ತಮಿಳುನಾಡು: ಜಲ್ಲಿಕಟ್ಟು (Jallikattu) ಅನ್ನೋದು ತಮಿಳರ ಸಾಂಪ್ರದಾಯಿಕ (Tamil Culture) ಕ್ರೀಡೆ. ಪ್ರತೀ ವರ್ಷ ತಮಿಳುನಾಡಿನ ಮೂಲೆ ಮೂಲೆಯಲ್ಲಿ ಜಲ್ಲಿ ಕಟ್ಟು ಸ್ಪರ್ಧೆಯನ್ನುನ ಆಯೋಜನೆ ಮಾಡಲಾಗುತ್ತದೆ. ತಮಿಳುನಾಡು (Tamil nadu) ಮಾತ್ರವಲ್ಲದೇ ಕರ್ನಾಟಕದ ಗಡಿ ಭಾಗದಲ್ಲೂ ಈ ಸ್ಪರ್ಧೆಯನ್ನು ಏರ್ಪಡಿಸ್ತಾರೆ. ಆದರೆ ಅನೇಕ ಕಡೆಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದ ಕಾರಣ ಪ್ರಾಣ ಹಾನಿಗಳೂ ಸಂಭವಿಸುವ ಸಾಧ್ಯತೆ ಇರುತ್ತದೆ. ಇದೀಗ ಇಂತದೇ ಕಾರಣಕ್ಕೆ ಜಲ್ಲಿ ಕಟ್ಟು ಸ್ಪರ್ಧೆ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
1 ಸಾವು, ಆರು ಮಂದಿಗೆ ಗಾಯ
ತಮಿಳುನಾಡಿನ ಕೆಲವರಪಲ್ಲಿ ಸಮೀಪದಲ್ಲಿ ಸಪ್ಲಮ್ಮ ದೇವಿ ಜಾತ್ರಾ ಅಂಗವಾಗಿ ನಿನ್ನೆ ಜಲ್ಲಿ ಕಟ್ಟು ಆಯೋಜನೆ ಮಾಡಲಾಗಿತ್ತು. ಜಲ್ಲಿ ಕಟ್ಟು ಸ್ಪರ್ಧೆಗೆ ಹೊಸೂರು, ಡೆಂಕಣಿಕೋಟೆ, ಥಳಿ, ಬಾಗಲೂರು ಸೇರಿದಂತೆ ಹಲವು ಕಡೆಗಳಿಂದ 500ಕ್ಕೂ ಹೆಚ್ಚು ಹೋರಿಗಳನ್ನು ಕರೆ ತರಲಾಗಿತ್ತು. ಈ ವೇಳೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಮಂದಿಯ ಮೇಲೆ ಗೂಳಿ ದಾಳಿ ಮಾಡಿದ್ದು, ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ ಆರಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಇನ್ನು ಸಪ್ಲಮ್ಮ ದೇವಿ ಜಾತ್ರಾ ಅಂಗವಾಗಿ ಆಯೋಜನೆ ಮಾಡಲಾಗಿದ್ದ ಜಲ್ಲಿ ಕಟ್ಟು ಸ್ಪರ್ಧೆಗೆ ಹೊರ ಊರುಗಳಿಂದಲೂ ಸಾವಿರಾರು ಮಂದಿ ಆಗಮಿಸಿದ್ದರು.
ಇದನ್ನೂ ಓದಿ: Uttara Kannada: ಜಬರ್ದಸ್ತ್ ಹೋರಿ ಬೆದರಿಸೋ ಸ್ಪರ್ಧೆ! ನೋಡೋರ ಎದೆಯಲ್ಲೂ ಗಢಗಢ!
ಜಲ್ಲಿ ಕಟ್ಟು ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಗೂಳಿ ದಾಳಿ ಮಾಡಿ ಸಾವನ್ನಪ್ಪಿದ ಯುವಕನನ್ನು ಸೂಳಗಿರಿ ಸಮೀಪದ ಆರೋಪಲ್ಲಿ ಗ್ರಾಮದ ಮಂಜು(25) ಎಂದು ಗುರುತಿಸಲಾಗಿದ್ದು, ಆತನ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಯುವಕನ ಮೃತದೇಹವನ್ನು ಆತನ ಮನೆಯವರಿಗೆ ಹಸ್ತಾಂತರಿಸಲಾಗಿದ್ದು, ಅಂತಿಮ ವಿಧಿ ವಿಧಾನಗಳನ್ನು ಮಾಡಿ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಜೊತೆಗೆ ಗಂಭೀರ ಗಾಯಗೊಂಡ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ವಿವಿಧ ರಾಜ್ಯಗಳಿಂದ ರಾಸುಗಳ ಆಗಮನ
ಪೊಂಗಲ್ ಹಬ್ಬದ ಬಳಿಕ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆಚರಣೆ ಮಾಡಲಾಗುತ್ತಿದ್ದು, ಈ ಅಪಾಯಕಾರಿ ಜಲ್ಲಿಕಟ್ಟು ಸ್ಪರ್ಧೆಗೆ ಮಕ್ಕಳು ದೊಡ್ಡವರು ಎನ್ನದೆ ಎಲ್ಲರಲ್ಲೂ ಎಲ್ಲಿಲ್ಲದ ಕ್ರೇಜ್ ಇರುತ್ತದೆ. ಹೀಗಾಗಿ ತಮಿಳುನಾಡು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಜಲ್ಲಿಕಟ್ಟು ವೀಕ್ಷಣೆಗೆ ಸಾವಿರಾರು ಜನರು ಆಗಮಿಸುತ್ತಾರೆ. ಈ ಸ್ಪರ್ಧೆಗೆ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಿಂದ ರಾಜ್ಯದಿಂದಲೂ ರಾಸುಗಳನ್ನು ಜಲ್ಲಿ ಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವವರು ಕರೆ ತರುತ್ತಾರೆ.
ಇದನ್ನೂ ಓದಿ: Dharmasthala: ಬೆಂಗಳೂರಿನಲ್ಲಿ ಬೆಳೆದು ಮಂಜುನಾಥನ ಮಡಿಲು ಸೇರಿದ ನಂದಿ! ಇಲ್ಲಿಂದ ಧರ್ಮಸ್ಥಳಕ್ಕೆ ಬರೀ ಪಯಣವಲ್ಲ, ಸುಂದರ ಅನುಭವ!
ಜಲ್ಲಿಕಟ್ಟು ಸ್ಪರ್ಧೆ ಹೇಗೆ ಮಾಡೋದು?
ಜಲ್ಲಿ ಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವ ರಾಸುಗಳಿಗೆ ಕಾಲಿಗೆ ಗೆಜ್ಜೆ, ಕುತ್ತಿಗೆಗೆ ಗೆಜ್ಜೆ ಸರ, ಕೊಂಬಿಗೆ ಬಣ್ಣ ಬಣ್ಣದ ತಡಿಕೆಯನ್ನು ಹಾಕಿ ಸಿಂಗಾರ ಮಾಡುತ್ತಾರೆ. ಸಿಂಗಾರದ ಜೊತೆ ನಶೆಯಲ್ಲಿ ಹದ್ದಿನಂತೆ ರಾಸುಗಳು ಮುನ್ನುಗ್ಗುವುದನ್ನು ನೋಡಲು ಜನರು ತುದಿಗಾಲಲ್ಲಿ ನಿಲ್ಲುತ್ತಾರೆ. ರಾಸುಗಳ ಮುಡಿಗೆ ಕಟ್ಟಿದ್ದ ಬಹುಮಾನಕ್ಕಾಗಿ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದ್ದು, ರಾಸುಗಳನ್ನು ಹಿಡಿಯಲು ಜಲ್ಲಿಕಟ್ಟುವಿನಲ್ಲಿ ಯುವಕರು ಹೋರಾಟ ಮಾಡುತ್ತಾರೆ. ಈ ವೇಳೆ ರಾಸುಗಳ ದಾಳಿಯಿಂದ ಸಾವು ನೋವು ಸಂಭವಿಸುತ್ತದೆ. ಈಗಾಗಲೇ ನೂರಾರು ಜನರು ಇದರಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನು ಈ ಅಪಾಯಕಾರಿ ಜಲ್ಲಿ ಕಟ್ಟು ಕ್ರೀಡೆಯನ್ನು ಕರ್ನಾಟಕ ರಾಜ್ಯದಲ್ಲಿ ಬ್ಯಾನ್ ಮಾಡಲಾಗಿದ್ದು, ಆದರೆ ತಮಿಳುನಾಡಿನಲ್ಲಿ ಸಾಹಸ ಕ್ರೀಡೆಯಾಗಿ ಜಲ್ಲಿಕಟ್ಟುಗೆ ಅವಕಾಶ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ