Scholarship Offer: ಒಬ್ಬ ವಿದ್ಯಾರ್ಥಿಗಾಗಿ 27 ಶಾಲೆಗಳಿಂದ ₹30 ಕೋಟಿ ಸ್ಕಾಲರ್ಶಿಪ್ ಆಫರ್: ಅಂಥ ವಿಶೇಷವೇನು?

ಜೊನಾಥನ್ ವಾಕರ್ ಹೈ ಸ್ಕೂಲ್‌ನ 18 ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಅವರು ಹಾರ್ವರ್ಡ್ ವಿಶ್ವವಿದ್ಯಾಲಯ, ಯೇಲ್ ವಿಶ್ವವಿದ್ಯಾಲಯ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಸೇರಿದಂತೆ 27 ಶಾಲೆಗಳಿಂದ ಆಫರ್‌ಗಳನ್ನು ಪಡೆದಿದ್ದಾರೆ

ವಿದ್ಯಾರ್ಥಿ ಜೊನಾಥನ್ ವಾಕರ್

ವಿದ್ಯಾರ್ಥಿ ಜೊನಾಥನ್ ವಾಕರ್

  • Share this:

    ಸಾಮಾನ್ಯವಾಗಿ ನಾವು ನಮ್ಮ 12ನೇ ತರಗತಿಯನ್ನು ಮುಗಿಸಿದ ಮೇಲೆ ಮುಂದಿನ ವಿದ್ಯಾಭ್ಯಾಸಕ್ಕೆ ಯಾವುದಾದರೊಂದು ಪದವಿ ಕಾಲೇಜಿಗೆ (Degree College) ನಾವು ಸೇರಿಕೊಳ್ಳಲು ಪ್ರಯತ್ನ ಮಾಡುವುದನ್ನು ಮತ್ತು ಅದಕ್ಕಾಗಿ ಒಂದು ಅಥವಾ ಎರಡು ಪರೀಕ್ಷೆಗಳನ್ನು (Exams) ನೀಡುತ್ತೇವೆ.ಆದರೆ ಇಲ್ಲೊಬ್ಬ ವಿದ್ಯಾರ್ಥಿ ಅದೆಷ್ಟು ಕಾಲೇಜುಗಳಿಗೆ ಸೇರಿಕೊಳ್ಳಲು ತನ್ನ ಹೆಸರನ್ನು ನೋಂದಾಯಿಸಿದ್ದಾನೆ ನೋಡಿ. ಇಷ್ಟೇ ಅಲ್ಲದೆ ಅವನು ಎಷ್ಟು ಕಾಲೇಜುಗಳಿಂದ ಆಫರ್‌ಗಳನ್ನು (Offers from Colleges) ಸಹ ಪಡೆದಿದ್ದಾರೆ ಎಂದು ನೀವು ನೋಡಿದರೆ ಬೆಚ್ಚಿ ಬೀಳ್ತೀರಾ. ಈ ಪ್ರತಿಭಾವಂತ ವಿದ್ಯಾರ್ಥಿ ಅಮೆರಿಕದ ಫ್ಲೋರಿಡಾ ರಾಜ್ಯದ 18 ವರ್ಷದವರಾಗಿದ್ದು, ಒಂದಲ್ಲ, ಎರಡಲ್ಲ ಬರೋಬ್ಬರಿ 27 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ ಆಫರ್‌ಗಳನ್ನು ಸ್ವೀಕರಿಸಿದ್ದಾನೆ. ಈ ಎಲ್ಲಾ ಕಾಲೇಜುಗಳಿಗೆ ಸೇರಿಕೊಂಡರೆ ಈ ವಿದ್ಯಾರ್ಥಿಗೆ ಸಿಗುವ ವಿದ್ಯಾರ್ಥಿ ವೇತನ 4 ಮಿಲಿಯನ್ ಡಾಲರ್ ಅಂತೆ. ಭಾರತೀಯ ಮೌಲ್ಯದಲ್ಲಿ ಇದು ಬರೋಬ್ಬರಿ 30 ಕೋಟಿ ರೂಪಾಯಿ ಆಗುತ್ತದೆ. ಇಂತಹ ಒಂದು ದೊಡ್ಡ ಮೊತ್ತದ ವಿದ್ಯಾರ್ಥಿ ವೇತನದ ಆಫರ್‌ಗಳನ್ನು ಸಂಗ್ರಹಿಸಿದ ನಂತರ ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಎಂದು ಹೇಳಬಹುದು.


    ವಾರೆವ್ಹಾವಾಕರ್ 

    ಜೊನಾಥನ್ ವಾಕರ್ ಎಂಬ ವಿದ್ಯಾರ್ಥಿ ಪನಾಮಾ ನಗರದ ರುದರ್‌ಫೋರ್ಡ್‌ ಸೀನಿಯರ್ ಹೈ ಸ್ಕೂಲ್‌ನ 18 ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಅವರು ಹಾರ್ವರ್ಡ್ ವಿಶ್ವವಿದ್ಯಾಲಯ, ಯೇಲ್ ವಿಶ್ವವಿದ್ಯಾಲಯ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಸೇರಿದಂತೆ 27 ಶಾಲೆಗಳಿಂದ ಆಫರ್‌ಗಳನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹದಿ ಹರೆಯದವನು 27 ಶಾಲೆಗಳಿಂದ ಸ್ವೀಕಾರ ಪತ್ರಗಳನ್ನು ಪಡೆದಿರುವುದಕ್ಕೆ ತಾನು ಆಶ್ಚರ್ಯ ಚಕಿತನಾಗಿದ್ದೇನೆ ಎಂದು ಹೇಳಿದನು.


    ಇದನ್ನೂ ಓದಿ: CBSE Term 2 Exams 2022: ಸಿಬಿಎಸ್ಇ 10-12ನೇ ತರಗತಿ ಟರ್ಮ್ 2 ಪರೀಕ್ಷೆಯ ಮಾರ್ಗಸೂಚಿ ಪ್ರಕಟ; ವಿವರ ಇಲ್ಲಿದೆ

    "ಈ ಬಗ್ಗೆ ಯೋಚಿಸುವುದೇ ತುಂಬಾ ಕ್ರೇಜಿ ಆಗಿದೆ, ನಾನು ಈ ಎಲ್ಲಾ ಕಾಲೇಜುಗಳಿಗೆ ಅರ್ಜಿ ಸಲ್ಲಿಸಿದ್ದೆ ಮತ್ತು ನಾನು ಎಲ್ಲಾ ಕಾಲೇಜುಗಳಿಂದ ಸ್ವೀಕಾರ ಪತ್ರಗಳನ್ನು ಪಡೆದುಕೊಂಡಿರುವುದು ನಿಜಕ್ಕೂ ಒಂದು ಅಪರೂಪದ ವಿಷಯವಾಗಿದೆ. ಆದರೆ ಇದು ನಡೆದದ್ದು ನಿಜವಾಗಿದೆ, ನಾನು ಇದರ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ" ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.


    27 ಶಾಲೆಗಳಿಂದ ಆಫರ್​

    ವಾಕರ್ ಅಂತಾರಾಷ್ಟ್ರೀಯ ಬ್ಯಾಕಲೌರಿಯೇಟ್ ಪ್ರೋಗ್ರಾಂ ಮೂಲಕ ಕಾಲೇಜು ಕ್ರೆಡಿಟ್‌ಗಳನ್ನು ಗಳಿಸುತ್ತಿದ್ದಾರೆ. ನೀವು 27 ಶಾಲೆಗಳಿಂದ ಹೇಗೆ ಸ್ವೀಕಾರ ಪತ್ರಗಳನ್ನು ಪಡೆದಿದ್ದೀರಿ ಎಂದು ಕೇಳಿದಾಗ, ಅವರ ಪ್ರಬಂಧಗಳು ಸ್ವೀಕಾರ ಪತ್ರಗಳನ್ನು ಪಡೆಯಲು ಸಹಾಯ ಮಾಡಿದವು ಎಂದು ಅವರು ಹೇಳಿದರು.


    "ಪ್ರತಿಯೊಂದು ಕ್ಯಾಂಪಸ್‌ನಲ್ಲಿಯೂ ವಿಶೇಷವಾದದ್ದೇನಾದರೂ ಇದೆ ಮತ್ತು ಆದ್ದರಿಂದ, ನಾನು ಅದೆಲ್ಲವನ್ನು ಪ್ರೀತಿಸಿದ ಒಂದು ಸಂಗತಿಯನ್ನು ನಾನು ಕಂಡು ಕೊಂಡೆ" ಎಂದು ವಾಕರ್ ಪನಾಮಾ ನಗರದ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು. "ನಾನು ನಿಜವಾಗಿಯೂ ಅದರ ಬಗ್ಗೆ ಬರೆಯಲು ಪ್ರಯತ್ನಿಸಿದೆ ಮತ್ತು ಅದನ್ನು ನನ್ನ ಅಪ್ಲಿಕೇಶನ್‌ಗಳಲ್ಲಿ ಅದನ್ನು ತೋರಿಸಲು ಪ್ರಯತ್ನಿಸಿದೆ" ಎಂದು 18 ವರ್ಷದ ವಿದ್ಯಾರ್ಥಿ ಹೇಳಿದರು.


    ವಾಕರ್​ ಸಾಧನೆ 

    ವಾಕರ್ ತನ್ನ ಕಿರಿಯ ಮತ್ತು ಹಿರಿಯ ಪ್ರೌಢ ಶಾಲೆಗಳಲ್ಲಿ ಕಾಲೇಜು ಮಟ್ಟದ ತರಗತಿಗಳನ್ನು ಪೂರ್ಣಗೊಳಿಸಿದ್ದಾನೆ, ಏಕೆಂದರೆ ಅಂತಾರಾಷ್ಟ್ರೀಯ ಬ್ಯಾಕಲೌರಿಯೇಟ್ ಪ್ರೋಗ್ರಾಂ ಎಲ್ಲಾ ವಿಷಯಗಳನ್ನು ಒಳಗೊಂಡಿದೆ. ಇದು ಮೌಲ್ಯಮಾಪನಗಳನ್ನು ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳಿಗೆ ಕಾಲೇಜು ಕ್ರೆಡಿಟ್‌ಗಳನ್ನು ಸಹ ನೀಡುತ್ತದೆ. ವಾಕರ್ ತನ್ನ ಶೈಕ್ಷಣಿಕ ಪ್ರತಿಭೆಗಳಿಗೆ ಮಾತ್ರ ಹೆಸರುವಾಸಿಯಾಗಿಲ್ಲ. ಅವರು ತಮ್ಮ ಶಾಲೆಯ ಫುಟ್ಬಾಲ್ ತಂಡದಲ್ಲಿದ್ದಾರೆ ಮತ್ತು ಅವರು ಕಿವುಡರು ಮತ್ತು ಅಂಧರಿಗೆ ಸಹಾಯ ಮಾಡುವ ಸಾಧನವನ್ನು ಕಂಡು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.


    ಉನ್ನತ ಶಿಕ್ಷಣಕ್ಕಾಗಿ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ ಅವರು ಒಂದು ಸಲಹೆ ನೀಡಿದ್ದಾರೆ ನೋಡಿ. "ಇದು ನಿಜವಾಗಿಯೂ ಒಂದು ಕಾಲೇಜಿಗೆ ಬರೆದ ಅನೇಕ ಪ್ರಬಂಧಗಳಂತೆ ಮತ್ತು ಅಲ್ಲಿಂದ ಅವುಗಳನ್ನು ನಿರ್ದಿಷ್ಟವಾದ ಕಾಲೇಜುಗಳಿಗೆ ಸರಿ ಹೊಂದುವಂತೆ ಜೋಡಿಸಬೇಕು" ಎಂದು ವಾಕರ್ ಹೇಳಿದರು.

    Published by:Kavya V
    First published: