ನಿಶ್ಚಯವಾಗಿದ್ದ ವರನೊಂದಿಗೆ ಫಾಲ್ಸ್​​ನಲ್ಲಿ ಸೆಲ್ಪಿ ತೆಗೆದುಕೊಳ್ಳವಾಗ ಕಾಲುಜಾರಿ ಬಿದ್ದು ಆಂಧ್ರ ಮೂಲದ ಯುವತಿ ಸಾವು

ಆಂಧ್ರ ಪ್ರದೇಶ ರಾಜ್ಯದ ಕೃಷ್ಣ ಜಿಲ್ಲೆಯಿಂದ ಉನ್ನತ ವ್ಯಾಸಾಂಗಕ್ಕಾಗಿ ಕಮಲಾ ಯುಎಸ್ ಗೆ ಹೋಗಿದ್ದಳು. ಪದವಿ ಮುಗಿದ ನಂತರ ಓಯೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು

news18-kannada
Updated:September 14, 2020, 6:55 PM IST
ನಿಶ್ಚಯವಾಗಿದ್ದ ವರನೊಂದಿಗೆ ಫಾಲ್ಸ್​​ನಲ್ಲಿ ಸೆಲ್ಪಿ ತೆಗೆದುಕೊಳ್ಳವಾಗ ಕಾಲುಜಾರಿ ಬಿದ್ದು ಆಂಧ್ರ ಮೂಲದ ಯುವತಿ ಸಾವು
ಮೃತ ಯುವತಿ ಕಮಲಾ
  • Share this:
ಯುಎಸ್​ಎ(ಸೆಪ್ಟೆಂಬರ್​. 14): ಮದುವೆ ನಿಶ್ಚಯವಾಗಿದ್ದ ವರನೊಂದಿಗೆ ಸೆಲ್ಪಿ ತೆಗೆದುಕೊಳ್ಳುವಾಗ ಜಲಪಾತದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಯುಎಸ್​ಎಯಲ್ಲಿ ನಡೆದಿದೆ. ಮೃತ ಯುವತಿಯನ್ನು ಆಂಧ್ರಪ್ರದೇಶದ 27 ವರ್ಷದ ಪೋಲವರಪು ಕಮಲಾ ಎಂದು ಗುರುತಿಸಲಾಗಿದೆ. ಈ ಯುವತಿಯು ಮದುವೆ ನಿಶ್ಚಯವಾಗಿರುವ ವರನ ಜೊತೆಗೆ ಬಾಲ್ಡ್ ರಿವರ್ ಜಲಪಾತವನ್ನು ನೋಡಲು ಹೋಗಿದ್ದಳು ಎನ್ನಲಾಗಿದೆ. ಈ ಸಮಯದಲ್ಲಿ ಇಬ್ಬರು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಇಬ್ಬರು ಜಲಪಾತದಿಂದ ಕಾಲು ಜಾರಿ ಬಿದ್ದಿದ್ದಾರೆ. ವ್ಯಕ್ತಿಯನ್ನು ಅಲ್ಲೆ ಇದ್ದ ಪ್ರವಾಸಿಗರು ರಕ್ಷಿಸಿದ್ದಾರೆ. ಆದರೆ ಕಮಲಾ ಎಲ್ಲೂ ಪತ್ತೆಯಾಗಿಲ್ಲ. ಸ್ವಲ್ಪ ಸಮಯದ ನಂತರ ಕಮಲಾ ಜಲಪಾತದಿಂದ ಸ್ವಲ್ಪ ದೂರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ. ನಂತರ ಸಿಪಿಆರ್ ಸಿಬ್ಬಂದಿ ಆಕೆಯನ್ನು ಮೇಲಕ್ಕೆ ಎತ್ತಿಕೊಂಡು ಬಂದಿದ್ದಾರೆಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. ತೀವ್ರ ಗಾಯಗೊಂಡಿದ್ದ ಯುವತಿಯನ್ನು ಸ್ವೀಟ್‌ವಾಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾಳೆ.

ಆಂಧ್ರ ಪ್ರದೇಶ ರಾಜ್ಯದ ಕೃಷ್ಣ ಜಿಲ್ಲೆಯಿಂದ ಉನ್ನತ ವ್ಯಾಸಾಂಗಕ್ಕಾಗಿ ಕಮಲಾ ಯುಎಸ್ ಗೆ ಹೋಗಿದ್ದಳು. ಪದವಿ ಮುಗಿದ ನಂತರ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.
ಸದ್ಯಕ್ಕೆ ಕಮಲಾ ಮೃತದೇಹವನ್ನು ಭಾರತಕ್ಕೆ ತೆಗೆದುಕೊಂಡು ಬರುವ  ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಮಗಳ ಸಾವಿನ ಸುದ್ದಿ ತಿಳಿದು ಕಮಲಾ ಪೋಷಕರು ಆಘಾತಕ್ಕೊಳಗಾಗಿದ್ದಾರೆ.
Published by: G Hareeshkumar
First published: September 14, 2020, 6:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading