Son Kills Father: ತಾಯಿಯನ್ನ ನಿಂದಿಸಿದ್ದಕ್ಕೆ ಮಗನಿಂದಲೇ ಅಪ್ಪನ ಬರ್ಬರ ಕೊಲೆ

Muder Case: 25 ವರ್ಷದ ಸಂದೀಪ್​ ಬನ್ಸೋಡೆ(Sandip Bansode) ಎಂಬಾತ ತನ್ನ 60 ವರ್ಷದ ತಂದೆ ಅಣ್ಣರಾವ್​ ಬನ್ಸೋಡೆ(Annarao Bansode) ಹತ್ಯೆ ಮಾಡಿದ್ದಾನೆ

ಪ್ರಾತಿನಿಧಿಕ ಚಿತ್ರ(Photo: Google)

ಪ್ರಾತಿನಿಧಿಕ ಚಿತ್ರ(Photo: Google)

  • Share this:
    ಬ್ರಹ್ಮ, ವಿಷ್ಣು, ಶಿವ ಎದೆ ಹಾಲು ಕುಡಿದರೋ... ಅಮ್ಮ ನೀನೇ ದೈವ ಎಂದು ಕಾಲು ಮುಗಿದರೋ.. ಎಂಬ ಹಾಡನ್ನು ಎಲ್ಲರೂ ಕೇಳಿದ್ದೆವೆ. ತಾಯಿ(Mother) ಎಂದರೆ ಕಣ್ಣಿಗೆ ಕಾಣಿಸುವ ದೇವರು(God). ಆ ದೇವರು ಕೇಳಿದ್ದನ್ನೆಲ್ಲ ಕೊಡುತ್ತಾನೋ ಇಲ್ವೋ, ಆದರೆ ತಾಯಿ ಮಾತ್ರ ತನ್ನ ಮಕ್ಳಳು(children) ಏನೇ ಕೇಳದಿದ್ದರೂ, ಆಕೆ ಎಲ್ಲವನ್ನೂ ನೀಡುತ್ತಾಳೆ. ಆಕೆಯ ಮನಸ್ಸು ಮಗುವಿನಂತೆ, ತನ್ನ ಮಕ್ಕಳಿಗೆ ತೊಂದರೆ ಕೊಡಲು ಬಂದರೇ ಭದ್ರಕಾಳಿಯಾಗಿ ರಕ್ಷಿಸಿಕೊಳ್ಳುತ್ತಾಳೆ. ಈ ಭೂಮಿ ಮೇಲೆ ಬೆಲೆ ಕಟ್ಟಕ್ಕೆ ಆಗಲಾಗದ ಆಸ್ತಿ ಎಂದರೇ ತಾಯಿ ಪ್ರೀತಿ. ಮುಕ್ಕೋಟಿ ದೇವರು ತಾಯಿ ಪಾದದಲ್ಲಿರುವವರು..ಕೈ ಮುಗಿದು ಬೇಡಯ್ಯ ನೀನು.. ಕ್ಷಮೆಯಾ ಧರಿತ್ರಿ ಅವಳು.. ಎಂಬ ಹಾಡಿನಂತೆ ಮಕ್ಕಳು ಏನೇ ತಪ್ಪು ಮಾಡಿದರು ಕ್ಷಮಿಸಿ ಆರೈಕೆ ಮಾಡುತ್ತಾಳೆ. ಅಂಥ ತಾಯಿಗೆ ಯಾರದಾರೂ ತೊಂದರೆ ಕೊಟ್ಟರೇ ಮಕ್ಕಳು ಸುಮ್ಮನೆ ಇರುವುದಿಲ್ಲ. ಅದು ಸ್ವಂತ ತಂದೆಯಾದರೂ ಸರಿ. ಹೌದು, ಮುಂಬೈನಲ್ಲಿ ಕುಡುಕ ತಂದೆಯೊಬ್ಬ ತಾಯಿಯನ್ನ ಬೈದಿದ್ದಕ್ಕೆ ತಂದೆಯನ್ನ ಮಗನೇ ಹತ್ಯೆ(Murder) ಮಾಡಿದ್ದಾನೆ.

    ಹತ್ಯೆಗೂ ಮುನ್ನ ಮಗನ ವಾರ್ನಿಂಗ್​

    ಮುಂಬೈ(Mumbai)ನ ಕೋಕಣಿಪದ(Kokanipada)ದ ಸಿದ್ದಿ ವಿನಾಯಕ ನಗರದಲ್ಲಿ ಈ ದುರ್ಘಟನೆ ಸಂಭವಿಸಿದೆ. 25 ವರ್ಷದ ಸಂದೀಪ್​ ಬನ್ಸೋಡೆ(Sandip Bansode) ಎಂಬಾತ ತನ್ನ 60 ವರ್ಷದ ತಂದೆ ಅಣ್ಣರಾವ್​ ಬನ್ಸೋಡೆ(Annarao Bansode) ಹತ್ಯೆ ಮಾಡಿದ್ದಾನೆ. ಫ್ಯಾಕ್ಟರಿಯೊಂದರಲ್ಲಿ ತಂದೆ ಅಣ್ಣ ರಾವ್​ ಬನ್ಸೋಡೆ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿದ ಬಳಿಕ ಕಂಠ ಪೂರ್ತಿ ಕುಡಿದು ಬಂದು ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ. ಪ್ರತಿ ದಿನ ತಂದೆ ಅಣ್ಣರಾವ್ ಬನ್ಸೋಡೆ ಹೀಗೆ ಮಾಡುತ್ತಿದ್ದರಂತೆ. ಮಗನೂ ಕೂಡ ಹಲವು ಬಾರಿ ತಂದೆಗೆ ಹೇಳಿದ್ದ, ನೀನು ಎಷ್ಟು ಬೇಕಾದರೂ ಕುಡಿ, ಆದರೆ ತಾಯಿಗೆ ತೊಂದರೆ ಕೊಡದಂತೆ ತಂದೆಗೆ ಮಗ ಸಂದೀಪ್​ ಬನ್ಸೋಡೆ ವಾರ್ನಿಂಗ್​ ಕೊಟ್ಟಿದ್ದ.

    ಇದನ್ನು ಓದಿ: ಗೆಳತಿಯನ್ನು ಭೇಟಿ ಮಾಡೋಕೆ ಹೋದ, ದಾರಿಯಲ್ಲಿ ಏನೋ ಆಗಿ ಖಾಸಗಿ ಅಂಗವೇ ಕಟ್! ಆಗಿದ್ದೇನು?

    ಬುದ್ಧಿ ಕಲಿತಿರಲಿಲ್ಲ ತಂದೆ ಅಣ್ಣರಾವ್​

    ಮಗ ಎಷ್ಟೇ ಹೇಳಿದರೂ ತಂದೆ ಅದನ್ನೇ ಮಾಡಿಕೊಂಡು ಬಂದಿದ್ದ. ನಿನ್ನೆಯೂ ಕುಡಿದು ಮನೆಗೆ ಬಂದಿದ್ದ ಅಣ್ಣರಾವ್​, ಗಲಾಟೆ ಶುರು ಮಾಡಿದ್ದ. ಮನೆಯಲ್ಲಿದ್ದ ಗ್ಯಾಸ್​ ತೆಗೆದು ಬೆಂಕಿ ಹಚ್ಚುವುದಾಗಿ ಬೆದರಿಸಿದ್ದ. ಮನೆಯಲ್ಲಿದ್ದ ಟೈಲ್ಸ್​​ಗಳನ್ನ ಸುತ್ತಿಗೆಯಿಂದ ಒಡೆದು ಹಾಕಿದ್ದಾನೆ. ಗಾಬರಿಗೊಂಡ ತಾಯಿ ತನ್ನ ಎರಡನೇ ಮಗ ಸಂದೀಪ್​ಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಕೂಡಲೇ ಮನೆಗೆ ಬಂದ ಸಂದೀಪ್​ ತಂದೆಯನ್ನ ತಡೆಯಲು ಮುಂದಾಗಿದ್ದ. ಇದೆ ವೇಳೆ ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿದೆ.

    ಇದನ್ನು ಓದಿ: Bihar- ಹೆಣ್ಮಗು ಆಯಿತೆಂದು ಪತ್ನಿ, ಮಗುವನ್ನು ಮನೆಗೆ ಸೇರಿಸದ ಗಂಡ

    ಚಾಕುವಿನಿಂದ ಇರಿದು ತಂದೆ ಕೊಲೆ

    ಮಗನ ಮೇಲೂ ಹಲ್ಲೆ ಮಾಡಲು ತಂದೆ ಮುಂದಾಗಿದ್ದ. ಇದನ್ನ ತಡೆದ ಪತ್ನಿಗೂ ಕಪಾಳಕ್ಕೆ ತಂದೆ ಬಾರಿಸಿದ್ದ. ಇದನ್ನ ಕಂಡ ಮಗ ಕೋಪದಲ್ಲಿ ಚಾಕು ತಂದು ತಂದೆಗೆ ಇರಿದಿದ್ದಾನೆ. ಬಳಿಕ ಪಕ್ಕದಲ್ಲೇ ಇದ್ದ ಸುತ್ತಿಗೆಯಿಂದ ತಂದೆ ತಲೆಗೆ ಜೋರಾಗಿ ಹೊಡೆದು, ಹೊಡೆದು ಸಾಯಿಸಿದ್ದಾನೆ. ಬಳಿಕ ತಾಯಿ ಬಳಿ ಹೋಗಿ ಇನ್ನು ಮುಂದೆ ನಿನಗೆ ಯಾರು ತೊಂದರೆ ಕೊಡಲ್ಲ ಅಮ್ಮ, ಖುಷಿಯಾಗಿರು ಎಂದು ಮಗ ಹೇಳಿದ್ದಾನೆ. ಘಟನೆ ಕಂಡು ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು 25 ವರ್ಷದ ಸಂದೀಪ್​ ಬನ್ಸೋಡೆಯನ್ನ ವಶಕ್ಕೆ ಪಡೆದಿದ್ದಾರೆ. ಪೊಲೀಸರ ಬಳಿ ಮತ್ತೊಬ್ಬ ಮಗ 28 ವರ್ಷದ ಅಮೊಲ್​ ಬನ್ಸೋಡೆ, ತನ್ನ ತಂದೆಯದ್ದೇ ತಪ್ಪು, ಪ್ರತಿ ದಿನ ತಾಯಿಗೆ ಟಾರ್ಚರ್​ ನೀಡುತ್ತಿದ್ದರು ಅಂತ ಹೇಳಿದ್ದಾರೆ.

    ವರದಿ- ವಾಸುದೇವ್​.ಎಂ
    Published by:Harshith AS
    First published: