾರಣೆ ವಿಳಂಬವಾಗಲು ಅವರೂ ಕಾರಣ ಎನ್ನಲಾಗಿದೆ. 1995ರ ಜುಲೈ 26 ರಂದು ಫತೇಘರ್ ಕೊಟ್ವಾಲಿ ಪ್ರದೇಶದ ಮೊಹಲ್ಲಾ ಕಸರಟ್ಟಾ ಬಳಿ ಕನೌಜ್ ಜಿಲ್ಲೆಯ ಸಂಧಾನ್ ನಿವಾಸಿ, ಮರದ ಗುತ್ತಿಗೆದಾರ ಶಮೀಮ್ ಖಾನ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಗುರ್ಸಹೈಗಂಜ್ ಕೊತ್ವಾಲಿಯಲ್ಲಿ ಆಗಿನ ಇನ್ಸ್‌ಪೆಕ್ಟರ್ ಆಗಿದ್ದ ರಾಮ್ ನಿವಾಸ್ ಯಾದವ್ ಅವರನ್ನು ಕಾನ್ಪುರದ ರಾವತ್‌ಪುರ ನಿಲ್ದಾಣದ ಬಳಿ 1996 ರಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು.


ಜುಲೈ 14, 1999 ರಂದು, ಶಮೀಮ್ ಹತ್ಯೆ ಪ್ರಕರಣದಲ್ಲಿ ಬಿಎಸ್ಪಿ ನಾಯಕರಾದ ಅನುಪಮ್ ದುಬೆ, ಶಿಶು ಮತ್ತು ರಾಜು ಲಾಂಗ್ರಾ ವಿರುದ್ಧ ಪೊಲೀಸರು ಅಲಹಾಬಾದ್ ಹೈಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಎರಡೂ ಪ್ರಕರಣಗಳಲ್ಲಿ ಆರೋಪಿ ಬಿಎಸ್‌ಪಿ ನಾಯಕ ಡಾ.ಅನುಪಮ್ ದುಬೆ ಅವರನ್ನು ಮೈನ್‌ಪುರಿ ಜೈಲಿನಲ್ಲಿ ಇರಿಸಲಾಗಿತ್ತು, ಅವರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಪ್ರಕರಣಗಳಲ್ಲಿ ಅವರ ವಿರುದ್ಧವೂ ರಾಷ್ಟೀಯ ಸುರಕ್ಷತಾ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈತನ ವಿರುದ್ಧ ರಾಷ್ಟೀಯ ಸುರಕ್ಷತಾ ಕಾನೂನು ಮತ್ತು ದರೋಡೆಕೋರ ಕಾಯ್ದೆ ಸೇರಿದಂತೆ 45 ಪ್ರಕರಣಗಳು ದಾಖಲಾಗಿವೆ. ಬಿಎಸ್ಪಿ ನಾಯಕ ಅಕ್ರಮವಾಗಿ ಸಾಕಷ್ಟು ಹಣ ಮತ್ತು ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

First published: