26/11 Attack : ಮುಂಬೈ ಡೆಡ್ಲಿ ದಾಳಿಗೆ 13 ವರ್ಷ: ಕರಾಳ ದಿನ ನೆನೆದ ದೇಶದ ಜನತೆ!

26/11 Attack: ದುಷ್ಕರ್ಮಿಗಳು ತಾಜ್‌ ಮಹಲ್‌ ಹೊಟೇಲ್(Taj mahal Hotel), ಒಬೇರಾಯ್‌ ಹೊಟೇಲ್‌(Obery Hotel), ಲಿಯೋಪೋಲ್ಡ್‌ ಕೆಫೆ(Leo fold Café), ನಾರಿಮನ್‌ ಹೌಸ್‌, ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಸ್‌ ಮೊದಲಾದ ಕಡೆ ಮನಬಂದಂತೆ ಬಂದೂಕು ಮತ್ತು ಬಾಂಬಿನ ಮೂಲಕ ದಾಳಿ ನಡೆಸಿದರು.

26/11 ಮುಂಬೈ ದಾಳಿಗೆ 13 ವರ್ಷ

26/11 ಮುಂಬೈ ದಾಳಿಗೆ 13 ವರ್ಷ

  • Share this:
2008 ನವೆಂಬರ್​ 26 ಮುಂಬೈ(Mumbai) ನಗರದಲ್ಲಿ ನಡೆಯಬಾರದ ಘೋರ ದುರಂತವೊಂದು ನಡೆದುಹೋಗಿತ್ತು. ಮುಂಬೈ (Mumbai) ಮೇಲೆ ಪಾಕಿಸ್ತಾನದ ಲಷ್ಕರ್‌- ಎ- ತೊಯ್ಬಾ (Pakistani Lashkar-e-Taiba terrorists) ಉಗ್ರರು ದಾಳಿ ನಡೆಸಿ ಇಂದಿಗೆ 13 ವರ್ಷ (26/11 Mumbai Terror Attack). ಸತತ ಮೂರು ದಿನಗಳ ಕಾಲ ಮುಂಬೈ ಮಹಾನಗರಿ ಉಗ್ರರ ಕಪಿಮುಷ್ಟಿಯಲ್ಲಿ ನಲುಗಿತ್ತು. ಲಷ್ಕರ್‌ ಉಗ್ರ ಸಂಘಟನೆಯ 10 ಉಗ್ರರು ಜನನಿಬಿಡ ಪ್ರದೇಶಗಳಲ್ಲಿ ಜನರ ಮಾರಣಹೋಮವನ್ನೇ ನಡೆಸಿದ್ದರು. ಸಿಕ್ಕ ಸಿಕ್ಕವರ ಮೇಲೆ ಗುಂಡು(Firing) ಹಾರಿಸಿ ಹತ್ಯೆ ಮಾಡಿದ್ದರು. ಸಮುದ್ರ ಮಾರ್ಗದಿಂದ ಬಂದ ಈ ದುಷ್ಕರ್ಮಿಗಳು ತಾಜ್‌ ಮಹಲ್‌ ಹೊಟೇಲ್(Taj mahal Hotel), ಒಬೇರಾಯ್‌ ಹೊಟೇಲ್‌(Obery Hotel), ಲಿಯೋಪೋಲ್ಡ್‌ ಕೆಫೆ(Leo fold Cafe), ನಾರಿಮನ್‌ ಹೌಸ್‌, ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಸ್‌ ಮೊದಲಾದ ಕಡೆ ಮನಬಂದಂತೆ ಬಂದೂಕು ಮತ್ತು ಬಾಂಬಿನ ಮೂಲಕ ದಾಳಿ ನಡೆಸಿದರು. ಒಟ್ಟು ನಾಲ್ಕು ದಿನಗಳ ಕಾಲ ತಮ್ಮ ದಾಳಿಯನ್ನು ನಡೆಸಿದರು. ಈ ದುರ್ಘಟನೆಯಲ್ಲಿ ಆರು ಜನ ಅಮೆರಿಕದ ನಾಗರಿಕರು, ಹಲವು ವಿದೇಶೀಯರೂ ಸೇರಿದಂತೆ 166 ಜನರು ಸಾವಿಗೀಡಾಗಿದ್ದರು. 300ಕ್ಕೂ ಅಧಿಕ ಜನರು ಗಾಯಾಳುಗಳಾಗಿದ್ದರು. ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯ ಆಗಿತ್ತು. ಇಂದಿಗೆ ಆ ಘಟನೆ ನಡೆದು 13 ವರ್ಷಗಳು ಕಳೆದಿವೆ. ಗಾಯ ಮಾಸಿದರೂ, ಗಾಯದ ಗುರುತುಗಳು ಹಾಗೇ ಇವೆ. ಇಂದಿಗೂ ಉಗ್ರರು ತಮ್ಮ ಕ್ರೌರ್ಯ ಮೆರೆಯುತ್ತಿದ್ದಾರೆ. 

ಡೆಡ್ಲಿ ಅಟ್ಯಾಕ್​ ನಡೆದಿದ್ದು ಹೇಗೆ?

2008 ನ.21ರಂದು ಪಾಕಿಸ್ತಾನದ 10 ಮಂದಿ ಉಗ್ರರು ಬೋಟ್‌ ಮೂಲಕ ಭಾರತದತ್ತ ಪ್ರಯಾಣಿಸಿದ್ದರು. ಗುರುತು ಮರೆಸಿಕೊಂಡು ಮುಂಬೈಯನ್ನು ಪ್ರವೇಶಿಸಿದ ಉಗ್ರರು ಮೂರು ದಿನಗಳ ಕಾಲ ಹೋಟೆಲ್‌, ರೈಲ್ವೆ ನಿಲ್ದಾಣ, ಆಸ್ಪತ್ರೆ, ಯಹೂದಿ ಸಮುದಾಯ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಬಾಂಬ್​ ಮತ್ತು ಗುಂಡಿನ ದಾಳಿ ನಡೆಸಿದರು. ಒಟ್ಟು 166 ಜನರ ಸಾವಿಗೆ ಕಾರಣರಾದರು. 300ಕ್ಕೂ ಹೆಚ್ಚು ಜನರು ಗಾಯಗೊಂಡರು. ತಾಜ್‌, ಒಬೇರಾಯ್‌ ನಂತಹ ಹೋಟೆಲ್‌ಗಳು ಉಗ್ರರ ಗುಂಡಿನ ದಾಳಿ ಮತ್ತು ಬಾಂಬ್‌ ಬ್ಲಾಸ್ಟ್‌ಗೆ ಹೊತ್ತಿ ಉರಿದವು. ಜನರು ಉಗ್ರರ ಕಪಿಮುಷ್ಠಿಯಲ್ಲಿ ನರಳಿ ಅಕ್ಷರಶಃ ನರಕ ದರ್ಶನ ಕಂಡರು.ರಕ್ಷಣೆಗೆ ಹೋದ ನಮ್ಮ ಸೈನಿಕರು ಕೂಡ ಹುತಾತ್ಮರಾದರು.

ಇದನ್ನು ಓದಿ : ವರದಕ್ಷಿಣೆ ಹಣ ಹೆಣ್ಮಕ್ಕಳ ಹಾಸ್ಟಲ್ ನಿರ್ಮಾಣಕ್ಕೆ ಮೀಸಲಿಟ್ಟ ವಧು- ಶಹಬ್ಬಾಸ್ ಅಂಜಲಿ

4 ವರ್ಷದ ನಂತರ ಕಸಬ್‌ ಗಲ್ಲಿಗೆ

ದಾಳಿ ವಿಚಾರ ತಿಳಿಯುತ್ತಲೇ ಜನರ ರಕ್ಷಣೆಗೆ ಆಗಮಿಸಿದ ಪೋಲಿಸ್‌ ಅಧಿಕಾರಿಗಳಾದ ಹೇಮಂತ್‌ ಕರ್ಕರೆ, ವಿಜಯ್‌ ಸಾಲಸ್ಕರ್‌, ಅಶೋಕ್‌ ಕಾಮ್ಟೆಮತ್ತು ತುಕಾರಾಮ್‌ ಓಂಬ್ಳೆ ಮತ್ತು ಯೋಧ ಸಂದೀಪ್‌ ಉನ್ನಿಕೃಷ್ಣನ್‌ ಉಗ್ರರಿಂದ ಹತರಾದರು. ಈ ಉಗ್ರಗಾಮಿ ಕೃತ್ಯವನ್ನು ಇಡೀ ವಿಶ್ವವೇ ಖಂಡಿಸಿತ್ತು. ಉಗ್ರ ಹಾರಿಸಿದ ಗುಂಡುಗಳು ಎದೆಯನ್ನು ಸೀಳಿದರೂ ಅಪ್ರತಿಮ ಶೌರ್ಯತೋರಿದ ತುಕಾರಾಮ್‌ ಕೊನೆಯುಸಿರೆಳೆಯುವ ಹಂತದಲ್ಲಿದ್ದರೂ ಕಸಬ್‌ನ ಮೇಲೆ ಗುಂಡು ಹಾರಿಸಿ, ಆತನನ್ನು ಸೆರೆಹಿಡಿಯುವಂತೆ ಮಾಡಿದರು. ಈ ಕಾರಣಕ್ಕಾಗಿ ಭಾರತ ಸರ್ಕಾರವು 2009ರಲ್ಲಿ ಓಂಬ್ಳೆಗೆ ಅಶೋಕ ಚಕ್ರ ಗೌರವ ನೀಡಿದೆ. ತಾಜ್‌ ಹೋಟೆಲ್‌, ರೈಲು ನಿಲ್ದಾಣಗಳು ಮತ್ತು ಪ್ರವಾಸಿ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ 58 ಜನರನ್ನು ಬಲಿ ಪಡೆದಿದ್ದ ಅಜ್ಮಲ್‌ ಕಸಬ್‌ನನ್ನು (Ajmal kasab) 2012 ನವೆಂಬರ್‌ 21ರಂದು ಪುಣೆಯ ಯೆರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

ಇದನ್ನು ಓದಿ : ಅಧಿಕಾರ ವಹಿಸಿಕೊಂಡ ದಿನವೇ ರಾಜೀನಾಮೆ ನೀಡಿದ ಸ್ವೀಡನ್‌ನ ಮೊದಲ ಮಹಿಳಾ ಪ್ರಧಾನಿ..!

ದಾಳಿ  ನಡೆದ ಪ್ರಮುಖ ಸ್ಥಳಗಳು!

- ಛತ್ರಪತಿ ಶಿವಾಜಿ ಟರ್ಮಿನಸ್‌
- ಒಬೆರಾಯ್‌ ಟ್ರೈಡೆಂಟ್‌ ಹೋಟೆಲ್‌
- ತಾಜ್‌ ಹೋಟೆಲ್‌
- ಲಿಯೋಪೋಲ್ಡ್‌ ಕೆಫೆ
- ಕಾಮಾ ಹಾಸ್ಪಿಟಲ್‌
- ನಾರಿಮನ್‌ ಹೌಸ್‌
- ಕೆಲ ಟ್ಯಾಕ್ಸಿಗಳಲ್ಲಿ ಸ್ಫೋಟ

ದಾಳಿ ನಡೆಸಿದ ಉಗ್ರಗಾಮಿಗಳಲ್ಲಿ ಒಂಬತ್ತು ಜನರು ಹತರಾಗಿ ಅಜ್ಮಲ್‌ ಅಮಿರ್‌ ಕಸಬ್‌ ಎಂಬವನೊಬ್ಬ ಸೆರೆಸಿಕ್ಕಿದ್ದ. ಈ ಘಟನೆ ನಡೆಸ ಬಳಿಕ ಭದ್ರತೆ ಬಗ್ಗೆ ದೇಶದಲ್ಲಿ ಕೆಲ ಮಾತುಗಳು ಕೇಳಿಬಂದಿತ್ತು ಇಲ್ಲಿ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಇದಾದ ಬಳಿಕ ದೇಶದಲ್ಲಿ ಭದ್ರತೆ ಹೆಚ್ಚಿಲಾಯಿತು. ನಮ್ಮ ತಂಟೆಗೆ ಬಂದವ ಉಗ್ರರನ್ನು ಸದೆಬಡಿಯಲಾಯಿತು.
Published by:Vasudeva M
First published: