• Home
  • »
  • News
  • »
  • national-international
  • »
  • Fake Notes: ರಿಸರ್ವ್ ಅಲ್ಲ, ರಿವರ್ಸ್ ಬ್ಯಾಂಕ್ ಎಂದು ಬರೆದಿದ್ದ 26 ಕೋಟಿ ನಕಲಿ ಕರೆನ್ಸಿ ವಶಕ್ಕೆ!

Fake Notes: ರಿಸರ್ವ್ ಅಲ್ಲ, ರಿವರ್ಸ್ ಬ್ಯಾಂಕ್ ಎಂದು ಬರೆದಿದ್ದ 26 ಕೋಟಿ ನಕಲಿ ಕರೆನ್ಸಿ ವಶಕ್ಕೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

1,290 ಬಂಡಲ್ ನೋಟುಗಳನ್ನು ಆರು ಪೆಟ್ಟಿಗೆಗಳಲ್ಲಿ ಇಡಲಾಗಿತ್ತು ಎಂದು ನಕಲಿ ನೋಟುಗಳನ್ನು ವಶಪಡಿಸಿಕೊಂಡಂತಹ ಪೊಲೀಸರು ಹೇಳಿದ್ದಾರೆ.

  • Share this:

ಈ ನಕಲಿ ನೋಟುಗಳನ್ನು ಮುದ್ರಿಸಿ ಮತ್ತು ಅವುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವಂತಹ ಕಾನೂನುಬಾಹಿರ ಕೆಲಸಗಳನ್ನು ಕಿಡಿಗೇಡಿಗಳು ಮಾಡುವಾಗ ಪೊಲೀಸರ (Police) ಕೈಗೆ ಸಿಕ್ಕಿ ಹಾಕಿಕೊಳ್ಳುವ ಅನೇಕ ಪ್ರಕರಣಗಳನ್ನು ನಾವು ಟಿವಿಯಲ್ಲಿ ನೋಡುತ್ತಲೇ ಇರುತ್ತೇವೆ ಅಂತ ಹೇಳಬಹುದು. ಈ ಕಳ್ಳಸಾಗಾಣಿಕೆ ಬರೀ ನಕಲಿ ನೋಟುಗಳಿಗೆ (Fake Currency) ಸೀಮಿತವಾಗಿಲ್ಲ, ಕಾಡುಗಳಲ್ಲಿ ಶ್ರೀಗಂಧದ ಮರಗಳನ್ನು ಸಹ ಈ ಕಿಡಿಗೇಡಿಗಳು ಬೇರೆ ಬೇರೆ ರೀತಿಯ ಮಾರ್ಗಗಳನ್ನು ಹುಡುಕಿ, ಒಟ್ಟಿನಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಸಾಗಿಸುತ್ತಿರುತ್ತಾರೆ.  ಅದರಂತೆ ಇದೀಗ ಆ್ಯಂಬುಲೆನ್ಸ್​ನಲ್ಲಿ  (Fake Currency In Ambulance) ಸಾಗಿಸುತ್ತಿದ್ದ ನಕಲಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ವಿವರಕ್ಕಾಗಿ ಮುಂದೆ ಓದಿ.


ಇತ್ತೀಚೆಗೆ ತುಂಬಾನೇ ಸುದ್ದಿ ಮಾಡಿದ ತೆಲುಗು ಚಿತ್ರ ‘ಪುಷ್ಪಾ’ ದಲ್ಲಿ ಸಹ ಪುಷ್ಪಾ ಎನ್ನುವ ಒಬ್ಬ ಲಾರಿ ಚಾಲಕ ಹೇಗೆ ಪೊಲೀಸರ ಕಣ್ಣು ತಪ್ಪಿಸಿ ರಕ್ತ ಚಂದನ ವ್ಯವಹಾರ ನಡೆಸುತ್ತಿರುತ್ತಾನೆ ಅಂತ ತೋರಿಸಿದ್ದರು. ಅದರಲ್ಲಿ ರಕ್ತ ಚಂದನವನ್ನು ಹಾಲನ್ನು ತೆಗೆದುಕೊಂಡು ಹೋಗುವ ಟ್ರಕ್ ನಲ್ಲಿ ಹೇಗೆ ಮುಚ್ಚಿಟ್ಟುಕೊಂಡು ಹೋಗುತ್ತಿದ್ದರು ಅಂತ ನಾವೆಲ್ಲಾ ನೋಡಿದ್ದೇವೆ.


ಆಂಬ್ಯುಲೆನ್ಸ್ ನಲ್ಲಿತ್ತು 26 ಕೋಟಿ ರೂಪಾಯಿಗೂ ಹೆಚ್ಚು ಬೆಲೆಯ ನಕಲಿ ನೋಟುಗಳು
ಇಲ್ಲಿಯೂ ಸಹ ಅದೇ ರೀತಿಯಾಗಿ ಪೊಲೀಸರ ಕಣ್ಣು ತಪ್ಪಿಸಿ ನಕಲಿ ನೋಟುಗಳನ್ನು ಸಾಗಿಸುತ್ತಿದ್ದವರನ್ನು ಹಿಡಿದಿದ್ದಾರೆ ನೋಡಿ. ಈ ಒಂದು ಘಟನೆಯಲ್ಲಿ 25 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ನಕಲಿ ನೋಟುಗಳನ್ನು ಮಾರುಕಟ್ಟೆಗೆ ಸಾಗಿಸುತ್ತಿದ್ದಾಗ ಖದೀಮರು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಗುಜರಾತ್ ರಾಜ್ಯದಲ್ಲಿರುವ ಸೂರತ್ ನಗರದಲ್ಲಿ ಈ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ಯುವಂತಹ ಒಂದು ಆಂಬ್ಯುಲೆನ್ಸ್ ನಿಂದ 26 ಕೋಟಿ ರೂಪಾಯಿಗೂ ಹೆಚ್ಚು ಮುಖಬೆಲೆಯ ನಕಲಿ ನೋಟುಗಳನ್ನು ಗುರುವಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.


ರಸ್ತೆ ಮಧ್ಯೆಯೇ ಪೊಲೀಸರು ತಡೆದುನಿಲ್ಲಿಸಿದ್ರು
ಖಚಿತ ಸುಳಿವಿನ ಮೇರೆಗೆ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು ಅಷ್ಟೊಂದು ಭಾರಿ ಮೊತ್ತದ ನಕಲಿ ನೋಟುಗಳನ್ನು ಹೊತ್ತೊಯ್ಯುತ್ತಿದ್ದಂತಹ ಆ ಆಂಬ್ಯುಲೆನ್ಸ್ ಅನ್ನು ರಸ್ತೆಯ ಮಧ್ಯದಲ್ಲಿಯೇ ತಡೆದು ನಿಲ್ಲಿಸಿ ಅದರಲ್ಲಿದ್ದ ಖೋಟಾ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


1,290 ಬಂಡಲ್ ನೋಟುಗಳನ್ನು ಆರು ಪೆಟ್ಟಿಗೆಗಳಲ್ಲಿ ಇಡಲಾಗಿತ್ತು ಎಂದು ನಕಲಿ ನೋಟುಗಳನ್ನು ವಶಪಡಿಸಿಕೊಂಡಂತಹ ಪೊಲೀಸರು ಹೇಳಿದ್ದಾರೆ.


ಈ ಆಂಬ್ಯುಲೆನ್ಸ್ ಆನ್ನು ಪೊಲೀಸರು ಎಲ್ಲಿ ತಡೆ ಹಿಡಿದಿದ್ದಾರೆ?
ಸೂರತ್​ನ ಕಮ್ರೇಜ್ ಪ್ರದೇಶದಲ್ಲಿ ಆಂಬ್ಯುಲೆನ್ಸ್ ಅನ್ನು ತಡೆಹಿಡಿಯಲಾಗಿದೆ. ನಕಲಿ ನೋಟು 2,000 ರೂಪಾಯಿಗಳ ನೋಟುಗಳ ಮೇಲೆ 'ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ' ಬದಲಿಗೆ 'ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ' ಎಂದು ಮುದ್ರಿಸಲಾಗಿತ್ತು.


ಆಂಬ್ಯುಲೆನ್ಸ್ ನ ಒಂದು ಬದಿಯಲ್ಲಿ, ದಿಕ್ರಿ ಎಜ್ಯುಕೇಶನ್ ಟ್ರಸ್ಟ್ ಮೋತವಡಾಲ-ಸೂರತ್ ಎಂದು ಬರೆಯಲಾಗಿತ್ತು ಮತ್ತು ಇನ್ನೊಂದು ಬದಿಯಲ್ಲಿ, ‘ಗೋ ಮಾತಾ ರಾಷ್ಟ್ರ ಮಾತಾ’ ಎಂದು ಬರೆಯಲಾಗಿತ್ತು.


ಇದನ್ನೂ ಓದಿ: Fake Medicines Check: ನಕಲಿ ಔಷಧಿ ಕಂಡುಹಿಡಿಯೋಕೆ ಕ್ಯೂಆರ್ ಕೋಡ್! ಇಲ್ಲಿದೆ ಆ ಟ್ರಿಕ್


ಪೊಲೀಸ್ ಅಧೀಕ್ಷಕ (ಎಸ್‌ಪಿ) ಹಿತೇಶ್ ಜಾಯ್ಸರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ ನಂತರ "ಈ ನೋಟುಗಳನ್ನು ಎಲ್ಲಿ ಮುದ್ರಿಸಲಾಗಿದೆ.  ಅವುಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬುದರ ಬಗ್ಗೆ ಆಂಬ್ಯುಲೆನ್ಸ್ ಚಾಲಕನನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದೇವೆ. ವಿಧಿವಿಜ್ಞಾನ ತಂಡವೂ ಸಹ ಈ ಸ್ಥಳದಲ್ಲಿತ್ತು ಎಂದು ಹೇಳಿದ್ದಾರೆ.


ಹಿಂದೊಮ್ಮೆ ನಕಲಿ ನೋಟುಗಳನ್ನು ಮುದ್ರಿಸಿದ ಮೂವರ ಬಂಧನ
ಈ ಹಿಂದೆ ಮೇ ತಿಂಗಳಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ಮಹಾರಾಷ್ಟ್ರದ ಕಲ್ಯಾಣ್ ಮಾರುಕಟ್ಟೆಗಳಲ್ಲಿ ಅವುಗಳನ್ನು ಚಲಾವಣೆಯಲ್ಲಿ ಸೇರಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದರು.


ಆರೋಪಿಗಳಿಂದ ಮುದ್ರಣ ಯಂತ್ರಗಳು, 39,500 ರೂಪಾಯಿ ಮೌಲ್ಯದ ಖೋಟಾ ನೋಟುಗಳು ಮತ್ತು ವಾಟರ್ ಮಾರ್ಕ್ ಪೇಪರ್, ಫೋಟೋ ರಿಮ್ ಸೇರಿದಂತೆ ಇತರ ನೋಟು ತಯಾರಿಸುವ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು.


ಇದನ್ನೂ ಓದಿ: Minority Affairs Ministry: ಮೋದಿ ಸರ್ಕಾರದಿಂದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ರದ್ದು?


ಸಿಕ್ಕ ಸುಳಿವಿನ ಮೇರೆಗೆ, ಬಲೆ ಬೀಸಿದ್ದ ಪೊಲೀಸರು ಮೂವರನ್ನು ಸ್ಥಳದಲ್ಲೇ ಬಂಧಿಸಿದರು ಮತ್ತು 200, 100 ಮತ್ತು 50 ರೂಪಾಯಿ ಮುಖಬೆಲೆಯ ನಕಲಿ ಭಾರತೀಯ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

Published by:ಗುರುಗಣೇಶ ಡಬ್ಗುಳಿ
First published: