Masood Azhar Met Taliban: ತಾಲಿಬಾನ್ ಬೆಂಬಲದೊಂದಿಗೆ ಭಾರತದ ಮೇಲೆ ದಾಳಿಗೆ ಮಸೂದ್ ಅಜರ್ ಸಂಚು

26/11 Attack Mastermind Masood Azhar Met Taliban: ಭಾರತವನ್ನು ಗುರಿಯಾಗಿಟ್ಟುಕೊಂಡು ಕಾರ್ಯಾಚರಣೆಯನ್ನು ಪ್ರಾರಂಭಿಸಬೇಕು. ಕಾಶ್ಮೀರ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಸಹಾಯ ಮಾಡುವಂತೆ ಸಭೆಯಲ್ಲಿ ಮಸೂದ್ ಅಜರ್  ತಾಲಿಬಾನ್​​ ಉಗ್ರರ ಮುಖಂಡನನ್ನು ಮನವಿ ಮಾಡಿದ್ದಾನೆ

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್

  • Share this:
Masood Azhar Met Taliban in Afghanistan: ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆಯುತ್ತಿದ್ದಂತೆ ಭಾರತದ ಶತ್ರುರಾಷ್ಟ್ರ ಪಾಕಿಸ್ತಾನದಲ್ಲಿ ಸಂಭ್ರಮ ಮನೆ ಮಾಡಿದೆ. ತಾಲಿಬಾನಿ ಉಗ್ರರರ ಬೆಂಬಲದೊಂದಿಗೆ ಭಾರತದ ಮೇಲೆ ಅದರಲ್ಲೂ ಕಾಶ್ಮೀರದಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗಲು ಪಾಕ್​​ ಉಗ್ರರು ಉತ್ಸುಕರಾಗಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ 26/11 ಮುಂಬೈ ದಾಳಿಯ ಮಾಸ್ಟರ್​​ ಮೈಂಡ್​ ಮಸೂದ್ ಅಜರ್(Masood Azhar) ಫುಲ್​ ಆಕ್ಟೀವ್​ ಆಗಿದ್ದು, ಭಾರತದ ಮೇಲೆ ಕತ್ತಿ ಮಸೆಯಲು ಸಿದ್ಧತೆಗಳನ್ನು ನಡೆಸಿದ್ದಾನೆ. ತಾಲಿಬಾನಿ ಉಗ್ರರ ಮುಖಂಡನನ್ನು ಭೇಟಿ ಮಾಡಿ ಭಾರತದ ಮೇಲೆ ಅಟ್ಯಾಕ್​​ ಮಾಡಲು ಸಹಾಯ ಕೋರಿದ್ದಾನೆ.

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಭಾರತಕ್ಕೆ ಭದ್ರತಾ ಬೆದರಿಕೆ ನಿರಂತರವಾಗಿ ಹೆಚ್ಚುತ್ತಿದೆ. ಈಗ ಅಫ್ಘಾನಿಸ್ತಾನವು ಪಾಕಿಸ್ತಾನದ ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗಿ ಮಾರ್ಪಾಡಾಗಲಿದೆ ಎಂಬ ಆತಂಕ ಮನೆ ಮಾಡಿದೆ. ತಾಲಿಬಾನ್ ನಾಯಕ ಮುಲ್ಲಾ ಬರದಾರನ್ನು(Mullah Baradar) ಭಯೋತ್ಪಾದಕ ಸಂಘಟನೆಯ ನಾಯಕ ಜೈಶ್-ಎ-ಮೊಹಮ್ಮದ್ ಮಸೂದ್ ಅಜರ್ ಭೇಟಿಯಾಗಿದ್ದಾನೆ. ಈ ಸಭೆ ಆಗಸ್ಟ್ 17 ರಿಂದ 19ರ ಮಧ್ಯೆ ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ನಡೆದಿದೆ. ಈ ಸಭೆಯನ್ನು ಐಎಸ್‌ಐ ಆಯೋಜಿಸಿತ್ತು ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ಮಸೂದ್ ಅಜರ್ ಹಾಗೂ ಅಬ್ದುಲ್ ರೌಫ್(Abdul Rauf) ಜೊತೆಯಾಗಿ ಮುಲ್ಲಾ ಘನಿ ಬರದಾರ್ ನ ಭೇಟಿಯಾಗಿದ್ದಾರೆ.  ಭಾರತವನ್ನು ಗುರಿಯಾಗಿಟ್ಟುಕೊಂಡು ಕಾರ್ಯಾಚರಣೆಯನ್ನು ಪ್ರಾರಂಭಿಸಬೇಕು. ಕಾಶ್ಮೀರ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಸಹಾಯ ಮಾಡುವಂತೆ ಸಭೆಯಲ್ಲಿ ಮಸೂದ್ ಅಜರ್  ತಾಲಿಬಾನ್​​ ಉಗ್ರರ ಮುಖಂಡನನ್ನು ಮನವಿ ಮಾಡಿದ್ದಾನೆ ಎನ್ನಲಾಗುತ್ತಿದೆ.

ಪಾಕಿಸ್ತಾನದ ಬೆಂಬಲದೊಂದಿಗೆ ಈಗಾಗಲೇ ರಾಜಧಾನಿ ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದ ಬಹುಭಾಗವನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ವಶಪಡಿಸಿಕೊಳ್ಳುವ ಮುನ್ನವೇ, ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ದೇಶವನ್ನು ತೊರೆದು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಹೋದರು. ಪರಿಸ್ಥಿತಿ ಹದಗೆಟ್ಟ ನಂತರ, ಭಾರತ ಸೇರಿದಂತೆ ಹೆಚ್ಚಿನ ದೇಶಗಳು ಅಫ್ಘಾನಿಸ್ತಾನದಿಂದ ತಮ್ಮ ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಂಡವು. ಇದು ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಲು ಸಂಪೂರ್ಣ ಅವಕಾಶವನ್ನು ನೀಡಿತು.

ಭಯೋತ್ಪಾದನೆ ವಿರುದ್ಧ ಎಂದು ಹೇಳಿಕೊಳ್ಳುವ ಆದರೆ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಒದಗಿಸುವ ಪಾಕಿಸ್ತಾನ ಈಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗೆಲುವನ್ನು ತನ್ನದೆಂದು ಭಾವಿಸುತ್ತಿದೆ. ತಜ್ಞರ ಪ್ರಕಾರ, ಪಾಕಿಸ್ತಾನದ ನಾಯಕರಿಂದ ತಾಲಿಬಾನ್ ವಿಜಯದ ವೈಭವೀಕರಣವು ಮತ್ತಷ್ಟು ಅನಾಹುತಕ್ಕೆ ಆಹ್ವಾನ ನೀಡಲಿದೆ.

ಇದನ್ನೂ ಓದಿ: Explosion Near Kabul Airport: ಕೂದಲೆಳೆ ಅಂತರದಲ್ಲಿ ತಪ್ಪಿದ 3ನೇ ಸ್ಫೋಟ; ಪಾಕ್ ಬಾಂಬರ್ ಬಂಧನ!

ಕಾಬೂಲ್‌ನ ವಿಮಾನ ನಿಲ್ದಾಣದಲ್ಲಿ ನಡೆದಿರುವ ಸ್ಫೋಟದ ಹಿನ್ನಲೆಯಲ್ಲಿ CNN-News18ಗೆ ಅಪ್ಘಾನಿಸ್ತಾನದ ಉನ್ನತ ಸುದ್ದಿ ಮೂಲಗಳು ಅತಿಮುಖ್ಯ ಸಂದೇಶವೊಂದನ್ನು ನೀಡಿದ್ದು ಶಾಂತಿ ಒಪ್ಪಂದ ಪ್ರಕ್ರಿಯೆ ಹಿನ್ನಲೆಯಲ್ಲಿ ಅಪಾಯಕಾರಿ ಕೈದಿಗಳನ್ನು ಬಿಡುಗಡೆ ಮಾಡಿರುವ ಸಾಧ್ಯತೆ ಇದ್ದು ಈ ಕೈದಿಗಳೇ ಬಾಂಬ್ ಸ್ಫೋಟದ ಹಿಂದಿರುವ ಕೈಗಳಾಗಿವೆ ಎಂದು ಸುದ್ದಿ ಮೂಲ ತಿಳಿಸಿದೆ.ಈ ಖೈದಿಗಳ ಪೈಕಿ ISISನ ಪ್ರಮುಖ ವ್ಯಕ್ತಿ ಅಬ್ದುಲ್ಲಾ ಫಾರೂಕಿ(Mawalawi Farooqi )ಸ್ಫೋಟದ ಪ್ರಮುಖ ರುವಾರಿಯಾಗಿರಬಹುದೆಂಬ ಮಾಹಿತಿ ಕೂಡ ದೊರಕಿದೆ. ಕಾಬೂಲ್‌ನಲ್ಲಿ ನಡೆದ ಗುರುದ್ವಾರ ಆತ್ಮಾಹುತಿ ದಾಳಿಯನ್ನು ನಡೆಸಿದ್ದರ ಹಿಂದೆ ಇದೇ ಫಾರೂಕಿಯ ಕೈವಾಡ ಇತ್ತು ಎಂಬುದನ್ನು ತನಿಖೆಯ ಸಮಯದಲ್ಲಿ ಸ್ವತಃ ಫಾರೂಕಿ ಒಪ್ಪಿಕೊಂಡಿದ್ದನು. ಸ್ಫೋಟಗಳನ್ನು ಸಂಘಟಿಸುವಲ್ಲಿ ಪಾಕಿಸ್ತಾನದ ಕೈವಾಡ ಕೂಡ ಇದೆ ಎಂಬುದನ್ನು ಫಾರೂಕಿ ತನಿಖೆಯ ಸಮಯದಲ್ಲಿ ಒಪ್ಪಿಕೊಂಡಿದ್ದನು. ಮಾರ್ಚ್ 25, 2020 ರಂದು ಕಾಬೂಲ್‌ನಲ್ಲಿರುವ ಗುರುದ್ವಾರ ಹರ್ ರಾಯಿ ಸಾಹಿಬ್‌ ಮೇಲೆ ಆತ್ಮಾಹುತಿ ಬಾಂಬರ್‌ಗಳು ದಾಳಿ ನಡೆಸಿದ್ದರು. ಇದರಲ್ಲಿ 27 ಜನರು ಮೃತರಾಗಿದ್ದರು.
Published by:Kavya V
First published: