#MeToo: 25 ಮಹಿಳಾ ಹೋಂಗಾರ್ಡ್​ಗಳ ಆರೋಪಕ್ಕೆ ಇಬ್ಬರು ಅಧಿಕಾರಿಗಳ ಅಮಾನತು

ರಕ್ಷಣಾ ಇಲಾಖೆಗಳಲ್ಲಿ ಕಿರಿಯ ಅಧಿಕಾರಿಗಳ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಈಗಾಗಲೇ ಅನೇಕ ಬಾರಿ ಧ್ವನಿ ಎತ್ತಲಾಗಿದೆ. ಅದರಲ್ಲಿಯೂ ಮಹಿಳೆಯರ ನಡೆಯುವ ದೌರ್ಜನ್ಯಗಳ ನಿರಂತರ. ಈ ದೌರ್ಜನ್ಯ ವಿರುದ್ಧ ಮಹಿಳೆಯರು ಧ್ವನಿ ಎತ್ತಿದ್ದು, ಇದರಿಂದಾಗಿ ಇಬ್ಬರು ಮೇಲಾಧಿಕಾರಿಗಳು ಅಮಾನತುಗೊಂಡಿದ್ದಾರೆ

Seema.R | news18
Updated:November 7, 2018, 4:57 PM IST
#MeToo: 25 ಮಹಿಳಾ ಹೋಂಗಾರ್ಡ್​ಗಳ ಆರೋಪಕ್ಕೆ ಇಬ್ಬರು ಅಧಿಕಾರಿಗಳ ಅಮಾನತು
ರಕ್ಷಣಾ ಇಲಾಖೆಗಳಲ್ಲಿ ಕಿರಿಯ ಅಧಿಕಾರಿಗಳ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಈಗಾಗಲೇ ಅನೇಕ ಬಾರಿ ಧ್ವನಿ ಎತ್ತಲಾಗಿದೆ. ಅದರಲ್ಲಿಯೂ ಮಹಿಳೆಯರ ನಡೆಯುವ ದೌರ್ಜನ್ಯಗಳ ನಿರಂತರ. ಈ ದೌರ್ಜನ್ಯ ವಿರುದ್ಧ ಮಹಿಳೆಯರು ಧ್ವನಿ ಎತ್ತಿದ್ದು, ಇದರಿಂದಾಗಿ ಇಬ್ಬರು ಮೇಲಾಧಿಕಾರಿಗಳು ಅಮಾನತುಗೊಂಡಿದ್ದಾರೆ
Seema.R | news18
Updated: November 7, 2018, 4:57 PM IST
ನ್ಯೂಸ್​ 18 ಕನ್ನಡ

ಸೂರತ್​ (ನ.07):  ಚಿತ್ರರಂಗದಲ್ಲಿ ಸದ್ದು ಮಾಡಿದ 'ಮಿಟೂ' ಆರೋಪಗಳು ನಂತರ ರಾಜಕೀಯ, ಕ್ರೀಡೆ ಸೇರಿದಂತೆ ಅನೇಕ ರಂಗಗಳಲ್ಲಿಯೂ ಕೇಳಿ ಬಂದಿತು. ಈಗ ಪೊಲೀಸ್​ ಇಲಾಖೆಯಲ್ಲಿಯೂ ಸದ್ದು ಮಾಡಿದ್ದು, ಇಬ್ಬರು ಉನ್ನತಾಧಿಕಾರಿಗಳು ಕೆಲಸದಿಂದ ಅಮಾನತು ಕೊಂಡಿದ್ದಾರೆ.

ಗೃಹ ರಕ್ಷಣಾ ದಳದ ಇಬ್ಬರು ಅಧಿಕಾರಿಗಳ ಮೇಲೆ 25 ಮಹಿಳಾ ಹೋಂ ಗಾರ್ಡ್​ಗಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಮೇಲಾಧಿಕಾರಿಗಳು ಕೆಲಸ ಸಮಯದಲ್ಲಿ ನಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸ್​ ಇಲಾಖೆಗೆ ದೂರು ದಾಖಲಿಸಿದ್ದಾರೆ.

ಈ ಆರೋಪದ ಮೇಲೆ ಸೂರತ್​ನ ಇಬ್ಬರು ಗೃಹ ರಕ್ಷಣಾ ದಳದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕಳೆದವಾರ ಮಹಿಳೆಯರು ಪೊಲೀಸ್​ ಕಮಿಷನರ್​ ಸತೀಶ್​ ಶರ್ಮಾಗೆ ಲಿಖಿತ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿದೆ.

'ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಅನೇಕ ಮಹಿಳಾ ಹೋಂ ಗಾರ್ಡ್​ಗಳು ಲಿಖಿತ ದೂರು ನೀಡಿದ್ದಾರೆ. ಈ ಆಧಾರದ ಮೇಲೆ ಅವರನ್ನು ಅಮಾನತು ಮಾಡಲಾಗಿದ್ದು, ಅವರನ್ನು ತನಿಖೆಗೆ ಒಳಪಡಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಡೆಪ್ಯೂಟಿ ಸೂಪರಿಟೆಂಡ್​ ಪೊಲೀಸ್​ ಅಧಿಕಾರಿ ತನಿಖೆ ನಡೆಸಲಾಗುವುದು' ಎಂದು ಹೋಂ ಗಾರ್ಡ್​ನ ಕಮಾಂಡೆಟ್​ ಜೆನರಲ್​ ಪಿಬಿ ಗೊಂಡಿಯಾ ತಿಳಿಸಿದ್ದಾರೆ.

ಈಗಾಗಲೇ 19ರಿಂದ 25 ದೂರುಗಳನ್ನು ಆಡಿಯೋ ಮೂಲಕ ದಾಖಲಿಸಲಾಗಿದೆ. ಇಬ್ಬರು ಅಧಿಕಾರಿಗಳು ಮಾನಸಿ, ದೈಹಿಕ, ಲೈಂಗಿಕ, ಭಾವನಾತ್ಮಕ ಮತ್ತು ಆರ್ಥಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಇದನ್ನು ಓದಿ: ರಾವಣ ಮಾತ್ರವಲ್ಲ, ಶೂರ್ಪನಖಿಯಲ್ಲೂ ರಾಕ್ಷಸ ಗುಣವಿತ್ತು; #MeToo ಅಭಿಯಾನಕ್ಕೆ ಲಿಂಗ ತಾರತಮ್ಯವೇಕೆ?
Loading...

'ಸಿಬ್ಬಂದಿಗಳ ವರ್ಗಾವಣೆಗೂ ಕೂಡ  ಈ ಅಧಿಕಾರಿಗಳು ಲಂಚ ಪಡೆಯುತ್ತಿದ್ದರು. ಒಂದು ವೇಳೆ ಹಣ ನೀಡದಿದ್ದರೆ, ದೂರದ ಸ್ಥಳಗಳಿಗೆ ಅವರನ್ನು ವರ್ಗಾಯಿಸಲಾಗುತ್ತಿತ್ತು ಎಂದು ಮಹಿಳೆಯರು ಅಲವತ್ತುಕೊಂಡಿದ್ದಾರೆ'.

ಈ ಕುರಿತು ನಾಲ್ಕು ಪುಟಗಳ ದೂರನ್ನು ರಾಜ್ಯ ಗೃಹ ಇಲಾಖೆ ಹಾಗೂ ಮುಖ್ಯಮಂತ್ರಿಗಳಿಗೂ ಕಳುಹಿಸಲಾಗಿದೆ ಎಂದು ಅಧಿಕೃತ ಮೂಲಗಳು ದೃಢಿಪಡಿಸಿದೆ.

First published:November 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...