26/11 Mumbai Attack: ಇಂದು ದೇಶ ಕಂಡ ಅತ್ಯಂತ ಕರಾಳ ದಿನ: 26/11 ಮುಂಬೈ ಉಗ್ರರ ದಾಳಿಗೆ 12 ವರ್ಷ

Mumbai Attack

Mumbai Attack

2008 Mumbai Attack: ಮೇಜ್ ಗಾವ್ ನಲ್ಲಿ ಒಂದು ಬಾಂಬನ್ನು ಸ್ಪೋಟಿಸಲಾಯಿತು. 28 ರಂದು ದಾಳಿ ಆರಂಭವಾಗುತ್ತಿದ್ದಂತೆ ಎಚ್ಚೆತ್ತ ಮುಂಬಯಿ ಪೋಲಿಸರು ಹಾಗೂ ಸ್ಥಳದಲ್ಲಿ ಲಭ್ಯವಿದ್ದ ಸೇನಾ ಪಡೆ ತಾಜ್ ಹೋಟೆಲ್ ಒಂದನ್ನು ಹೊರತು ಪಡಿಸಿ ಇನ್ನುಳಿದ ಎಲ್ಲ ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು.

ಮುಂದೆ ಓದಿ ...
  • Share this:

    ಅಂದು ನವೆಂಬರ್​ 26, 2008. ದೇಶ ಕಂಡ ಕರಾಳ ದಿನ. ಮುಂಬೈ ಮಹಾ ನಗರದ ಮೇಲೆ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರರು ಆತ್ಮಾಹುತಿ ಬಾಂಬ್​ ದಾಳಿ ನಡೆಸಿದ್ದರು. ಪಾಪಿ ಉಗ್ರರು ಕೃತ್ಯಕ್ಕೆ 166 ಜನರು ಹತರಾದರೆ, 300 ಮಂದಿ ಗಾಯಗೊಂಡಿದ್ದರು. ಆ ಕಹಿ ಘಟನೆ ನಡೆದು ಇಂದಿಗೆ 12 ವರ್ಷಗಳು ತುಂಬಿವೆ. ಈ ಹಿನ್ನೆಲೆ ಹಲವು ಗಣ್ಯರು ಸೇರಿ ಹಲವರು ಘಟನೆ, ದಾಳಿ ವೇಳೆ ಮೃತಪಟ್ಟ ಜನರನ್ನು ನೆನೆದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಲಷ್ಕರ್-ಎ-ತೊಯ್ಬಾ ಸಂಘಟನೆಯ ಸುಮಾರು 12 ಜನ ಉಗ್ರರು ತಂತ್ರಗಾರಿಕೆಯಿಂದ ಪಾಕಿಸ್ತಾನದಿಂದ ಭಾರತದ ಒಳ ನುಸುಳಿ ಮಹಾ ನಗರವಾದ ಮುಂಬೈಯನ್ನು ಗುರಿಯಾಗಿಸಿ ಬಾಂಬು ಮತ್ತು ಗುಂಡಿನ ಮಳೆಗೈದಿದ್ದರು.


    2008ರ ನವೆಂಬರ್ 26 ರಿಂದ 29ರ ವರೆಗೆ ಮೂರು ದಿನಗಳ ಕಾಲ ದಾಳಿ ನಡೆಸಿದರು. ಅಷ್ಟರಲ್ಲಿ ದೇಶದ ಸೇನಾ ಪಡೆಯೂ ಮುಂಬಯಿಗೆ ಧಾವಿಸಿ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಮೊದಲಾಯಿತು. ಉಗ್ರರು ನಡೆಸಿದ ಈ ಆತ್ಮಾಹುತಿ ದಾಳಿಯಿಂದಾಗಿ ಸರ್ಕಾರಿ ಅಧಿಕಾರಿಗಳೂ, ಸೈನಿಕರು,ಸಾಮಾನ್ಯರು ಸೇರಿದಂತೆ ಅನೇಕರು ಪ್ರಾಣ ತೆತ್ತೆರು. ಹಲವರಿಗೆ ಗಾಯಗಳಾಗಿ ಆಸ್ಪತ್ರೆ ಸೇರಿದರು.


    ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿಂದು ಆಟೋ ಮತ್ತು ಕ್ಯಾಬ್ ಚಾಲಕರ ಪ್ರತಿಭಟನೆ


    ಮುಂಬಯಿ ನಗರ ಹೃದಯ ಭಾಗವಾಗಿರುವ ಛತ್ರಪತಿ ಶಿವಾಜಿ ಟರ್ಮಿನಸ್, ಗಣ್ಯರು ಹಾಗು ವಿದೇಶಿಗಳು ಹೆಚ್ಚಾಗಿ ಇರುವಂತಹ ಒಬೆರಾಯ್ ಟ್ರೈಡೆಂಟ್, ತಾಜ್ ಹೋಟೆಲ್, ಲಿಯೋಪೋಲ್ಡ್ ಕೆಫೆ, ಕಾಮಾ ಹಾಸ್ಪಿಟಲ್, ನಾರಿಮನ್ ಹೌಸ್, ಮೆಟ್ರೋ ಸಿನೆಮಾ, ಸೆಂಟ್ ಕ್ಸೇವಿಯರ್ ಕಾಲೇಜು ದಾಳಿಗೆ ಸಾಕ್ಷಿಯಾದ ಸ್ಥಳಗಳು.


    ಮೇಜ್ ಗಾವ್ ನಲ್ಲಿ ಒಂದು ಬಾಂಬನ್ನು ಸ್ಪೋಟಿಸಲಾಯಿತು. 28 ರಂದು ದಾಳಿ ಆರಂಭವಾಗುತ್ತಿದ್ದಂತೆ ಎಚ್ಚೆತ್ತ ಮುಂಬಯಿ ಪೋಲಿಸರು ಹಾಗೂ ಸ್ಥಳದಲ್ಲಿ ಲಭ್ಯವಿದ್ದ ಸೇನಾ ಪಡೆ ತಾಜ್ ಹೋಟೆಲ್ ಒಂದನ್ನು ಹೊರತು ಪಡಿಸಿ ಇನ್ನುಳಿದ ಎಲ್ಲ ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು.


    ಆದರೆ, ತಾಜ್ ಹೋಟೆಲ್ ಒಳಗೆ ಅವಿತುಕೊಂಡು ಉಗ್ರರನ್ನು ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲಿ ದೇಶದ ಇತರ ಸ್ಥಳಗಳಿಂದ ಮುಂಬಯಿಗೆ ರಾಷ್ಟ್ರೀಯ ಭದ್ರತಾಪಡೆಗಳನ್ನ ರವಾನಿಸಲಾಯಿತು. ಅಂತಿಮವಾಗಿ ನವೆಂಬರ್ 29ರ ದಿನದಂದು ಎಲ್ಲ ದಾಳಿಕೋರರನ್ನು ಕೊಂದು ಒಬ್ಬನನ್ನು ಸೆರೆ ಹಿಡಿಯುವಲ್ಲಿ ಭದ್ರತಾ ಪಡೆ ಸಫಲವಾಯಿತು. ಆತನೇ ಅಜ್ಮಲ್ ಕಸಾಬ್.


    Nivar Cyclone - ಪುದುಚೇರಿಯಲ್ಲಿ ನೆಲಕಪ್ಪಳಿಸಿದ ‘ನಿವಾರ್’ ಚಂಡಮಾರುತ; ಸಂಜೆಯವರೆಗೂ ತಮಿಳುನಾಡು ಜರ್ಝರಿತ


    ಮುಂಬೈ ಈಗೆಷ್ಟು ಸುರಕ್ಷಿತ?


    2008ರ ಭಯೋತ್ಪಾದಕರ ನಡೆಸಿದ ದಾಳಿಯ ನಂತರ ಎಚ್ಚೆತ್ತ ಮುಂಬೈ ತನ್ನ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿಕೊಂಡಿದೆ. ಭಾರತೀಯ ಸೇನೆ, ಕೋಸ್ಟಲ್ ಗಾರ್ಡ್ ಮತ್ತು ಮರೈನ್ ಪೊಲೀಸ್ ಸೇರಿ ಮೂರು ಹಂತದಲ್ಲಿ ಕರಾವಳಿ ಪ್ರದೇಶದಲ್ಲಿ ಹದ್ದಿನಕಣ್ಣಿಡಲಾಗಿದೆ. ಜೊತೆಗೆ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಮಹಾರಾಷ್ಟ್ರ ಸರ್ಕಾರ ರಡಾರ್, ಹೈಪವರ್ ಅಂಡರ್ ವಾಟರ್ ಸೆನ್ಸಾರ್, ಡ್ರೈವರ್ ಡಿಟೆಕ್ಷನ್ ಸೋನಾರ್ಸ್ ಇರುವ ಆರ್ಟ್ ಹಾರ್ಬರ್ ಡಿಫೆನ್ಸ್ ಸಿಸ್ಟಮ್ ಜಾರಿಗೊಳಿಸಿದೆ.


    ಇನ್ನೂ ಮುಂಬೈ ಪೊಲೀಸರು ನೂತನ ಡಿಜಿಟಲ್ ವ್ಯಾಪ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಅಲ್ಲದೆ ನಗರದಾದ್ಯಂತ 5,200 ಹೈ ಟೆಕ್ನಾಲಜಿ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 2016ರಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಮುಂಬೈನಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಹೇಳಲಾಗಿದೆ.

    Published by:Vinay Bhat
    First published: