ವಿದ್ಯಾರ್ಥಿಯೊಬ್ಬಳನ್ನು ಅತ್ಯಾಚಾರವೆಸಗಿ (Rape) ಬಳಿಕ ಬರ್ಬರವಾಗಿ ಹತ್ಯೆ (Murder) ಮಾಡಿರುವ ಘಟನೆಯೊಂದು ಕಜಕಿಸ್ತಾನದಲ್ಲಿ (Kazakhstan) ಬೆಳಕಿಗೆ ಬಂದಿದೆ. ಫ್ಯಾಶನ್ ಡಿಸೈನರ್ (Fashion Designer) ವಿದ್ಯಾರ್ಥಿನಿಯನ್ನು (Student) ಕೊಲೆ ಮಾಡಿದ ಬಳಿಕ ಆರೋಪಿ ಆಕೆಯ ತಲೆಯನ್ನು ಕಡಿದು ಬಿಸಿ ನೀರಿನಲ್ಲಿ ಕುದಿಸಿದ್ದಾನೆ. ಸದ್ಯ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಆತನನ್ನು ಬಂಧನದಲ್ಲಿರಿಸಿದ್ದಾರೆ.
19 ವರ್ಷದ ಅಯಾಜಾನ್ ಎಡಿಲೋವಾ ಎಂಬಾಕೆ ಫ್ಯಾಷನ್ ಡಿಸೈನ್ ವಿದ್ಯಾರ್ಥಿನಿಯಾಗಿದ್ದು, ಆಕೆಯನ್ನು 28 ವರ್ಷದ ರಹಮಾನ್ಬರ್ಡಿ ಟೊರೆಬೆಕೊವ್ ಎಂಬಾತ ಆತ್ಯಾಚಾರ ಮಾಡಿದ್ದಾನೆ. ನಂತರ ಆಕೆಯನ್ನು ಕೊಲೆ ಮಾಡಿದ್ದಾನೆ.
ಆರೋಪಿ ರಹಮಾನ್ಬರ್ಡಿ ಟೊರೆಬೆಕೊವ್ ಮನೆಗೆ ಅಯಾಜಾನ್ ಎಡಿಲೋವಾ ಹೋಗಿದ್ದಳು. ಆತನ ಬಟ್ಟೆಯ ಅಳತೆ ತೆಗೆಯಲೆಂದು ಆತನ ಮನೆಯ ಒಳಕ್ಕೆ ಕಾಲಿಟ್ಟಳು. ಆದರೆ ರಹಮಾನ್ಬರ್ಡಿಗೆ ಅಯಾಜಾನ್ ಎಡಿಲೋವಾ ಸೌಂದರ್ಯ ಕಂಡು ಹುಚ್ಚರಂತೆ ವರ್ತಿಸಲು ಪ್ರಾರಂಭಿಸಿದನು. ನನ್ನ ಜೊತೆಗೆ ಲೈಂಗಿಕ ಕ್ರಿಯೆ ನಡೆಸಲು ಸಹಕರಿಸುವೆಯಾ ಎಂದು ಕೇಳಿಕೊಂಡನು. ಆದರೆ ಇದಕ್ಕೆ ಅಯಾಜಾನ್ ಎಡಿಲೋವಾ ಒಪ್ಪದೇ ಇದ್ದಾಗ ಆಕೆಯನ್ನು ಅತ್ಯಾಚಾರ ಮಾಡಲು ಮುಂದಾಗುತ್ತಾನೆ. ಮನೆಗೆ ಬಂದಿದ್ದ 18 ವರ್ಷದ ವಿದ್ಯಾರ್ಥಿಯ ಮೇಲೆ ತನ್ನ ಕಾಮತೃಷೆ ತೋರಿಸಿ ಆಕೆಯನ್ನು ಕೊಲೆ ಮಾಡುತ್ತಾನೆ. ನಂತರ ಆಕೆಯ ರುಂಡವನ್ನು ಕಡಿದು ನೀರಿಲ್ಲಿ ಬೇಯಿಸುತ್ತಾನೆ.
ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ
ವಿದ್ಯಾರ್ಥಿಯನ್ನು ಕೊಲೆ ಮಾಡಿದ ನಂತರ ಆರೋಪಿ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬ್ಯಾಗ್ನಲ್ಲಿ ಹಾಕಿದ್ದಾನೆ. ಆದರೆ ಅಯಾಜಾನ್ ಎಡಿಲೋವಾ ತಲೆಯನ್ನು ಮನೆಯಲ್ಲಿಯೇ ಇಟ್ಟಿದ್ದ ಮತ್ತು ಈ ಕಾರಣಕ್ಕಾಗಿ ಆತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಮೃತ ಅಯಾಜಾನ್ ಎಡಿಲೋವಾ ಸ್ಥಳೀಯ ಟೈಲರ್ ಜೊತೆಗೆ ಕೆಲಸ ಮಾಡುತ್ತಿದ್ದಳು, ಆರೋಪಿಯ ಫ್ಲಾಟ್ಗೆ ಹೋಗಿ ಸೂಟ್ ಅಳತೆ ಮಾಡಲೆಂದು ಹೋಗಿದ್ದಳು. ಆದರೆ ಫ್ಲಾಟ್ಗೆ ಹೋದವಳು ಹೆಣವಾಗಿದ್ದಾಳೆ.
ಇನ್ನು ಘಟನೆ ನಡೆದ ದಿನ ಅಯಾಜಾನ್ ಎಡಿಲೋವಾ ತನ್ನ ಗೆಳೆಯನೊಂದಿಗೆ ರಾತ್ರಿ ವಿಹಾರಕ್ಕೆ ಹೋಗಬೇಕಿತ್ತು. ಆದರೆ ಆರೋಪಿ ರಹಮಾನ್ಬರ್ಡಿ ಟೊರೆಬೆಕೊವ್ ಆಕೆಯನ್ನು ಕೊಲೆ ಮಾಡಿದ್ದಾನೆ.
ಇದನ್ನು ಓದಿ: Renee Gracie: ನೀಲಿ ತಾರೆಯಾಗಲು ವೃತ್ತಿ ಜೀವನಕ್ಕೆ ಗುಡ್ ಬಾಯ್ ಹೇಳಿದ ಖ್ಯಾತ ಕಾರ್ ರೇಸರ್!
ಉಗುರು ಮತ್ತು ಹಲ್ಲು ತೆಗೆಯಲಾಗಿದೆ
ಪೊಲೀಸರು ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆಕೆ ಆರೋಪಿ ರಹಮಾನ್ಬರ್ಡಿ ಟೊರೆಬೆಕೊವ್ ಜೊತೆ ಲಿಫ್ಟ್ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ನಂತರದ ಬಳಿಕ ಅಯಾಜಾನ್ ಎಡಿಲೋವಾಳ ಸುಳಿವು ಸಿಕ್ಕಿರಲಿಲ್ಲ. ಈ ಆಧಾರದ ಮೇಲೆ, ಪೊಲೀಸರು ಆರೋಪಿಯ ಮನೆಗೆ ತಲುಪಿದಾಗ, ಹುಡುಗಿಯ ತಲೆ ಅಡುಗೆಮನೆಯಲ್ಲಿ ಕುದಿಯುತ್ತಿರುವುದು ಕಂಡುಬಂದಿದೆ.
ಅಯಾಜನ್ ಎಡಿಲೋವಾ ಅವರ ಸಹೋದರ ತನ್ನ ಸಹೋದರಿಯ ದೇಹದ ಭಾಗಗಳನ್ನು ಗುರುತಿಸಿ ಪೊಲೀಸರಿಗೆ ತಿಳಿಸಿದ್ದಾನೆ.
ಇದನ್ನು ಓದಿ: Petrol: ವಾಹನಕ್ಕೆ 100, 200 ರೂಪಾಯಿಯ ಪೆಟ್ರೋಲ್ ಹಾಕಿಸ್ತೀರಾ? ಹಾಗಿದ್ರೆ ನೀವು ಮೋಸ ಹೋಗಿದ್ದೀರಾ!
ಇನ್ನು ಆರೋಪಿಗಳು ಅಯಾಜಾನ್ ಎಡಿಲೋವಾ ದೇಹವನ್ನು ತುಂಡರಿಸಿ ಇಟ್ಟಿದ್ದಲ್ಲದೆ, ಪ್ರತಿ ಉಗುರು ಮತ್ತು ಹಲ್ಲು ತೆಗೆದಿದ್ದನು. ಆತನ ಕೊಲೆ ಆಗಿರುವ ಅಯಾಜಾನ್ ಎಡಿಲೋವಾ ಕುರುಕು ಸಿಕ್ಕದಂತೆ ಚಿಂತಿಸಿ ಈ ರೀತಿಯ ಕೆಲಸವನ್ನು ಮಾಡಿದ್ದನು. ಆದರೆ ಸಿಸಿ ಕ್ಯಾಮೆರಾ ದೃಶ್ಯವಳಿಯ ಮೇರೆಗೆ ಆರೋಪಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಬಹುತೇಕರು ಈತನಿಗೆ ಕಠಿಣ ಶಿಕ್ಷೆಯಾಗಬೇಕು ಎಂಉ ಆಗ್ರಹಿಸುತ್ತಿದ್ದಾರೆ.
ಆರೋಪಿಯ ಕಾಮಬಯಕೆಗೆ ಮಗಳೊಬ್ಬಳು ಜೀವತೆತ್ತಳು ಎಂಬ ಬೇಸರದಲ್ಲಿ ಆಖೆಯ ಕುಟುಂಬಸ್ಥರಿದ್ದಾರೆ. ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಂತ್ರಸ್ತೆಯ ಕುಟುಂಬದವರು ಆಗ್ರಹಿಸಿದ್ದಾರೆ. ಆರೋಪಿ ಕಜಕಿಸ್ತಾನದ ಅಲ್ಮಾಟಿ ನಗರಕ್ಕೆ ಸೇರಿದವನು ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ