• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • S P Balasubrahmanyam: 25 ವರ್ಷಗಳ ಹಿಂದೆ ಧ್ವನಿ ಪೆಟ್ಟಿಗೆಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು ಬಾಲಸುಬ್ರಹ್ಮಣ್ಯಂ

S P Balasubrahmanyam: 25 ವರ್ಷಗಳ ಹಿಂದೆ ಧ್ವನಿ ಪೆಟ್ಟಿಗೆಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು ಬಾಲಸುಬ್ರಹ್ಮಣ್ಯಂ

ಬಾಲಸುಬ್ರಹ್ಮಣ್ಯಂ

ಬಾಲಸುಬ್ರಹ್ಮಣ್ಯಂ

Vocal Cord Surgery: ಹಾಡು ಹಾಡುವುದರಲ್ಲಿ ಎಷ್ಟು ಬ್ಯುಸಿ ಇರುತ್ತಿದ್ದರೆಂದರೆ, ಅವರ ಧ್ವನಿಪೆಟ್ಟಿಗೆ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿತ್ತಂತೆ. ಇದರ ಜೊತೆಗೆ ಅವರಿಗೆ ಧೂಮಪಾನ ಮಾಡುವ ಅಭ್ಯಾಸ ಸಹ ಇತ್ತು. ಒಮ್ಮೆ ಇವರು ಹಾಡುತ್ತಿದ್ದಾಗ ಒಂದು ಸಂಗೀತದ ನೋಟ್​ ಹಾಡಲು 15 ದಿನಗಳು ಪ್ರಯತ್ನಿಸಿದ್ದರಂತೆ.

ಮುಂದೆ ಓದಿ ...
  • Share this:

ಇಂಪಾದ ಕಂಠದ ಮೂಲಕ ಗಾನಸುಧೆ ಹರಿಸುತ್ತಿದ್ದ ಗಾಯಕ ಬಾಲಸುಬ್ರಹ್ಮಣ್ಯಂ ಅವರ ಹಾಡುಗಳು ಎಷ್ಟೋ ನೊಂದ ಮನಸ್ಸುಗಳಿಗೆ ನೋವು ಮರೆಸುವ ಟಾನಿಕ್​ನಂತೆ ಕೆಲಸ ಮಾಡುತ್ತಿದ್ದವು. ಅವರ ಹಾಡು ಕೇಳುವ ಸಂಗೀತ ಪ್ರಿಯರು ಅವರ ಕಂಠಸಿರಿಗೆ ಫಿದಾ ಆಗುತ್ತಾರೆ. ಇಂತಹ ಸಂಗೀತ ಮಾಂತ್ರಿಕ ಈಗ ಹಾಡುವುದನ್ನು ನಿಲ್ಲಿಸಿದ್ದಾರೆ. ಯಾವ ಹಿನ್ನೆಲೆ ಗಾಯಕ ಮಾಡ ಸಾಹಸವನ್ನು ಸುಮಾರು 25 ವರ್ಷಗಳ ಹಿಂದೆಯೇ ಮಾಡಿದ್ದಾರೆ ಬಾಲಸುಬ್ರಹ್ಮಣ್ಯಂ. ಹೌದು, ಸಂಗೀತ ಕ್ಷೇತ್ರದಲ್ಲಿ ತಾವು ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಧ್ವನಿಪೆಟ್ಟಿಗೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ನಿರ್ಧಾರ ಮಾಡಿದ್ದರು. ಆಗ ಅವರು ತೆಗೆದುಕೊಂಡಿದ್ದ ಈ ನಿರ್ಧಾರ ಸರಿಯಾಗಿಲ್ಲ ಎಂದು ಸಾಕಷ್ಟು ಮಂದಿ ಬುದ್ಧಿ ಹೇಳಿದ್ದರಂತೆ. ಆದರೂ ರಿಸ್ಕ್​ ತೆಗೆದುಕೊಂಡು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು ಬಾಲಸುಬ್ರಹ್ಮಣ್ಯಂ ಅವರು. ಇದಕ್ಕೆ ಕಾರಣ ಅವರಿಗೆ ಒಂದು ಹಾಡು ಹಾಡುವಾಗ ಕಾಣಿಸಿಕೊಂಡಿದ್ದ ಸಮಸ್ಯೆಯಂತೆ.  


ಸಂಗೀತ ಕ್ಷೇತ್ರಕ್ಕೆ ಬಾಲಸುಬ್ರಹ್ಮಣ್ಯಂ ಅವರ ಕೊಡುಗೆ ಅಪಾರ. ಕನ್ನಡದ ಸಾಹಿತಿ ಉಪೇಂದ್ರ ಕುಮಾರ್ ಅವರಿಗಾಗಿ 12 ಗಂಟೆಗಳಲ್ಲಿ ಎಸ್​ಪಿಬಿ 21 ಕನ್ನಡ ಹಾಡುಗಳನ್ನು ಹಾಡಿ ರೆಕಾರ್ಡ್​ ಮಾಡಿದ್ದರು. ಒಂದೇ ದಿನದಲ್ಲಿ ತಮಿಳು ಹಾಗೂ ತೆಲುಗಿನಲ್ಲಿ 19 ಹಾಡುಗಳನ್ನೂ ರೆಕಾರ್ಡ್​ ಮಾಡಿದ್ದರು. ಅಂತೆಯೇ ಹಿಂದಿಯಲ್ಲಿ 16 ಹಾಡುಗಳನ್ನು ಧ್ವನಿ ಮುದ್ರಿಸಿದ್ದರಂತೆ. ಇದು ಎಸ್ ಪಿ ಬಿ ಅವರ ಸಾಮರ್ಥ್ಯ ಹಾಗೂ ಅವರಿಗಿದ್ದ ಬೇಡಿಕೆಗೆ ನಿದರ್ಶನ.


SPB Health Updates Balasubramanyams son Charan gave update on his fathers health
ನಟ ಅಜಿತ್ ಜೊತೆ ಬಾಲಸುಬ್ರಹ್ಮಣ್ಯಂ


ವಿವಿಧ ಭಾಷೆಗಳಲ್ಲಿ 45 ಸಾವಿರಕ್ಕೂ ಹೆಚ್ಚು ಹಾಡಿರುವ ಗಾಯಕ ಬಾಲಸುಬ್ರಹ್ಮಣ್ಯಂ. ಅತಿ ಹೆಚ್ಚು ಹಾಡು ಹಾಡಿರುವ ಕಾರಣದಿಂದಲೇ ಅವರ ಹೆಸರು ಗಿನ್ನೆಸ್​ ರೆಕಾರ್ಡ್​ ಪುಸ್ತಕ ಸೇರಿದೆ. ವರ್ಷದಲ್ಲಿ 930 ಹಾಡುಗಳು ಅಂದರೆ, ದಿನಕ್ಕೆ ಅಂದಾಜು 3 ಹಾಡುಗಳು ಎಂದರೂ 2018ರ ಹೊತ್ತಿಗೆ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇಷ್ಟೇ ಅಲ್ಲದೆ ಹಲವಾರು ಖಾಸಗಿ ಆಲ್ಬಂಗಳೂ ಇವರ ಖಾತೆಯಲ್ಲಿವೆ.


ಹಾಡು ಹಾಡುವುದರಲ್ಲಿ ಎಷ್ಟು ಬ್ಯುಸಿ ಇರುತ್ತಿದ್ದರೆಂದರೆ, ಅವರ ಧ್ವನಿಪೆಟ್ಟಿಗೆ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿತ್ತಂತೆ. ಇದರ ಜೊತೆಗೆ ಅವರಿಗೆ ಧೂಮಪಾನ ಮಾಡುವ ಅಭ್ಯಾಸ ಸಹ ಇತ್ತು. ಒಮ್ಮೆ ಇವರು ಹಾಡುತ್ತಿದ್ದಾಗ ಒಂದು ಸಂಗೀತದ ನೋಟ್​ ಹಾಡಲು 15 ದಿನಗಳು ಪ್ರಯತ್ನಿಸಿದ್ದರಂತೆ. ಆದರೆ ಆಗ, ಅವರಿಂದ ಹಾಡಲು ಕಷ್ಟವಾಗಿತ್ತಂತೆ. ಆ 15 ದಿನಗಳಲ್ಲಿ ಅವರು ಒಪ್ಪಿಕೊಂಡಿದ್ದ ಸಾಕಷ್ಟು ಪ್ರಜೆಕ್ಟ್​ಗಳು ಹಾಗೇ ಉಳಿಯಲಾರಂಭಿಸಿದ್ದವಂತೆ. ಆಗಲೇ ಬಾಲಸುಬ್ರಹ್ಮಣ್ಯಂ ಅವರು ಧ್ವನಿಪೆಟ್ಟಿಗೆಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದು. ಸರ್ಜರಿ ಮಾಡಿಸಿಕೊಳ್ಳದಂತೆ ಲತಾ ಮಂಗೇಶ್ಕರ್​ ಅವರೂ ಸಲಹೆ ನೀಡಿದ್ದರಂತೆ.


SPB Health Updates Balasubramanyams son Charan gave update on his fathers health
ಬಾಲಸುಬ್ರಹ್ಮಣ್ಯಂ


ಎಸ್​ಪಿಬಿ ಅವರು ಈ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರೆ ಅವರಿಗೆ ಮತ್ತೆ ಅದೇ ರೀತಿಯ ಧ್ವನಿ ಬರುತ್ತದೆ ಎಂಬ ಗ್ಯಾರಂಟಿ ಇರಲಿಲ್ಲವಂತೆ. ಆದರೂ ರಿಸ್ಕ್​ ತೆಗೆದುಕೊಂಡು ಸುಮಾರು 25 ವರ್ಷಗಳ ಹಿಂದೆ ಆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರಂತೆ. ಈ ಬಗ್ಗೆ ಒಮ್ಮೆ ಚೆನ್ನೈನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಅವರೇ ಹೇಳಿಕೊಂಡಿದ್ದರು. ಸರ್ಜರಿ ಮಾಡಿಸಿಕೊಂಡ 62 ದಿನಕ್ಕೆ ಡಬ್ಬಿಂಗ್​ ಮಾಡಲು ಹೋಗಿದ್ದರಂತೆ. ಅಲ್ಲದೆ 73 ವರ್ಷವಾದರೂ ಈಗಲೂ ಚೆನ್ನಾಗಿ ಹಾಡುತ್ತೇನೆ ನೋಡಿ ಎಂದು ಹೇಳಿದ್ದರು.


ಇದನ್ನೂ ಓದಿ: ರಶ್ಮಿಕಾರ ಡಯಟ್​​ ಸೀಕ್ರೆಟ್​: ಲಿಲ್ಲಿ ಸೇವಿಸುವ ಬೆಳಗಿನ ಉಪಹಾರದ ವಿಡಿಯೋ ಇಲ್ಲಿದೆ..!


ಬಾಲಸುಬ್ರಹ್ಮಣ್ಯಂ ಅವರು ಎಷ್ಟು ಸರಳ ವ್ಯಕ್ತಿತ್ವದವರು ಎಂದು ತಿಳಿಯಲು ಅವರ ಈ ಒಂದು ಅಭ್ಯಾಸ ಸಾಕು. ಅವರಿಗೆ ಯಾವ ಫ್ಯಾನ್ಸಿ ಡ್ರಿಂಕ್ಸ್​ ಇಷ್ಟವಿರಲಿಲ್ಲವಂತೆ. ಅವರಿಗೆ ಮಜ್ಜಿಗೆ ಹಾಗೂ ಬಾಳೆಹಣ್ಣು ಎಂದರೆ ತುಂಬಾ ಇಷ್ಟವಂತೆ.

Published by:Anitha E
First published: