• Home
  • »
  • News
  • »
  • national-international
  • »
  • Uttar Pradesh: ನೋಯ್ಡಾದ ಜಿಲ್ಲಾ ಕಾರಾಗೃಹದಲ್ಲಿ ಏಡ್ಸ್​ ಅಬ್ಬರ, 26 ಕೈದಿಗಳಿಗೆ HIV ಸೋಂಕು!

Uttar Pradesh: ನೋಯ್ಡಾದ ಜಿಲ್ಲಾ ಕಾರಾಗೃಹದಲ್ಲಿ ಏಡ್ಸ್​ ಅಬ್ಬರ, 26 ಕೈದಿಗಳಿಗೆ HIV ಸೋಂಕು!

ಉತ್ತರ ಪ್ರದೇಶದಲ್ಲಿ ಕೈದಿಗಳಿಗೆ ಎಚ್‌ಐವಿ ಸೋಂಕು ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಸೆಪ್ಟೆಂಬರ್ ತಿಂಗಳಲ್ಲಿ ಬಾರಾಬಂಕಿ ಜಿಲ್ಲಾ ಕಾರಾಗೃಹದಲ್ಲಿ 22 ಕೈದಿಗಳು ಎಚ್‌ಐವಿ ಪಾಸಿಟಿವ್ ಆಗಿದ್ದರು. ಅದೇ ಸಮಯದಲ್ಲಿ, ಬಿಜ್ನೋರ್ ಜೈಲಿನಲ್ಲಿರುವ 5 ಕೈದಿಗಳ ವರದಿಯೂ ಪಾಸಿಟಿವ್ ಬಂದಿದೆ.

ಮುಂದೆ ಓದಿ ...
  • News18 Kannada
  • Last Updated :
  • Uttar Pradesh, India
  • Share this:

    ನೋಯ್ಡಾ(ನ.24): ಉತ್ತರ ಪ್ರದೇಶದ (Uttar Pradesh)ಗೌತಮ್ ಬುದ್ಧ ನಗರ ಜಿಲ್ಲೆಯ ಜಿಲ್ಲಾ ಕಾರಾಗೃಹದಲ್ಲಿ (District Jail) 26 ಕೈದಿಗಳ ಎಚ್‌ಐವಿ ವರದಿ ಪಾಸಿಟಿವ್ (HIV Positive) ಕಂಡುಬಂದಿದೆ. ಈ ಬಗ್ಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಜೈಲಿನಲ್ಲಿ ಬೀಡುಬಿಟ್ಟು ನಡೆಸಿದ ತನಿಖೆಯಿಂದ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿ ತಿಳಿಸಿದರು. ಜೈಲು ಆಡಳಿತವು ಜಿಲ್ಲಾ ಆಸ್ಪತ್ರೆಯ ಸೆಕ್ಟರ್ -30 ರ ಆಂಟಿ ರೆಟ್ರೋವೈರಲ್ ಥೆರಪಿ (ಎಆರ್‌ಟಿ) ಕೇಂದ್ರದಲ್ಲಿ ಕೈದಿಗಳಿಗೆ ಚಿಕಿತ್ಸೆಯನ್ನು ಪ್ರಾರಂಭಿಸಿದೆ.

    ರಾಜ್ಯದಲ್ಲಿ ಕೈದಿಗಳಲ್ಲಿ ಎಚ್‌ಐವಿ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಸೆಪ್ಟೆಂಬರ್ ತಿಂಗಳಲ್ಲಿ ಬಾರಾಬಂಕಿ ಜಿಲ್ಲಾ ಕಾರಾಗೃಹದಲ್ಲಿ 22 ಕೈದಿಗಳು ಎಚ್‌ಐವಿ ಪಾಸಿಟಿವ್ ಆಗಿದ್ದರು. ಅದೇ ಸಮಯದಲ್ಲಿ, ಬಿಜ್ನೋರ್ ಜೈಲಿನಲ್ಲಿರುವ 5 ಕೈದಿಗಳ ವರದಿಯೂ ಪಾಸಿಟಿವ್ ಬಂದಿದೆ.

    ಇದನ್ನೂ ಓದಿ:Indian Army: ದಾಳಿ ನಡೆಸಿದ ಉಗ್ರನಿಗೇ ರಕ್ತದಾನ ಮಾಡಿದ ಭಾರತೀಯ ಸೈನಿಕರು! 

    ಎಚ್ಐವಿ ಹೇಗೆ ಹರಡುತ್ತದೆ

    ಗುಣಪಡಿಸಲಾಗದ ಕಾಯಿಲೆಯಾದ ಎಚ್ಐವಿ ಸಾಮಾನ್ಯವಾಗಿ ದೈಹಿಕ ಸಂಬಂಧಗಳಿಂದ ಒಂದು ದೇಹದಿಂದ ಇನ್ನೊಂದಕ್ಕೆ ಹರಡುತ್ತದೆ. ಅಲ್ಲದೆ, ಇದು HIV ರೋಗಿಯ ಮೇಲೆ ಬಳಸುವ ಸೂಜಿಗಳು, ಸಿರಿಂಜ್ಗಳು ಅಥವಾ ಇತರ ಔಷಧ ಇಂಜೆಕ್ಷನ್ ಉಪಕರಣಗಳ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು. ಯುಎನ್ ವರದಿಯ ಪ್ರಕಾರ, 2021 ರಲ್ಲಿ ಎಚ್ಐವಿಯಿಂದ ಜನರು ಪ್ರಾಣ ಕಳೆದುಕೊಂಡಿದ್ದಾರೆಂದು ಹೇಳಲಾಗಿದೆ.

    ಗಾಜಿಯಾಬಾದ್​ನಲ್ಲೂ ಇಂತಹುದೇ ಪ್ರಕರಣ

    ನೋಯ್ಡಾದ ಮೊದಲು, ಗಾಜಿಯಾಬಾದ್‌ನಿಂದಲೂ ಇದೇ ರೀತಿಯ ಪ್ರಕರಣವು ಮುನ್ನೆಲೆಗೆ ಬಂದಿತ್ತು. ಇಲ್ಲಿ ಖೈದಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 140 ಖೈದಿಗಳು ಎಚ್‌ಐವಿಯಿಂದ ಬಳಲುತ್ತಿರುವುದು ಕಂಡುಬಂದಿದೆ. ದಾಸ್ನಾ ಜೈಲಿನ ಸೂಪರಿಂಟೆಂಡೆಂಟ್ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದು ಸಾಮಾನ್ಯ ಚೆಕಪ್ ಗಾಬರಿ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಖೈದಿಗಳನ್ನು ಸಾಮಾನ್ಯವಾಗಿ ಚುಚ್ಚುಮದ್ದು ಪಡೆದುಕೊಳ್ಳುತ್ತಾರೆ, ಆದ್ದರಿಂದ ಅವರು ಎಚ್ಐವಿ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

    ಇದನ್ನೂ ಓದಿ: Russia-Ukraine War: ಸ್ವಾತಂತ್ರ್ಯ ದಿನದಂದು ರಷ್ಯಾದ ಕ್ಷಿಪಣಿ ದಾಳಿ, 22 ಮಂದಿ ಬಲಿ: ಗುಡುಗಿದ ಝೆಲೆನ್ಸ್ಕಿ

    ಈ ಜೈಲಿನಲ್ಲಿ ಹಲವು ಕ್ಷಯರೋಗಿಗಳೂ ಪತ್ತೆಯಾಗಿದ್ದಾರೆ. 5 ಸಾವಿರಕ್ಕೂ ಹೆಚ್ಚು ಕೈದಿಗಳನ್ನು ದಾಸ್ನಾ ಜೈಲಿನಲ್ಲಿ ಇರಿಸಲಾಗಿದೆ. ಯಾರೆಲ್ಲರಲ್ಲಿ ನಿಯಮಿತ ಚೆಕಪ್ ವೇಳೆ ಕಾಯಿಲೆ ಇರುವುದು ಕಂಡು ಬರುತ್ತದೋ ಅವರ ಚಿಕಿತ್ಸೆಯನ್ನು ಪ್ರಾರಂಭಿಸಲಾಗುತ್ತದೆ. ಅಂತಹ ಕೈದಿಗಳನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ ಎನ್ನಲಾಗಿದೆ.

    Published by:Precilla Olivia Dias
    First published: