ರಷ್ಯಾದ ಮೃಗಾಲಯದಲ್ಲಿ ಹೃದಯ ವಿದ್ರಾವಕ ಘಟನೆ; ಸಂದರ್ಶಕ ಎಸೆದ ರಬ್ಬರ್ ಚೆಂಡನ್ನು ನುಂಗಿದ ಹಿಮ ಕರಡಿ ಸಾವು

“ದುರದೃಷ್ಟವಶಾತ್, ಪ್ರತಿಯೊಬ್ಬರೂ ತಮ್ಮ ಪ್ರೀತಿಯನ್ನು ಮೃಗಾಲಯದ ಪ್ರಾಣಿಗಳ ಮೇಲೆ ಸರಿಯಾಗಿ ವ್ಯಕ್ತಪಡಿಸುವುದು ಹೇಗೆಂದು ಗೊತ್ತಿಲ್ಲ. ಹಲವಾರು ಎಚ್ಚರಿಕೆ ಚಿಹ್ನೆಗಳ ಹೊರತಾಗಿಯೂ, ಕೆಲವು ಪ್ರವಾಸಿಗರು ಬೇಜವ್ದಾರಿಯಿಂದ ನಡೆದುಕೊಳ್ಳುತ್ತಾರೆ." ಎಂದು ಮೃಗಾಲಯದ ವಕ್ತಾರರು ಹೇಳಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ರಷ್ಯಾದ ಮೃಗಾಲಯದ 25 ವರ್ಷದ ಹಿಮ ಕರಡಿ ಮೃತಪಟ್ಟಿದ್ದು, ರಬ್ಬರ್ ಚೆಂಡಿನಿಂದ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ರಷ್ಯಾದ ಮೃಗಾಲಯವೊಂದರಲ್ಲಿ ನಡೆದ ಈ ಹೃದಯ ವಿದ್ರಾವಕ ಘಟನೆಯು ಏಪ್ರಿಲ್ 19 ರಂದು ಬೆಳಿಗ್ಗೆ ಕರಡಿ ತನ್ನ ಆವರಣದಲ್ಲಿ ರಬ್ಬರ್ ಚೆಂಡನ್ನು ನುಂಗಿದ ನಂತರ ಮೃತಗೊಂಡಿದೆ. ಉಮ್ಕಾ ಎಂದು ಕರೆಯಲ್ಪಡುವ ಹಿಮಕರಡಿ ಸೋಮವಾರ ಯೆಕಟೆರಿನ್‌ಬರ್ಗ್‌ನಲ್ಲಿ ಉಪಾಹಾರ ಸೇವಿಸುತ್ತಿದ್ದಾಗ ಕುಸಿದು ಬಿದ್ದಿದೆ ಮತ್ತು ಶವಪರೀಕ್ಷೆಯಲ್ಲಿ ಕಳೆದ ಏಪ್ರಿಲ್ 20 ರಂದು ರಷ್ಯಾದ ಉರಲ್ ಫೆಡರಲ್ ನಗರದಲ್ಲಿ ಯುವ ಸಂದರ್ಶಕರಿಂದ ರಬ್ಬರ್ ಚೆಂಡನ್ನು ಹಿಮ ಕರಡಿ ವಾಸಿಸುತ್ತಿದ್ದ ಆವರಣಕ್ಕೆ ಎಸೆದಿದ್ದರಿಂದ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ.

  ಉಮ್ಕಾ ಕುಸಿದು ಬಿದ್ದಿದ್ದನ್ನು ನೋಡಿದ ಮೃಗಾಲಯದ ಆರೈಕೆದಾರರು ತಕ್ಷಣವೇ ಸಹಾಯಕ್ಕಾಗಿ ಕರೆ ನೀಡಿದರು. ಆದರೆ ಪಶುವೈದ್ಯರು ಸಿಬ್ಬಂದಿ ಬರುವಷ್ಟರಲ್ಲೇ ಹಿಮ ಕರಡಿ ಮೃತಪಟ್ಟಿತ್ತು ಎಂದು ವರದಿಯಾಗಿದೆ. ವೈದ್ಯಕೀಯ ಸಿಬ್ಬಂದಿ ಶವಪರೀಕ್ಷೆ ನಡೆಸಿದ ನಂತರ ಅದರ ಹೊಟ್ಟೆಯಲ್ಲಿ ಸಣ್ಣ ರಬ್ಬರ್ ಚೆಂಡು ಸಿಕ್ಕಿದ್ದು, ಆ ಚೆಂಡು ನುಂಗಿದ್ದರಿಂದಲೇ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ.

  ಇದು ರಷ್ಯಾದ ಮೃಗಾಲಯಕ್ಕೆ ಮಾತ್ರವಲ್ಲದೆ ಉಮ್ಕಾನ ಜೊತೆಗಿದ್ದ 'ಐನಾ' ಎಂಬ ಹೆಣ್ಣು ಹಿಮಕರಡಿಗೂ ತುಂಬಾ ದುಃಖವಾಗಿದೆ. ಮೃಗಾಲಯದ ಉದ್ಯೋಗಿ 'ಯೆಕಟೆರಿನಾ ಉವರೋವಾ' ಪ್ರಕಾರ, 'ಐನಾ' ಅದೇ ಆವರಣವನ್ನು ಉಮ್ಕಾದೊಂದಿಗೆ ಸ್ನೇಹ ಬೆಳೆಸಿತ್ತು ಮತ್ತು ಈಗ ಉಮ್ಕಾನ ಸಾವಿನಿಂದಾಗಿ ತುಂಬಾ ದುಃಖವಾಗಿದೆ ಎಂದು ಹೇಳಲಾಗಿದೆ. ಈ ದುರಂತ ಘಟನೆಗೆ ಕಾರಣವಾದ ಮೃಗಾಲಯಕ್ಕೆ ಭೇಟಿ ನೀಡಿದ್ದ ಸಂದರ್ಶಕನನ್ನು ಮೃಗಾಲಯದ ಅಧಿಕಾರಿಗಳು ಹುಡುಕುತ್ತಿಲ್ಲವಾದರೂ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಅವರು ಐನಾ ಮೇಲೆ ನಿಗಾ ಇಟ್ಟಿದ್ದಾರೆ.

  ಮೂಲೆ ಗುಂಪಾಗಿದ್ದ ವೈರಲ್ ಸೋಂಕುಗಳ ಅಧ್ಯಯನಕ್ಕೆ ಮತ್ತೆ ಜೀವ ನೀಡಿದ ಕೋವಿಡ್ -19 ಸಂಶೋಧನೆ

  ಉಮ್ಕಾ ಹಿಮಕರಡಿಯ ತಾಯಿಯನ್ನು ಬೇಟೆಗಾರರು ಕೊಂದಿದ್ದರು. ತಾಯಿಯನ್ನು ಕಳೆದುಕೊಂಡಿದ್ದ ಉಮ್ಕಾ ಮರಿಯು ರಷ್ಯಾದ ಚುಕೊಟ್ಕಾ ಪ್ರದೇಶದ ಬಿಲ್ಲಿಂಗ್ಸ್ ಗ್ರಾಮದಲ್ಲಿ ಆಹಾರ ಹುಡುಕುತ್ತಿದ್ದಾಗ ನಾಯಿಗಳಿಂದ ಉಮ್ಕಾ ಮೇಲೆ ದಾಳಿಯಾಯಿತು. ತಕ್ಷಣವೇ ಸ್ಥಳಿಯರು ನಾಯಿಗಳಿಂದ ಅದನ್ನು ರಕ್ಷಿಸಿ ಪ್ರಾಣಾಪಾಯದಿಂದ ಕಾಪಾಡಿದರು. ನಂತರ ಉಮ್ಕಾ ಹಿಮಕರಡಿಯನ್ನು 1998ರಲ್ಲಿ ಉರಲ್ ಫೆಡರಲ್ ನಗರದ ಮೃಗಾಲಯಕ್ಕೆ ಹಸ್ತಾಂತರಿಸಲಾಯಿತು.

  “ದುರದೃಷ್ಟವಶಾತ್, ಪ್ರತಿಯೊಬ್ಬರೂ ತಮ್ಮ ಪ್ರೀತಿಯನ್ನು ಮೃಗಾಲಯದ ಪ್ರಾಣಿಗಳ ಮೇಲೆ ಸರಿಯಾಗಿ ವ್ಯಕ್ತಪಡಿಸುವುದು ಹೇಗೆಂದು ಗೊತ್ತಿಲ್ಲ. ಹಲವಾರು ಎಚ್ಚರಿಕೆ ಚಿಹ್ನೆಗಳ ಹೊರತಾಗಿಯೂ, ಕೆಲವು ಪ್ರವಾಸಿಗರು ಬೇಜವ್ದಾರಿಯಿಂದ ನಡೆದುಕೊಳ್ಳುತ್ತಾರೆ." ಎಂದು ಮೃಗಾಲಯದ ವಕ್ತಾರರು ಹೇಳಿದ್ದಾರೆ.

  ಈ ದುರಂತ ಘಟನೆಯ ನಂತರ 'ಐನಾ' ಹಿಮಕರಡಿಯ ಸುರಕ್ಷತೆಗೆ ಆದ್ಯತೆ ಕೊಡಲಾಗಿದ್ದು, ಜೊತೆಗೆ ಮೃಗಾಲಯದಲ್ಲಿರುವ ಎಲ್ಲಾ ಪ್ರಾಣಿಗಳ ಬಗ್ಗೆ ಮೃಗಾಲಯದ ಸಿಬ್ಬಂದಿಗಳಿಂದ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಮೃಗಾಲಯಕ್ಕೆ ಭೇಟಿ ನೀಡಿದ್ದ ಸಂದರ್ಶಕನಿಂದ ಉಮ್ಕಾ ಹಿಮಕರಡಿಯು ಪ್ರಾಣ ಕಳೆದುಕೊಂಡಿದ್ದು ಮೃಗಾಲಯದ ಸಿಬ್ಬಂದಿಗಳಿಗೆ ಅತೀವ ದುಃಖ ತರಿಸಿದೆ.

  ಪರಿಸರ ಮತ್ತು ಪ್ರಾಣಿಗಳ ಮೇಲೆ ಮಾನವ ನಿರಂತರವಾಗಿ ದೌರ್ಜನ್ಯವೆಸಗುತ್ತಾ ಬಂದಿದ್ದಾನೆ. ಇದರ ಪರಿಣಾಮ ಹಲವಾರು ಪ್ರಾಣಿಗಳ ಸಂತತಿ ನಶಸಿಹೋಗಿವೆ. ಇನ್ನೂ ಹಲವಾರು ಪ್ರಾಣಿಗಳು ಅಳಿವಿನಂಚಿನಲ್ಲಿವೆ. ಹಿಮಕರಡಿಗಳೂ ಸಹ ನಶಿಸಿಹೋಗುತ್ತಿದ್ದು, ಅವುಗಳ ಸಂತತಿ ಅಭಿವೃದ್ಧಿಗೆ ಹಲವಾರು ರಾಷ್ಟ್ರಗಳು ಪ್ರಯತ್ನಪಡುತ್ತಿವೆ. ಜನರು ಮಾಡುವ ಬೆಜವ್ದಾರಿತನದಿಂದ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬುದಕ್ಕೆ ರಷ್ಯಾ ಮೃಗಾಲಯದ ಹಿಮಕರಡಿಯ ದುರಂತ ಸಾವಿನ ಈ ಘಟನೆಯೇ ಸಾಕ್ಷಿ.
  Published by:Latha CG
  First published: